ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬ್ರಹ್ಮಾವರ: ದಿನಾಂಕ 03/09/2021 ರಂದು ಪಿರ್ಯಾದಿದಾರರಾದ ಚಂದ್ರಶೇಖರ್ ಚಾಂತಾರು (60), ತಂದೆ: ಮಹಾಬಲೇಶ್ವರ ಕೊಠಾರಿ, ವಾಸ: ಅಗ್ರಹಾರ ಹೊಸಮನೆ, ಬ್ರಹ್ಮಾವರ, ಚಾಂತಾರು ಗ್ರಾಮ, ಬ್ರಹ್ಮಾವರ ರವರು ವಾರಂಬಳ್ಳಿ ಗ್ರಾಮದ, ಬ್ರಹ್ಮಾವರ ರಿಕ್ಷಾ ನಿಲ್ದಾಣದಲ್ಲಿ ನಿಂತಿರುವಾಗ ಬೆಳಿಗ್ಗೆ 07:30 ಗಂಟೆ ಸುಮಾರಿಗೆ ಉಡುಪಿ – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಕಡೆಯಿಂದ ಬಿ.ಪಿ ಚಂದ್ರಕಾಂತ ಪೈ (63) ರವರು ಅವರ KA-20 EB-7740 ನೇ ಹೊಂಡಾ ಆ್ಯಾಕ್ಟಿವಾ ಸ್ಕೂಟರ್‌ನ್ನು ಸವಾರಿ ಮಾಡಿಕೊಂಡು ಬಂದು ಬ್ರಹ್ಮಾವರ ಬಸ್ಸ್ ನಿಲ್ದಾಣ ಬಳಿಯ ಜಂಕ್ಷನ್‌ ನಲ್ಲಿ ಬಸ್‌ಸ್ಸ್ಯಾಂಡ್ ಕಡೆಗೆ ಬರಲು ಬಲ ಇಂಡಿಕೇಟರ್ ಹಾಕಿ ಸ್ಕೂಟರನ್ನು ನಿಧಾನ ಮಾಡಿದ್ದು ಅದೇ ವೇಳೆಗೆ ಸ್ಕೂಟರ್‌ನ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಆರೋಪಿ  ಮೊಹಮ್ಮದ್ ಸಾಕೀರ್ ಎಂಬವರು ಅವರ CG-15 AC-5046 ನೇ ಗೂಡ್ಸ್ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸದ್ರಿ ಸ್ಕೂಟರ್‌ನ ಹಿಂಬದಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಕೂಟರ್ ಸವಾರ ಬಿ.ಪಿ ಚಂದ್ರಕಾಂತ ಪೈ ರವರು ರಸ್ತೆಯ ಮೇಲೆ ಬಿದ್ದಿದ್ದು, ಆಗ ಲಾರಿಯ ಮುಂದಿನ ಚಕ್ರ ಅವರ ಕಾಲಿನ ಮೇಲೆ ಹಾಗೂ ಹೋಗಿರುತ್ತದೆ. ಈ ಅಪಘಾತದಿಂದ ಬಿ.ಪಿ ಚಂದ್ರಕಾಂತ ಪೈ ಅವರ ಎಡಕಾಲು ತೊಡೆಯಿಂದ ಪಾದದ ವರೆಗೆ ತೀವ್ರ  ಜಜ್ಜಿ ಹೋದ ರಕ್ತಗಾಯ ಹಾಗೂ ಮೈಕೈಗೆ ಅಲ್ಲಲ್ಲಿ ಗಾಯವಾಗಿರುತ್ತದೆ. ಗಾಯಾಳುವನ್ನು  ಚಿಕಿತ್ಸೆ  ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 163/2021 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಬಿ. ದಿನಕರ ಕನ್ನಂತ  ಪ್ರೈ (54) ತಂದೆ, ವೆಂಕಟರಮಣ  