ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ :, ಪಿರ್ಯಾಧಿ ಶ್ರೀಮತಿ ಜಗದಾಂಬ ಇವರ ತಾಯಿಯವರಾದ ಶಾರದ ರಾವ್ (75) ರವರು ದಿನಾಂಕ:01/06/2021 ರಂದು ಸಮಯ ಸುಮಾರು ಬೆಳಿಗ್ಗೆ  08:30 ಗಂಟೆಗೆ ತನ್ನ ಮನೆಯ ಎದುರಿನ ರಾ.ಹೆ. 169(ಎ) ರಸ್ತೆಯ ಆಚೆಗಿದ್ದ ಬಾಲಾಜಿ ಬೇಕರಿಯಿಂದ ಹಾಲನ್ನು ತರುವರೇ ಹೋಗಿದ್ದು, ಹಾಲನ್ನು ತೆಗೆದುಕೊಂಡು ವಾಪಾಸು ಮನೆಗೆ ಬರುವುದಕ್ಕಾಗಿ ರಸ್ತೆಯನ್ನು ದಾಟಿ ಮಣ್ಣು ರಸ್ತೆ ಬಳಿ ಬರುತ್ತಿದ್ದಂತೆ ಹೆಬ್ರಿ ಕಡೆಯಿಂದ KA-20-EK-7472  ನೇ  ಸ್ಕೂಟಿ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಮಣ್ಣು ರಸ್ತೆಯಲ್ಲಿದ್ದ ಪಿರ್ಯಾದಿದಾರರ ತಾಯಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರ ತಾಯಿಯವರ ಬಲಭುಜದ ಬಳಿ ಮೂಳೆ ಮುರಿತದ ತೀವ್ರ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಹೆಬ್ರಿ: ದಿನಾಂಕ:01/06/2021 ರಂದು ಬೆಳಿಗ್ಗೆಯ ಸಮಯ ಸುಧೀರ್ ಪೂಜಾರಿ ಇವರು ತನ್ನ ಬಾಬ್ತು KA.20.ER.1383 ನೇ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಪಾಂಡುಕಲ್ಲು ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗುತ್ತಿದ್ದು. ಅವರು ಸಮಯ ಸುಮಾರು ಬೆಳಿಗ್ಗೆ 08-30 ಗಂಟೆಗೆ ಕಳ್ತೂರು ಗ್ರಾಮದ ಸಂತೆಕಟ್ಟೆಯ ಕಲ್ಲೊಂಡ ಎಂಬಲ್ಲಿಗೆ ತಲುಪಿದಾಗ ಅವರ ಎದುರುಗಡೆಯಿಂದ ಅಂದರೆ ಸಂತೆಕಟ್ಟೆ ಕಡೆಯಿಂದ KA.19.N.35 ನೇ ಮಾರುತಿ ಕಾರನ್ನು ಅದರ ಚಾಲಕ ರವಿರಾಜ್ ಶೆಟ್ಟಿ ಇವರು ಅತೀ ವೇಗ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿ  ರಸ್ತೆಯ ಬಲಬದಿಗೆ ಬಂದು ಸುಧೀರ್ ಪೂಜಾರಿ ಇವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು. ಅವರ ಬಲತೊಡೆಯ ಬಳಿ ತೀವ್ರ ಸ್ವರೂಪದ ಗುದ್ದಿದ ನೋವಾಗಿದ್ದು. ಬಲಕಾಲಿನ ಗಂಟಿನ ಬಳಿ ಗುದ್ದಿದ ನೋವಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ:,279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣಗಳು

