ಅಭಿಪ್ರಾಯ / ಸಲಹೆಗಳು

 

ಪಿರ್ಯಾದಿದಾರರಾದ ಪ್ರಮೀಳಾ  ಬಂಗೇರಾರವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅಂಬಾಗಿಲು ಕಕ್ಕುಂಜೆ ಎಂಬಲ್ಲಿ ವಾಸ್ತವ್ಯವಿದ್ದು, ದಿನಾಂಕ 21/01/2022 ರಿಂದ ದಿನಾಂಕ 20/02/2022 ರ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಮನೆಯ ಗೋದ್ರೇಜ್‌ ನಲ್ಲಿಸಿದ್ದ ಬಂಗಾರದ ಸರ-2, ಬಳೆ-2, ಉಂಗುರ-3, ಕಿವಿಯ ಓಲೆ-1ಜೊತೆ, ಬ್ರೆಸ್‌ಲೆಟ್‌-1 ಒಟ್ಟು ಸುಮಾರು 9 ಪವನ್‌ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು  ರೂಪಾಯಿ 3,15,000/- ಆಗಿದ್ದು, ಮನೆಗೆ ಬರುತ್ತಿದ್ದ ಸಂತೋಷ ಎಂಬಾತನ ಮೇಲೆ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯಲ್ಲಿರುವುದಾಗಿದೆ.                        

         ಪ್ರಕರಣದಲ್ಲಿ  ಆರೋಪಿ ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿ ಹೋದ ಪ್ರಸಾದ್‌ಕುಮಾರ್‌ ಕೆ. ಪೊಲೀಸ್‌ ಉಪ ನಿರೀಕ್ಷಕರು ತನಿಖೆ-1 ಹಾಗೂ ಸಿಬ್ಬಂದಿಯವರಾದ  ಸತೀಶ್, ಕಿರಣ್  ಆರೋಪಿ ಸಂತೋಷ್ ಪೂಜಾರಿಯನ್ನು  ಉಡುಪಿ ತಾಲೂಕು ಕೃಷ್ಣ ಮಠದ ಗೀತಾ ಮಂದಿರ ಬಳಿಯಿಂದ ಮತ್ತು  ಪ್ರಕರಣದಲ್ಲಿ ಬಾಗಿಯಾಗಿದ್ದ ಆರೋಪಿ ರಾಕೇಶ್ ಪಾಲನ್ ನ್ನು  ಉಡುಪಿ ಉಜ್ವಲ್ ಬಾರ್ ಎದುರಿನಿಂದ ವಶಕ್ಕೆ ಪಡೆದು  ಆರೋಪಿಗಳಿಂದ  2,18,169/- ರೂಪಾಯಿ ಮೌಲ್ಯದ   ಚಿನ್ನಭರಣಗಳನ್ನು ವಶಪಡಿಸಿ ಮಾನ್ಯ ನ್ಯಾಯಾಲಯಕ್ಕೆ  ಹಾಜರುಪಡಿಸಿದಲ್ಲಿ ನ್ಯಾಯಾಲಯವು  ಆರೋಪಿಗಳಿಗೆ  15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

             ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಶ್ರೀ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌ ರವರ ಆದೇಶದಂತೆ, ಶ್ರೀ ಸಿದ್ದಲಿಂಗಪ್ಪ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಶ್ರೀ ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ರವರ ನಿರ್ದೇರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿರವರ ಮಾರ್ಗದರ್ಶನದಂತೆ  ಪಿ.ಎಸ್‌.ಐ-1 ಮಹೇಶ್ ಟಿ.ಎಮ್, ಪ್ರಸಾದ್‌ಕುಮಾರ್‌ ಕೆ. ಪಿ.ಎಸ್‌.ಐ ತನಿಖೆ-1, ಪಿ.ಎಸ್.ಐ-2  ವಾಸಪ್ಪ ನಾಯ್ಕ್, ಹಾಗೂ  ಸಿಬ್ಬಂದಿಯವರಾದ ಎ.ಎಸ್.ಐ ಅರುಣ್ , ಸತೀಶ್ ಬೆಳ್ಳೆ , ಕಿರಣ್, ರವರು ಸಹಕರಿಸಿರುತ್ತಾರೆ.

                                            ಆರೋಪಿತರ  ಹೆಸರು ವಿಳಾಸ

1) ಸಂತೋಷ್ ಪೂಜಾರಿ ಪ್ರಾಯ:36 ವರ್ಷ ತಂದೆ: ದಿ:ರಾಘು ಪೂಜಾರಿ, ವಾಸ: “ಅಮ್ಮಕೃಪಾ” ,ಗರಡಿ ದೇವಸ್ಥಾನದ ಹತ್ತಿರ ಕಕ್ಕುಂಜೆ ಗ್ರಾಮ ಶಿವಳ್ಳಿ ಅಂಚೆ ಉಡುಪಿ ಜಿಲ್ಲೆ.  

 2)ರಾಕೇಶ್ ಪ್ರಾಯ:37ವರ್ಷ ತಂದೆ: ಸುಂದರ್ ಪಾಲನ್ ವಾಸ: 3-84 “ಕೂಸು ನಿವಾಸ” ಮಟ್ಟು ಅಂಚೆ ಕಟಪಾಡಿ ಗ್ರಾಮ ಉಡುಪಿ ಜಿಲ್ಲೆ.

ಇತ್ತೀಚಿನ ನವೀಕರಣ​ : 03-07-2022 11:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080