ಕನ್ನಂತ  ವಾಸ, ಶಾನ್ಕಟ್ಟು ಅಂಪಾರು ಗ್ರಾಮ ಕುಂದಾಪುರ ಇವರ ಸಹೋದರನ ಮಗನಾದ ಭಾರ್ಗವ (21) ಇವನು ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಶಾನ್ಕಟ್ಟು ಎಂಬಲ್ಲಿ ಆತನ ಅಜ್ಜ ಅಜ್ಜಿಯೊಂದಿಗೆ ವಾಸವಾಗಿದ್ದು, ಆತನು ಮಂಗಳೂರಿನಲ್ಲಿ ಸಣ್ಣ ಉದ್ದಿಮೆ ಮಾಡಿಕೊಂಡು ವಿಧ್ಯಾಬ್ಯಾಸ ಮುಂದುವರಿಸಿಕೊಂಡಿರುತ್ತಾನೆ, ಆತನ ಅಜ್ಜ ಅಜ್ಜಿ ಸುಮಾರು 15 ದಿನದ ಹಿಂದೆ ತೀರ್ಥಹಳ್ಳಿ ಅವರ ಮಗಳ ಮನೆಯಲ್ಲಿ ಇರುತ್ತಾರೆ, ಭಾರ್ಗವ  ಕನ್ನಂತ   ಈತನು ದಿನಾಂಕ 02/09/2021 ರಂದು ರಾತ್ರಿ  01;15 ಘಂಟೆಯ  ಮೊದಲು  ಆತನ  ಮನೆಯಲ್ಲಿ  ಯಾರೋ  ಇಲ್ಲದ ಸಮಯ ಮನೆಯೊಳಗಡೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 30/2021 ಕಲಂ: 174 (ಸಿ) ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಶ್ರೀಮತಿ  ತುಂಗ  ಕುಲಾಲ್ (75)  ಇವರು  ಮನೆಯಲ್ಲಿ ಒಂಟಿಯಾಗಿ  ವಾಸವಾಗಿದ್ದು   ಈಗ ಸುಮಾರು ವರ್ಷದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇದೇ ವಿಷಯದಲ್ಲಿ   ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 02/09/2021 ರಂದು 20:00 ಗಂಟೆಯಿಂದ ದಿನಾಂಕ  03/09/2021  ರಂದು 07:30 ಘಂಟೆಯ ಮಧ್ಯದ  ಅವಧಿಯಲ್ಲಿ ಅವರ ವಾಸದ ಮನೆಯಾದ ಕುಂದಾಪುರ ತಾಲೂಕಿನ  ಸಿದ್ದಾಪುರ ಗ್ರಾಮದ ಕೊಳ್ಕೆಬೈಲ್ಲು ಎಂಬಲ್ಲಿ ಇರುವ ಮನೆಯ ಆವರಣ  ಇಲ್ಲದ ಬಾವಿಗೆ ಹಾರಿ ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ, ಎಂಬುದಾಗಿ ವಸಂತ  ಕುಲಾಲ್ (34) ತಂದೆ, ಕರಿಯ ಕುಲಾಲ್ ವಾಸ, ಕೊಳ್ಕೆಬೈಲ್ಲು  ಸಿದ್ದಾಪುರ  ಗ್ರಾಮ ಕುಂದಾಪುರ ಇವರು ನೀಡಿದ ದೂರಿನಂತೆ  ಶಂಕರನಾರಾಯಣ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 31/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

