ಅಭಿಪ್ರಾಯ / ಸಲಹೆಗಳು

 ದಿನಾಂಕ :02/07/2019 ರಂದು ಉಡುಪಿ ನಗರ ಸುಬ್ರಮಣ್ಯ ನಗರ ವಾಸಿ ಒಂಟಿ ಮಹಿಳೆ ಶ್ರೀಮತಿ ರತ್ನಾವತಿ ಜಿ ಶೆಟ್ಟಿ (80) ಇವರನ್ನು ಆರೋಪಿಗಳಾದ  1. ಅಂಬಣ್ಣ @ ಅಂಬರೀಶ್ @ ಅಂಬಣ್ಣ  ಬಸಪ್ಪ ಜಾಡರ್ @  ಶಿವ (31) ತಂದೆ; ದಿ. ಬಸಪ್ಪ, ವಾಸ; ಹಳ್ಳದಾರು ಓಣಿ, ಪಂಚಗೃಹ ,ಹೀರೆಮಠದ ಬಳಿ, ನವಲಗುಂದ ತಾಲೂಕು, ದಾರವಾಡ ಜಿಲ್ಲೆ 2. ಶ್ರೀಮತಿ ರಶೀದಾ @ ಖಾಜಿ @ ಜ್ಯೋತಿ (26)  ಗಂಡ; ಅಂಬಣ್ಣ @ ಅಂಬರೀಶ್ @ ಅಂಬಣ್ಣ  ಬಸಪ್ಪ ಜಾಡರ್ @  ಶಿವ,  ವಾಸ; ಹಳ್ಳದಾರು ಓಣಿ, ಪಂಚಗೃಹ ,ಹೀರೆಮಠದ ಬಳಿ, ನವಲಗುಂದ ತಾಲೂಕು, ದಾರವಾಡ ಜಿಲ್ಲೆ ರವರುಗಳು ಕೊಲೆ ಮಾಡಿ ಮನೆಯಲ್ಲಿದ್ದ ರೂಪಾಯಿ 1,95,000/- ಮೌಲ್ಯ ಬೆಲೆಬಾಳುವ ಚಿನ್ನಾಭರಣ ಹಾಗೂ ಮೊಬೈಲ್ ನ್ನು ದೋಚಿಕೊಂಡು ಹೋಗಿದ್ದು, ಈ ಬಗ್ಗೆ ದಿನಾಂಕ 05/07/2019 ರಂದು 3 ದಿನ ತಡವಾಗಿ ಪ್ರಕರಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ನಂತರ ಈ ಪ್ರಕರಣದ ತನಿಖೆಯನ್ನು ಅಂದಿನ ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ ರವರು ತನಿಖೆಯನ್ನು ನಡೆಸಿ ಆರೋಪಿಗಳನ್ನು ಗೋವಾದಲ್ಲಿ ಪತ್ತೆ ಮಾಡಿ ಸುಲಿಗೆಯಾಗಿದ್ದ ಬಂಗಾರದ ಒಡವೆಗಳನ್ನು ಆರೋಪಿಗಳಿಂದ ಜಪ್ತಿ ಮಾಡಿ, ತನಿಖೆ ಕೈಗೊಂಡು ಮಾನ್ಯ ಉಡುಪಿ ಜಿಲ್ಲಾ ಮತ್ತು ಸತೃ ನ್ಯಾಯಾಲಯಕ್ಕೆ ದೊಷಾರೋಪಣಾ ಪತ್ರ ಸಲ್ಲಿಸಿದ್ದು, ಸದ್ರಿ ಪ್ರಕರಣದಲ್ಲಿ ಆರೋಪಿಗಳಿಗೆ ಮಾನ್ಯ ನ್ಯಾಯಾಲಯವು ದಿನಾಂಕ 07/07/2022 ರಂದು ಕಲಂ: 302 ಐಪಿಸಿ ಗೆ ಜೀವಾವಧಿ ಹಾಗೂ ರೂಪಾಯಿ 50,000/- ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ ಒಂದು ವರ್ಷಕ್ಕೆ ವಿಸ್ತಾರವಾಗುವಂತೆ ಕಾರಾಗೃಹ ಶಿಕ್ಷೆ ವಿಧಿಸಲಾಗಿದ್ದು, ಕಲಂ: 392 ಐಪಿಸಿ ಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂಪಾಯಿ 10,000/- ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ 6 ತಿಂಗಳಿಗೆ ವಿಸ್ತಾರವಾಗುವಂತೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿರುತ್ತದೆ.  ಕಲಂ: 397 ಐಪಿಸಿ ಗೆ 7 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಹಾಗೂ ಕಲಂ: 201 ಐಪಿಸಿ ಗೆ 6 ತಿಂಗಳುಗಳ ಸರಳ ಕಾರಾಗೃಹ ವಾಸ ಹಾಗೂ ತಲಾ ರೂಪಾಯಿ 2000/- ದಂಡ, ದಂಡ ಪಾವತಿಸಲು ವಿಫಲವಾದಲ್ಲಿ 3 ತಿಂಗಳುಗಳ ಕಾಲ ಸರಳ ಕಾರಾಗೃಹ ವಾಸ ಶಿಕ್ಷೆ ವಿಧಿಸಿ, ಉಡುಪಿಯ ಹೆಚ್ಚುವರಿ ಜಿಲ್ಲಾ ಮತ್ತು ಸತೃ ನ್ಯಾಯಾಧೀಶರಾದ ಶ್ರೀ ದಿನೇಶ್ ಹೆಗ್ಡೆ ರವರು ತೀರ್ಪು ನೀಡಿರುತ್ತಾರೆ. ಪ್ರಾಸಿಕ್ಯೂಶನ್ ಪರವಾಗಿ ಶ್ರೀಮತಿ ಶಾಂತಿಬಾಯಿ ಹಾಗೂ ಶ್ರೀ ಜಯರಾಮ ಶೆಟ್ಟಿರವರು ವಾದ ಮಂಡನೆಯನ್ನು ಮಾಡಿರುತ್ತಾರೆ. ಒಂಟಿಯಾಗಿ ವಾಸವಿದ್ದ ಶ್ರೀಮತಿ ರತ್ನಾವತಿ ಜಿ ಶೆಟ್ಟಿಯವರು ಯಾರೋ ಪರಿಚಯವಿಲ್ಲದ ದಂಪತಿಗಾಗಿ ಮನೆಯನ್ನು ಬಾಡಿಗೆ ಕೊಟ್ಟಿದ್ದು, ಬಾಡಿಗೆ ಬಂದ ಮರುದಿನವೇ ಅವರುಗಳು ಮನೆಯ ಹಿಂದಿನ ಬಾಗಿಲಿನಿಂದ ಪ್ರವೇಶ ಮಾಡಿ ರತ್ನಾವತಿ  ಜಿ ಶೆಟ್ಟಿಯವರನ್ನು ಮಚ್ಚಿನಿಂದ ಕಡಿದು ಕೊಲೆ ಮಾಡಿ, ಆಭರಣಗಳನ್ನು ದೋಚಿದ್ದರು .
             ಮಾನ್ಯ ಹೆಚ್ಚುವರಿ ಜಿಲ್ಲಾ ಸತೃ ನ್ಯಾಯಾಲಯದ ತೀರ್ಪಿನಿಂದ ಮೃತೆ ರತ್ನಾವತಿ ಜಿ ಶೆಟ್ಟಿ ರವರ ಕುಟುಂಬಸ್ಥರು,  ಹಿತೈಷಿಗಳು ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆರವರು ಇಲಾಖೆಯ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ

ಇತ್ತೀಚಿನ ನವೀಕರಣ​ : 03-09-2022 06:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080