ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 02/10/2022 ರಂದು ರಾತ್ರಿ ಸುಮಾರು 09:50 ಗಂಟೆಗೆ, ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಗ್ರಾಮದ ಹಟ್ಟಿಯಂಗಡಿ ದೇವಸ್ಥಾನದ ಕಮಾನ್ ಎದುರು ಹಾದುಹೋದ ತಲ್ಲೂರು- ನೇರಳಕಟ್ಟೆ ಡಾಂಬಾರು ರಸ್ತೆಯಲ್ಲಿ, ಪಿರ್ಯಾದಿದಾರರಾದ ಶರಾವತಿ  (24) ತಂದೆ ದಿ.ಶೀನಪ್ಪ ಶೆಟ್ಟಿ ವಾಸ: ಹೆರಮಣ್ಣು ಹಕ್ಕಲ್‌ ಮನೆ ಬೆಳ್ಳಾಲ ಗ್ರಾಮ ಕುಂದಾಪುರ ಇವರು ತನ್ನ ಸ್ನೇಹಿತನ ಬೈಕ್‌ ನಂಬ್ರ KA-20 EU-0423 ನೇದರಲ್ಲಿ ಸಹಸವಾರಳಾಗಿ ಕುಳಿತುಕೊಂಡು ತಲ್ಲೂರು ಕಡೆಯಿಂದ ನೇರಳಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಆಪಾದಿತ ಸ್ಟೀವನ್‌ ಮೆಂಡೋನ್ಸಾ ಎಂಬವರು  KA-20 AB-5234 ನೇ ಆಟೋ ರಿಕ್ಷಾವನ್ನು ನೇರಳಕಟ್ಟೆ ಕಡೆಯಿಂದ ತಲ್ಲೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲಕ್ಕೆ ಬಂದು, ಎದುರುಗಡೆಯಿಂದ ಬಂದ ಶರಾವತಿ ರವರು ಬೈಕಿಗೆ ಢಿಕ್ಕಿ ಹೊಡೆಸಿದ ಪರಿಣಾಮ ಬೈಕ್‌ನ ಸಹಸವಾರಳಾದ ಶರಾವತಿ ರವರಿಗೆ ಸೊಂಟಕ್ಕೆ ಒಳನೋವು ಬಲಕಾಲಿನ ಬೆರಳಿಗೆ ತರಚಿದ ಗಾಯವಾಗಿದ್ದು ಬೈಕ್‌ ಸವಾರ ಸಂದೀಪ್‌ ಇವರಿಗೆ ಸೊಂಟಕ್ಕೆ ಒಳನೋವು, ಬಲಕೈಗೆ ಮುಳೆ ಮುರಿತದ ಗಾಯ,ತುಟಿಗೆ ಹಾಗೂ ಎರಡೂ ಕಾಲಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಆಪಾದಿತ ಆಟೋರಿಕ್ಷಾ ಚಾಲಕನಿಗೂ ತರಚಿದ ಗಾಯವಾಗಿದ್ದು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ.  ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 103/2022 ಕಲಂ. 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಪಿ.ಯು. ಯಶೋಧರ, (52) ತಂದೆ: ದಿ. ವೀರಸೇನ ಇಂದ್ರ, ವಾಸ: ಸ್ವಸ್ತಿಕ್ ನಿವಾಸ, ಪಡುಹಿತ್ಲು, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ಇವರ ಮಗ ಸ್ವರೂಪ್ ಎಂಬವರು ಕಂಚಿನಡ್ಕದ ಆಭರಣ ಮೋಟಾರ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಅವರು ದಿನಾಂಕ 03/10/2022 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಹೊರಟು ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು - ಉಡುಪಿ ಏಕಮುಖ ರಸ್ತೆಯಲ್ಲಿ ತನ್ನ KA-20 EX-4658 ನೇ ನಂಬ್ರದ ಮೋಟಾರು ಸೈಕಲನ್ನು ಪಡುಬಿದ್ರಿ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಬೆಳಿಗ್ಗೆ 