  • ಮಲ್ಪೆ: ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಪಿರ್ಯಾದಿದಾರರಾದ H ಮಹಮ್ಮದ್ ನಾಸೀರ್(42), ತಂದೆ: ಅಬ್ದುಲ್ ರಜಾಕ್, ವಾಸ: ಮೆಜೆಸ್ಟಿ ಕಂಪೋರ್ಟ್, ಬೈಲಕೆರೆ ರಸ್ತೆ, ಮಲ್ಪೆ, ಉಡುಪಿ ಎಂಬವರು 2016 ರಲ್ಲಿ ಸಿಂಡಿಕೇಟ್ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ರೂಪಾಯಿ 40,00,000/- ಹಣದ ಓವರ್ ಡ್ರಾಫ್ಟ್ ಸೌಲಭ್ಯ ಪಡೆದಿದ್ದು, ಸದ್ರಿ ಸಾಲದ ಮೊತ್ತಕ್ಕೆ ಉಡುಪಿ ಬನ್ನಂಜೆ ನಿವಾಸಿ 1 ನೇ ಆರೋಪಿ H ಮಹಮ್ಮದ್ ನಾಸೀರ್ ಇವರು ಜಾಮೀನುದಾರರಾಗಿರುತ್ತಾರೆ. ಸಾಲಕ್ಕೆ ಜಾಮೀನು ನೀಡುವಾಗ 1 ನೇ ಆರೋಪಿಯು ಇವರನ್ನು ಪೀಡಿಸಿ 11 ಚೆಕ್ಕುಗಳನ್ನು ಪಡೆದಿರುತ್ತಾರೆಂತಲೂ ಸಾಲ ಪಡೆದ ನಂತರ 1 ನೇ ಆರೋಪಿಯು 9 ಚೆಕ್‌ ಅಮಾನ್ಯದ ಪ್ರಕರಣಗಳನ್ನು H ಮಹಮ್ಮದ್ ನಾಸೀರ್ ರವರ  ಮೇಲೆ ದಾಖಲಿಸಿದ್ದಲದೇ ಇನ್ನೊಂದು ಖಾಸಗಿ ಪಿರ್ಯಾದು ನಂಬ್ರ 67/2021 ರಂತೆ H ಮಹಮ್ಮದ್ ನಾಸೀರ್ ರವರ ಮೇಲೆ ಸುಳ್ಳು ಪಿರ್ಯಾದು ದಾಖಲಿಸಿ ಕಿರುಕುಳ ನೀಡಿರುತ್ತಾರೆಂತಲೂ ಮತ್ತು ಅಲ್ಲದೇ ರೂಪಾಯಿ 30,65,308/- ಅನ್ನು H ಮಹಮ್ಮದ್ ನಾಸೀರ್ ರವರಿಂದ ಪಡೆದು ಮೋಸ ಮಾಡಿರೆಂತಲೂ ಈ ಎಲ್ಲಾ ಕೃತ್ಯಗಳಿಗೆ ಉಡುಪಿ ಅಂಬಲಪಾಡಿ ನಿವಾಸಿ ಕೆ ನಝೀರ್ ಎಂಬುವನು ಕುಮ್ಮಕ್ಕು ನೀಡಿ 1 ನೇ ಆರೋಪಿಗೆ ಸಹಾಯ ಮಾಡಿರುವುದಾಗಿರೂ ಆರೋಪಿಸಿ, ಆರೋಪಿಗಳು H ಮಹಮ್ಮದ್ ನಾಸೀರ್ ರವರಿಗೆ ಮೋಸ ವಂಚನೆ ಹಾಗೂ ಸುಳ್ಳು ಕೋರ್ಟ್‌ ಕೇಸುಗಳನ್ನು ದಾಖಲಿಸಿ ಕಿರುಕುಳ ಕೊಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99/2021  ಕಲಂ: 411 417 418 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶಫಿಯಾ (34) ಗಂಡ: ಮೈಯದಿ ವಾಸ: ಕೋಟ ತಟ್ಟು ಪಡುಕೆರೆ  ಬ್ರಹ್ಮಾವರ ಇವರು ಶ್ರೀರಾಮ್ ಟ್ರಾನ್ಸ ಪೋರ್ಟ ಪೈನಾನ್ಸ ಕಾರ್ಪೋರೇಶನ್ ಲಿ ಕುಂದಾಪುರ ಶಾಖೆಯಲ್ಲಿ 2019 ರಲ್ಲಿ KA 20B4546 ACE CABIN ANDLOADBODYBS3 ವಾಹನದ 85,000/- ಸಾಲವನ್ನು  ಪಡೆದಿರುತ್ತಾರೆ .ಸದ್ರಿ ಸಾಲದ ಪೈಕಿ 80.000/- ರೂಪಾಯಿಯನ್ನು ಈಗಾಗಲೇ ಕಟ್ಟಿರುತ್ತಾರೆ.ಅದಲ್ಲದೇ 3ನೇ ಆರೋಪಿತನು ಅಸ್ತಿಕ್ (30) ಸಿಬ್ಬಂದಿ ಶ್ರೀರಾಮ್ ಟ್ರಾನ್ಸ ಪೋರ್ಟ ಪೈನಾನ್ಸ ಕಾರ್ಪೋರೇಶನ್ ಲಿ ಕುಂದಾಪುರ ತಾಲೂಕು ಉಡುಪಿ ಇವರು ಶಪಿಯಾ ಇವರ ಗಂಡ ವ್ಯಾಪಾರ ಮಾಡುವ ಸ್ಥಳದಲ್ಲಿ  ಸಿಕ್ಕಾಗ ನಗದು ರೂಪದಲ್ಲಿ ಸಹ ಆತನಿಗೆ ಹಣ ಪಾವತಿ ಮಾಡಿರುತ್ತಾರೆ ಈ ಬಗ್ಗೆ ರಶೀದಿ ನೀಡಿರುವುದಿಲ್ಲ. 2020ರಲ್ಲಿ ಶಫಿಯಾ ರವರು ಸಾಲವನ್ನು ಕಟ್ಟಿಲ್ಲವೆಂದು ಆರೋಪಿಗಳು ಯಾವುದೇ ನೋಟಿಸ್ ನೀಡದೇ ಶಫಿಯಾ ರವರ ಮನೆಯ ಬಳಿಯಿಂದ ವಾಹನವನ್ನು ಸೀಜ್ ಮಾಡಿ ತೆಗೆದುಕೊಂಡು ಹೋಗಿರುತ್ತಾರೆ .ಆ ಸಮಯ ಸದ್ರಿ ವಾಹನದ ಒಳಗೆ ಶಫಿಯಾ ರವರ ಗಂಡನ ವ್ಯಾಪಾರದ ಸುಮಾರು 10,000/ ಮೌಲ್ಯದ ವಸ್ತುಗಳು ಇದ್ದವು. ಸದ್ರಿ ವಾಹನವನ್ನು ಬಲಾತ್ಕಾರವಾಗಿ ಬೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿ ವಾಹನವನ್ನು ತೆಗೆದುಕೊಂಡು ಹೋಗಿರುತ್ತಾರೆ ಅಲ್ಲದೇ ಯಾವುದೇ ರೀತಿಯ ನೋಟಿಸ್ ನೀಡದೇ ಮೋಸ ಮಾಡಿ ನಷ್ಟ ಉಂಟು ಮಾಡುವ ಉದ್ದೇಶದಿಂದ ವಾಹನವನ್ನು ಸೀಜ್ ಮಾಡಿ ಮಾರಾಟ ಮಾಡಿರುತ್ತಾರೆ. ಆದರೆ  ವಾಹನವನ್ನು ಬೇರೆಯವರ ಹೆಸರಿಗೆ ಬದಲಾಯಿಸಿರುವುದಿಲ್ಲ ಆರ್.ಟಿ.ಓ ಗೆ ಈ ಬಗ್ಗೆ ಮಾಹಿತಿ ನೀಡದೇ ಇದ್ದು  ಇದರಿಂದ ವಾಹನ ದುರುಪಯೋಗ ಆಗುವ ಸಾಧ್ಯತೆ ಇದ್ದು ,ಇವೆಲ್ಲವುಗಳ ಬಗ್ಗೆ ಶಫಿಯಾ ರವರ ಗಂಡ ಸಂಸ್ಥೆಗೆ ಹೋಗಿ ಪ್ರಶ್ನಿಸಿದಾಗ ಅವಾಚ್ಯ ವಾಗಿ ಬೈದು ಇನ್ನು ಮುಂದೆ ವಾಹನದ ವಿಚಾರಕ್ಕೆ ಬಂದರೆ ನಿನಗೆ ಸೇರಿದ 4 ಚೆಕ್ ನಮ್ಮ ಬಳಿ ಇದೆ, ನಿನ್ನ ಮೇಲೆ ಚೆಕ್ ಬೌನ್ಸ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 158/2021 ಕಲಂ: 