ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ  01/09/2021 ರಂದು 20:15 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿಗ್ರಾಮದ ಮಣಿಪಾಲದ KFC ಹೊಟೇಲ್ ಎದುರುಗಡೆ ಉಡುಪಿ – ಮಣಿಪಾಲ ರಸ್ತೆಯಲ್ಲಿ ಆರೋಪಿ ಬಿಟ್ಟು ಕುಮಾರ್ ರಾಮ್ ತನ್ನ ಮೋಟಾರ್ ಸೈಕಲ್  KA-21-L-1869 ನ್ನು ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಎಡ ಬದಿಗೆ ಚಲಾಯಿಸಿ ರಸ್ತೆಯ ಬದಿಯಲ್ಲಿ ರಸ್ತೆ ದಾಟಲು ನಿಂತಿದ್ದ ಸುಲೇಮಾನ್ ಮನ್ಸೂರ್ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಸುಲೇಮಾನ್ ಮನ್ಸೂರ್ ರವರ ಬಲಕಾಲಿನ ಮೊಣ ಗಂಟಿನ ಕೆಳಗೆ ತೀವ್ರಗಾಯವಾಗಿದ್ದು  ತಲೆಗೆ ಗಂಭೀರ ಒಳ ನೋವು ಉಂಟಾಗಿರುತ್ತದೆ, ಗಾಯಗೊಂಡ ಸುಲೇಮಾನ್ ಮನ್ಸೂರ್ ರವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 110/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರ ರತ್ನ (40), ಗಂಡ: ಆನಂದ, ವಾಸ: ಕುಕ್ಕಡ ಹುಡೊಂಣ್ಕಿ  ಇಡೂರು ಕುಂಜ್ಞಾಡಿ  ಗ್ರಾಮ ಕುಂದಾಪುರ ತಾಲೂಕು ಇವರ  ತಂಗಿ  ಗಿರಿಜಾ (35)  ರವರು ಅವಿವಾಹಿತರಾಗಿದ್ದು  5 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದವರು ಕುಂದಾಪುರ  ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು,  ದಿನಾಂಕ 02/09/2021  ರಂದು  ಸಂಜೆ 04:00 ಗಂಟೆಗೆ ಹೊತ್ತಿಗೆ  ಗಿರಿಜಾರವರು ಮನೆಯ ಎದುರುಗಡೆ ಇರುವ ಬಾವಿಗೆ ನೀರು ತರಲು ಹೋದವರು ನೀರು ಸೇದುವಾಗ ಬಾವಿಯ ಆವರಣಕ್ಕೆ ಹಾಕಿದ ದಂಡಿಗೆಯು ಮುರಿದು ಕಾಲು ಜಾರಿ ಆಕಸ್ಮಿಕವಾಗಿ, ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2021 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಉಡುಪಿ:  ದಿನಾಂಕ 02/09/2021 ರಂದು 13:30 ಗಂಟೆಗೆ ಪಿರ್ಯಾದಿದಾರರಾದ ಜಲಜ ಎಂ. ಪೂಜಾರಿ (60), ತಂದೆ: ದಿ. ಮಹಾಬಲ ಕೋಟ್ಯಾನ್‌, ವಾಸ: ಮನೆ ನಂಬ್ರ: 1-86, ಅಣ್ಣು ನಿಲಯ, ಕಂಬಳಕಟ್ಟ, ಕಸ್ತೂರ್ಬಾ ನಗರ, ಚಿಟ್ಪಾಡಿ, 76-ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರು ತನ್ನ ವಾಸ್ತವ್ಯದ ಮನೆಯಲ್ಲಿ ಇರುವಾಗ ಸುಮಾರು 40 ರಿಂದ 45 ವರ್ಷ ಪ್ರಾಯದ ಓರ್ವ ಅಪರಿಚಿತ ವ್ಯಕ್ತಿ ಬಂದು ಚಿನ್ನದ ಆಭರಣಗಳನ್ನು ತೊಳೆದು ಕೊಡುವುದಾಗಿ ಹೇಳಿ ಪಿರ್ಯಾದಿದಾರರ ಮನೆಯ ದೈವದ ತಂಬಿಗೆ ಹಾಗೂ ಬಳೆಯನ್ನು ತೊಳೆದು ಕೊಟ್ಟು ಹೋಗಿದ್ದು, ಪುನಃ 14:15 ಗಂಟೆಗೆ ವಾಪಾಸು ಬಂದು, ಒಂದು ಬಟ್ಟಲಿನಲ್ಲಿ ಕೆಂಪು ನೀರು ಹಾಕಿ ಅದನ್ನು ಮುಟ್ಟಿ ನೋಡಿ ತಂಪು ಇದೆ ಎಂದು ಹೇಳಿದ್ದು, ಪಿರ್ಯಾದುದಾರರು ಮುಟ್ಟಿರುತ್ತಾರೆ. ತದನಂತರ ಆಪಾದಿತನು ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ತೊಳೆದು ಕೊಡುವುದಾಗಿ ಕೇಳಿದಾಗ ಪಿರ್ಯಾದಿದಾರರು ನೀಡಿದ ನಂತರ ಏನಾಯಿತೆಂದು ತಿಳಿಯದೆ ಇದ್ದು, ಸ್ವಲ್ಪ ಸಮಯದ ಬಳಿಕ ನೋಡಲಾಗಿ ಪಿರ್ಯಾದಿದಾರರ 3 ಪವನ್‌ ಚಿನ್ನದ ಸರವನ್ನು ಆಪಾದಿತನು ಮೋಸದಿಂದ ತೆಗೆದುಕೊಂಡು ಹೋಗಿದ್ದು, ಚಿನ್ನದ ಸರದ  ಮೌಲ್ಯ ರೂಪಾಯಿ 96,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 127/2021 ಕಲಂ: 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಅಜ್ಜರಕಾಡು THE ICON ಅಪಾರ್ಟ್‌ಮೆಂಟ್‌ನ "B" ಬ್ಲಾಕ್ A- ವಿಂಗ್ ನಲ್ಲಿ ಮೊದಲನೆ ಮಹಡಿಯಲ್ಲಿ ಫ್ಲಾಟ್‌ ನಂಬ್ರ: 103 ಮತ್ತು ಎರಡನೇ ಮಹಡಿಯಲ್ಲಿ ಫ್ಲಾಟ್‌ ನಂಬ್ರ: 203 ನ್ನು 5 ವರ್ಷ ಅವಧಿಗೆ ಲೀಜ್‌ ಕೊಡುವುದಾಗಿ ಆಪಾದಿತ ಮ್ಯಾಕ್ವೀನ್‌ ಮೊಂತೆರೋ (35) ತಂದೆ: ದಿ. ಜೋಸೇಫ್‌ ಮೊಂತೆರೋ ವಾಸ: ರೈನಾ ಅಪಾರ್ಟ್‌ಮೆಂಟ್‌, ಫ್ಲಾಟ್‌ ನಂಬ್ರ: 303, ಗೋಪಾಲಪುರ 1ನೇ ಮುಖ್ಯ ರಸ್ತೆ, ಸಂತೆಕಟ್ಟೆ ಅಂಚೆ, ಉಡುಪಿ ತಾಲೂಕು ಎಂಬಾತ ಪಿರ್ಯಾದಿದಾರರಾದ ಹೂಡ ಜಾಹೂರ್‌ ಹುಸೇನ್‌, ತಂದೆ: ಜಾಹೂರ್‌ ಹುಸೇನ್‌, ವಾಸ: ಟಿ.ಎಂ ರಸ್ತೆ, ಗುಣವಂತೆ ರಸ್ತೆ ಬಳಿ,ಕೊಪ್ಪ, ಚಿಕ್ಕಮಗಳೂರು ಜಿಲ್ಲೆ ಇವರನ್ನು ನಂಬಿಸಿ, ಈ ಬಗ್ಗೆ ದಿನಾಂಕ 10/12/2020 ರಂದು ಲೀಜ್‌ ಎಗ್ರಿಮೆಂಟ್‌ ಮಾಡಿಕೊಂಡಿದ್ದು, ತಲಾ 4 ಲಕ್ಷದಂತೆ ಎರಡು ಫ್ಲಾಟ್‌ಗೆ ಒಟ್ಟು ರೂಪಾಯಿ 8,00,000/- ಹಣವನ್ನು ಆಪಾದಿತನು ಪಿರ್ಯಾದಿದಾರರಿಂದ ಪಡೆದುಕೊಂಡು ಆ ಬಳಿಕ ಫ್ಲ್ಯಾಟ್‌ಗಳ ಸ್ವಾಧೀನವನ್ನು ನೀಡದೆ ಇದ್ದು, ಈ ಬಗ್ಗೆ ಪಿರ್ಯಾದಿದಾರರು ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದು, ಆಪಾದಿತನು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಹಣವನ್ನು ಪಡೆದು ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 125/2021 ಕಲಂ: 420, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  •  ಉಡುಪಿ: ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಅಜ್ಜರಕಾಡು THE ICON ಅಪಾರ್ಟ್‌ಮೆಂಟ್‌ನ "B" ಬ್ಲಾಕ್ A- ವಿಂಗ್ ನಲ್ಲಿ ಮೊದಲನೆ ಮಹಡಿಯಲ್ಲಿ ಫ್ಲಾಟ್‌ ನಂಬ್ರ: 102 ನ್ನು 5 ವರ್ಷ ಅವಧಿಗೆ ಲೀಜ್‌ ಕೊಡುವುದಾಗಿ ಆಪಾದಿತ ಮ್ಯಾಕ್ವೀನ್‌ ಮೊಂತೆರೋ (35), ತಂದೆ: ದಿ. ಜೋಸೇಫ್‌ ಮೊಂತೆರೋ, ವಾಸ: ರೈನಾ ಅಪಾರ್ಟ್‌ಮೆಂಟ್‌, ಫ್ಲಾಟ್‌ ನಂಬ್ರ: 303, ಗೋಪಾಲಪುರ 1ನೇ ಮುಖ್ಯ ರಸ್ತೆ, ಸಂತೆಕಟ್ಟೆ ಅಂಚೆ, ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತ ಪಿರ್ಯಾದಿದಾರರಾದ ನಾಗೂರ್‌ ಆರೀಫ್‌ ಸಾಹೇಬ್‌ (46), ತಂದೆ: ಮೊಹಮ್ಮದ್‌ ಮೀರಾ, ವಾಸ: ನಂ:1-30ಎ, ಎಂ.ಎಂ ಮೀರಾನ್‌ ಮಂಜಿಲ್‌, ನಾಗೂರು, ಕಿರುಮಂಜೇಶ್ವರ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಇವರನ್ನು ನಂಬಿಸಿ, ಈ ಬಗ್ಗೆ ದಿನಾಂಕ 20/01/2021 ರಂದು ಲೀಜ್‌ ಎಗ್ರಿಮೆಂಟ್‌ ಮಾಡಿಕೊಂಡಿದ್ದು, ರೂಪಾಯಿ 4,00,000/- ಹಣವನ್ನು ಆಪಾದಿತನು ಪಿರ್ಯಾದಿದಾರರಿಂದ ಪಡೆದುಕೊಂಡು ಆ ಬಳಿಕ ಫ್ಲ್ಯಾಟ್‌ನ ಸ್ವಾಧೀನವನ್ನು ನೀಡದೆ ಇದ್ದು, ಈ ಬಗ್ಗೆ ಪಿರ್ಯಾದಿದಾರರು ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದು, ಆಪಾದಿತನು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಹಣವನ್ನು ಪಡೆದು ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 126/2021 ಕಲಂ: 420, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ರಮಿತ ಕುಮಾರಿ ಎಸ್, ಗಂಡ:ಮಂಜುನಾಥ್ ಡಿ.