ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಕೆ.ಆರ್ ಪ್ರವೀಣ್ ಕುಮಾರ್ (28) ,ತಂದೆ: ಕೆ.ಆರ್ ರತ್ನಾಕರ್ ಭಟ್, ವಾಸ: ಬಣ್ಣು ಮನೆ ಅರಳಗೋಡು ಸಾಗರ ಶಿವಮೊಗ್ಗ ಜಿಲ್ಲೆ‌  ಇವರು ದಿನಾಂಕ 02/06/2022 ರಂದು ತನ್ನ KA-20-ME-2377ನೇ ನಂಬ್ರದ ಕಾರನ್ನು ಉಡುಪಿ ಗಾಂಧಿ ಆಸ್ಪತ್ರೆ ಕಡೆಯಿಂದ ಕರಾವಳಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 169 (ಎ)ರಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ 12:00 ಗಂಟೆಗೆ ಶಿರಿಬೀಡು ಜಂಕ್ಷನ್ ಬಳಿ ತಲುಪುವಾಗ ವಾಹನಗಳು ನಿಂತಿದುದ್ದರಿಂದ ಕಾರನ್ನು ನಿಲ್ಲಿಸಿದ್ದು ಹಿಂದಿನಿಂದ KA-20-MC-6979ನೇ ಕಾರು ಚಾಲಕಿ ಅನುಷಾ ಎಂಬುವವರು ಸಿ.ಟಿ ಬಸ್ ನಿಲ್ದಾಣದ ಕಡೆಯಿಂದ ಕರಾವಳಿ ಕಡೆಗೆ ತನ್ನ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ನಿಲ್ಲಿಸಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಜಖಂಗೊಂಡಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ದಿನೇಶ ಶೆಟ್ಟಿ (40), ತಂದೆ: ವಿಠಲ ಶೆಟ್ಟಿ, ವಾಸ: ಹರ್ಕಾಡಿ ಮಕ್ಕಿಮನೆ  ಕಕ್ಕುಂಜೆ ಗ್ರಾಮ ಬ್ರಹ್ಮಾವರ ತಾಲೂಕು ಇವರ ಬಾವ ಸುರೇಂದ್ರ ಶೆಟ್ಟಿ (35) ರವರು ಮೊದಲು ಹೊಟೆಲ್ ಕೆಲಸ ಮಾಡಿಕೊಂಡಿದ್ದು ಈ ಬಗ್ಗೆ 7-8 ವರ್ಷಗಳಿಂದ  ಮಾನಸಿಕವಾಗಿ ಅಸ್ವಸ್ಥರಾಗಿದ್ದು ಈ ಬಗ್ಗೆ  ಕುಂದಾಪುರ ಮಾತಾ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದು ಇತ್ತೀಚೆಗೆ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದು ಮಾನಸಿಕ ಖಿನ್ನತೆಯಿಂದ ಇದ್ದರು.  