ಅಭಿಪ್ರಾಯ / ಸಲಹೆಗಳು

ಮಾಧಕ ವಸ್ತು ಸೇವನೆ ಪ್ರಕರಣ 

  • ಮಣಿಪಾಲ: ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ರೇವಣಸಿದ್ಧ ಹಾಗೂ ಬಸವರಾಜ್ ಇವರೊಂದಿಗೆ ಮಾದಕವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ದಿನಾಂಕ 29/09/2022 ರಂದು 10:00 ಗಂಟೆಗೆ ಮಣಿಪಾಲ ಎಂಐಟಿ ಕಾಲೇಜಿನಿಂದ Adarsh lal Anilal (20), S/o, Anilal, R/o, Karthika House, Ezhukone, Kollam Dist, Kerala. ಎಂಬಾತನನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಠಾಣಾ ರೇವಣಸಿದ್ಧ ಹಾಗೂ ಬಸವರಾಜ್ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ. ಆರೋಪಿತನು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಗಳು ದಿನಾಂಕ 02/10/2022 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 178/2022 ಕಲಂ: 27 (b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ಪ್ರೊಬೇಷನರಿ ಪಿಎಸ್‌ಐ ಪರಶುರಾಮ್ ಹಾಗೂ ಬಸವರಾಜ್ ಇವರೊಂದಿಗೆ ಮಾದಕವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ದಿನಾಂಕ 30/09/2022 ರಂದು 10:00 ಗಂಟೆಗೆ ಮಣಿಪಾಲ ಎಂಐಟಿ ಕಾಲೇಜಿನಿಂದ Ayush Aryan (‌21), S/o. A.K Jha, R/o. Rashikpur, Dumka , Jharkhand, ಎಂಬಾತನನ್ನು ವಶಕ್ಕೆ ಪಡೆದು ಅದೇ ದಿನ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಪ್ರೊಬೇಷನರಿ ಪಿಎಸ್‌ಐ ಪರಶುರಾಮ್ ಹಾಗೂ ಬಸವರಾಜ್ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ. ಮೇಲ್ಕಂಡ ಆರೋಪಿತನು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಗಳು ದಿನಾಂಕ 02/10/2022 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 179/2022 ಕಲಂ: 27 (b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ಪ್ರೊಬೇಷನರಿ ಪಿಎಸ್‌ಐ ಪರಶುರಾಮ್ ಹಾಗೂ ಬಸವರಾಜ್ ಇವರೊಂದಿಗೆ ಮಾದಕವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ದಿನಾಂಕ 