ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ದಿನಾಂಕ 01/11/2021 ರಂದು ಪಿರ್ಯಾದಿದಾರರಾಧ ರವಿ ಈರಪ್ಪ ಸುಣಗಾರ (35)ತಂದೆ: ಈರಪ್ಪ ಸುಣಗಾರವಾಸ: ಮೈನ್ ರೋಡ್,ಬಾಳು ಬೀಡ್ ಅಂಚೆ ಮತ್ತು ಗ್ರಾಮ ಹಾನಗಲ್ ತಾಲ್ಲೂಕು,ಹಾವೇರಿ ಜಿಲ್ಲೆ. ಹಾಲಿ ವಾಸ: ಶಿರ್ವ ಗ್ರಾಮ, ಕುತ್ಯಾರು ಕಟ್ಟಿಗೆ ಮಿಲ್ ಬಳಿ ಮಗ್ಗಿ ಟೀಚರ್  ರವರ ಬಾಡಿಗೆ ಮನೆ, ಕಾಪು ತಾಲೂಕು ಉಡುಪಿ ಇವರು ಎಂದಿನಂತೆ ಕೂಲಿ ಕೆಲಸ ಮುಗಿಸಿಕೊಂಡು ತನ್ನ ಮಾವ ಪ್ರಭು (46) ರವರೊಂದಿಗೆ ಶಿರ್ವ ಪೇಟೆಯಿಂದ ತನ್ನ ಮನೆಯಾದ ಕುತ್ಯಾರಿಗೆ ಹೋಗುವರೇ ನಡೆದುಕೊಂಡು ಸಮಯ ಸುಮಾರು 18:45 ಗಂಟೆಗೆ ಸಾರ್ವಜನಿಕ ರಸ್ತೆಯ ಕುತ್ಯಾರು ಜಂಕ್ಷನ್‌ಬಳಿ ಇರುವ ವಿಜಯ ಹಾರ್ಡ್‌ವೇರ್‌ಅಂಗಡಿಯ ಬಳಿ ಹೋಗುತ್ತಿರುವಾಗ KA-20 EN-9592 ನೇ ಸ್ಕೂಟರನ್ನು ಅದರ ಸವಾರನು ಸ್ಕೂಟರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ರವಿ ಈರಪ್ಪ ಸುಣಗಾರ ರವರಿಗೆ ಹಾಗೂ ಪ್ರಭುರವರಿಗೆ  ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರವಿ ಈರಪ್ಪ ಸುಣಗಾರ ಇವರಿಗೆ ಬಲಕಾಲಿನ ಮೊಣಗಂಟಿಗೆ ಒಳಜಖಂ, ಬಲ ಕಣ್ಣಿನ ಬಳಿ ತರಚಿದ ಗಾಯವಾಗಿದ್ದು  ಎಡಕೈಗೆ ಗುದ್ದಿದ ನೀವು  ಆಗಿರುತ್ತದೆ, ಪಿರ್ಯಾದಿದಾರರ ಮಾವ ಪ್ರಭುರವರ ಕೆಳದವಡೆ ಹಾಗೂ ಮೇಲ್ದವಡೆಗೆ ರಕ್ತಗಾಯವಾಗಿದ್ದು ಎಡ ಭುಜ ಹಾಗೂ ಎರಡು  ಕೈಗಳ ಮೊಣ ಗಂಟಿಗೆ ತರಚಿದ ರಕ್ತಗಾಯವಾಗಿರುತ್ತದೆ. ಹಾಗೂ ಎಡಕಾಲಿನ ಮೊಣಗಂಟಿಗೆ ಗುದ್ದಿದ ನೋವಾಗಿರುತ್ತದೆ. ಈ ಅಪಘಾತಕ್ಕೆ KA-20 EN-9592 ನೇ ಸ್ಕೂಟರ್ ನ ಸವಾರನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2021  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ದೇವೇಂದ್ರ ನಾಯಕ್ (38)  ತಂದೆ: ವೆಂಕೇಟೇಶ ನಾಯಕ್  ವಾಸ: ಮನೆ .ನಂ. 