ದಿನಾಂಕ 02/06/2022 ರಂದು ಬೆಳಿಗ್ಗೆ ಚಹಾ ಕುಡಿದು ಮನೆಯಲ್ಲಿದ್ದವರು ಮಾನಸಿಕ ಖಿನ್ನತೆಯಿಂದ  ಜೀವನದಲ್ಲಿ ಜಿಗುಪ್ಸೆಗೊಂಡು 12:30 ಗಂಟೆಗೆ ಮನೆಯ ಬಾವಿಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 21 /2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಕೆ. ದೀಪಕ್ ಭಟ್ (37), ತಂದೆ: ಕೆ ದಿನೇಶ್ ಭಟ್, ವಾಸ: ಶ್ರೀನಿವಾಸ ಕಲ್ಯಾಣ ಮಂಟಪದ ಬಳಿ, ಮಠದ ಬೆಟ್ಟು, ಮುಖ್ಯರಸ್ತೆ, ಕಾರ್ಕಳ ಇವರು ಕಾರ್ಕಳ ಕಸಬಾ ಗ್ರಾಮದ ಡಾ ಟಿ ಎಂ ಎ ಪೈ ಆಸ್ಪತ್ರೆಯ ಎದುರು ಇರುವ ಮಂಜುಶ್ರೀ ಎಂಬ ಕಟ್ಟಡದಲ್ಲಿ ಧ್ವನಿ ಎಂಟರ್ ಪ್ರೈಸಸ್ ಎಂಬ ಹಾರ್ಡ್ ವೇರ್ ಅಂಗಡಿಯನ್ನು ಇಟ್ಟುಕೊಂಡಿದ್ದು ದಿನಾಂಕ 02/06/2022 ರಂದು ಬೆಳಿಗ್ಗೆ ಮಂಗಳೂರಿಗೆ ಹೋಗಿದ್ದು ಅಂಗಡಿಯಲ್ಲಿ ಕೆಲಸದವರಾದ ಅಶೋಕ ಎಂಬುವವರು ಇದ್ದರು, ಮಧ್ಯಾಹ್ನ 2:20 ಗಂಟೆಗೆ ಅಶೋಕ ರವರು ಫೋನ್ ಮಾಡಿ ತೊಂದರೆಯಾಗಿದ್ದು ಕೂಡಲೇ ಬರುವಂತೆ ತಿಳಿಸಿದ್ದು ಪಿರ್ಯಾದಿದಾರರು ಮಂಗಳೂರಿನಿಂದ ಅಂಗಡಿಗೆ ಬಂದು ಅಶೋಕರವರಲ್ಲಿ ವಿಚಾರಿಸಿದಾಗ ಮಧ್ಯಾಹ್ನ 14:00 ಗಂಟೆಗೆ ಇಬ್ಬರು ವ್ಯಕ್ತಿಗಳು ಅಂಗಡಿಗೆ ಬಂದು 4 ಚೀಲ ಸಿಮೆಂಟ್  ಬೇಕಾಗಿದ್ದು  ಅಂಗಡಿಯ ಪಕ್ಕದಲ್ಲಿರುವ ಇಂಚರ ಎಂಬ ಮನೆಗೆ ಹಾಕುವಂತೆ ತಿಳಿಸಿದ್ದು  ಅಶೋಕರವರು ಸಿಮೆಂಟ್ ಚೀಲವನ್ನು ಇಂಚರ ಎಂಬ ಮನೆಗೆ  ಹಾಕಿ ಬಂದಾಗ ಅಂಗಡಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಇರಲಿಲ್ಲ. ಅಂಗಡಿಯ  ಒಳಗೆ ನೋಡಿದಾಗ ಮೇಜಿನ ಡ್ರಾವರನ್ನು ಒಡೆದಿದ್ದು  ವ್ಯಕ್ತಿಗಳು ಮೋಸ ಮಾಡುವ ಉದ್ದೇಶದಿಂದ ಅಶೋಕರವರನ್ನು ಅಂಗಡಿಯಿಂದ ಹೊರಗೆ ಕಳುಹಿಸಿ ಯಾವುದೋ ಆಯುಧದಿಂದ  ಮೇಜಿನ ಡ್ರಾವರನ್ನು ಒಡೆದು ಅದರೊಳಗಿದ್ದ ನಗದು ರೂಪಾಯಿ 1,45,000/ ರೂಪಾಯಿ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 82/2022 ಕಲಂ: 379, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಗಿರಿಜಾ (35), ಗಂಡ:ರಮೇಶ್, ವಾಸ: ಪರನೀರು ದರ್ಖಾಸು ಹೌಸ್, ಪರಪ್ಪಾಡಿ, ನಲ್ಲೂರು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ನಲ್ಲೂರು ಗ್ರಾಮದ ಪ್ರತಿಮಾ, ಸರಿತಾ ಹಾಗೂ ಸುಧೀರ್ ರವರೊಂದಿಗೆ ಮುಡಾರು ಗ್ರಾಮ ಪಂಚಾಯತ್ ಗೆ ಸಂಬಂಧಿಸಿದ ಎಸ್,ಎಲ್,ಆರ್,ಎಮ್ ಘಟಕದಲ್ಲಿ ಕಸ ವಿಲೇವಾರಿ ಕೆಲಸ ಮಾಡಿಕೊಂಡಿದ್ದು ಕಸವಿಲೇವಾರಿ ಕೆಲಸದ ಬಗ್ಗೆ ಮುಡಾರು ಗ್ರಾಮ ಪಂಚಾಯತ್ ನ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಮೇಶ ಹಾಗೂ ಎಸ್,ಎಲ್,ಆರ್,ಎಮ್ ಘಟಕದ ಮೇಲ್ವಿಚಾರಕಿ ಶ್ರೀಮತಿ ಮಾಧವಿ ವಿನಾಕಾರಣ ಅತ್ರಪ್ತಿ  ವ್ಯಕ್ತಪಡಿಸಿ ಪಿರ್ಯಾದಿದಾರರಿಗೆ ಹಾಗೂ ಅವರ ಸಹೋದ್ಯೋಗಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದು ಪಿರ್ಯಾದಿದಾರರು ಸಂಸಾರವನ್ನು ಸಾಕುವ ಉದ್ದೇಶದಿಂದ ಇದನ್ನೆಲ್ಲಾ ತಡೆದುಕೊಂಡಿದ್ದು ಕಳೆದ ಎರಡು ಮೂರು ಮೀಟಿಂಗುಗಳಲ್ಲಿ ಸಾರ್ವಜನಿಕರು ಹಾಗೂ ಪಂಚಾಯತ್ ಸದಸ್ಯರ ಸಮಕ್ಷಮದಲ್ಲಿ  ಉದ್ಯೋಗದ ಬಗ್ಗೆ ಅತ್ರಪ್ತಿ ವ್ಯಕ್ತಪಡಿಸಿ ಅವಹೇಳನ ಮಾಡಿದ್ದು ಅಲ್ಲದೇ ದಿನಾಂಕ 31/05/2022 ರಂದು ಬೆಳಿಗ್ಗೆ 11:45 ಗಂಟೆಗೆ ಎಸ್,ಎಲ್,ಆರ್,ಎಮ್ ಘಟಕದ ಮೀಟಿಂಗ್ ಕರೆದು ಆರೋಪಿಗಳಿಬ್ಬರೂ ಸೇರಿ ಪಿರ್ಯಾದಿದಾರರು ಹಾಗೂ ಉಳಿದ ಮೂವರಿಗೆ ನೀವು 04 ಜನ ಸರಿಯಾಗಿ ಕಸ ಮತ್ತು ಗಲೀಜು ವಸ್ತುಗಳನ್ನು ವಿಲೇವಾರಿ ಮಾಡುತ್ತಿಲ್ಲ  ಎಂದು ನಿಂದನೆ ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 75/2022 ಕಲಂ: 504 ಜೊತೆಗೆ 34 ಐಪಿಸಿ ಹಾಗೂ ಕಲಂ: 3 (1) (r) (s) SC ST Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 31/05/2022 ರಂದು ಬೆಳಗ್ಗೆ ಶ್ರೀಶೈಲ ಮುರಗೋಡ, ಪೊಲೀಸ್‌ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಏಣಗುಡ್ಡೆ  ಗ್ರಾಮದ ಫಾರೆಸ್ಟ್ ಗೇಟ್ ಹತ್ತಿರ ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡು ಬಂದಿದ್ದು ಆತನು ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಅವನ ಬಳಿ ಹೋಗಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವನು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ ವಿಳಾಸ ತಿಳಿದುಕೊಳ್ಳಲಾಗಿ ಆತನ ಹೆಸರು ಅಶ್ಲೇಷ್ ಎ . ಕೋಟ್ಯಾನ್ (22), ತಂದೆ: ಅಣುರಾಜ್ ಕೋಟ್ಯಾನ್, ವಾಸ: ಅಗ್ರಹಾರ  ಏಣಗುಡ್ಡೆ ಗ್ರಾಮ ಎಂದು ತಿಳಿಸಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಯ ಬಗ್ಗೆ  ಪ್ರೊಫೆಸರ್ ಅಂಡ್ ಹೆಡ್  ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ  ಇವರ  ಮುಂದೆ ಹಾಜರು ಪಡಿಸಿದ್ದು, ಪರೀಕ್ಷಿಸಿದ ವೈದ್ಯರು ದಿನಾಂಕ 02/06/2022 ರಂದು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54/2022 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ದಿನಾಂಕ 02/06/2022 ರಂದು ಪ್ರಕಾಶ್, ವೃತ್ತ ನಿರೀಕ್ಷಕರು, ಕಾಪು ವೃತ್ತ, ಕಾಪು, ಉಡುಪಿ ಜಿಲ್ಲೆ ಇವರಿಗೆ  ಪಡುಬಿದ್ರಿ ಠಾಣಾ ವ್ಯಾಪ್ತಿಯ ಕಾಪು ತಾಲೂಕು ಬಡಾ ಗ್ರಾಮದ ಉಚ್ಚಿಲ ಭಾಸ್ಕರ ನಗರ ಎಂಬಲ್ಲಿನ  ಸಾಬನ್ ಎಂಬಾತನ ಮನೆಯಲ್ಲಿ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂಬುವುದಾಗಿ ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದಾಗ ಮನೆಯ ಉತ್ತರ ಬದಿ ಟಾರ್ಪಾಲಿ ಮರೆ ಇರುವ ಕಬ್ಬಿಣದ  ಶೀಟಿನ  ಮಾಡಿನ  ಕೋಣೆಯಲ್ಲಿ ಸತ್ತ ದನ ಇದ್ದು, ಅದರ  ಸಮೀಪ  ಮಾಂಸವನ್ನು ರಾಶಿ ಮಾಡಿ ಇಟ್ಟಿರುವುದು, ಇಬ್ಬರು  ವ್ಯಕ್ತಿಗಳು  ಕೈಯ್ಯಲ್ಲಿ  ಮಚ್ಚನ್ನು ಹಿಡಿದುಕೊಂಡು  ಮರದ ಕೊರಡಿನ ಮೇಲೆ ಮಾಂಸವನ್ನು ತುಂಡು ಮಾಡುತ್ತಿದ್ದು, ಇನ್ನು ಇಬ್ಬರು ತುಂಡರಿಸಿದ ಮಾಂಸವನ್ನು ಪಾಲಿಥಿನ್ ಪ್ಯಾಕೇಟ್ ಗಳಿಗೆ ತುಂಬುತ್ತಾ ಇರುವುದು, ಇನ್ನೊಬ್ಬ ವ್ಯಕ್ತಿ  ಪಾಲಿಥಿನ್ ಕವರ್ ನಲ್ಲಿರುವ ಮಾಂಸವನ್ನು ತೂಕದ ಬಟ್ಟಿನಲ್ಲಿ ತೂಕ ಮಾಡುತ್ತಿರುವುದು ಕಂಡು ಬಂದಿರುತ್ತದೆ. ದಾಳಿ ಸಮಯ ಮಾಂಸವನ್ನು ತೂಕ ಮಾಡುತ್ತದ್ದ ವ್ಯಕ್ತಿಯು ಓಡಿ ಹೋಗಿದ್ದು, ಅಲ್ಲಿದ್ದ 3 ಜನ ಅರೋಪಿತರಾದ 1) ರಫೀಕ್ @ ದಿವು ರಫೀಕ್, ತಂದೆ:  ಸೈಯ್ಯದ್, ವಾಸ:  