30/09/2022 ರಂದು 11:00 ಗಂಟೆಗೆ ಮಣಿಪಾಲ ಎಂಐಟಿ ಕಾಲೇಜಿನಿಂದ Abhigyan Kshyap, (‌22) Years, S/o. Pramod Borah, R/o. Survey Ajantapath, Buye lane -1, Gopal Phukan path, Opp house NO 47, Guwahati City, Kamrup Dist, Assam. ಎಂಬಾತನನ್ನು ವಶಕ್ಕೆ ಪಡೆದು ಅದೇ ದಿನ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಪ್ರೊಬೇಷನರಿ ಪಿಎಸ್‌ಐ ಪರಶುರಾಮ್ ಹಾಗೂ ಬಸವರಾಜ್ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ. ಮೇಲ್ಕಂಡ ಆರೋಪಿತನು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಗಳು ದಿನಾಂಕ 02/10/2022 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 180/2022 ಕಲಂ: 27 (b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ 02/10/2022 ರಂದು ಬೆಳಿಗ್ಗೆ 11:45 ಗಂಟೆಗೆ ಕುಂದಾಪುರ ತಾಲೂಕಿನ ಕುಳುಂಜೆ ಗ್ರಾಮದ ಚಾರ್ಮಕ್ಕಿ ಕೋಳಿ ಫಾರಂ ಬಳಿಯಲ್ಲಿನ ಶಂಕರನಾರಾಯಣ – ಸಿದ್ದಾಪುರ ನಡುವಿನ ತಿರುವಿನಿಂದ ಕೂಡಿದ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತರಾದ KA-09 F-5014 ನೇ ನೊಂದಣಿ ನಂಬ್ರದ ಕೆಎಸ್‌ಆರ್‌‌ಟಿಸಿ ಬಸ್ ಚಾಲಕ ವಿಜಯ ಕುಮಾರ್‌‌ರವರು ತಾನು ಚಲಾಯಿಸುತ್ತಿದ್ದ ಬಸ್‌‌ನ್ನು ಶಂಕರನಾರಾಯಣ ಕಡೆಯಿಂದ ಸಿದ್ದಾಪುರ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತನ್ನ ತೀರಾ ಬಲ ಬದಿಯಲ್ಲಿ ಚಲಾಯಿಸಿ ಸಿದ್ದಾಪುರ ಕಡೆಯಿಂದ ಶಂಕರನಾರಾಯಣ ಕಡೆಗೆ ಮೊಟಾರು ಸೈಕಲ್‌ ನಂಬ್ರ KA-20 ES-0505ನೇದರಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ ಪಿರ್ಯಾದಿದಾರರಾದ ಅಭಿಶೇಕ್ ಶೆಟ್ಟಿ ಪ್ರಾಯ 26 ವರ್ಷ ತಂದೆ; ಶಾಂತರಾಮ ಶೆಟ್ಟಿ ವಾಸ, ಕೊಣ್ಕೆರ ಮನೆ ಬಿಜೂರು ಅಂಚೆ & ಗ್ರಾಮ ಬೈಂದೂರು ತಾಲೂಕು ಉಡುಪಿ ಇವರ ಬಲ ಭುಜಕ್ಕೆ ಡಿಕ್ಕಿ ಹೊಡೆದಿರುತ್ತಾರೆ. ಪರಿಣಾಮ ಮೊಟಾರು ಸೈಕಲ್‌ ಸಮೇತ ರಸ್ತೆಯ ಮೇಲೆ ಬಿದ್ದು ಅಭಿಶೇಕ್ ಶೆಟ್ಟಿ ರವರ ಬಲ ಭುಜಕ್ಕೆ ಮೂಳೆ ಮುರಿತದ ಗಾಯ ಬಲ ಕಾಲಿನ ಮಧ್ಯ ಬೆರಳು ಮೂಳೆ ಮುರಿತದ ಗಾಯ, ಪಾದದ ಬಳಿ ಗಾಯ ಹಾಗೂ ಮುಂಗಾಲು ಮತ್ತುಎಡ ಕೈಗೆ ತರಚಿದ ಗಾಯ ನೋವು ಆಗಿದ್ದು ಅಭಿಶೇಕ್ ಶೆಟ್ಟಿ ರವರು ಹೆಲ್ಮೆಟ್‌ಧರಿಸಿದ್ದರಿಂದ ತಲೆಗೆ ಯಾವುದೇ ಗಾಯ ನೋವು ಆಗಿರುವುದಿಲ್ಲ ನಂತರ ಅಲ್ಲಿ ಸೇರಿದ ಸಾರ್ವಜನಿಕರು ಪಿರ್ಯಾದಿದಾರರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದು ಕೊಂಡು ದಾಖಲು ಮಾಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 103/2022 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಸ್ವಾಭಾವಿಕ ಮರಣ ಪ್ರಕರಣ
    ಕುಂದಾಫುರ: ಪಿರ್ಯಾದಿದಾರರಾದ ನಿತೇಶ, (25) ತಂದೆ: ವೈಕುಂಠ ಮೊಗವೀರ, ವಾಸ: ವಿನಾಯಕ ನಗರ, ಕುಂಭಾಶಿ ಗ್ರಾಮ, ಕುಂದಾಪುರ ತಾಲೂಕು ಇವರ ಅಣ್ಣನಾದ ಮಂಜುನಾಥ (36) ಎನ್ನುವವರು ಅವಿವಾಹಿತರಾಗಿದ್ದು, ಇಲೆಕ್ಟ್ರೀಶಿಯನ್ ಕೆಲಸ ಮಾಡಿಕೊಂಡಿರುವುದಾಗಿದೆ. ಸುಮಾರು 8-10 ವರ್ಷದಿಂದ ವೀಪರೀತ ಮದ್ಯಪಾನ ಮದ್ಯ ಸೇವನೆ ಮಾಡುವ ಹವ್ಯಾಸ ಹೊಂದಿದ್ದು ಸುಮಾರು 15 ದಿನಗಳಿಂದ ಹೊಟ್ಟೆ ನೋವು ಎಂದು ಹೇಳಿದ್ದು, ಚಿಕಿತ್ಸೆ ಬಗ್ಗೆ ಆತನನ್ನು 1 ವಾರದ ಹಿಂದೆ ಚಿಕಿತ್ಸೆ ಬಗ್ಗೆ ಕುಂದಾಪುರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಿಸಿ ದಿನಾಂಕ 02/10/2022 ರಂದು ಬೆಳಿಗ್ಗೆಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಿಸಿ ಮನೆಗೆ ಕರೆದುಕೊಂಡು ಹೋಗಿದ್ದು, ದಿನಾಂಕ 02/10/2022 ರಂದು ಮದ್ಯಾಹ್ನ 02:15 ಗಂಟೆಯಿಂದ ಸಂಜೆ 04:30 ಗಂಟೆಯ ಮದ್ಯಾವಧಿಯಲ್ಲಿ ಕುಂಭಾಶಿ ಗ್ರಾಮದ ವಿನಾಯಕ ನಗರದ ನಿತೇಶ ರವರ ಮನೆಯ ಬೆಡ್ ರೂಂನ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿಕೊಂಡು ಮನೆಯಮಾಡಿನ ಮರದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತರು ವೀಪರೀತ ಮದ್ಯಪಾನದಿಂದ ಆದ ಲಿವರ್ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 34/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಮಣಿಪಾಲ: ಪಿರ್ಯಾದಿದಾರರಾದ ಮಾಹಿಮ್‌ ಸಾಬಿತ್‌ (24) ತಂದೆ: L P