420.406.504.506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಮಣಿಪಾಲ ಪೊಲೀಸ್ ಠಾಣಾ  ಸರಹದ್ದಿನ ಹೆರ್ಗಾ ಗ್ರಾಮದ ಈಶ್ವರ ನಗರ ಎಂಬಲ್ಲಿರುವ ಸರ್ವೆ ನಂಬ್ರ 260/8ಪಿ11 ರಲ್ಲಿನ 1 ನೇ ಆರೋಪಿ ಸ್ವಪ್ನಾ ಶೆಟ್ಟಿ ಎಂಬವರದೆನನ್ನಲಾದ ಮನೆಯಲ್ಲಿ ಫಿರ್ಯಾದಿದಾರರಾದ ಸವಿತಾ ಕ್ವಾಡೋಸ್ (34) ರಾಬರ್ಟ್ ಕ್ವಾಡೋಸ್, ವಾಸ: ಹೌಸ್ ನಂಬ್ರ:4-213, ಪ್ರಕಾಶ ವಿಲ್ಲಾ, ಕೋಡಿ ರೋಡ್, ಹಂಗ್ಳೂರು ಉಡುಪಿ ಎಂಬವರು ಶಾಲೆ ನಡೆಸಲು ದಿನಾಂಕ 12/03/2021 ರಂದು 3 ನೇ ಆರೋಪಿ ಅಲ್ವಿನ್ ಸಲ್ದಾನ ಇವರ ಮುಖಾಂತರ ಲಖಿತ ಕರಾರು ಮಾಡಿಕೊಂಡು 1,00,000 ರೂಪಾಯಿ ಭದ್ರತೆ ಠೇವಣಿಯೆಂದು 1 ನೇ ಆರೋಪಿಯ ಮಗ 2 ನೇ ಆರೋಪಿ ಶಶಾಂಕ್  ಶೆಟ್ಟಿ ಇವರ  ಖಾತೆಗೆ ದಿನಾಂಕ 23/03/2020 ರಂದು ಚೆಕ್ ಮುಖಾಂತರ ಹಣ ಪಾವತಿ ಮಾಡಿರುತ್ತಾರೆ. ಸದರಿ ಮನೆಯಲ್ಲಿ ಶಾಲೆ ನಡೆಸಲು ಕರಾರು ಮಾಡಿಕೊಂಡ ನಂತರ ಸವಿತಾ ಕ್ವಾಡೋಸ್ ರವರು ಆ ಮನೆಯಲ್ಲಿ ಶಾಲೆ ಪ್ರಾರಂಭಿಸಲು ಮನೆಯನ್ನು ನವೀಕರಿಸಿದ್ದು, ದಿನಾಂಕ 15/03/2021 ರಂದು ಸವಿತಾ ಕ್ವಾಡೋಸ್ ಇವರ ಸದ್ರಿ ಶಾಲೆಯಲ್ಲಿರುವಾಗ . 1) ಸ್ವಪ್ನಾ ಶೆಟ್ಟಿ(54) 2. ಶಶಾಂಕ ಶೆಟ್ಟಿವಾಸ: ಮನೆ ನಂಬ್ರ: 2924, ಒಂದನೇ ಪ್ಲೋರ್, 14 ನೇ ಕ್ರಾಸ್, ಶಾಸ್ತ್ರೀ ಬೆಂಗಳೂರು. 3. ಅಲ್ವಿನ್ ಸಲ್ದಾನ, ವಾಸ: ಅನಂತನಗರ , ಶಿವಳ್ಳಿ ಗ್ರಾಮ. 4. ಸನೀತ ಶೆಟ್ಟಿ, ವಾಸ: ಕಕ್ಕುಂಜೆ ಶಿವಳ್ಳಿ ಗ್ರಾಮ. ಇವರು ಸದರಿ  ಶಾಲೆಗೆ ಅಕ್ರಮ ಪ್ರವೇಶ ಮಾಡಿ ಮನೆ ಖಾಲಿ ಮಾಡುವಂತೆ ಸೂಚಿಸಿದ್ದು, ಸವಿತಾ ಕ್ವಾಡೋಸ್ ರವರು ಸಮಯಾವಕಾಶ ನೀಡುವಂತೆ ಕೋರಿಕೊಂಡಾಗ ಆರೋಪಿತರು ಸವಿತಾ ಕ್ವಾಡೋಸ್ ರವರನ್ನು ಮತ್ತು ಅವರ ಮಕ್ಕಳಾದ ಸೋನಾಲ್, ಸ್ವೀಡಲ್ ಹಾಗೂ ಸಹೋದರಿ ಲಿನೇಟ್ ರೆಗೋ ಇವರನ್ನು ಮನೆಯಿಂದ ಹೊರ ಹಾಕಿ ಮನೆಯ ಪೈಂಟಿಂಗ್ ಹಾಳು ಮಾಡಿ ಹಾಗೂ ಆಫೀಸನ್ನು ವಸ್ತುಗಳನ್ನು ಎಸೆದು ಸವಿತಾ ಕ್ವಾಡೋಸ್ ರವರಿಗೆ ನಷ್ಟ ಉಂಟು ಮಾಡಿ ಸವಿತಾ ಕ್ವಾಡೋಸ್ ರವರಿಗೆ ಅವಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆ ಹಾಕಿ ಮನೆಗೆ ಬೀಗ ಹಾಕಿ ಹೋಗಿರುತ್ತಾರೆ.  