  • ಕಾಪು: ತಿಮ್ಮೇಶ ಬಿ. ಎನ್, ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ದಿನಾಂಕ 02.06.2021 ರಂದು ಸಿಬ್ಬಂದಿಯವರೊಂದಿಗೆ ದೇಶಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಸದ್ರಿ ಆದೇಶವನ್ನು ಪರಿಷ್ಕರಿಸಿ ದಿನಾಂಕ 10.05.2021 ರಂದು ಬೆಳಗ್ಗೆ 06.00 ಗಂಟೆಯಿಂದ ದಿನಾಂಕ 24.05.2021 ರ ಬೆಳಗ್ಗೆ 06.00 ಗಂಟೆಯವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಮತ್ತೆ ಸದ್ರಿ ಆದೇಶವನ್ನು ಪರಿಷ್ಕರಿಸಿ ದಿನಾಂಕ 24.05.2021 ರ ಬೆಳಗ್ಗೆ 06.00 ಗಂಟೆಯಿಂದ ದಿನಾಂಕ 07.06.2021 ರ ಬೆಳಗ್ಗೆ 06.00 ಗಂಟೆಯವರೆಗೆ ಲಾಕ್‌ಡೌನ್ ಘೋಷಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಅನಗತ್ಯವಾಗಿ ಓಡಾಟ ನಿಷೇಧಿಸಿದ್ದು,  ಆ  ಬಗ್ಗೆ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ 10.00 ಗಂಟೆಯ ಸಮಯಕ್ಕೆ ಊಳಿಯಾರಗೊಳಿ ಗ್ರಾಮದ ಕಾಪು ಬೀಚ್ ಮಲ್ಪೆ ಫೀಶ್‌‌ರಿಸ್ ರಸ್ತೆಯ ಯಾರ್ಡ್‌ ಬೀಚ್‌ನ ಕ್ರಾಸ್ ಹತ್ತಿರ  ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ  ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ  ಅನಗತ್ಯವಾಗಿ ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ  1) ಗ್ರೇ ಬಣ್ಣದ ಟಿವಿಎಸ್ ಕಂಪನಿಯ ಜುಪಿಟರ್ ಸ್ಕೂಟರ್‌ ನಂಬ್ರ ಕೆ.ಎ. 20 ಇ.ಪಿ. 5411 ನೇದರ ಸವಾರ ವಿನಯ ಸುವರ್ಣ ಪ್ರಾಯ : 43 ವರ್ಷ ತಂದೆ : ದಿ. ಕೃಷ್ಣಪ್ಪ ಸುವರ್ಣ ವಾಸ : ಮಹಾಲಿಂಗೇಶ್ವರ  ದೇವಸ್ಥಾನದ ಹತ್ತಿರ ಮೂಡಬೆಟ್ಟು ಗ್ರಾಮ ಕಾಪು ತಾಲೂಕು  ಉಡುಪಿ ಜಿಲ್ಲೆ 2) ಬಿಳಿ ಬಣ್ಣದ  ಟಿವಿಎಸ್ ಕಂಪನಿಯ ಜುಪಿಟರ್  ಸ್ಕೂಟರ್ ನಂಬರ್ KA 47 R 1097 ನೇದರ ಸವಾರ ಸಬ್ಲು ಇವರುಗಳ ಓಡಾಟದ ಕಾರಣವನ್ನು ವಿಚಾರಿಸಲಾಗಿ, ಯಾವುದೇ ತುರ್ತು ಕಾರಣವಿಲ್ಲದೇ  ಅನಗತ್ಯವಾಗಿ ಸಂಚರಿಸುವುದು ಕಂಡು ಬಂದಿರುತ್ತದೆ. ಸದ್ರಿ ಆರೋಪಿಗಳು  ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದರಿಂದ   ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 96/2021 ಕಲಂ 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿಷೇಧ ಇರುತ್ತದೆ, ಮಧು ಬಿ.ಇ ಪೊಲೀಸ್ ಉಪನಿರೀಕ್ಷಕರು (ಕಾ& ಸು) ಕಾರ್ಕಳ ನಗರ ಠಾಣೆ ಇವರು ದಿನಾಂಕ 02/06/2021 ರಂದು ಮದ್ಯಾಹ್ನ ಠಾಣಾ ಸಿಬ್ಬಂದಿಯವರೊಂದಿಗೆ ಕಾರ್ಕಳ ನಗರ ಠಾಣಾ ಸರಹದ್ದಿನ ಕಾರ್ಕಳ ತಾಲೂಕು  ಮಿಯ್ಯಾರು  ಗ್ರಾಮದ ಜೋಡುಕಟ್ಟೆ ಬಳಿ  ಸಾರ್ವಜನಿಕ ರಸ್ತೆಯಲ್ಲಿ ಮದ್ಯಾಹ್ನ 12:30 ಗಂಟೆಗೆ ಅನಗತ್ಯವಾಗಿ ವಾಹನಗಳ ಓಡಾಟದ ಬಗ್ಗೆ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಅನಗತ್ಯವಾಗಿ ಓಡಾಡುತ್ತಿದ್ದ KA20EC  6592 ನೇ  ನೊಂದಣಿ ಸಂಖ್ಯೆಯ   ಹಿರೋ ಕಂಪೆನಿ  ತಯಾರಿಕೆಯ ಫ್ಯಾಶನ್‌ ಪ್ರೋ ಮಾದರಿಯ ಕಪ್ಪು ಬಣ್ಣದಿಂದ  ಕೂಡಿದ  ಮೋಟಾರ್‌  ಸೈಕಲ್‌ ನ್ನು ತಡೆದು ನಿಲ್ಲಿಸಿ ಸವಾರ ಹರೀಶ ಪೂಜಾರಿ ಪ್ರಾಯ 49 ವರ್ಷ, ತಂದೆ: ದಿವಂಗತ ಮಹಾಬಲ ಪೂಜಾರಿ,ವಾಸ: ಆದಿಲಕ್ಷ್ಮೀ, ಮಿಯ್ಯಾರು ಮಸೀದಿ ಬಳಿ,ಮಿಯ್ಯಾರು ಗ್ರಾಮ ಮತ್ತು ಅಂಚೆ,ಕಾರ್ಕಳ ತಾಲೂಕು ಅವರಲ್ಲಿ ವಿಚಾರಿಸಲಾಗಿ ಸಮಂಜಸವಾಗಿ ಉತ್ತರಿಸದೇ ಇದ್ದುದ್ದಲ್ಲದೆ ಆಪಾದಿತನಿಗೆ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ಸರಕಾರ ಮತ್ತು ಜಿಲ್ಲಾಡಳಿತ ಆದೇಶ, ಕೋವಿಡ್ ನಿಯಮ ಉಲ್ಲಂಘಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 73/2021 ಕಲಂ 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಮಲ್ಪೆ: ದಿನಾಂಕ:02-06-2021 ರಂದು ಸಂಜೆ 18:00  ಗಂಟೆಗೆ ಸಕ್ಷಿವೇಲು.ಈ , ಪಿ.ಎಸ್.ಐ, ಮಲ್ಪೆ ಪೊಲೀಸ್ ಠಾಣೆ, ಇವರು ಮಲ್ಪೆ ಠಾಣಾ ಸರಹದ್ದಿನ ವಢಬಾಂಡೇಶ್ವರ  ಸರ್ಕಲ್ ಬಳಿ  ರಸ್ತೆಯಲ್ಲಿ ರೌಂಡ್ಸ್ ಸಮಯ   KA 20 EV 0975 ಮತ್ತು  KA 20ES 9987 ಸ್ಕೂಟರ್  ನ ಸವಾರರಾದ 1ನಮೃತ 2. ಲಕ್ಷ್ಮಣ ಕರ್ಕೆರ ಇವರುಗಳು ಸ್ಕೂಟರನ್ನು ಚಲಾಯಿಸಿಕೊಂಡು ಮಲ್ಪೆ ಬೀಚ್ ಕಡೆಯಿಂದ ಮಲ್ಪೆ ಜಂಕ್ಷನ್  ಕಡೆಗೆ ಬರುತ್ತಿದ್ದ. . ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆಯವರು ಜಿಲ್ಲೆಯಾದ್ಯಂತ ಕಲಂ 144(3) ಸಿಆರ್‌ಪಿಸಿ ಯಂತೆ ನಿಷೆದಾಜ್ಙೆ ಹೊರಡಿಸಿದ್ದು ಈ ಬಗ್ಗೆ ಆರೋಪಿತನು ಕೊರೊನಾ ಮಾರಾಣಾಂತಿಕ ಕಾಯಿಲೆ ಹರಡದಂತೆ ಮುಂಜಾಗೃತ ಕ್ರಮವಾಗಿ ಮುಖಕ್ಕೆ ಯಾವುದೇ ಮಾಸ್ಕ್ ಧರಿಸದೆ ಸ್ವೆಚ್ಚಾಚಾರದಿಂದ ತಿರುಗಾಡಿಕೊಂಡು ಮುಂಜಾಗೃತ ಕ್ರಮಕೈಗೊಳ್ಳದೆ ಬೇಜವಾಬ್ದಾರಿಯುತವಾಗಿ   ಸ್ಕೂಟರ್   ಸವಾರಿ  ಮಾಡಿಕೊಂಡಿದ್ದ ನಮೃತ್ ಮತ್ತು ಲಕ್ಷ್ಮಣ  ಇವರುಗಳು  ಕೊವಿಡ್ 19  ಸೋಂಕು ಸಾರ್ವಜನಿಕರಿಗೆ ಹರಡುವ ಸಂಭವವಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರದ ಸ್ಪಷ್ಟ ಆದೇಶವಿದ್ದರೂ ಸಹಾ ಆದೇಶವನ್ನು ಪಾಲಿಸದೆ ಕಾನೂನು ಉಲ್ಲಂಘಿಸಿರುವುದರಿಂದ ಸದ್ರಿ  ಆರೋಪಿತರನ್ನು ಹಾಗೂ  ಅವನು ತಿರುಗಾಡಲು ಉಪಯೋಗಿಸಿದ KA 20 EV 0975 ಮತ್ತು  KA 20ES 9987 ನೇ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿಷೇಧ ಇರುತ್ತದೆ, ದಾಮೋದರ ಕೆ ಬಿ ಪೊಲೀಸ್ ಉಪನಿರೀಕ್ಷಕರು (ಅಪರಾಧ) ಕಾರ್ಕಳ ನಗರ ಠಾಣೆ, ಇವರು ದಿನಾಂಕ 02.06.2021 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಕಾರ್ಕಳ ನಗರ ಠಾಣಾ ಸರಹದ್ದಿನ ಕುಕ್ಕಂದೂರು ಗ್ರಾಮದ  ಜೋಡುರಸ್ತೆ  ಬಳಿ  ಸಾರ್ವಜನಿಕ ರಸ್ತೆಯಲ್ಲಿ  16:00 ಗಂಟೆಗೆ ಅನಗತ್ಯವಾಗಿ ವಾಹನಗಳ ಓಡಾಟದ ಬಗ್ಗೆ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಅನಗತ್ಯವಾಗಿ ಓಡಾಡುತ್ತಿದ್ದ KA20EM 2206  ನೇ  ನೊಂದಣಿ ಸಂಖ್ಯೆಯ   ಟಿ.ವಿ.ಎಸ್‌. ಕಂಪೆನಿ  ತಯಾರಿಕೆಯ ಜುಪಿಟರ್‌ ಮಾದರಿಯ ದ್ವಿಚಕ್ರ ವಾಹನ ಹಾಗೂ KA20U 2579 ನೇ  ನೊಂದಣಿ ಸಂಖ್ಯೆಯ   ಹೀರೊ ಹೊಂಡಾ ಕಂಪೆನಿ  ತಯಾರಿಕೆಯ ಗ್ಲಾಮರ್‌ ಮಾದರಿಯ ಮೋಟಾರ್‌ ಸೈಕಲ್‌ನ್ನು  ತಡೆದು ನಿಲ್ಲಿಸಿ ಸದ್ರಿ ವಾಹನ ಸವಾರರಲ್ಲಿ  ವಿಚಾರಿಸಲಾಗಿ ಸಮಂಜಸವಾಗಿ ಉತ್ತರಿಸದೇ ಇದ್ದುದ್ದಲ್ಲದೆ   ಆಪಾದಿತರಿಗೆ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ಸರಕಾರ ಮತ್ತು ಜಿಲ್ಲಾಡಳಿತ ಆದೇಶ, ಕೋವಿಡ್ ನಿಯಮ ಉಲ್ಲಂಘಿಸಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಆಪಾದಿತ 1) ಮಹಮ್ಮದ್‌ ಅಶ್ಫಕ್‌ 2) ಮಂಜುನಾಥ ಇವರು ವಿರುದ್ದ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 74/2021 ಕಲಂ 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ: ದಿನಾಂಕ 02-06-2021 ರಂದು ಸಂತೋಷ ಬಿ.ಪಿ , ಪೊಲೀಸ್ ಉಪನಿರೀಕ್ಷಕರು (ಕಾ & ಸು), ಕೋಟ ಪೊಲೀಸ್‌  ಠಾಣೆ ಇವರು ಸಿಬ್ಬಂದಿಗಳೊಂದಿಗೆ  ಠಾಣಾ  ವ್ಯಾಪ್ತಿಯಲ್ಲಿ  ರೌಂಡ್ಸ್‌  ಕರ್ತವ್ಯದಲ್ಲಿರುವಾಗ 17-00 ಗಂಟೆಗೆ  ಬೀಟ್‌  ಸಿಬ್ಬಂದಿ  ನೀಡಿದ ಮಾಹಿತಿಯಂತೆ ಉಡುಪಿ ಜಿಲ್ಲೆ ಬ್ರಹ್ಮಾವರ  ತಾಲೂಕು ಪಾಂಡೇಶ್ವರ ಗ್ರಾಮದ ಮಧುರ ಬಾರ್‌ & ರೆಸ್ಟೋರೆಂಟ್‌ನ ಹಿಂಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶೇಖರ ಶೆಟ್ಟಿಗಾರ್‌ ರವರು ಮಧುರ ಬಾರ್‌ &  ರೆಸ್ಟೋರೆಂಟ್‌ ನಿಂದ ಮದ್ಯದ  ಟೆಟ್ರಾ ಪ್ಯಾಕ್‌ಗಳನ್ನು ಪಡೆದುಕೊಂಡು.  