ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

 • ಮಲ್ಪೆ: ದಿನಾಂಕ: 02-07-2021 ಪಿರ್ಯಾಧಿ ಗುಲ್ಸಾನ್  ಭಾನು ಇವರು  ಮನೆಯಲ್ಲಿ ಇರುವಾಗ ನೆರೆಕೆರೆಯರಾದ   ಜೊಯಿಸನ್  ಡಿಸೋಜ, ಪ್ರಮೋದ್ , ಪ್ರತಾಪ್ ರವರುಗಳು ಮಾಸ್ಕ ಹಾಕದೇ  ತಿರುಗಾಡುತ್ತಿದ್ದ ವಿಚಾರದಲ್ಲಿ  ಪಿರ್ಯಾದಿದಾರರ ತಾಯಿ ಬುದ್ದಿವಾದ ಹೇಳಿದ್ದು  ಅದಕ್ಕೆ  ಕೋಪಕೊಂಡ ಆರೋಪಿತರು  ಪಿರ್ಯಾದಿದಾರರ  ತಂದೆಯ ಮೊಬೈಲ್ ಗೆ  ರಾತ್ರಿ 8:38  ಗಂಟೆಗೆ ಕರೆ ಮಾಡಿ  ಬಾಯಿ ಬಂದಂತೆ ಅವಾಚ್ಯ ಶಬ್ದಗಳಿಂದ  ಬೈದು  ತಕ್ಷಣ   KA  20 MA 0448  ನೇ ಕಾರಿನಲ್ಲಿ ಬಂದು ಪಿರ್ಯಾದಿದಾರರ ಮನೆ ಬಳಿ ನಿಲ್ಲಿಸಿ ಪಿರ್ಯಾಧಿದಾರರ ಮನೆಗೆ  ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ಮಗನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಸಿದಾಗ ಪಿರ್ಯಾದಿದಾರರ ಮನೆಯವರು ಪ್ರಶ್ನಿಸಿದಾಗ  ಜೊಯಿಸನ್  ಡಿಸೋಜನು ಪಿರ್ಯಾದಿದಾರರ  ತಮ್ಮನಿಗೆ ಕೈಯಿಂದ ಹೊಡೆದು ಹಲ್ಲೆ ಬೈದು  ಕೊಲ್ಲುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82/2021 ಕಲಂ: 447,448,323,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