2-23 ಶ್ರೀರಾಮ ಗುಡ್ಡೆ,ಅಂಡಾರು ಹೆಬ್ರಿ ಇವರ ಅಣ್ಣನಾದ ಹರೀಶ್ ನಾಯಕ್ (50) ಎಂಬುವವರು ಹೆಬ್ರಿ ತಾಲೂಕು ಅಂಡಾರು ಗ್ರಾಮದ ಶ್ರೀರಾಮ ಗುಡ್ಡೆ ಎಂಬಲ್ಲಿ ವಾಸ ಮಾಡಿಕೊಂಡು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಹರೀಶ್ ನಾಯಕ್ ರವರು ಸುಮಾರು 20-30 ವರ್ಷಗಳಿಂದಲೂ ವಿಷರೀತ ಮಧ್ಯಪಾನ ಮಾಡುವ ಅಭ್ಯಾಸವಿದ್ದು, ಈ ದಿನ ದಿನಾಂಕ 02/11/2021 ರಂದು ಮಧ್ಯಾಹ್ನ ಸಮಯ ಸುಮಾರು 1:00 ಗಂಟೆಗೆ ಮಾಲಿನಿ ಎಂಬವರು ಕರೆ ಮಾಡಿ ಹರೀಶ್ ನಾಯಕ್ ಯವರು ಅಂಡಾರು ಗ್ರಾಮ ಕೊಡಮಣಿತ್ತಾಯ ದೇವಸ್ಥಾನದ ಪಕ್ಕದಲ್ಲಿರುವ ನಮ್ಮ ಮನೆ ವರಾಂಡದಲ್ಲಿ ಮಲಗಿದವರು ಆಸ್ವಸ್ತರಾಗಿರುತ್ತರೆಂದು ತಿಳಿಸಿದ ಮೇರೆಗೆ ದೇವೇಂದ್ರ ನಾಯಕ್ ರವರು ಹೋಗಿ ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಕಾರ್ಕಳ ಸರ್ಕಾರಿ ಆಸ್ವತ್ರೆಗೆ 17:20 ಗಂಟೆಗೆ ದಾಖಲಿಸಿದಲ್ಲಿ ವೈದರು ಪರೀಕ್ಷಿಸಿ ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಹರೀಶ್ ನಾಯಕ್ ರವರು ದಿನಾಂಕ 25/10/2021 ರಂದು ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಅಂಡಾರು ಗ್ರಾಮ ಕೊಡಮಣಿತ್ತಾಯ ದೇವಸ್ಥಾನದ ಪಕ್ಕದಲ್ಲಿರುವ ಮಾಲಿನಿಯವರ  ಮನೆ ವರಾಂಡದಲ್ಲಿ ದಿನಾಂಕ 02/11/2021 ರಂದು ಸಂಜೆ 5:20 ಗಂಟೆಯ ಮಧ್ಯದ ಅವಧಿಯಲ್ಲಿ ಮೃತ ಪಟ್ಟಿದಾಗಿದೆ. ಅವರು ವಿಪರೀತ ಮದ್ಯಪಾನ ಮಾಡಿ ಆರೋಗ್ಯದಲ್ಲಿ ಯಾವುದೋ ತೊಂದರೆಯಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 21/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾಧ ಅಬುಬಕ್ಕರ್ (48) ತಂದೆ: ಹಸೈನರ್ ಬ್ಯಾರಿ ವಾಸ: ಮಾವಿನಕಟ್ಟೆ, ಗುಲ್ವಾಡಿ ಗ್ರಾಮ ಬೈಂದೂರು ಇವರ ಪರಿಚಯದ 1ನೇ ಆಪಾದಿತ ಗವಂಜಿ ಶಾಯಿದ್ ಹಾಗೂ ಇತನು ಸುಮಾರು 15 ದಿನಗಳ ಹಿಂದೆ ಶಂಕರನಾರಾಯಣದಲ್ಲಿ ಕಾಡುಕೋಣ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾಗಿ ಜೈಲಿಗೆ ಹೋಗಿದ್ದು ಕೋರ್ಟಿನಿಂದ ಜಾಮೀನು ಪಡೆದುಕೊಂಡು ಹೊರಗಡೆ ಬಂದಿದ್ದು 1ನೇ ಆಪಾದಿತನು ಆತನು ಜೈಲಿಗೆ ಹೋಗಲು ಅಬುಬಕ್ಕರ್ ರವರೇ ಕಾರಣವೆಂದು ತಿಳಿದು ದಿನಾಂಕ 01/11/2021 ರಂಧು ಅಬುಬಕ್ಕರ್ ರವರು ಅವರ ಗೆಳೆಯನೊಂದಿಗೆ ಕಾರನಲ್ಲಿ ಬೈಂದೂರಿನಿಂದ ಭಟ್ಕಳ ಕಡೆ ಹೋಗುತ್ತಿದ್ದಾಗ ಬೆಳಿಗ್ಗೆ ಸಮಯ ಸುಮಾರು 10:00 ಗಂಟೆಗೆ ಬೈಂದೂರಿನ ಒತ್ತಿನಣೆ ಏರಿನಲ್ಲಿ ತಲುಪಿದಾಗ ಆಪಾದಿತರು ಕಾರು ನಂಬ್ರ ಕೆಎ-15 ಎಮ್-6303ನೇದರಲ್ಲಿ ಬಂದು ಅಬುಬಕ್ಕರ್ ರವರ ಕಾರನ್ನು ನಿಲ್ಲಿಸಿ ಕಾರಿನಿಂದ ಇಳಿದು ಕತ್ತಿ ತೋರಿಸಿ ಕೊಂದು ಹಾಕುತ್ತೇನೆಂದು ಜೀವ ಬೆದರಿಕೆ ಹಾಕಿ ಅಬುಬಕ್ಕರ್ ಇವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಚರಂಡಿಗೆ ದೂಡಿ ಹಾಕಿ ಶಿಲೆಕಲ್ಲು ತಲೆ ಮೇಲೆ ಹಾಕಲು ಬಂದಿದ್ದು ಅಬುಬಕ್ಕರ್ ರವರು ತಪ್ಪಿಸಿಕೊಂಡು ಬಂದಿರುತ್ತಾರೆ. ನಂತರ ಆಪಾದಿತ ಗವಂಜಿ ಶಾಯಿದ್ ಹಾಗೂ ಇತರರು ಕುಂದಾಪುರ ಕಡೆಗೆ ಹೋಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 174/2021 ಕಲಂ: 341 ,504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ವಿನಯ ಕುಮಾರ್ (45) ತಂದೆ: ದಿ. ನಾಗೇಶ್ ಶೆಟ್ಟಿ ಆಹಾರ ನಿರೀಕ್ಷಕರು, ಬೈಂದೂರು ಇವರಿಗೆ ದಿನಾಂಕ 02/11/2021 ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಫಿಶರಿಶ್ ಕಾಲೋನಿಯಲ್ಲಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಇರಿಸಿರುವುದಾಗಿ ಖಚಿತ ಮಾಹಿತಿ ಬಂದಂತೆ 10:00 ಗಂಟೆಗೆ ವಿನಯ ಕುಮಾರ್‌ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ಇಕೋ ಕಾರು ನಂಬ್ರ ಕೆಎ-20 ಎಮ್ ಡಿ-7035 ನೇದರಲ್ಲಿ ಅಕ್ಕಿ ಚೀಲವನ್ನು ಲೋಡ್ ಮಾಡಿ ಇಟ್ಟಿರುವುದು ಕಂಡು ಬಂದ ಮೇರೆಗೆ ಬೈಂದೂರು ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸ್ ಅಧಿಕಾರಿ ಸಿಬ್ಬಂದಿಯವರೊಂದಿಗೆ ಈ ಮೇಲಿನ ಕಾರಿನಲ್ಲಿ ಲೋಡ್ ಮಾಡಿದ 31 ಪ್ಲಾಸ್ಟಿಕ್ ಚೀಲಗಳಲ್ಲಿದ್ದ ಒಟ್ಟು 1000 ಕಿ.ಲೋ ಅಕ್ಕಿ, ತೂಕದ ಯಂತ್ರ ಹಾಗೂ ಕಾರು ಕೆಎ-20 ಎಮ್ ಡಿ-7035 ನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 175/2021 ಕಲಂ: 3,6,7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ 1955 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-11-2021 10:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080