ಹೀಗೀರುವಾಗ ಸವಿತಾ ಕ್ವಾಡೋಸ್ ರವರು  ಮೇಲ್ಕಾಣಿಸಿದ  ಮನೆಗೆ  2021  ನೇ ಎಪ್ರಿಲ್ 2 ನೇ ವಾರದಲ್ಲಿ ಒಂದು ದಿನ ಹೋದಾಗ  4 ನೇ ಆರೋಪಿ ಸ್ಥಳಕ್ಕೆ ಬಂದು  ಸದರಿ  ಮನೆಯಲ್ಲಿ ಯಾವುದೇ  ಕೆಲಸಮಾಡದಂತೆ ತಡೆದು, ಪ್ರತಿಭಟಿಸಿದ ಸವಿತಾ ಕ್ವಾಡೋಸ್ ರವರನ್ನು 4 ನೇ ಆರೋಪಿ ದೂಡಿ ಅವಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021 ಕಲಂ:341,354,406,420,427,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಮಧು ಶ್ರೀ ವಾಸ್ತವ(24), ಗಂಡ: ರಮೇಶ್ ಸಿಂಗ್, ವಾಸ: ಮನೆ ನಂಬ್ರ:4/571 (ಡಿ) ರಾಜೀವ ನಗ ರ , 5ನೇ ಕ್ರಾಸ್. 80 ಬಡಗುಬೆಟ್ಟು ಗ್ರಾಮ.ಉಡುಪಿ ಇವರು ಮತ್ತು 1 ನೇ ಆರೋಪಿ ರಮೇಶ್ ಸಿಂಗ್ ಇವರ ಮದುವೆ ದಿನಾಂಕ 11/12/2015  ರಂದು  ಕಾಳಿಕಾ ದೇವಸ್ಥಾನ ದೆಹಲಿಯಲ್ಲಿ  ಆಗಿರುತ್ತದೆ. 1 ನೇ ಆರೋಪಿ ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಮದುವೆ ನಂತರ ಮಧು ಶ್ರೀ ವಾಸ್ತವ ರವರು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದ ರಾಜೀವ ನಗರದಲ್ಲಿರುವ ಮನೆಯಲ್ಲಿ 1 ನೇ ಆರೋಪಿಯೊಂದಿಗೆ ಸಂಸಾರ ಪ್ರಾರಂಭಿಸಿರುತ್ತಾರೆ. ಮದುವೆಯಾಗಿ 2 ತಿಂಗಳ ನಂತರ 1 ನೇ ಆರೋಪಿ  ಮಧು ಶ್ರೀ ವಾಸ್ತವ ರವರ ಮೇಲೆ ಸಿಟ್ಟು ಮಾಡಿಕೊಂಡು, ಹಣಕ್ಕಾಗಿ ಮಧು ಶ್ರೀ ವಾಸ್ತವ ರವರನ್ನು ಪೀಡಿಸಿ ಮಾನಸಿಕ  ಮತ್ತು  ದೈಹಿಕ  ಹಿಂಸೆ ನೀಡಲು ಪ್ರಾರಂಭಿಸಿರುತ್ತಾನೆ. ದಿನಾಂಕ 06/09/2016  ರಂದು ಮಧು ಶ್ರೀ ವಾಸ್ತವ ರವರು ಗಂಡು ಮಗುವಿಗೆ ಜನ್ಮ ನೀಡಿದ್ದು, ನಂತರದ ದಿನದಲ್ಲಿ ಆರೋಪಿ ಮಧು ಶ್ರೀ ವಾಸ್ತವ ರವರಿಗೆ ಹಣಕ್ಕಾಗಿ ಪೀಡಿಸಿ ಮಾನಸಿಕ  ಮತ್ತು ದೈಹಿಕ  ಹಿಂಸೆ ನೀಡುತ್ತಿದ್ದು,  