ಕೋವಿಡ್‌-19 ವೈರಾಣು ಪ್ರಯುಕ್ತ ಜಿಲ್ಲಾಡಳಿತದ ಆದೇಶದಂತೆ ಕರ್ಪ್ಯೂ ನಿಷೇಧಾಜ್ಞೆ ಸಂದರ್ಭದಲ್ಲಿ ಯಾವುದೇ ಪರವಾನಿಗೆ  ಇಲ್ಲದೆ  ಸದ್ರಿ ಮದ್ಯದ  ಟೆಟ್ರಾ  ಪ್ಯಾಕ್‌ಗಳನ್ನು  ಸ್ವಂತ  ಲಾಭದ  ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಾರಾಟ  ಮಾಡುತ್ತಿದ್ದನು.  ಗಮನಿಸಿದ್ದು  ಅಲ್ಲದೇ ಸಾರ್ವಜನಿಕರು ಆತನಿಂದ ಟೆಟ್ರಾ ಪ್ಯಾಕ್‌ಗಳನ್ನು  ಪಡೆದುಕೊಂಡು  ಅಲ್ಲಿಯೇ ಕಟ್‌ ಮಾಡಿ ಮದ್ಯವನ್ನು  ಪ್ಲಾಸ್ಟಿಕ್‌ ಲೋಟಗಳಿಗೆ ಹಾಕಿ ಕುಡಿದು ಖಾಲಿ ಟೆಟ್ರಾ ಪ್ಯಾಕ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಡುತ್ತಿದ್ದು,  ಸ್ಳಕ್ಕೆ 17:30 ಗಂಟೆಗೆ ದಾಳಿ ನಡೆಸಿ   ಸ್ಥಳದಲ್ಲಿದ್ದ   ಖಾಲಿ ಟೆಟ್ರಾ ಪ್ಯಾಕ್ -3, ಖಾಲಿ ಪ್ಲಾಸ್ಟಿಕ್  ಲೋಟ-4 ಹಾಗೂ  ಸ್ವಂತ ಲಾಭದ  ಉದ್ದೇಶದಿಂದ ಸಾರ್ವಜನಿಕರಿಗೆ ಮಾರಾಟ  ಮಾಡುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡು    ವಿಚಾರಿಸಿದಲ್ಲಿ  ಆತನು ತನ್ನ ಹೆಸರು ಶೇಖರ ಶೆಟ್ಟಿಗಾರ್‌ ಪ್ರಾಯ:41 ವರ್ಷ, ತಂದೆ:ದಿ. ಗೋಪಾಲ ಶೆಟ್ಟಿಗಾರ್‌, ವಾಸ: “ಹನಿ”,ಕುಂಬಾರಬೆಟ್ಟ, ಐರೋಡಿ ಗ್ರಾಮ, ಬ್ರಹ್ಮಾವರ ತಾಲೂಕು, ಎಂಬುವುದಾಗಿತಿಳಿಸಿದ್ದು  ಅಲ್ಲದೆ  ಅತನ ಬಳಿಯಿದ್ದ 1) Mysore Lancer 90 ml ಟೆಟ್ರಾ ಪ್ಯಾಕ್‌ - 10 2) Original Choice 90 ml ಟೆಟ್ರಾ ಪ್ಯಾಕ್‌ - 16 ಗಳಿದ್ದು, ಸದ್ರಿ ಮದ್ಯದ ಒಟ್ಟು ಪ್ರಮಾಣ 2.340 ಲೀಟರ್‌ ಆಗಿದ್ದು, ಮೌಲ್ಯ  913.38/- ರೂಪಾಯಿ ಆಗಿದ್ದು, ಮತ್ತು ಆತನ ಕಿಸೆಯಲ್ಲಿದ್ದ ಮಾರಾಟ ಮಾಡಿದ ಹಣ 310/- ರೂಪಾಯಿ ಇದ್ದು. ಸದ್ರಿ ಆರೋಪಿ,  ಸ್ವತ್ತುಗಳನ್ನು ಮಾರಾಟ ಮಾಡಿದ ನಗದು ಹಣವನ್ನು ಹಾಗೂ ಟೆಟ್ರಾ ಪ್ಯಾಕ್‌ ತುಂಬಿದ  ಪ್ಲಾಸ್ಟಿಕ್‌ ತೊಟ್ಟೆಯನ್ನು  ಪಂಚರ ಸಮಕ್ಷಮ ಮಹಜರು ಮುಖೇನ  ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 111/2021 ಕಲಂ: 15(a), 32(3) K.E.Act & 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

 

ಇತ್ತೀಚಿನ ನವೀಕರಣ​ : 03-06-2021 10:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080