ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ 03/09/2022 ರಂದು ಬೆಳಗ್ಗೆ 10:00 ಗಂಟೆಗೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಪಾಜಿಗುಡ್ಡೆ  ಎಂಬಲ್ಲಿ  ಬೆಳ್ತಂಗಡಿ –ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ KA-05-NF-0046 ನೇ ನಂಬ್ರದ ಮಹೇಂದ್ರ ತಾರ್ ವಾಹನದ ಚಾಲಕ ಕುಮಾರ್ ಕೆ ಎನ್  ಬಜಗೋಳಿ  ಕಡೆಯಿಂದ ನೆಲ್ಲಿಕಾರು ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ತನ್ನ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಹೋಗಿ ನೆಲ್ಲಿಕಾರಿನಿಂದ ಬಜಗೋಳಿ  ಕಡೆಗೆ ಹೋಗುತ್ತಿದ್ದ ಕಾರು ನಂಬ್ರ KA-21-Z-6812 ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನ ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 02/09/2022 ರಂದು ಪಿರ್ಯಾದಿದಾರರಾದ ವಿಠಲ ಶೆಟ್ಟಿ(70), ತಂದೆ: ದಿ. ಮಹಾಬಲ ಶೆಟ್ಟಿ, ವಾಸ: ಗುಡ್ಡೆಮನೆ, ಮೂಡು ಬೈಕಾಡಿ, ಬೈಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು KA-20-V-4169 ನೇ ನಂಬ್ರದ ಹೊಂಡ ಮ್ಯಾಟ್ರಿಕ್ಸ್‌ ಸ್ಕೂಟರ್‌ನಲ್ಲಿ ಅವರ ಮನೆಯ ಹತ್ತಿರದ ವಾಸಿ ಥೋಮಸ್‌ ಡಿಸೋಜಾ  ಎಂಬುವವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಭದ್ರಗಿರಿ ಕ್ರಾಸ್‌ ಬಳಿ ಇರುವ ಹಾಲು ಡೈರಿ ಕಡೆಗೆ ಸವಾರಿ ಮಾಡಿಕೊಂಡು ಬೆಳಿಗ್ಗೆ 07:30 ಗಂಟೆಗೆ ಬೈಕಾಡಿ ಗ್ರಾಮದ, ಮೂಡು ಬೈಕಾಡಿ ಕ್ರಾಸ್‌ಗೆ ಬಂದು ಬೈಕಾಡಿ- ಭಧ್ರಗಿರಿ ಕ್ರಾಸ್‌ ರಸ್ತೆಯ ಸ್ವಲ್ಪ ಮುಂದಕ್ಕೆ ಭದ್ರಗಿರಿ ಕ್ರಾಸ್‌ ಕಡೆಗೆ ಹೋಗುವಾಗ ಅವರ ಹಿಂದಿನಿಂದ ಬೈಕಾಡಿ ಕಡೆಯಿಂದ ಆರೋಪಿ KA-20-AA-1057 ನೇ ನೊಂದಣಿ ನಂಬ್ರದ ಟೆಂಪೋ ಟ್ರಾವೆಲ್ಲರ್‌ ವಾಹನವನ್ನು ಅತೀವೇಗ ಹಾಗೂ ಅಜಾಗರೂರುಕತೆಯಿಂದ ಚಾಲಾಯಿಸಿಕಂಡು ಬಂದು ಪಿರ್ಯಾದಿದಾರರ ಸ್ಕೂಟರ್‌ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಥೋಮಸ್‌ ಡಿಸೋಜಾ ರವರು ಸ್ಕೂಟರ್‌ ಸಮೇತ ತಾರು ರಸ್ತೆಯ ಮೇಲೆ ಬಿದ್ದು, ಪಿರ್ಯಾದಿದಾರರ ತಲೆಯ ಹಿಂಬದಿಗೆ, ಕೈಕಾಲುಗಳಿಗೆ, ಬೆನ್ನಿಗೆ ಹಾಗೂ ಸೊಂಟಕ್ಕೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು ಹಾಗೂ ಥೋಮಸ್‌ ಡಿಸೋಜಾ ರವರ ತಲೆಯ ಹಿಂಭಾಗ, ಹಣೆಗೆ ತೀವ್ರ ರಕ್ತಗಾಯ ಹಾಗೂ ಕೈಕಾಲುಗಳಿಗೆ ಅಲ್ಲಲ್ಲಿ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾಔರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪಿರ್ಯಾದಿದಾರರನ್ನು ದಾಖಲಿಸಿಕೊಂಡಿದ್ದು,  ಥೋಮಸ್‌ ಡಿಸೋಜಾ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 147/2022 ಕಲಂ : 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ಬಸವರಾಜ ಉಳ್ಳಾಗಡ್ಡಿ ಅಂಗಡಿ, ತಂದೆ: ದಿ. ವಿರೂಪಾಕ್ಷಪ್ಪ ಉಳ್ಳಾಗಡ್ಡಿ ಅಂಗಡಿ, ವಾಸ: ಜಿ.