ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ:

  • ಉಡುಪಿ : ಪಿರ್ಯಾದುದಾರರು ಡಾ//. ಪ್ರಜ್ಞಾ .ಕೆ (35) ಗಂಡ :ಡಾ. ಶ್ರೀಕಾಂತ ಪಿ.ಹೆಚ್ ವಾಸ: ಶಾರದಾ ಮನೆ ಸ್ವರ್ಣ ಜ್ಯೂವೆಲರ್ಸ ಎದುರು, ಉಡುಪಿ -ಮಣಿಪಾಲ ರಸ್ತೆ,ಕಡಿಯಾಳಿ ಶಿವಳ್ಳಿ ಗ್ರಾಮ  ಇವರು ಶಿವಳ್ಳಿ ಗ್ರಾಮದ ಕಡಿಯಾಳಿಯಲ್ಲಿರುವ ಆಶಾರಾಣಿಯವರ ಮನೆಯಲ್ಲಿ ಬಾಡಿಗೆದಾರರಾಗಿ ಸುಮಾರು 4 ವರ್ಷಗಳಿಂದ ವಾಸವಾಗಿದ್ದು  ದಿನಾಂಕ : 02/10/2021 ರಂದು ಬೆಳ್ಳಿಗ್ಗೆ 10:00 ಗಂಟೆಗೆ ತನ್ನ ಗಂಡನ ಕಾರಿನಲ್ಲಿ ಮಕ್ಕಳು ಮತ್ತು ತಾಯಿಯೊಂದಿಗೆ ಹೊರಟು ಪಿರ್ಯಾದುದಾರರು ಅಲೆವೂರಿನಲ್ಲಿರುವ ಕ್ಲಿನಿಕ್ ನಲ್ಲಿ ಇಳಿದುಕೊಂಡು ತಾಯಿಯನ್ನು ಅವರ ಮನೆಯಾದ ಮಾರ್ಣೆಗೆ ಬಿಟ್ಟು ಮಕ್ಕಳನ್ನು ಪಣಿಯಾಡಿಯಲ್ಲಿರುವ ಅವರ ಗಂಡನ ಮನೆಗೆ ಹೊಗುವುದಾಗಿ ತಿಳಿಸಿ ಹೊಗಿದ್ದು,ನಂತರ ಅದೇ ದಿನ ರಾತ್ರಿ 21:00 ಗಂಟೆಗೆ ಪಿರ್ಯಾದುದಾರರು ಅವರ ಗಂಡ ಮಕ್ಕಳು ಊಟ ಮಾಡಿ ಕಡಿಯಾಳಿಯಲ್ಲಿರುವ ಮನೆಗೆ ಬಂದಾಗ ಯಾರೋ ಕಳ್ಳರು ಅವರ ಮನೆಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಜುಮಕಿ-2 with stud, 2 ಚಿನ್ನದ ಬಳೆ,ಹವಳದ ನಕ್ಲೆಸ್, ಲಕ್ಷ್ಮೀ ಪೆಂಡೆಂಟ,ಹಾಗೂ ನಗದು ರೂ 2000/- ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಅಂದಾಜು ಒಟ್ಟು ಮೌಲ್ಯ ರೂ. 3,0,2000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 142/2021 ಕಲಂ: 454 457, 380 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ:

  • ಕುಂದಾಪುರ:  ದಿನಾಂಕ 02/10/2021 ರಂದು ಸಂಜೆ  ಸುಮಾರು 4:00  ಗಂಟೆಗೆ , ಕುಂದಾಪುರ  ತಾಲೂಕಿನ,  ಕೊಟೆಶ್ವರ ಗ್ರಾಮದ ಕಿನಾರಾ ಬೀಚ್‌ ರಸ್ತೆಯ ಮುರ್ತಪ್ಪ ಶೇಟ್‌‌ ರವರ ರೈಸ್‌‌ ಮಿಲ್‌‌ನ ಹತ್ತಿರ ರಸ್ತೆಯಲ್ಲಿ, ಆಪಾದಿತ ನಾಗರಾಜ ಎಂಬವರು KA20-AA-8962ನೇ ಟಿಪ್ಪರ್ ಲಾರಿಯನ್ನು ಕೊಟೇಶ್ವರ ಕಡೆಯಿಂದ ಬೀಜಾಡಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಲಾರಿಯನ್ನು ರಸ್ತೆಯ ಬಲಬದಿಗೆ ಚಲಾಯಿಸಿ, ಬೀಜಾಡಿ ಕಡೆಯಿಂದ ಕೊಟೇಶ್ವರ ಕಡೆಗೆ ವಿಜೇಂದ್ರ ಎಂಬವರು ಸವಾರಿ ಮಾಡಿಕೊಂಡು  ಹೋಗುತ್ತಿದ್ದ KA20-EL-5747ನೇ ಬೈಕಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದಾಗ ಬೈಕ್‌ ಸವಾರ  ವಿಜೇಂದ್ರರವರು ರಸ್ತೆಗೆ ಬಿದ್ದ ಅವರ ಹೊಟ್ಟೆ ಹಾಗೂ ಸೊಂಟದ ಮೇಲೆ ಟಿಪ್ಪರ್ ಲಾರಿಯ ಚಕ್ರ ಹಾದು  ಹೋಗಿ  ಗಂಭೀರ ಗಾಯಗೊಂಡು ಮೃತಪಟ್ಟಿರುತ್ತಾರೆ. ಈ ಬಗ್ಗೆ   ಪ್ರಕಾಶ್‌‌ ಜಿ ಪೂಜಾರಿ   ಪ್ರಾಯ  45 ವರ್ಷ  ತಂದೆ :ದಿ. ಗುರುವ ಪೂಜಾರಿ ವಾಸ: ಬೇಲೆಹಿತ್ಲು ಹೌಸ್‌, ಬೀಜಾಡಿ  ಗ್ರಾಮ ಇವರು ಕುಂದಾಪುರ ಸಂಚಾರ ಠಾಣೆಗೆ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ 76/2021 ಕಲಂ:279, 304(ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ:

  • ಮಲ್ಪೆ:  ಪಿರ್ಯಾದಿ ಹರೀಶ್ (36) ತಂದೆ: ಮುದ್ದು ವಾಸ: ಜನತಾ ಕಾಲೋನಿ  ಉದ್ಯಾವರ ಪೋಸ್ಟ್,ಕೊರಂಗ್ರಪಾಡಿ ಇವರು ಪರಿಶಿಷ್ಟ ಜಾತಿಯವರಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದು , ನಿನ್ನೆ ದಿನ ದಿನಾಂಕ 01-10-2021 ರಂದು   ಪಿರ್ಯಾಧಿದಾರರ ಪರಿಚಯದ ಮೂಡುತೋನ್ಸೆ  ಕಲ್ಯಾಣಪುರದ ನಿವಾಸಿ  ದಿನೇಶ ಎಂಬವರು  ಸಿಕ್ಕಿ ಗಾಂಧಿ ಜಯಂತಿ ಪ್ರಯುಕ್ತ ದಿನಾಂಕ  02-10-2021  ರಂದು  ರಸ್ತೆ  ಸ್ವಚ್ಛತೆ ಹಾಗೂ ದುರಸ್ತಿ ಕೆಲಸ ವಿರುವುದಾಗಿ ದುರಸ್ತಿ ಕೆಲಸ ಕಷ್ಟದ ಕೆಲಸವಾಗಿರುವುರಿಂದ  ನಮಗೆ  ಕೂಲಿ ಕೆಲಸಕ್ಕೆ ಬರುವಂತೆ  ತಿಳಿಸಿದ ಮೇರೆಗೆ ಈ ದಿನ ದಿನಾಂಕ  02-10-2021 ರಂದು