ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಸಂತೋಷ್.ಕುಂದರ್ (22), ತಂದೆ: ದೇವುದಾಸ್ ಕುಂದರ್, ವಾಸ: ಮಲ್ಪೆ ಬಾಪು ತೋಟ ಮಲ್ಪೆ ಉಡುಪಿ ಜಿಲ್ಲೆ ಇವರ ಚಿಕ್ಕಪ್ಪ ದಾಸ ಕುಂದರ್ ರವರು ದಿನಾಂಕ 30/07/2021 ರಂದು ಉಡುಪಿಯಿಂದ ಮಲ್ಪೆಗೆ ತನ್ನ ಮೋಟಾರ್ ಸೈಕಲ್ KA-20-X-6602 ನೇದನ್ನು ಸವಾರಿ ಮಾಡಿಕೊಂಡು ಸ್ವಾಧೀಷ್ಟ ಹೋಟೇಲ್ ಮುಂಭಾಗ ತಲುಪುವಾಗ ರಾತ್ರಿ 8:00 ಗಂಟೆಗೆ ಓರ್ವ ರಿಕ್ಷಾ ಚಾಲಕ ಕರಾವಳಿ ಕಡೆಯಿಂದ ಮಲ್ಪೆ ಕಡೆಗೆ ಯು ಟರ್ನ್ ಮಾಡಿ ಕರಾವಳಿ ಜಂಕ್ಷನ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 169(ಎ)ರಲ್ಲಿ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ದಾಸ ಕುಂದರ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಮತ್ತು ರಿಕ್ಷಾ ಚಾಲಕ ಅಪಘಾತಪಡಿಸಿದ ನಂತರ ತನ್ನ ರಿಕ್ಷಾವನ್ನು ಸ್ಥಳದಲ್ಲಿ ನಿಲ್ಲಿಸದೇ ರಿಕ್ಷಾ ಸಮೇತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021 ಕಲಂ: 279, 338 ಐಪಿಸಿ ಮತ್ತು 134(ಎ)(ಬಿ) & 187 ಐ.ಎಮ್.ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಮಲ್ಪೆ: ಪಿರ್ಯಾದಿದಾರರಾದ ಕುಶಾಲಪ್ಪ(24), ತಂದೆ:ಉದ್ದಪ್ಪಂಡ ಜಗತ್, ವಾಸ: ಹೊಸೂರು, ಅಮ್ಮತ್ತಿ ಅಂಚೆ ,ವಿರಾಜಪೇಟೆ  ಕೊಡಗು ಇವರ ತಂಗಿ ದೇಚಮ್ಮ ಯು ಜೆ (20) ರವರು ತನ್ನ  ಸ್ನೇಹಿತರಾದ ನಿಖಿಲ್ ಗೌಡ, ಶೈನಿ ಉತ್ತಪ್ಪ  ಮತ್ತು ನವ್ಯ ಮಂದಣ್ಣ ರವರೊಂದಿಗೆ ಪ್ರವಾಸದ  ಬಗ್ಗೆ   ದಿನಾಂಕ 30/07/2021 ರಂದು ಕೊಡಗಿನಿಂದ ಖಾಸಗಿ ವಾಹನದಲ್ಲಿ ಹೊರಟು  ಮಂಗಳೂರಿಗೆ ಬಂದು  ನಂತರ 31/07/2021 ರಂದು ಉಡುಪಿಯ  ಮಲ್ಪೆ ಗೆ ಬಂದು ರೆಸಾರ್ಟ್ ನಲ್ಲಿ ತಂಗಿದ್ದು, ದಿನ ದಿನಾಂಕ 01/08/2021 ರಂದು ಮಲ್ಪೆ ಬೀಚ್ ನಲ್ಲಿ  ಸಮುದ್ರ ದ ನೀರಿನಲ್ಲಿ ಆಟ ಆಡುತ್ತಿರುವಾಗ  ನೀರಿನ ತೆರೆಯ ರಭಸಕ್ಕೆ  ಸಿಲುಕಿ ನೀರಿನಲ್ಲಿ ನಾಲ್ಕು ಜನರು ಕೊಚ್ಚಿಕೊಂಡು ಹೋಗಿದ್ದು, ತಮಿಳುನಾಡು ದೋಣಿಯವರು    ನವ್ಯ ಮಂದಣ್ಣ, ನಿಖಿಲ್ ಗೌಡ, ಶೈನಿ ಉತ್ತಪ್ಪ ರವ ರನ್ನು ರಕ್ಷಿಸಿದ್ದು ಆ ಪೈಕಿ ಪಿರ್ಯಾದಿದಾರರ ತಂಗಿ  ದೇಚಮ್ಮ ಯು ಜೆ ರವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿರುತ್ತಾರೆ .  