08:00 ಗಂಟೆಯ ವೇಳೆಗೆ  ನಡ್ಸಾಲು ಗ್ರಾಮದ ಪಡುಬಿದ್ರಿ ಬಸ್ತಿಕಾರ್  ಹಾರ್ಡ್ ವೇರ್ ಅಂಗಡಿ ಎದುರು ತಲುಪುವಾಗ ಅದೇ ರಸ್ತೆಯಲ್ಲಿ ಹೋಗುತ್ತಿದ್ದ KA-19 C-3443 ನೇ ನಂಬ್ರದ ಮಿನಿ ಲಾರಿಯನ್ನು ಅದರ ಚಾಲಕನು ಯಾವುದೇ ಸೂಚನೆ ನೀಡದೆ ನಿರ್ಲಕ್ಷ್ಯತನದಿಂದ ನಿಲ್ಲಿಸಿದಾಗ  ಸ್ವರೂಪ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್  ಲಾರಿಗೆ ಹಿಂಬದಿಗೆ ಡಿಕ್ಕಿ ಹೊಡೆದು ಸ್ವರೂಪ್ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಎಡಕೈ ಮೂಳೆಮುರಿತವಾಗಿ ಮೋಟಾರು ಸೈಕಲ್  ಜಖಂಗೊಂಡಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಸುರತ್ಕಲ್ ನ ಅಥರ್ವ  ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪಡುಬಿದ್ರಿ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 121/2022 ಕಲಂ. 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಕೃಷ್ಣ ಪೂಜಾರಿ (53) ತಂದೆ:ಕೂಸ ಪೂಜಾರಿ   ವಾಸ: ಜೋಗಿ ನಿಲಯ ಸಾಸ್ತಾನ ಕೋಡಿ ಕನ್ಯಾನ ಗ್ರಾಮ ಬ್ರಹ್ಮಾವರ ತಾಲೂಕು ಉಡುಪಿ ಇವರ ಹೆಂಡತಿ ಜಯ (45) ರವರು  ಮನೆ ವಾರ್ತೆ  ಕೆಲಸ ಕೆಲಸ ಮಾಡಿಕೊಂಡಿದ್ದು,  ಇವರು  ಆಗಾಗ್ಗೆ ಮೈ ಕೇ ನೋವು ಎಂದು ಎಂಬುದಾಗಿ ಹೇಳುತ್ತಿದ್ದು ಸುಮಾರು 12 ವರ್ಷದ ಹಿಂದೆ ಕೃಷ್ಣ ಪೂಜಾರಿ ರವರು ಬೇರೆ ಮನೆ ಮಾಡಿದ್ದುಮನೆಯ ಒಳಗೆ ಸಮಸ್ಯೆ ಇದೇ ನಾಗನ ನಡೆ ಇರುವುದಾಗಿ ಹೇಳುತ್ತಿದ್ದುಇದರಿಂದಾಗಿ ಜಯರವರು ಸುಮಾರು 6 ತಿಂಗಳಿಂದ ಮಾನಸಿಕವಾಗಿ ನೊಂದಿದ್ದು ದಿನಾಂಕ 03/10/2022ರಂದು ಮಧ್ಯಾಹ್ನ 12:30 ಗಂಟೆಯ ಸುಮಾರಿಗೆ  ಮನೆಯ ರೂಮಿನಲ್ಲಿದ್ದ ಅಟ್ಟಕ್ಕೆ ನೈಲಾನ್  ಹಗ್ಗ ಕಟ್ಟಿ ಕುತ್ತಿಗೆಗೆ. ನೇಣು ಬಿಗಿದುಕೊಂಡು.ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ, ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 41/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಬೈಂದೂರು: ದಿನಾಂಕ 02/10/2022 ರಂದು ಸಂಜೆ 5:30 ಗಂಟೆಗೆ ಅಲ್ಪ ಸಂಖ್ಯಾತರ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಶಿರೂರು ಗ್ರಾಮದ ಕಳಿಹಿತ್ಲು ಬಂದರಿನ ಬಳಿ ಕ್ರೀಡೆಯನ್ನು ಆಯೋಜಿಸಿದ್ದು ಪಿರ್ಯಾದಿದಾರರಾಧ  ಮುಲ್ಲಾ ಮಹ್ಮದ್ ಆಶೀಫ್ (31) ತಂದೆ: ಮುಲ್ಲಾ ಮಹ್ಮದ್ ಜಪ್ರಿ  ವಾಸ:ಮುಲ್ಲಾ ಹೌಸ್ ಮೊಮೀನ್ ಮೊಹಲ್ಲಾ ಶಿರೂರು ಗ್ರಾಮ ಬೈಂದೂರು ಇವರು ಅವರ ತಮ್ಮ  ಮುಲ್ಲಾ  ಜಾಸೀಮ್ ಪಾಯಿವಾಡ ಪ್ರೆಂಡ್ಸ್  ತಂಡದ ಇತರ 7 ಜನ ರೊಂದಿಗೆ ಕಳಿಹಿತ್ಲು ಬಂದರಿಗೆ ಹಗ್ಗ ಜಗ್ಗಾಟದ ಪಂದ್ಯಾಟ ಆಡುವ ಬಗ್ಗೆ ಹೋಗಿದ್ದು  ಪಂದ್ಯದ  ವ್ಯವಸ್ಥಾಪಕ ಹಾಗೂ ತೀರ್ಪುಗಾರರರು ಆರೋಪಿ ಮಮ್ದು  ಜುಬೇರಾ ಆಗಿದ್ದು ಪಂದ್ಯದ ಪ್ರಥಮದಲ್ಲಿ  2 ತಂಡಕ್ಕೆ ಮೂರು ಸುತ್ತಿನ  ಹಗ್ಗ ಜಗ್ಗಾಟ ವನ್ನು ಆಡಿಸಿದ್ದು  ಬಳಿಕ ಮುಲ್ಲಾ ಮಹ್ಮದ್ ಆಶೀಫ್  ರವರ ತಂಡಕ್ಕೆ ಹಾಗೂ ಗೌಸಿಯಾ ಪ್ರೆಂಡ್ಸ್ ತಂಡಕ್ಕೆ ಹಗ್ಗಜಗ್ಗಾಟ ಪಂದ್ಯಾಟವನ್ನು ಆಡಿಸಿದ್ದು  ಈ ಪಂದ್ಯಾಟದಲ್ಲಿ ಮುಲ್ಲಾ ಮಹ್ಮದ್ ಆಶೀಫ್ ರವರ ತಂಡ ಸೋತಿದ್ದು ಇವರ ತಂಡಕ್ಕೆ  ಇನ್ನೊಂದು ಸುತ್ತಿನ ಪಂದ್ಯಾಟವನ್ನು ಆಡಲು ಅವಕಾಶ ಕೊಡದೇ ಪಂದ್ಯಾಟದಿಂದ ಹೊರ ಹೋಗುವಂತೆ ಆರೋಪಿ 1ನೇಯವರು ಹೇಳಿದ್ದಕ್ಕೆ  ಅಸಮಧಾನಗೊಂಡ ಮುಲ್ಲಾ ಮಹ್ಮದ್ ಆಶೀಫ್ ರವರು ಹಾಗೂ ತಮ್ಮ ಮುಲ್ಲಾ ಜಾಸೀಂ ಹಾಗೂ ತಂಡದ ಇತರ ಸದಸ್ಯರು ಆರೋಪಿ 1ನೇಯವರ  ಬಳಿ ಹೋಗಿ ಪಂದ್ಯಾಟದ ನಿಯಮದ ಬಗ್ಗೆ ವಿಚಾರಿಸಿದಾಗ ಆರೋಪಿ 1 ನೇಯವರಿಗೂ ಫಿರ್ಯಾದುದಾರರ ತಂಡದವರಿಗೆ ಮಾತಿಗೆ ಮಾತಾಗಿ ಮುಲ್ಲಾ ಮಹ್ಮದ್ ಆಶೀಫ್ ಇವರನ್ನು  ಹಾಗೂ ತಮ್ಮ  ಮುಲ್ಲಾ ಜಾಸೀಂ ರನ್ನು ಕೈಯಿಂದ ದೂಡಿದ್ದು  ಆರೋಪಿ ತಾರಿಸಲ್ಲ ಬರಕತ್, ಬಿಗ್ಬಾ ನಿಯಾಜ್ನೇಯವರು ಏಕಾಏಕಿ ಬಂದು  ವ್ಯವಸ್ಥಾಪಕರು ಹೇಳಿದ್ದು ಅರ್ಥವಾಗುದಿಲ್ಲವಾ ಎಂದು ಹೇಳಿ ದೂಡಿ ಆರೋಪಿ ಬಿಗ್ಬಾ ನಿಯಾಜ್ ನು ಅಲ್ಲೆ ಇದ್ದ ನೀರು ದೂಡುವ ದಂಡಿನಿಂದ ಫಿರ್ಯಾದುದಾರರ  ಎಡ ಕೈ ಬೆರಳಿಗೆ ಹೊಡೆದು ಒಳ ನೋವು ಮಾಡಿದ್ದು  ಗಲಾಟೆ ಬಿಡಿಸಲು ಬಂದ ಮುಲ್ಲಾ ಮಹ್ಮದ್ ಆಶೀಫ್ ರವರ ತಮ್ಮ ಮುಲ್ಲಾ  ಜಾಸೀಂ ಮತ್ತುಜೊತೆಯಲ್ಲಿದ್ದ ಮುಲ್ಲಾ ನಜೀರ್ ಮತ್ತು ಮುಲ್ಲಾ  ನಜೀದ್ ರವರಿಗೆ ಆರೋಪಿ 2 ಮತ್ತು3ನೇಯವರು ಹಾಗೂ ಇತರರು ದೂಡಿದ್ದು ಆಸಮಯ ನೆಲಕ್ಕೆ ಬಿದ್ದ ಮುಲ್ಲಾ  ಜಾಸೀಂ ರವರಿಗೆ ಆರೋಪಿ 2 ನೇಯವರು ಕೈಯಿಂದ ಹೊಡೆದುಕಾಲಿನಿಂದ ತುಳಿದು  ಕಲ್ಲಿನಿಂದ ಎಡ ಭುಜಕ್ಕೆ  ಹೊಡೆದು ಒಳ ನೋವು ಉಂಟು ಮಾಡಿ ಆರೋಪಿಗಳು ಇವತ್ತುನೀವು ಬಚಾವಾದಿರಿ  ಮುಂದಕ್ಕೆ ನಿಮ್ಮನ್ನುಜೀವ  ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 197/2022 ಕಲಂ. 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-10-2022 06:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080