ಫಣಿಯೂರು ರೈಲ್ವೇ  ಬ್ರಿಡ್ಜ್ ಬಳಿ, ಉಚ್ಚಿಲ, ಬಡಾ ಗ್ರಾಮ, ಕಾಪು ತಾಲೂಕು, 2] ಮೊಹಮ್ಮದ್ ರಫೀಕ್ (44),  ತಂದೆ: ಅಬ್ದುಲ್ಲಾ, ವಾಸ:  ಸೂರ್ಯಗುಡ್ಡೆ,  ಕಳತ್ತೂರು, ಕಳತ್ತೂರು ಅಂಚೆ ಮತ್ತು  ಗ್ರಾಮ, ಕಾಪು  ತಾಲೂಕು, 3]ಇಲಿಯಾಸ್  ಅಬ್ದುಲ್ ಅಜೀಜ್ (38), ತಂದೆ: ಅಬ್ದುಲ್ ಅಜೀಜ್, ವಾಸ: ಇಲಿಯಾಸ್ ಮಂಜಿಲ್, ಸೂರ್ಯಗುಡ್ಡೆ,  ಕಳತ್ತೂರು, ಕಳತ್ತೂರು ಅಂಚೆ ಮತ್ತು  ಗ್ರಾಮ, ಕಾಪು  ತಾಲೂಕು ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕನಲ್ಲಿ ವಿಚಾರಿಸಿದಾಗ, ಓಡಿ ಹೋದವನು ರಫೀಕ್ @ ದಿವು ರಫೀಕ್, ತಂದೆ: ಸೈಯ್ಯದ್, ವಾಸ: ಫಣಿಯೂರು ರೈಲ್ವೇ  ಬ್ರಿಡ್ಜ್ ಬಳಿ, ಉಚ್ಚಿಲ ಎಂದು ತಿಳಿಸಿದ್ದು, ರಫೀಕ್ @ ದಿವು ರಫೀಕ್ ಹಾಗೂ ಸಾಬನ್‌ರವರು ಸೇರಿ ಈ ಮೊದಲು ತಮ್ಮಿಂದ ಕೃತ್ಯ ಮಾಡಿಸಿದ್ದು, ಈಗ ಎಲ್ಲರೂ ಒಟ್ಟಾಗಿ ಕೃತ್ಯ ನಡೆಸುತ್ತಿರುವುದಾಗಿ ತಿಳಿಸಿರುತ್ತಾರೆ. ನಂತರ ಕೃತ್ಯಕ್ಕೆ ಬಳಕೆಯಾದ 1] ಚರ್ಮ ಸುಲಿದ ದನದ ಮುಖ, ಕೋಡುಗಳಿರುವ ಕಪ್ಪು ಬಣ್ಣದ ಹೆಣ್ಣು ದನದ ಮುಖದ ಚರ್ಮ, 3 ಗೊರಸುಗಳು, ಚರ್ಮ ಸುಲಿದ  ಚಿಕ್ಕ   ಕರುವಿನ ಮುಖ-2, ದನದ ಕರುವಿನ  ಕೆಳ ದವಡೆಗಳು- 2, ದಟ್ಟ  ಕಂದು ಬಣ್ಣದ ಗಂಡು ಕರುವಿನ ಚರ್ಮ ಇರುವ ಪ್ಲಾಸ್ಟಿಕ್ ಟ್ರೇ-1. 2] ಗೊರಸು ಸಹಿತ  ಇರುವ  ದಟ್ಟ  ಕಂದು  ಬಣ್ಣದ  ಗಂಡು  ಕರುವಿನ ಚರ್ಮ, ಕಪ್ಪು ಬಣ್ಣದ ದನದ ಚರ್ಮ ಮತ್ತು ಎರಡು ಕರುವಿನ ಕರುಳುಗಳನ್ನು  ತುಂಬಿಸಿ ಇಡಲಾಗಿರುವ ಪ್ಲಾಸ್ಟಿಕ್ ಟ್ರೇ-1. 3] ಕಂದು ಬಣ್ಣದ  ಸತ್ತ  ಹೆಣ್ಣು ದನ-1 4] ಹಳದಿ ಬಣ್ಣದ ಪ್ಲಾಸ್ಟಿಕ್ ಹಿಡಿಕೆಯ ಚೂರಿ-1,5] ಬಿಳಿ ಬಣ್ಣದ ಪ್ಲಾಸ್ಟಿಕ್ ಹಿಡಿಕೆಯ ಚೂರಿ-1, 6]  ಕಪ್ಪು ಬಣ್ಣದ ಪ್ಲಾಸ್ಟಿಕ್ ಹಿಡಿಕೆಯ ಚೂರಿ-1,7] ಸುಮಾರು 15 ಇಂಚು ಉದ್ದದ ಕಬ್ಬಿಣದ ಮಚ್ಚು (ಸತ್ತರ್)-1, 8] ಸುಮಾರು 14 ½ ಇಂಚು ಉದ್ದದ ಕಬ್ಬಿಣದ ಸತ್ತರ್ -1, 9] ಸುಮಾರು 16 ಇಂಚು ಉದ್ದದ ಕಬ್ಬಿಣದ ಸತ್ತರ್ -1, 10] ನೆಲದ ಮೇಲಿಟ್ಟು ತೂಗುವ ಕಬ್ಬಿಣದ ತಕ್ಕಡಿ-1,11] 2 ಕೆ.