ಮಧು ಶ್ರೀ ವಾಸ್ತವ ರವರ ತಾಯಿ ಆರೋಪಿಗೆ 1 ಲಕ್ಷ ರೂಪಾಯಿ ಹಣವನ್ನು ನೀಡಿರುತ್ತಾರೆ. ಮಧು ಶ್ರೀ ವಾಸ್ತವ ರವರಿಗೆ ಎರಡನೆ ಮಗು ಆಗಿದ್ದು,  ಆ ಸಮಯದಲ್ಲಿ  ಮಧು ಶ್ರೀ ವಾಸ್ತವ ರವರ ಆರೋಗ್ಯ ಸರಿ ಇಲ್ಲದೆ ಇದ್ದರಿಂದ ಮಧು ಶ್ರೀ ವಾಸ್ತವ ರವರು ಗೋವಕ್ಕೆ ತನ್ನ ತವರು ಮನೆಗೆ ಹೋಗಿರುತ್ತಾರೆ. ಆ ಸಮಯದಲ್ಲಿ 1ನೇ ಆರೋಪಿ ಮಧು ಶ್ರೀ ವಾಸ್ತವ ರವರನ್ನು ಸಂಪರ್ಕಿಸದೇ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಇವರು ಗೋವಾದಿಂದ ಮಣಿಪಾಲಕ್ಕೆ ಬಂದು  ನೋಡಿದಾಗ 1 ನೇ ಆರೋಪಿ 2 ನೇ ಆರೋಪಿ ಸುನಿತ ಇವರನ್ನು 3 ನೇ ಆರೋಪಿ ಬಲವಂತ ಶರ್ಮ ಇವರ ಸಹಾಯದಿಂದ ಮದುವೆಯಾಗಿ ಆಕೆಯೊಂದಿಗೆ ಸಂಸಾರ ಮಾಡಿಕೊಂಡಿರುವುದು ತಿಳಿದು ಬಂದಿತ್ತು.  ದಿನಾಂಕ 09/08/2021 ರಂದು ಮಧು ಶ್ರೀ ವಾಸ್ತವ ರವರು ವಾಪಾಸು ಆರೋಪಿತರ ಮನೆಗೆ ಬೇಟಿ ನೀಡಿದಾಗ ಮೂರು ಜನ ಆರೋಪಿತರು ಮಧು ಶ್ರೀ ವಾಸ್ತವ ರವರನ್ನು ಉದ್ದೇಶಿಸಿ ಈ  ವಿಚಾರದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ:498(ಎ), 323,494,339,504,506 ಐಪಿಸಿ, ಜೊತೆಗೆ 3 DOWRY PROBHIBITION ACT 1961 ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ಪಿರ್ಯಾದಿದಾರರಾದ ಗೌಸಿಯಾ ಗಂಡ:ಮೊಹಮ್ಮದ ಆಶ್ರಫ್, ವಾಸ: ಭಾಸ್ಕರ ನಗರ , ಉಚ್ಚಿಲ, ಬಡಾ ಗ್ರಾಮ, ಕಾಪು ತಾಲೂಕು ಉಡುಪಿ ಇವರ ವಿವಾಹವು ದಿನಾಂಕ 24/07/2016 ರಂದು 1 ನೇ ಆರೋಪಿ ಮೊಹಮ್ಮದ್ ಅಶ್ರಪ್ ನೊಂದಿಗೆ ಕಾಪು ಠಾಣಾ ವ್ಯಾಪ್ತಿಯಾ ಕೊಪ್ಪಲಂಗಡಿಯ ಕಮಿನಿಟಿ ಹಾಲ್ ನಲ್ಲಿ ನೆರವೇರಿರುತ್ತದೆ. ಮದುವೆ ನಂತರ ಗೌಸಿಯಾ ರವರು ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಉಚ್ಚಿಲದಲ್ಲಿರುವ 1ನೇ ಆರೋಪಿ ಮನೆಗೆ  ಸಂಸಾರ ನಡೆಸಲು ಬಂದಿದ್ದು, ಮದುವೆಯಾಗಿ 3 ತಿಂಗಳಲ್ಲಿ 1 ನೇ ಆರೋಪಿ ಕೆಲಸಕ್ಕೆ ವಿದೇಶಕ್ಕೆ ಹೋಗಿರುತ್ತಾನೆ. 