ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಗಂಗೊಳ್ಳಿ : ಫಿರ್ಯಾದಿ ಮೋಹನ ಇವರು ದಿನಾಂಕ 03/06/2021 ರಂದು ತನ್ನ ತಮ್ಮ ಗಿರೀಶ್ ಎಂಬುವವರೊಂದಿಗೆ KA47V1926ನೇ ಬುಲೆಟ್ ನಲ್ಲಿ ಸಹಸವಾರಾಗಿ ಕುಳಿತುಕೊಂಡು NH-66 ರಲ್ಲಿ ಬೈಂದೂರಿನಿಂದ ಕುಂದಾಪುರಕ್ಕೆ ಹೊರಟಿದ್ದು, ಸಮಯ ಬೆಳಿಗ್ಗೆ 7:00 ಗಂಟೆಗೆ ಬುಲೆಟ್‌ ತ್ರಾಸಿ ಜಂಕ್ಷನ್ ಸಮೀಪ ತಲುಪುವಾಗ್ಯೆ ಬುಲೆಟ್‌ ಸವಾರ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಪ್ರಭಾಕರ ಪೂಜಾರಿ ಎಂಬುವವರಿಗೆ ಢಿಕ್ಕಿ ಹೊಡೆದುದ್ದರಿಂದ ಪ್ರಭಾಕರ ರವರು ತೀವೃ ತರದ ಗಾಯಗೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ 50/2021 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣಗಳು

 • ಕಾರ್ಕಳ: ಪಿರ್ಯಾದಿ ಶ್ರೀಮತಿ ನಜೀಮಾ ಇವರಿಗೆ ಹಾಗೂ ಆಪಾದಿತ 1 ನೇ ಇರ್ಫಾನ್ ಇವರಿಗೆ ದಿನಾಂಕ: 14/08/2016 ರಂದು ಗುರುಹಿರಿಯರ ಸಮ್ಮುಖದಲ್ಲಿ ಕಾರ್ಕಳ ಮದೀನಾ ಮಸೀದಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದು ಮದುವೆಯ ಸಮಯ ವರನ ಹಾಗೂ ವರನ ಮನೆಯವರ ಕೋರಿಕೆಯಂತೆ 12 ಪವನ್ ಚಿನ್ನವನ್ನು ನೀಡಿದ್ದು ಮದುವೆಯ ಬಳಿಕ ಪಿರ್ಯಾದುದಾರರನ್ನು ಚೆನ್ನಾಗಿ ನೋಡಿಕೊಂಡು ಆ ಬಳಿಕ ಸಣ್ಣ ಸಣ್ಣ ವಿಚಾರಕ್ಕೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದು ಪಿರ್ಯಾದುದಾರರಿಗೆ ಬೈದು ಹೊಡೆದು ಕಿರುಕುಳ ನೀಡುತ್ತಿದ್ದು, ಆ ಬಳಿಕ ಕೂಡಾ ಗಂಡ ಹಾಗೂ ಗಂಡನ ಮನೆಯವರು ಊಟ ತಿಂಡಿ ಕೊಡದೇ ಕಿರುಕುಳ ನೀಡಿದ್ದು ಪಿರ್ಯಾದುದಾರರು ಹೆಣ್ಣುಮಗುವಿಗೆ ಜನ್ಮ ನೀಡಿದಾಗ ಹೆಣ್ಣು ಮಗು ನಮಗೆ ಬೇಡ ಎಂಬುದಾಗಿಯೂ ಡೈವೋರ್ಸ ಕೊಡು ಎಂಬುದಾಗಿಯೂ ಬೆದರಿಕೆ ಹಾಕಿದ್ದು  ಅಲ್ಲದೇ ದಿನಾಂಕ: 20/12/2020 ರಂದು ಪಿರ್ಯಾದುದಾರರ ತಾಯಿ ಮನೆಗೆ ಬಂದು ಡೈವೋರ್ಸ ನೀಡುವಂತೆ ಗಲಾಟೆ ಮಾಡಿದ್ದು ದಿನಾಂಕ: 18/04/2021 ರಂದು ಕಾರ್ಕಳ ಕಾಬೆಟ್ಟಿನಲ್ಲಿ ಇರುವ ಪಿರ್ಯಾದುದಾರರ ಅಂಗಡಿಗೆ 1ನೇ ಆರೋಪಿ ಮತ್ತು 2 ನೇ ಶ್ರೀಮತಿ ಸಿರಾಜ್ ಬಾನು ಇವರು ಬಂದು ಗಲಾಟೆ ಮಾಡಿ ಪಿರ್ಯಾದುದಾರರಿಗೂ ಮತ್ತು ಅವರ ಮಗುವಿಗೂ ಕೈಯಿಂದ ಹೊಡೆದು ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಆಪಾದಿತರಾದ 1)ಇರ್ಫಾನ್, 2)ಶ್ರೀಮತಿ ಸಿರಾಜ್ ಬಾನು 3) ಶ್ರೀಮತಿ ಆಫ್ರಿನ್ 4) ಶ್ರೀ ಶಾಹಿದ್ 5) ಶ್ರೀ ಇಮ್ರಾನ್ 6) ಸಮ್ರಿನ್ 7) ಶಬ್ಬೀರ್ ಎಲ್ಲರೂ ಪಕೀರನಕಟ್ಟೆ, ಕಾಪು ತಾಲೂಕು ವಾಸಿಗಳು ಇವರ ವಿರುದ್ದ ಈ ಬಗ್ಗೆ ಕಾರ್ಕಳ  ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 68/2021 ಕಲಂ: 323,504,506,498(A) ಐಪಿಸಿ ಮತ್ತು ಕಲಂ: 3,4 ಡಿ,ಪಿ,ಆ್ಯಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೊಲ್ಲೂರು:  ಪ್ರಕರಣದ ಸಾರಾಂಶವೇನೆಂದರೆ ಕೊವೀಡ್ – 