ಅಬ್ದುಲ್ಲಾ ವಾಸ: L P ಹೌಸ್‌ , ಇಜ್ಜತ್‌ ನಗರ , ಪೋಸ್ಟ್‌ ಹಿದಾಯತ್‌ ನಗರ, ವಿಧ್ಯಾನಗರ ಗ್ರಾಮ, ಕಾಸರಗೋಡ್‌ ಇವರು ದಿನಾಂಕ 01/10/2022 ರಂದು ಸ್ನೇಹಿತರಾದ ಮಹಶೂಕ್‌, ರಾಝೀಮ್‌, ಸಹಾದ್‌, ಸ್ವಿಬ್ಘತುಲ್ಲಾ ರೊಂದಿಗೆ ಸ್ವಬ್ಘತುಲ್ಲಾರವರ ಕಾರು ನಂಬರ್‌ KL-14 Z-2745 ರಲ್ಲಿ ಕಾಸರಗೋಡಿನಿಂದ ಆಗುಂಬೆ ಕುಂದಾದ್ರಿ ಬೆಟ್ಟಕ್ಕೆ Sunrise ನೋಡಲೆಂದು ಹೊರಟ್ಟಿದ್ದು ರಾತ್ರಿ 11 ಗಂಟೆಗೆ ಮಣಿಪಾಲದ Dee Tee Pub ಗೆ ಊಟಕ್ಕೆ ಹೋಗಿರುತ್ತಾರೆ, ಅವರಲ್ಲಿ ಸ್ಟೂಡೆಂಡ್‌ ಐಡಿ ಇಲ್ಲದ ಕಾರಣ ಪಬ್‌ ನ ಒಳಗೆ ಪ್ರವೇಶ ನಿರಾಕರಿಸಿರುತ್ತಾರೆ, ಮಾಹಿಮ್‌ ಸಾಬಿತ್‌ ರವರು ಹಾಗೂ ಅವರ ಸ್ನೇಹಿತ ಮಹಶೂಕ್‌ ರವರು ನೆಲದಲ್ಲಿ ಬಿದ್ದಿದ ಐಡಿ ಗಳನ್ನು ಹೆಕ್ಕಿ ತೋರಿಸಿದಾಗ ಮಹಶೂಕ್‌ ರವರಿಗೆ ಒಳಗೆ ಪ್ರವೇಶ ನೀಡಿರುತ್ತಾರೆ, ಉಳಿದವರಿಗೆ ಪ್ರವೇಶ ನಿರಾಕರಿಸಿರುತ್ತಾರೆ ಮಾಹಿಮ್‌ ಸಾಬಿತ್‌ ರವರು ಹಾಗೂ ಅವರ ಸ್ನೇಹಿತರು ವಿನಂತಿಸಿದಾಗ ಪಬ್‌ ನ 3 ಜನ ನೌಕರರಾದ ಅವಿನಾಶ್‌ ಶೆಟ್ಟಿ, ಸಂದೀಪ್‌ ಕೋಟ್ಯಾನ್‌ ಮತ್ತು ಸುರೇಶ ಪೂಜಾರಿ ರವರುಗಳು ಸ್ವಬ್ಘತುಲ್ಲಾ ರವರ ಮೊಬೈಲ್‌ ಪೋನ್‌ ನನ್ನು ತೆಗೆದುಕೊಂಡು 5000/- ರೂ ದಂಡ ನೀಡುವಂತೆ ಕೇಳಿರುತ್ತಾರೆ ಹಾಗೂ ಮಾಹಿಮ್‌ ಸಾಬಿತ್‌ ರವರ ಮುಖಕ್ಕೆ ಕೈಯಿಂದ ಗುದ್ದಿರುತ್ತಾರೆ, ಬಳಿಕ ಪಬ್‌ ನ್ನು ಬಂದ ಮಾಡಿರುತ್ತಾರೆ, ರಾತ್ರಿ 00:30 ಗಂಟೆಗೆ ಮಾಹಿಮ್‌ ಸಾಬಿತ್‌ ರವರು ಹಾಗೂ ಸ್ನೇಹಿತತು ಸ್ವಬ್ಘತುಲ್ಲಾ ರವರ ಮೊಬೈಲ್‌ ಪೋನ್‌ ನನ್ನು ವಾಪಾಸು ಕೊಡುವಂತೆ ವಿನಂತಿಸಿದಾಗ 3000/- ರೂ ಪಡೆದು ಮಾಹಿಮ್‌ ಸಾಬಿತ್‌ ಇವರ ಹಾಗೂ ಸ್ನೇಹಿತರ ಪೋಟೋ ತೆಗೆದು ವಾಪಾಸು ನೀಡಿರುತ್ತಾರೆ, ಬಳಿಕ ಮಾಹಿಮ್‌ ಸಾಬಿತ್‌ ರವರು ಆರೋಪಿಗಳ ಪೋಟೋ ತೆಗೆದಾಗ ಆರೋಪಿ 1)ಅವಿನಾಶ್ ಶೆಟ್ಟಿ, 2)ಸಂದೀಪ್ ಕೋಟ್ಯಾನ್, 3)ಸುರೇಶ್ ಪೂಜಾರಿ ಇವರುಗಳು ಸಿಟ್ಟುಗೊಂಡು ಮಾಹಿಮ್‌ ಸಾಬಿತ್‌ ರವರಿಗೆ ಮತ್ತು ಮಹಶೂಕ್‌ ರವರಿಗೆ ಕೈಯಿಂದ ಹೊಡೆದಿರುತ್ತಾರೆ, ಈ ಸಮಯ ತಡೆಯಲು ಬಂದ ಉಳಿದ ಸ್ನೇಹಿತರಿಗೂ ಕೈಯಿಂದ ಹೊಡೆದಿರುತ್ತಾರೆ, ಬಳಿಕ ಸ್ವಬ್ಘತುಲ್ಲಾ ರವರ ಮೊಬೈಲ್‌ ಪೋನ್‌ ತೆಗೆದು ನೆಲಕ್ಕೆ ಬಿಸಾಡಿ ಸಂರ್ಪೋಣ ಜಖಂಗೊಳಿಸಿರುತ್ತಾರೆ, ಬಳಿಕ ಕಲ್ಲು ಹಾಗೂ ಬಿಯರ್‌ ಬಾಟಲಿಯಲ್ಲಿ ಪಿರ್ಯಾದಿದಾರರ ಕಾರಿನ ಹಿಂದಿನ ಗ್ಲಾಸಿಗೆ ಎಸೆದಿದ್ದು ಕಾರಿನ ಹಿಂದಿನ ಗಾಜು ಹುಡಿಯಾಗಿರುತ್ತದೆ ಬಳಿಕ ಮೊಬೈಲ್‌ ಪೋನ್‌ ನ್ನು ಹಿಂದಿರುಗಿಸಿರುತ್ತಾರೆ, ಅಲ್ಲದೇ ಜೀವ ಬೆದರಿಕೆ ಹಾಕಿರುತ್ತಾರೆ, ಹಲ್ಲೆಯಿಂದ ಮಾಹಿಮ್‌ ಸಾಬಿತ್‌ ರವರಿಗೆ ಮುಖಕ್ಕೆ ನೋವಾಗಿದ್ದು ಮಹಶೂಕ್‌ ರವರಿಗೆ ತುಂಬಾ ನೋವುಂಟಾಗಿರುತ್ತದೆ, ಮಹಶೂಕ್‌ ರವರು KMC ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 176/2022 ಕಲಂ:341,323,506,427, R/W 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಅವಿನಾಶ್‌ ಶೆಟ್ಟಿ (31) ತಂದೆ: ಚಂದ್ರಶೇಖರ ಶೆಟ್ಟಿ ವಾಸ: ಆತ್ರಾಡಿ ಬಾಬಣ್ಣ ನಿಲಯ ಸತೀಶ ನಗರ ಆತ್ರಾಡಿ ಉಡುಪಿ ಇವರು ಹೆರ್ಗಾ ಗ್ರಾಮದ ಈಶ್ವರನಗರದ ಭವಾನಿ ಲಾಡ್ಜಿಂಗ್‌ ನಲ್ಲಿ Reception ಆಗಿ ಕೆಲಸ ಮಾದಿಕೊಂಡಿದ್ದು ದಿನಾಂಕ 02/10/2022 ರಂದು Reception ಕೆಲಸದಲ್ಲಿರುವಾಗ ಸಮಯ ಸುಮಾರು ಮುಂಜಾಯು 01:30 ಗಂಟೆಗೆ ಆರೋಪಿಗಳು ತಮ್ಮ KL-14 Z-2745 ಕಾರನಲ್ಲಿ ಭವಾನಿ ಲಾಡ್ಜಿಂಗ್‌ ನ ಪಾರ್ಕಿಂಗ್‌ ಸ್ಥಳಕ್ಕೆ ಬಂದಾಗ ಅವಿನಾಶ್‌ ಶೆಟ್ಟಿ ರವರು ಹೊರಗೆ ಬಂದು ನೋಡಿದಾಗ ಆರೋಪಿತ 1)ಮಾಹಿಮ್ ಸಾಬಿತ್, 2)ಸ್ವಿಬ್ಘತುಲ್ಲಾ, 3)ಮೊಹಮ್ಮದ್ ಸಾಹದ್, 4)ಅಹಮ್ಮದ್ ರಜೀಮ್ , 5)ಮೊಹಮ್ಮದ್ ಮೆಹಶೂಕ್ ಇವರು ಪಿರ್ಯಾದಿದಾರರನ್ನು ಉದ್ದೇಶಿಸಿ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದದಲ್ಲಿ ಬೈದು ಕಾರನ್ನು ಅವಿನಾಶ್‌ ಶೆಟ್ಟಿ ರವರ ಬೆನ್ನಿಗೆ ತಾಗಿಸಿ ಕಾರಿನಲ್ಲಿದ್ದ ಆರೋಪಿಗಳಾದ ಮಾಹಿಮ್‌ ಸಾಬಿತ್‌, ಸ್ವಿಬ್ಘತುಲ್ಲಾ, ಮೊಹಮ್ಮದ್‌ ಸಾಹದ್‌ , ಅಹಮ್ಮದ್‌ ರಜೀಮ್‌ , ಮೊಹಮ್ಮದ್‌ ಮೆಹಶೂಕ್‌ ರವರು ಕಾರಿನಿಂದ ಕೆಳಗೆ ಇಳಿದು ಇವರಿಗೆ ಕೈ ಯಿಂದ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 177/2022 ಕಲಂ: 143, 147,323,504, r/w 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-10-2022 10:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080