ಪಿರ್ಯಾದಿದಾರ ಜಾತಿಯವರೆ ಆದ ಪಿರ್ಯಾದಿದಾರ  ಸ್ನೇಹಿತರಾದ  ಉಡುಪಿಯ ಕೊರಂಗ್ರಪಾಡಿಯ ಬೋಜರಾಜ, ಸಂತೋಷ ಇವರೊಂದಿಗೆ ಮೂಡುತೋನ್ಸೆ ಗ್ರಾಮದ ಕೋಟೆ ರಸ್ತೆಗೆ ಕೆಲಸಕ್ಕೆ ಹೋಗಿದ್ದು ಕೋಟೆ ರೋಡಿನಲ್ಲಿರುವ  ರಾಮಚಂದ್ರ  ಮನೆಯ ಬಳಿಯಿಂದ ಕೋಟೆ ರೋಡ್ ಕೊಳಂಬೆ ರಸ್ತೆಯ ವರೆಗೆ  ಸಾರ್ವಜನಿಕ  ರಸ್ತೆಯನ್ನು ಶುಚಿಗೊಳಿಸಿ ದುರಸ್ತಿ ಗೊಳಿಸುವ ಕೆಲಸ ಮಾಡುತ್ತಿರುವ ಸಮಯ ಬೆಳಿಗ್ಗೆ 08:30 ಗಂಟೆ ಸಮಯಕ್ಕೆ  ರಸ್ತೆಯ ಪಕ್ಕದ ಜಾಗದವರಾದ ಪಿರ್ಯಾಧಿದಾರರ ಪರಿಚಯದ  ಡಾ/ ರೂಪಕ್ ನಾಗರಾಜ ಅವರ ಹೆಂಡತಿ ಸುಪ್ರೀತಾ, ತಂದೆ ರಾಮಚಂದ್ರ, ತಾಯಿ ಪ್ರಭಾಮಣಿ ಇವರು ಕೆಲಸ ಮಾಡುವಲ್ಲಿಗೆ ಬಂದು  ಏಕಾಏಕಿಯಾಗಿ  ಪಿರ್ಯಾಧಿದಾರರಿಗೆ  ಅವಾಚ್ಯ  ಶಬ್ದಗಳಿಂದ ಬೈದು  ಕೈಯಿಂದ ಹಲ್ಲೆ ನಡೆಸಿ ನಿಂದಿಸಿದ್ದು ಅಲ್ಲದೆ ಪರಿಶಿಷ್ಟ ಜಾತಿಯವರಾದ  ಪಿರ್ಯಾದಿದಾರು ಹಾಗೂ  ಅವರ ಸ್ನೇಹಿತರಿಗೆ ಜಾತಿ ನಿಂದನೆ  ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ.  ಈ ಬಗ್ಗೆ ಮಲ್ಪೆಠಾಣೆಗೆ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ 110  /2021  ಕಲಂ 323, 504,506 ಜೊತೆಗೆ  34 IPC  3(1)(r),  3(1)(s), 3(2)(va)  sc st  and  prevention of attrocities act ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ:

  • ಮಲ್ಪೆ: ಪಿರ್ಯಾದಿ ಸಾಧೀಕ್, ಪ್ರಾಯ:38ವರ್ಷ, ತಂದೆ: ಕೆ ಎಂ ಇಸ್ಮಾಯಿಲ್, ವಾಸ: ಮಾರ್ಕೇಟ್ ರಸ್ತೆ, ಕೊಪ್ಪ, ಚಿಕ್ಕಮಗಳೂರು ಇವರ ತಮ್ಮನಾದ ಸುಲೈಮಾನ್ ಎಂಬವರು ಮೀನು ಲಾರಿಯ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು .ದಿನಾಂಕ 30/9/2021 ರಂದು ಬೆಳಿಗ್ಗೆ 9:00 ಗಂಟೆಗೆ ಕೊಪ್ಪದ ಮನೆಯಿಂದ ಮಲ್ಪೆಗೆ ಮೀನು  ಲಾರಿಯ ಚಾಲಕ ಕೆಲಸಕ್ಕೆ ಬಂದಿದ್ದು ದಿನಾಂಕ 1/10/2021ರಂದು ಪಿರ್ಯಾದಿದಾರರ ಇನ್ನೊಬ್ಬ ತಮ್ಮನಾದ ಶಂಶುದ್ದೀನ್ ಎಂಬವನು ಸುಲೈ ಮಾನ್ ಗೆ ಕರೆ ಮಾಡಿದಾಗ ಪೋನ್ ಕರೆ ಸ್ವೀಕರಿಸಿರುವುದಿಲ್ಲ. ದಿನಾಂಕ 2/10/2021 ರಂದು ಬೆಳಿಗ್ಗೆ 9:00 ಗಂಟೆಗೆ ಸುಲೈಮಾನ್ ನ ಮೊಬೈಲ್ ನಂಬ್ರದಿಂದ  ಶಂಶುದ್ದೀನ್ ಗೆ ಕರೆ ಬಂದಿದ್ದು ಆ ಕಡೆಯಿಂದ ಸಮೀರ್ ಎಂಬವನು ಮಾತನಾಡಿ ಸುಲೈ ಮಾನ್ ನಮ್ಮ ಜೊತೆಗೆ ಇದ್ದಾನೆ ಆತನನ್ನು ಬಿಡಬೇಕಾದರೆ ನಮಗೆ 15,00,000 ಲಕ್ಷ ಹಣವನ್ನು ಕೊಟ್ಟು ನೀವು ಕರೆದುಕೊಂಡು ಹೋಗಿ ಆತನನ್ನು ನಾವುಗಳು 1/10/2021 ರಂದು ಮಲ್ಪೆಯಿಂದ ಅಪಹರಣ ಮಾಡಿಕೊಂಡು ಹೋಗಿರುತ್ತೆವೆ ಎಂದು ತಿಳಿಸಿದ್ದು ನಂತರ ಪಿರ್ಯಾದಿದಾರರು ಹಾಗೂ ಅವರ ಸಂಬಂಧಿಕರು ಮಲ್ಪೆಗೆ ಬಂದು ಅವರ ತಮ್ಮ ಸುಲೈಮಾನ್ ಬಗ್ಗೆ ವಿಚಾರ ನಡೆಸಿದಾಗ ಸುಲೈಮಾನ್ ಈತನು ಮೀನು ಲಾರಿಯ ಚಾಲಕ ಕೆಲಸದ  ಜೊತೆಗೆ ಮೀನನ್ನು ಮಲ್ಪೆಯಲ್ಲಿ ತೆಗೆದುಕೊಂಡು ಕೇರಳಕ್ಕೆಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದ್ದು ನಂತರ ಪಿರ್ಯಾದಿದಾರರು ಸುಲೈಮಾನ್ ಮೊಬೈಲಿಗೆ ಕರೆ ಮಾಡಿದಾಗ ಸದರಿ ಕರೆಯನ್ನು ಸಮೀರ್ ಎಂಬವನು ಸ್ವೀಕರಿಸಿ ನಮಗೆ ಸುಲೈಮಾನ್ ಮೀನು ವ್ಯವಹಾರದಲ್ಲಿ  15 ಲಕ್ಷ ಹಣವನ್ನು ಕೊಡಬೇಕು  ಆ ಕಾರಣದಿಂದ ಅವನನ್ನು ಕೇರಳದ ಹನಸ್ ಮತ್ತು ಅವರ ಸಹೋದರರು  ಅಪಹರಣ ಮಾಡಿರುತ್ತಾರೆ. ನೀವು ಬಂದು 15 ಲಕ್ಷ ಹಣ ಕೊಟ್ಟು ಕರೆದುಕೊಂಡು ಹೋಗಿ ಇಲ್ಲದಿದ್ದರೆ ಆತನನ್ನು ಕೊಂದು ಸಮುದ್ರಕ್ಕೆ ಬಿಸಾಡುತ್ತೇವೆ ಎಂದು ಬೆದರಿಕೆ ಹಾಕಿರುತ್ತಾನೆ.  ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 111/2021 ಕಲಂ 365 ಜೊತೆಗೆ 34 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 03-10-2021 11:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080