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರವು ಹೊರಡಿಸಿರುವ ಮಾರ್ಗಸೂಚಿಗಳು ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು  ದಿ: 24.05.2021 ರಿಂದ 07.06.2021 ರ ವರೆಗೆ ಲಾಕ್ ಡೌನ್  ಕರ್ಪ್ಯೂ ವಿಧಿಸಿದ್ದು, ಕಪ್ಯೂ ಜ್ಯಾರಿಗೊಳಿಸುವ ಬಗ್ಗೆ ಹೊರಡಿಸಿದ ಆದೇಶದಂತೆ ದಿನಾಂಕ 03.06.2021 ರಂದು ನಾಸೀರ್ ಹುಸೈನ್ ಪಿ ಎಸ್ ಐ ಕೊಲ್ಲೂರು ಪೊಲೀಸ್ ಠಾಣೆ ಇವರು ಠಾಣಾ ವ್ಯಾಪ್ತಿಯಲ್ಲಿ  ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಧ್ಯಾಹ್ನ12:00 ಗಂಟೆಗೆ  ಸಮಯಕ್ಕೆ ಜಡ್ಕಲ್ ಗ್ರಾಮದ ಕಾನ್ಕಿ ಭಂಡಾರಗಡಿ  ಎಂಬಲ್ಲಿ  ಆಪಾದಿತ  ಶ್ರೀಧರ ಶೆಟ್ಟಿ ಎಂಬವನು ತನ್ನ ಬಾಬ್ತು ಜನರಲ್ ಸ್ಟೋರ್ ಅಂಗಡಿಯನ್ನು  ತೆರದು ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಕೊವೀಡ್ -19 ಕೊರೋನ ವೈರಸ್ ಸೊಂಕು  ಹರಡುತ್ತಿರುವ ಬಗ್ಗೆ ಸೊಂಕು ಹರಡುವುದನ್ನು ತಡೆಗಟ್ಟುವ ಕುರಿತು   ಸರಕಾರ ಹೊರಡಿಸಿರುವ ಮತ್ತು  ಜಿಲ್ಲಾಡಳಿತದ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ಸೋಂಕನ್ನು  ಹರಡುವ ಸಂಭಂವ ಇದೆ ಎಂದು ತಿಳಿದು ಕೂಡ ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿ ನಿಯಮಗಳನ್ನು  ಉಲ್ಲಂಘಿಸಿ ಅಪಾದಿತನು ಸದ್ರಿ  ಅಂಗಡಿಯನ್ನು  ತೆರೆದು ಆಪರಾಧ ಎಸಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಮಾಸೆಬೈಲು:  ದಿನಾಂಕ 03-06-2021  ರಂದು ಸುಬ್ಬಣ್ಣ ಬಿ ಪೊಲೀಸು ಉಪನಿರೀಕ್ಷಕರು ಅಮಾಸೆಬೈಲು ಪೊಲೀಸು ಠಾಣೆ ಇವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 24-05-2021  ರಿಂದ 07-06-2021 ರವರೆಗೆ ಕೋವಿಡ್ – 19  ಸಾಂಕ್ರಾಮಿಕ  ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು ಅನಗತ್ಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು ಮದ್ಯಾಹ್ನ 13:30 ಗಂಟೆಗೆ ಹೊಸಂಗಡಿ ಗ್ರಾಮದ ಪಂಚಾಯತು ಕಛೇರಿ ಬಳಿ ವಾಹನ ತಪಾಸಣೆ ಮಾಡಿಕೊಂಡಿರುವಾಗ  ಆಪಾದಿತ ಉದಯ ನಾಯ್ಕ ಪ್ರಾಯ 27 ವರ್ಷ ತಂದೆ:ನಾರಾಯಣ ನಾಯ್ಕ ಗೆರ್ಸಿಕಲ್ಲು  ಹೊಸಂಗಡಿ ಗ್ರಾಮ ಈತನು KA 20 V 4100 ನೇ  Hero Honda Splender + ಮೋಟಾರು ಸೈಕಲನ್ನು  ಚಲಾಯಿಸಿಕೊಂಡು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ   ಸದ್ರಿ  ಮೇಲ್ಕಂಡ ಮೋಟಾರು ಸೈಕಲ್ಲು ಸವಾರ  ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು  ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವ ಸಾಧ್ಯತೆ ಉಂಟು  ಮಾಡಿ ನಿರ್ಲಕ್ಷತನ ತೋರಿರುತ್ತಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ 28/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 03-06-2021 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080