ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ  ವಿಲಾಸ್ ಆಚಾರ್ (32), ತಂದೆ: ರಮೇಶ ಆಚಾರ್, ವಾಸ: ರಾಜೀವಿ ನಿಲಯ, ಫಿಷರೀಸ್ ರೋಡ್, ಬೀಜಾಡಿ ಗ್ರಾಮ, ಕೋಟೇಶ್ವರ ಅಂಚೆ, ಕುಂದಾಪುರ ತಾಲೂಕು ಇವರಿಗೆ ದಿನಾಂಕ 03/07/2022 ರಂದು ಬೆಳಿಗ್ಗಿನ ಜಾವ 2:00 ಗಂಟೆಗೆ ಅವರ ಚಿಕ್ಕಪ್ಪ ದಿನೇಶ್ ಆಚಾರ್ ರವರು ಫೋನ್ ಕರೆ ಮಾಡಿ ಮರವಂತೆ ಬೀಚ್ ಬಳಿ ತನ್ನ ತಮ್ಮ ವಿರಾಜ್ ಆಚಾರ್ ರವರ ಕಾರು ರಸ್ತೆ ಅಪಘಾತವಾಗಿ ಕಾರಿನಲ್ಲಿದ್ದ ಕಾರ್ತಿಕ್ ಮತ್ತು ಸಂದೇಶ ರವರು ಗಾಯಗೊಂಡು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿಸಿದ  ಮೇರೆಗೆ ಪಿರ್ಯಾದಿದಾರರು ಆಸ್ಪತ್ರೆಗೆ ಬಂದು ಕಾರ್ತಿಕ್ ರವರಲ್ಲಿ ಘಟನೆಯ ಬಗ್ಗೆ ವಿಚಾರಿಸಿದಾಗ, ದಿನಾಂಕ 03/07/2022 ರಂದು ಬೆಳಿಗ್ಗಿನ ಜಾವ  KA-20-MC-7796 ನೇ ಕಾರಿನಲ್ಲಿ ಕಾರ್ತಿಕ, ರೋಷನ್‌, ಹಾಗೂ ಸಂದೇಶನೊಂದಿಗೆ  ವಿರಾಜ್‌ ಆಚಾರ್‌ರವರು ಚಾಲನೆ ಮಾಡಿಕೊಂಡು ಕುಂದಾಪುರ ದಿಂದ  ಕುಮಟಾ ಕಡೆಗೆ NH 66 ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತೀರುವಾಗ ಮರವಂತೆ ಗ್ರಾಮದ ಮರವಂತೆಯ ವರಹ ಮಹಾರಾಜಸ್ವಾಮಿ ದೇವಸ್ಥಾನದ ಬಳಿ ತಲುಪುವಾಗ ಬೆಳಿಗ್ಗಿನ ಜಾವ 01:50 ಗಂಟೆಗೆ ಕಾರನ್ನು ಚಲಾಯಿಸುತ್ತಿದ್ದ ವಿರಾಜ್‌ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಪಟ್ಟಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಅರಬ್ಬಿ ಸಮುದ್ರಕ್ಕೆ ಬಿದ್ದಿತು. ಪಲ್ಟಿಯಾದ ರಭಸಕ್ಕೆ ಕಾರಿನಲ್ಲಿದ್ದ  ಕಾರ್ತಿಕ ಆಚಾರ್‌ಹಾಗೂ ಸಂದೇಶ ರವರಿಗೆ ಪೆಟ್ಟಾಗಿದ್ದು, ಚಾಲಕ ವಿರಾಜ್‌ ಆಚಾರ್‌ ಮೃತಪಟ್ಟಿದ್ದು, ರೋಶನ್‌ ಆಚಾರ್‌ರವರು ಸಮುದ್ರದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುತ್ತಾರೆ. ಕಾರ್ತಿಕ ಆಚಾರ್‌ ಹಾಗೂ ಸಂದೇಶ ರವರು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2022 ಕಲಂ: 279, 338, 304 (a) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ 01/07/2022 ರಂದು ರಾತ್ರಿ ಸಮಯ ಗಣೇಶ್ ನಾಯ್ಕ್ ಇವರು ಹೆಬ್ರಿ-ಕಾರ್ಕಳ ರಸ್ತೆಯಲ್ಲಿ ತನ್ನ ಮನೆಯಾದ ಬಂಡಿಮಠದ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದು ರಾತ್ರಿ 9:00 ಗಂಟೆಗೆ ವರಂಗ ಗ್ರಾಮದ ಮುನಿಯಲ್ ಬಂಡಿಮಠ ಎಂಬಲ್ಲಿ ತಲುಪಿದಾಗ ಅವರ ಎದುರುಗಡೆಯಿಂದ ಅಂದರೆ ಕಾರ್ಕಳ ಕಡೆಯಿಂದ KA-20-EQ-7102 ನೇ ಸ್ಕೂಟಿ ವಾಹನವನ್ನು ಅದರ ಸವಾರ ವಿಶ್ವನಾಥ ಇವರು ಹಿಂದುಗಡೆ ಸುಂದರ ಇವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದು ನಡೆದುಕೊಂಡು ಹೋಗುತ್ತಿದ್ದ ಗಣೇಶ್ ನಾಯ್ಕ್ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಎಡಕಾಲಿನ ಗಂಟಿನ ಕಳಗೆ ಮೂಳೆ ಮುರಿತವಾಗಿದ್ದು. ತಲೆಯ ಬಳಿ ಗಾಯವಾಗಿರುತ್ತದೆ. ಸಹ ಸವಾರ ಸುಂದರ ಇವರಿಗೆ ಬಲಕೈಯ ಅಂಗೈಗೆ ಗಾಯವಾಗಿದ್ದು. ಬಲಕಾಲಿನ ಗಂಟಿನ ಬಳಿ ಗುದ್ದಿದ ನೋವಾಗಿರುತ್ತದೆ ಮೋಟಾರ್ ಸೈಕಲ್ ಸವಾರ ವಿಶ್ವನಾಥ ಇವರಿಗೂ ಸಹ ಗಾಯವಾಗಿರುತ್ತದೆ . ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ:279 ,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  •  ಗಂಗೊಳ್ಳಿ : ದಿನಾಂಕ 02/07/2022 ರಂದು ವಿನಯ ಎಂ ಕೊರ್ಲಹಳ್ಳಿ, ಪೊಲೀಸ್ ಉಪನಿರೀಕ್ಷಕರು, ಗಂಗೊಳ್ಳಿ ಪೊಲಿಸ್ ಠಾಣೆ ಇವರಿಗೆ KA-19-MD-5956 ನೇ ನಂಬ್ರದ  ಕಾರು  ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಬಗ್ಗೆ ಬಂದ ಮಾಹಿತಿ ಮೇರೆಗೆ  ಸಿಬ್ಬಂದಿಯವರೊಂದಿಗೆ  ತ್ರಾಸಿ ಜಂಕ್ಷನ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ KA-19-MD-5956 ನೇ ನಂಬ್ರದ ಪೋರ್ಡ್‌ಕಂಪನಿಯ ಇಕೋ ಸ್ಫೋರ್ಟ್ಸ್‌ಕಾರು ಕುಂದಾಪುರ ಕಡೆಗೆ ವೇಗವಾಗಿ ಬಂದಿದ್ದು, ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ ಚಾಲಕನು ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದು, ಪಿರ್ಯಾದಿದಾರರು  ಕಾರನ್ನು ಬೆನ್ನಟ್ಟಿಕೊಂಡು ಹೋದಾಗ  ರಾತ್ರಿ 10:30 ಗಂಟೆಗೆ ಮುಳ್ಳಿಕಟ್ಟೆ ಜಂಕ್ಷನ್ ಬಳಿ ತಲುಪುವಾಗ ಮುಳ್ಳಿಕಟ್ಟೆ ಜಂಕ್ಷನ್ ನಲ್ಲಿ ಜಯಶ್ರೀ ಹುನ್ನೂರ ಪಿ.ಎಸ್‌.ಐ (ತನಿಖೆ) ರವರು ಸಿಬ್ಬಂದಿಯವರೊಂದಿಗೆ  ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ ಕಾರನ್ನು ನಿಲ್ಲಿಸದೇ ಅತೀ ವೇಗವಾಗಿ ಚಲಾಯಿಸಿಕೊಂಡು ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದು ಕಾರನ್ನು ನಾಯಕ್‌ವಾಡಿ ಕಡೆಗೆ ತಿರುಗಿಸಿ ಹೋಗಿದ್ದು ಕಾರನ್ನು ಬೆನ್ನಟ್ಟಿಕೊಂಡು ಹೋದಾಗ ಚಾಲಕನು ಕಾರನ್ನು ಗುಜ್ಜಾಡಿ ಗ್ರಾಮದ ಮಂಕಿ ಕ್ರಾಸ್ ಬಳಿ ರಸ್ತೆಯಲ್ಲಿ ನಿಲ್ಲಿಸಿ ಕಾರಿನ ಚಾಲಕ ಹಾಗೂ ಇತರರು ಕಾರಿನಿಂದ ಇಳಿದು ಗೇರು ಹಾಡಿಯಲ್ಲಿ ಓಡಿ ಹೋಗಿರುತ್ತಾರೆ. ಓಡಿ ಹೋದ  ಕಾರಿನ ಚಾಲಕನನ್ನು ಗುರುತಿಸಿದ್ದು, ಡ್ಯಾನೀಶ್ ಎಂಬುವವನಾಗಿದ್ದು, ಕಾರನ್ನು ಪರಿಶೀಲಿಸಲಾಗಿ ಕಾರಿನಲ್ಲಿ  ಒಂದು  ಗುಡ್ಡ (ಜಾನುವಾರು) ಇದ್ದು ಅದರ ಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ  ಕಟ್ಟಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದುದು ಕಂಡು ಬಂದಿರುತ್ತದೆ.  ಜಾನುವಾರನ್ನು ಎಲ್ಲಿಂದಲೋ ಕಳವು ಮಾಡಿ  ಗೋವಧೆ ಮಾಡಿ  ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡಿರುವುದಾಗಿದೆ. ಗುಡ್ಡದ ಮೌಲ್ಯ 2,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2022 ಕಲಂ: 379, 279 ಐಪಿಸಿ And  ಕಲಂ:8, 9, 12 The Karnataka prevention of slaughter and prevention of cattle ordinance 2020 , And  U/s 11(1) (D), Prevention of cruelty to Animals  Act 1960  And 66 R/w 192 (A)   IMV  Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-07-2022 05:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080