ದಿನಾಂಕ 02/08/2021 ರಂದು ಬೆಳಿಗ್ಗೆ  07:30 ಗಂಟೆಗೆ   ಮಲ್ಪೆ  ಸೀವಾಕ್  ವೇ ನಲ್ಲಿ ಮೃತ ದೇಹ ತೇಲುತ್ತಿರುವುದಾಗಿ  ಮಾಹಿತಿ ಬಂದಂತೆ ಹೋಗಿ  ನೋಡಲಾಗಿ  ಪಿರ್ಯಾದಿದಾರರ ತಂಗಿ ದೇಚಮ್ಮ ಯು ಜೆ ರವರ ಮೃತ ದೇಹವಾಗಿರುತ್ತದೆ .  ಪಿರ್ಯಾದಿದಾರರ ತಂಗಿ  ಪ್ರವಾಸದ ಬಗ್ಗೆ  ಮಲ್ಪೆ ಬೀಚ್ ಗೆ ಬಂದು ಮಲ್ಪೆ ಬೀಚ್ ನಲ್ಲಿ ಸಮುದ್ರದ ತೆರೆಗಳ ಅಬ್ಬರ ಕ್ಕೆ ಸಿಲುಕಿ ನೀರಿನಲ್ಲಿ  ಕೊಚ್ಚಿಕೊಂಡು ಹೋಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 36/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 02/08/2021 ರಂದು 14:30 ಗಂಟೆಯಿಂದ 16:45 ಗಂಟೆಯ ಮಧ್ಯೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿ ಎಂಬಲ್ಲಿರುವ ಅರ್ಬಿ ಫಾಲ್ಸ್ ನಲ್ಲಿ, ನಿಟ್ಟೆ ವಿದ್ಯಾ ಸಂಸ್ಥೆಯಲ್ಲಿ ಪ್ರಥಮ ವರ್ಷದ ಬಯೋ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವರ್ಷಿತಾ (20) ಎಂಬುವವರು ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ  ಮಾಡುತ್ತಿರುವ ಸ್ನೇಹಿತರಾದ ಶಶಾಂಕ್ ಹಾಗೂ ರುದ್ರ ಎಂಬುವವರೊಂದಿಗೆ ಸ್ನಾನ ಮಾಡುತ್ತಿರುವಾಗ ಅಕಸ್ಮಿಕವಾಗಿ ಕಾಲು ಜಾರಿ ಫಾಲ್ಸ್ ನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 25/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಉಜ್ವಲ ಕಿರಣ್‌(46), ಗಂಡ: ಕೆ. ನಾಗರಾಜ್‌ ಪೈ, ವಾಸ: ಪ್ರೇಮ್‌ ನಿವಾಸ್‌, ನಂಬ್ರ: 102ಬಿ, ಸಾಯಿರಾಧ ರೆಸಿಡೆನ್ಸಿ, ಹೋಟೇಲ್‌ ಕಿದಿಯೂರು ಹಿಂಭಾಗ, ಶಿರಿಬೀಡು, ಉಡುಪಿ ತಾಲೂಕು ಉಡುಪಿ ತಾಲೂಕು ಇವರು ಮೋಂಟ್ರೋ ಸೈಕಲ್‌ನ್ನು ಎಂದಿನಂತೆ ಸಾಯಿ ರಾಧಾ ರೆಸಿಡೆನ್ಸಿಯ ಪಾರ್ಕಿಂಗ್‌ಸ್ಥಳದಲ್ಲಿ ನಿಲ್ಲಿಸಿದ್ದು, ಸೈಕಲ್‌ನ್ನು ದಿನಾಂಕ 01/08/2021 ರಂದು 17:00 ಗಂಟೆಯಿಂದ ದಿನಾಂಕ 02/08/2021 ರಂದು ಬೆಳಿಗ್ಗೆ 10:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೈಕಲ್‌ನ ಮೌಲ್ಯ ರೂಪಾಯಿ 22,000/- ಆಗಿರುತ್ತದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 106/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 03-08-2021 09:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080