1 ನೇ ಆರೋಪಿ ವಿದೇಶಕ್ಕೆ ಹೋದ ನಂತರ 1 ನೇ ಆರೋಪಿಯ ತಾಯಿ 2ನೇ ಆರೋಪಿ ಆಮೀನಾ, 1 ನೇ ಆರೋಪಿ ತಂದೆ 3 ನೇ ಆರೋಪಿ ಆಸೀಫ್ ಇವರು ಗೌಸಿಯಾ ರಚರಿಗೆ ಮಾನಸಿಕ ಮತ್ತು  ದೈಹಿಕ ಹಿಂಸೆ  ನೀಡಲು  ಪ್ರಾರಂಭಿಸಿರುತ್ತಾರೆ. 1) ಸಾಬಿನ್(60), ತಂದೆ: ಅಬ್ದುಲ್ ಖಾದರ್, 3. ಅಮೀನಾ(55), ತಂದೆ; ಸಾಬನ್, 4.ಆಸೀಪ್, (36). ಬಿನ್, ಆರೋಪಿತರ ಮಾತನ್ನು  ಕೇಳಿ ವಿದೇಶದಲ್ಲಿದ್ದ 1 ನೇ ಆರೋಪಿ ಫಿರ್ಯಾದಿದಾರರೊಂದಿಗೆ  ಜಗಳ ಮಾಡುತ್ತಿದ್ದನು.  1 ನೇ ಆರೋಪಿ 1 ವರ್ಷ ಬಿಟ್ಟು ವಿದೇಶದಿಂದ ಬಂದವನು ಆರೋಪಿತರ ಸಂಬಂದಿಕರಾದ 5) ಇಕ್ಬಾಲ್(46), ಬಿನ್ ಅಹಮ್ಮದ್, ವಾಸ; ಮುಳ್ಳುಗುಡ್ಡೆ,ಉಚ್ಚಿಲ, ಕಾಪು ತಾಲುಕು, ಉಡುಪಿ ಜಿಲ್ಲೆ. 6.ಈದಿನಬ್ಬಆರೋಪಿ ಇಕ್ಬಾಲ್  ಮತ್ತು ಈದಿನಬ್ಬ ಇವರ ದುಷ್ಪ್ರೇರಣೆಯಿಂದ ಆರೋಪಿತರು ಫಿರ್ಯಾದಿದಾರರಲ್ಲಿ ಹಣ ಮತ್ತು ಚಿನ್ನ ತರುವಂತೆ ತರದಿದ್ದರೆ ಪೆಟ್ರೋಲ್ ಹಾಕಿ ಸುಟ್ಟು ಹಾಕುವುದಾಗಿ ಅವಾಚ್ಯವಗಿ ನಿಂದಿಸಿ ಬೆದರಿಕೆ  ಹಾಕಿರುತ್ತಾರೆ. ದಿನಾಂಕ 28/04/2021 ರಂದು ರಾತ್ರಿ 10:30 ಗಂಟೆಗೆ ಫಿರ್ಯಾದಿದಾರರ ತವರು ಮನೆಯ ಎದುರು ನಿಂತುಕೊಂಡಿದ್ದಾಗ 1 ನೇ ಆರೋಪಿ ಪಿರ್ಯಾದಿದಾರರ  ತವರು ಮನೆಯ ಬಳಿ ಬೈಕಿನಲ್ಲಿ   ಬಂದು  ಏಕಾಏಕಿ ಅವಾಚ್ಯ ಶಬ್ದದಿಂದ  ಬೈದು ಇವರಿಗೆ  ಕೆನ್ನೆ ಹೊಡೆದು  ಹಲ್ಲೆ ಮಾಡಿ ಮನೆಗೆ ಬರುವುದಾದರೆ 5 ಲಕ್ಷ ರೂಪಯಿ  ಹಿಡಿದುಕೊಂಡು  ಬಾ ಹಾಗೇ ಬಂದಲ್ಲಿ ಕೈ ಕಾಲು ಕಡಿದು  ಹಾಕುವುದಾಗಿ  ಬೆದರಿಕೆ  ಹಾಕಿ ಹೊಗಿರುವುದಾಗಿದೆ.  ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ:498(ಎ), 406,323,504,506,109,149 ಐಪಿಸಿ . 3,4 Dowry Prohibition Act ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 03-09-2021 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080