 • ಕೋಟ: ಫಿರ್ಯಾದಿ ಕೆ.ಜಾಹ್ನವಿ ಮಯ್ಯ ಇವರಿಗೆ ಗಿಳಿಯಾರು ಗ್ರಾಮದಲ್ಲಿ ಸರ್ವೆ ನಂಬ್ರ 190-4/B2ನೇದರಲ್ಲಿ ಒಟ್ಟು 2 ಎಕರೆ ಜಮೀನು ಇದ್ದು  ಕುಟುಂಬಸ್ಥರ ಹೆಸರಿನಲ್ಲಿದ್ದು ಪಾಲಾಗಿರುವುದಿಲ್ಲ. ಪಿರ್ಯಾದಿದಾರರ ಮನೆಯ ಪಕ್ಕದಲ್ಲಿ ವಾಸವಾಗಿರುವ ಕುಶಲ ಶೆಟ್ಟಿಯವರು  ದಿನಾಂಕ 01/07/2021 ರಂದು ಬೆಳಿಗ್ಗೆ ಸುಮಾರು 11.00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಜಮೀನಿಗೆ ಹೊಂದಿಕೊಂಡಂತೆ ಇರುವ ಹಿಂದಿನ ಕಾಲದಿಂದಲೂ ನಡೆದಾಡಿಕೊಂಡಿರುವ ಹಾಗೂ ನೀರು ಹೋಗುವ ತೋಡನ್ನು ಅತಿಕ್ರಮವಾಗಿ ಒತ್ತುವರಿ ಮಾಡಿ ಓಣಿಯನ್ನು ಮುಚ್ಚಿ ಪಿರ್ಯಾದಿದಾರರ ಜಾಗದಲ್ಲಿ ಆವರಣ ಗೋಡೆಯನ್ನು ಕಟ್ಟಲು ಪ್ರಾರಂಭಿಸಿರುತ್ತಾರೆ. ಅಲ್ಲದೇ ನೀರು ಹೋಗಲು ಹಾಕಿದ ಪಿವಿಸಿ ಪೈಪನ್ನು ಕಿತ್ತು ಬಿಸಾಡಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು ಕೇಳಿದಾಗ ಪಿರ್ಯಾದಿದಾರರಿಗೆ ಮತ್ತು ಅವರ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈದು, ನಮ್ಮ ಕೆಲಸಕ್ಕೆ ಅಡ್ಡಿಪಡಿಸಲು ಬಂದರೆ  ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ  ಹಾಕಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 131/2021 ಕಲಂ: 447.427.504.506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ:: ಫಿರ್ಯಾದಿ ನಾಗಪ್ಪ  ಪೂಜಾರಿ ಇವರು ಹೆಬ್ರಿ ತಾಲೂಕಿನ  ಬೆಳ್ವೆ  ಗ್ರಾಮದ  ಸ.ನಂ. 134-5 ರಲ್ಲಿ 1.28  ಎಕ್ರೆ ಜಮೀನನ್ನು ಶ್ರೀಮತಿ ಅಮೀನಾಭಿ  ಎಂಬುವರಿಂದ ದಿನಾಂಕ. 23.03.2003 ರಲ್ಲಿ ಕರಾರಿನಂತೆ ಕ್ರಯ ಮಾಡಿರುತ್ತಾರೆ, ಸದ್ರಿ ಜಾಗವು ಪಿರ್ಯಾದಿದಾರರ  ಸ್ವಾದೀನದಲ್ಲಿ  ಇದ್ದು, ಅದರಲ್ಲಿ  ಮನೆ , ಬಾವಿ  ಹಾಗೂ ತೋಟ  ಮಾಡಿಕೊಂಡು  ವಾಸವಾಗಿರುತ್ತಾರೆ,  ಜಾಗದ  ಕರಾರು  ಮಾಡುವ ಸಮಯ  ರಿಜಿಸ್ತ್ರಿ ಮಾಡಲು 15 ವರ್ಷದ ಕಾಲ ಮಿತಿ ಇರುವ ಕಾರಣ  ರಿಜಿಸ್ತ್ರಿ ವೀಲು ನಾಮೆ ಮಾಡಿಕೊಟ್ಟಿರುತ್ತಾರೆ, ಆ ಬಳಿಕ ಅವರು 1 ನೇ ಆರೋಪಿ ಹಂಸ  ಪ್ರಾಯ 50 ವರ್ಷ ತಂದೆ  ಆಲೀ ಸಾಹೇಬ ವಾಸ. ಬೊಳ್ಳಕಟ್ಟೆ  ಗುಲ್ವಾಡಿ  ಗ್ರಾಮ ಕುಂದಾಪುರ  ತಾಲೂಕು  ಈತನೊಂದಿಗೆ  ಆತನ ಮನೆಯಲ್ಲಿ ವಾಸವಾಗಿರುತ್ತಾರೆ,  ಶ್ರೀಮತಿ. ಅಮೀನಾಭಿ ಇವರಲ್ಲಿ ಜಾಗ ರಿಜಿಸ್ತ್ರಿ  ಮಾಡಿಕೊಡಲು  ತಿಳಿಸಿದಾಗ ಅವರು  ಅನಾರೋಗ್ಯದ  ಬಗ್ಗೆ   ತಿಳಿಸಿ  ಜಾಗವನ್ನು ಫಿರ್ಯಾದುದಾರರ ಹೆಸರಿಗೆ ರಿಜಿಸ್ತ್ರಿ ಮಾಡಿಕೊಟ್ಟಿರುವುದಿಲ್ಲ,  ಸದ್ರಿ ಆಸ್ತಿಯನ್ನು  ಫಿರ್ಯಾದುದಾರರ ಗಮನಕ್ಕೆ ಬಾರದಂತೆ  1 ನೇ   ಆರೋಪಿ ಯು    2 ನೇ  ಆರೋಪಿ ರಂಜೀತ್  ಜೆ. ಕುಂದರ್,  ಪ್ರಾಯ 38 ವರ್ಷ  ತಂದೆ, ಜಗನ್ನಾಥ  ಪೂಜಾರಿ ವಾಸ, ಬಡಗುಬೆಟ್ಟು ಗ್ರಾಮ  ಪರ್ಕಳ  ಉಡುಪಿ ತಾಲೂಕು ಈತನೊಂದಿಗೆ ಸೇರಿ ದಿನಾಂಕ 08.12.2020  ರಂದು  3  ನೇ  ಆರೋಪಿ  ಶ್ರೀಮತಿ  ರೇಷ್ಮಾ ಪ್ರಾಯ 35 ವರ್ಷ ತಂದೆ, ರಂಜೀತ್   ಕುಮಾರ್  ವಾಸ, ಬಡಗುಬೆಟ್ಟು ಗ್ರಾಮ  ಪರ್ಕಳ  ಉಡುಪಿ ತಾಲೂಕು ಇವರ ಹೆಸರಿಗೆ   ಸದ್ರಿ ಜಾಗವನ್ನು ರಿಜಿಸ್ತ್ರಿ ಮಾಡಿಸಿಕೊಟ್ಟು  ಫಿರ್ಯಾದುದಾರರಿಗೆ ಮೋಸ  ಮಾಡಿರುತ್ತಾರೆ, ಅಲ್ಲದೆ  ಆರೋಪಿಗಳು ದಿನಾಂಕ  26.03.2021  ರಂದು  ಮೇಲೆ  ನಮೂದು    ಮಾಡಿದ   ಫಿರ್ಯಾದುದಾರರ  ಜಾಗಕ್ಕೆ  ಬಂದು   ದಮ್ಕಿ  ಕೂಡ  ಹಾಕಿ  ಹೋಗಿರುತ್ತಾರೆ,    ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2021 ಕಲಂ: 423,420, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣಗಳು

 • ಗಂಗೊಳ್ಳಿ: ಫಿರ್ಯಾದಿ ನಾಗೇಶ ಇವರ ತಾಯಿ ಚಂದು ಪೂಜಾರ್ತಿ (65 ವರ್ಷ) ಎಂಬುವವರು ದಿನಾಂಕ 02/07/2021 ರಂದು ಬೆಳಿಗ್ಗೆ ಸುಮಾರು 11:30 ಗಂಟೆಗೆ ಏಡಿ ಹಿಡಿಯುವ ಸಲುವಾಗಿ ಹಡವು ಗ್ರಾಮದ ಸೌಪರ್ಣಿಕ ಹೊಳೆಯಲ್ಲಿ ಅಟ್ಟೆ ಬಲೆ ಎತ್ತಲು ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು, ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು ಅವರ ಮೃತ ದೇಹವು ಈ ದಿನ ದಿನಾಂಕ 03/07/2021 ರಂದು ಬೆಳಿಗ್ಗೆ 8:30 ಗಂಟೆಗೆ ಸೌಪರ್ಣಿಕ ಹೊಳೆಯಲ್ಲಿ ದೊರೆತಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 03-07-2021 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