ಎ, ವಾಸ:ಮನೆ ನಂಬ್ರ:1-89 (ಇ) ಗಾಯತ್ರಿ ನಿಲಯ, ಕಾನಗುಡ್ಡೆ ದೇವಸ್ಥಾನದ ಹತ್ತಿರ, ಪಂದುಬೆಟ್ಟು, ಅಂಬಲಪಾಡಿ, ಉಡುಪಿ ಮತ್ತು 1 ನೇ  ಆರೋಪಿ ಮಂಜುನಾಥ  ಇವರ  ಮದುವೆ  ದಿನಾಂಕ 08/09/2016 ರಂದು ಬನ್ನಂಜೆ ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಗುರು  ಹಿರಿಯರು ನಿಶ್ಚಯಿಸಿದಂತೆ  ನೆರವೇರಿರುತ್ತದೆ. ಮದುವೆ ಸಂದರ್ಭದಲ್ಲಿ 1 ನೇ ಆರೋಪಿಯ ಬೇಡಿಕೆಯಂತೆ ಪಿರ್ಯಾದಿದಾರರ ತಂದೆ 1 ನೇ ಆರೋಪಿಗೆ 10 ಲಕ್ಷ ರೂಪಾಯಿ ವರದಕ್ಷಿಣೆ ಹಣವನ್ನು ಕೊಟ್ಟು ಪಿರ್ಯಾದಿದಾರರಿಗೆ 25 ಪವನ್ ಚಿನ್ನಾಭರಣ ಹಾಕಿರುತ್ತಾರೆ. ಮದುವೆ ನಂತರ ಪಿರ್ಯಾದಿದಾರರು 1 ನೇ ಆರೋಪಿಯೊಂದಿಗೆ ದಾರವಾಡದ ಸೈದಾಪುರದಲ್ಲಿ ವಾಸ ಮಾಡಿಕೊಂಡಿದ್ದರು. 3 ತಿಂಗಳಗಳ ಕಾಲ 1 ನೇ ಆರೋಪಿ ಪಿರ್ಯಾದಿದಾರರೊಂದಿಗೆ ಒಳ್ಳೇ ರೀತಿಯಲ್ಲಿ ಸಂಸಾರ ಮಾಡಿಕೊಂಡಿದ್ದವನು ನಂತರದ ದಿನದಲ್ಲಿ ಹೆಚ್ಚಿನ ವರದಕ್ಷಿಣೆ ಹಣಕ್ಕೆ 1 ನೇ ಆರೋಪಿ ಬೇಡಿಕೆ ಇಟ್ಟು  ಪಿರ್ಯಾದಿದಾರರಿಗೆ ಮಾನಸಿಕ ಮತ್ತು  ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿ , 1 ನೇ ಆರೋಪಿ  ಅವರೊಂದಿಗೆ ಕೆಲಸ ಮಾಡಿಕೊಂಡಿರುವ 2 ನೇ ಆರೋಪಿ ಆರತಿ ಪಾಟೀಲ್ ಇವರೊಂದಿಗೆ  ಸಲುಗೆಯಿಂದ ಇದ್ದು, ಪಿರ್ಯಾದಿದಾರರನ್ನು ಕಡೆಗಣಿಸುತ್ತಿದ್ದನು. 1 ಮತ್ತು 2 ನೇ ಆರೋಪಿತರು ಸೇರಿ ಪಿರ್ಯಾದಿದಾರರಿಗೆ  ಅವ್ಯಾಚ್ಯ ಶಬ್ದದಿಂದ  ಬೈದು ಹಿಂಸೆ ನೀಡುತ್ತಿದ್ದರು.  ಫೆಬ್ರವರಿ 2019 ರಲ್ಲಿ ಪಿರ್ಯಾದಿದಾರರು  ಗರ್ಭವತಿಯಾಗಿದ್ದು, 1ನೇ ಆರೋಪಿ ಪಿರ್ಯಾದಿದಾರರನ್ನು ಅಂಬಲಪಾಡಿಯ  ಪಂದುಬೆಟ್ಟುವಿನ  ಕಾನಗುಡ್ಡೆ ದೇವಸ್ಥಾನದ ಬಳಿ ಇರುವ ಪಿರ್ಯಾದಿದಾರರ  ತವರು ಮನೆಗೆ  ಬಿಟ್ಟು ಹೋದವನು. ಈ ವರೆಗೆ 1 ನೇ ಆರೋಪಿ ಪಿರ್ಯಾದಿದಾರರು ಕರೆದುಕೊಂಡು ಹೋಗಿರುವುದಿಲ್ಲ.  ದಿನಾಂಕ 22/08/2021  ರಂದು ಬೆಳಗ್ಗೆ  11:00  ಗಂಟೆಗೆ ಆರೋಪಿತರು ಪಿರ್ಯಾದಿದಾರರ ಮನೆಗೆ  ಅಕ್ರಮ ಪ್ರವೇಶ ಮಾಡಿ ಹೆಚ್ಚಿನ ವರದಕ್ಷಿಣೆ ಹಣಕ್ಕೆ ಬೇಡಿಕೆ ಇಟ್ಟು, ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದಲ್ಲಿ ಕೊಂದು ಮುಗಿಸುವುದಾಗಿ ಜೀವ ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ:498(ಎ), 504, 506 ಜೊತೆಗೆ 34 ಐಪಿಸಿ ಮತ್ತು  ಕಲಂ:3, 4 ಡಿಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 03-09-2021 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080