ಜಿಯ ತೂಕದ ಕಲ್ಲು-1, 1 ಕೆ.ಜಿಯ ತೂಕದ ಕಲ್ಲುಗಳು-3,12] ಸುಮಾರು 7 ಇಂಚು ಎತ್ತರ 40 ಇಂಚು ಸುತ್ತಳತೆಯ ಮರದ ಕೊರಡು-1, 13] ಸುಮಾರು 11 ಇಂಚು ಎತ್ತರ 44 ಇಂಚು ಸುತ್ತಳತೆಯ ಮರದ ಕೊರಡು-1, 14] ಸುಮಾರು 7 ½ ಅಡಿ ಉದ್ದದ, ದನಗಳನ್ನು ಕಟ್ಟಲು ಉಪಯೋಗಿಸುವ ಹಳೆಯ ನೈಲಾನ್ ಹಗ್ಗ-1 15] ಸುಮಾರು 7 ½ ಮೀಟರ್ ಉದ್ದದ, ದನಗಳನ್ನು ಕಟ್ಟಲು ಉಪಯೋಗಿಸುವ ಹಳೆಯ ನೈಲಾನ್ ಹಗ್ಗ-1, 16] ಸುಮಾರು 3 ½ ಮೀಟರ್ ಉದ್ದದ, ದನಗಳನ್ನು ಕಟ್ಟಲು ಉಪಯೋಗಿಸುವ ಹಳೆಯ ನೈಲಾನ್ ಹಗ್ಗ-1, 17] ಸುಮಾರು 10 ½ ಮೀಟರ್ ಉದ್ದದ, ದನಗಳನ್ನು ಕಟ್ಟಲು ಉಪಯೋಗಿಸುವ ಹಳೆಯ ನೈಲಾನ್ ಹಗ್ಗ-1, 18] ಸುಮಾರು 2 ಮೀಟರ್ ಉದ್ದದ,  ದನಗಳನ್ನು ಕಟ್ಟಲು ಉಪಯೋಗಿಸುವ ಹಳೆಯ ನೈಲಾನ್ ಹಗ್ಗ-1, 19] ದನದ ಮಾಂಸ 350 ಕೆ.ಜಿ, 20] ತಲಾ 1 ಕೆ.ಜಿ ಯಂತೆ ಪಾಲಿಥಿನ್ ಕವರ್ ಗಳಲ್ಲಿ ತುಂಬಿಸಿಟ್ಟ ದನದ ಮಾಂಸದ ಕಟ್ಟು-75. 21] ಖಾಲಿ ಪಾಲಿಥಿನ್ ಕವರ್ ಗಳಿರುವ ಕಟ್ಟು-1. 22] ಜೀವಂತ ಹೆಣ್ಣು ದನ-1. 23] ಆರೋಪಿ ಮಹಮ್ಮದ್ ರಫಿಕ್ ನು  ಸ್ಥಳಕ್ಕೆ ಬರಲು ಬಳಸಿದ್ದ ಕೆಎ-20-ಇಟಿ-9218 ನಂಬ್ರ ದ ಕಪ್ಪು ಬಣ್ಣದ ಹೋಂಡಾ ಡೆಸ್ಟೀನ್ 125 ಸ್ಕೂಟಿ-1. 24] ಮೊಬೈಲ್ ಪೋನ್‌ಗಳು-3 ನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಆರೋಪಿತರನ್ನು ಮತ್ತು ಸುಮಾರು 1,06,250/- ರೂಪಾಯಿ ಮೌಲ್ಯದ 425 ಕಿಲೋ ಗ್ರಾಮ್ ಮಾಂಸದ ಸಮೇತ ಸೊತ್ತುಗಳನ್ನು ವಶಪಡಿದಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 69/2022 ಕಲಂ: 11 (1) (ಎ), ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ 1960, ಮತ್ತು  ಕಲಂ:  4, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 03-06-2022 10:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080