ಸಿ.ಸಿ ಲೇಬರ್ ಶೆಡ್, ನೆಹರು ನಗರ ಮಣಿಪಾಲ ಹೆರ್ಗಾ ಗ್ರಾಮ ಉಡುಪಿ ತಾಲೂಕು , ಉಡುಪಿ ಇವರ ಮಗ ಮಂಜುನಾಥ (28) ಇವರು ಮಣಿಪಾಲದ ಟೋಟಲ್ ಗ್ಯಾಸ್ ಎಜೆನ್ಸಿಯವರ ವಾಹನದಲ್ಲಿ ಚಾಲಕ ಕೆಲಸ ಮಾಡಿಕೊಂಡಿದ್ದು ದಿನಾಂಕ 02/09/2022 ರಂದು ಗಣೇಶ ಮೂರ್ತಿಯ ವಿಸರ್ಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ 11:00 ಗಂಟೆಗೆ ಪಿರ್ಯಾದಿದಾರರ ಅಣ್ಣನ ಮನೆಯ ಟೆರೇಸ್ ಮೇಲೆ ಹೋಗಿ ಲಾಜರ್  ನೊಂದಿಗೆ ಮಲಗಿರುತ್ತಾರೆ.  ದಿನಾಂಕ 03/09/2022 ರಂದು ಬೆಳಗಿನ ಜಾವ 04:30 ಗಂಟೆಗೆ ಮಂಜುನಾಥ ಲಾಜರ್ ರವರನ್ನು ಎಬ್ಬಿಸಿ ನೀರು ಕೇಳಿದ್ದು ನೀರು ಕುಡಿದು ನಂತರ ಮನೆಯ ಹತ್ತಿರ ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಆತನ ಸ್ನೇಹಿತ ಯಲ್ಲಪ್ಪ ನ ಕಾರಿನಲ್ಲಿ ಮಲಗಿದ್ದು ಬೇಳಿಗ್ಗೆ 07:30 ಗಂಟೆಗೆ ಲಾಜರ್ ಮತ್ತು ಸ್ನೇಹಿತರು ಎಬ್ಬಸಿದಾಗ ಮಂಜುನಾಥ ಅಸ್ವಸ್ಥಗೊಂಡಿದ್ದು ಮಾತನಾಡುತ್ತಿರಲಿಲ್ಲ ಪಿರ್ಯಾದಿದಾರರು ಹಾಗೂ ಸ್ನೇಹಿತರು ಸೇರಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರಿಕ್ಷೀಸಿದ ವೈದ್ಯರು  ಮಂಜುನಾಥ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 30/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಗಂಡಸು ಕಾಣೆ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ದೇವದಾಸ ಹೂವಯ್ಯ ಆಚಾರ್ಯ (73), ತಂದೆ: ಹೂವಯ್ಯ ಆಚಾರ್ಯ, ವಾಸ: ಸಿ/2, ಚೈನಾಲಿಂಕ್‌ ಸೊಸೈಟಿ ಲಿಂಕ್‌ ರೋಡ್‌, ಗೋರೆಗೋನ್‌ ಸ್ಪೋರ್ಟ್ಸ್‌ ಕ್ಲಬ್‌, ಮಾಲಾಡ್‌ , ವೆಸ್ಟ ಮುಂಬೈ, ಮಹಾರಾಷ್ಟ್ರ ಇವರ  ಮಾವನ ಮನೆಯಲ್ಲಿ ವಾಸವಾಗಿರುವ ಅವರ ತಮ್ಮ ಸುಂದರ ಆಚಾರ್ಯ(67) ಎಂಬುವವರು ದಿನಾಂಕ 05/082022 ರಂದು ಬೆಳಿಗ್ಗೆ 11:00 ಗಂಟೆಗೆ ಯವುದೋ ಅಪರಿಚಿತ ಸಂಖ್ಯೆಯಿಂದ ಪಿರ್ಯಾದಿದಾರರಿಗೆ ಕರೆ ಮಾಡಿ ಮುಂಬೈಗೆ ಬರುವುದಾಗಿ ತಿಳಿಸಿದ್ದು, ನಂತರದಲ್ಲಿ ಅವರು ಮುಂಬೈಗೂ ಬಾರದೇ ಎಲ್ಲಿಯೂ ಪತ್ತೆಯಾಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 148/2022 ಕಲಂ : ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-09-2022 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080