ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬೈಂದೂರು: ಪಿರ್ಯಾದಿದಾರರಾದ ನಾಗ ಪೂಜಾರಿ (62) ತಂದೆ;ವೆಂಕ್ಟ ಪೂಜಾರಿ , ವಾಸ; ಕೆಳಮನೆ ಬಿಜೂರು ಅಂಚೆ ಮತ್ತು ಗ್ರಾಮ, ಬೈಂದೂರು ಇವರು ದಿನಾಂಕ 30/06/2021 ರಂದು ಎಂದಿನಂತೆ ಅವರ ಉಪ್ಪುಂದ ಅಂಬಾಗಿಲಿನಲ್ಲಿರುವ ಅಂಗಡಿಗೆ ಹೋಗಿ ಸಂಜೆ 5:00 ಗಂಟೆಗೆ ಅಂಗಡಿ ಮುಚ್ಚಿ ಅಂಬಾಗಿಲಿನಿಂದ ಕಂಚಿಕಾನ್ ರಸ್ತೆಯ ಮಾರ್ಗವಾಗಿ ರಸ್ತೆಯ ಬದಿಯ ಮಣ್ಣುರಸ್ತೆಯಲ್ಲಿ ನಡೆದುಕೊಂಡು ಮನೆಗೆ ಬರುತ್ತಿರುವಾಗ ಸಮಯ ಸುಮಾರು ಸಂಜೆ 5:30 ಗಂಟೆಗೆ ಉಪ್ಪುಂದ ಗ್ರಾಮದ ಕಂಚಿಕಾನ್ ರಸ್ತೆಯಲ್ಲಿ ಕಂಚಿಕಾನ್  ಕಡೆಯಿಂದ ಅಂಬಾಗಿಲು ಕಡೆಗೆ ಓರ್ವ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ಎಡಬದಿಗೆ ಚಲಾಯಿಸಿ ಮಣ್ಣುರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇವರ ಎದುರಿಗೆ ಢಿಕ್ಕಿ ಹೊಡೆದಿದ್ದು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪರಿಣಾಮ ನಾಗ ಪೂಜಾರಿ ಇವರ ಬಲಕಾಲಿನ ಮೂಳೆಗೆ,ಎಡಕೈ ಮೂಳೆಗೆ ಜಖಂ ಉಂಟಾಗಿದ್ದು ಗಾಯಗೊಂಡ ಇವರನ್ನು ಮೋಟಾರು ಸೈಕಲ್‌ ಸವಾರನು ಕುಂದಾಪುರ ದೇವಿ ನರ್ಸಿಂಗ್ ಹೋಂ ಗೆ ದಾಖಲಿಸಿ ಅಲ್ಲಿಂದ ಹೋಗಿದ್ದು ಮೋಟಾರು ಸೈಕಲ್‌ ನಂಬ್ರ ತಿಳಿಯದೇ ಇದ್ದು ದಿನಾಂಕ 02/07/2021 ರಂದು ಮೋಟಾರು ಸೈಕಲ್‌ ಸವಾರನು ಆಸ್ಪತ್ರೆಗೆ ಬಂದು ತನ್ನ ಮೋಟಾರು ಸೈಕಲ್‌ ನಂಬ್ರ ಕೆಎ-20-ಇಹೆಚ್-9001 ಆಗಿದ್ದು ಈ ಅಪಘಾತಕ್ಕೆ ತಾನೇ ಕಾರಣನೆಂದು ತಿಳಿಸಿದ್ದು ವಿಳಂಬವಾಗಿ ದೂರು ನೀಡಿರುವುದಾಗಿದೆ. ಅಪಘಾತ ಪಡಿಸಿದ ಮೋಟಾರು ಸೈಕಲ್‌ ಸವಾರನ  ಹೆಸರು ಸುಬ್ರಹ್ಮಣ್ಯ ಆಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 112/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 02/07/2021 ರಂದು ಪಿರ್ಯಾದಿದಾರರಾಧ ನಾಗರಾಜ (45) ತಂದೆ; ಜಗದೀಶ ವಾಸ; ಅಪ್ಪಯ್ಯನ ಮನೆ,ಪಡುವರಿ ಗ್ರಾಮ, ಬೈಂದೂರು ಇವರ ಲಾರಿಯನ್ನು ಕೊಲ್ಲೂರು ಕಡೆಯಿಂದ ಅರೆಹೊಳೆ ಬೈಪಾಸ್ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಸಮಯ ಸುಮಾರು 12:00 ಗಂಟೆಗೆ ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ರೈಲ್ವೆ ಬ್ರಿಡ್ಜ್ ಸಮೀಪ ಲಾರಿಯ ಎದುರುಗಡೆಯಿಂದ ಓರ್ವ ಮೋಟಾರ್ ಸೈಕಲ್ ಸವಾರನು ಸಹ ಸವಾರನನ್ನು ಕುಳ್ಳಿರಿಸಿಕೊಂಡು ಅರೆಹೊಳೆ ಬೈಪಾಸ್ ಕಡೆಗೆ ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮೋಟಾರು ಸೈಕಲ್ ಗೆ ಒಂದು ನಾಯಿ ಅಡ್ಡ ಬಂದಿದ್ದು ಅದನ್ನು ತಪ್ಪಿಸುವ ಭರದಲ್ಲಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್‌ ಸ್ಕೀಡ್ ಆಗಿ ಮೋಟಾರ್ ಸೈಕಲ್ ಸವಾರ, ಸಹ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಅದರ ಪರಿಣಾಮ ಮೋಟಾರ್ ಸೈಕಲ್ ಸವಾರನಿಗೆ ಕೈ ಹಾಗೂ ಮೈಗೆ ತರಚಿದ ಗಾಯವಾಗಿದ್ದು, ಸಹ ಸವಾರನಿಗೆ ಎಡ ಕಾಲಿನ ಮೂಳೆ ಜಖಂ ಉಂಟಾಗಿರುತ್ತದೆ. ನಾಗಾರಾಜ ರವರು ಮೋಟಾರ್ ಸೈಕಲ್ ಸವಾರನ  ಹೆಸರು ಕೇಳಲಾಗಿ ಸಜಿ ಕುಮಾರ ಹಾಗೂ ಸಹ ಸವಾರನ ಹೆಸರು ಸೈಜು ಎಂಬುದಾಗಿದ್ದು ನಂತರ ಆಕ್ಟಿವ್ ಹೊಂಡಾ ಮೋಟಾರ್ ಸೈಕಲ್ ನಂಬ್ರ ನೋಡಲಾಗಿ ಕೆಎ-20-ಇಇ-0885 ನೇದ್ದಾಗಿರುತ್ತದೆ. ಅಲ್ಲದೇ ಗಾಯಳುಗಳನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕಳುಹಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 113/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾಧ ಶ್ರೀಮತಿ ಹೇಮಲತಾ (36) ಗಂಡ: ರವಿ ಸಾಲ್ಯಾನ್ ವಾಸ: ಪಡುಮನೆ, ಪರಪ್ಪಾಡಿ ನಿಟ್ಟೆ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರ ಪತಿ ರವಿ ಸಾಲ್ಯಾನ್ (50) ಇವರು ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಪರಪ್ಪಾಡಿ ಪಡುಮನೆ ಎಂಬಲ್ಲಿ ವಾಸ ಮಾಡಿಕೊಂಡಿದ್ದರು.  ಇವರ ಪತಿ  ಆರ್ಥಿಕ ಮುಗ್ಗಟ್ಟಿನಿಂದ ಇದ್ದುದು ಅಲ್ಲದೇ ಕಿವಿಯೂ ಕೇಳದೇ ಇದ್ದುದರಿಂದ ಮನನೊಂದು ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 02/07/2021 ರಂದು 12:00 ಗಂಟೆಯಿಂದ 13:45 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಬಳಿಯ ಹಾಡಿಯ ಕಾಟು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 20/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-07-2021 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080