ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಮಹಮದ್‌ಗೌಸ್‌ (50) ತಂದೆ: ದಿ. ಆಲಿ ಸಾಹೇಬ್‌, ವಾಸ: ಆದಿಲ್‌ಮಂಜಿಲ್‌, ಗುಂಡ್ಮಿ ಶಾಲೆಯ ಬಳಿ ಗುಂಡ್ಮಿ ಗ್ರಾಮ, ಬ್ರಹ್ಮಾವರ ಇವರು ದಿನಾಂಕ 02/05/2023 ರಂದು ಸಮಯ ಸುಮಾರು 15:30 ಗಂಟೆಗೆ ಗುಂಡ್ಮಿ ಗ್ರಾಮದ ಗುಂಡ್ಮಿ ಅಂಬಾಗಿಲು ಯು ಟರ್ನ ಬಳಿ  ಅವರ ಬಾಬ್ತ ಮೋಟರ್ ಸೈಕಲ್ ನಲ್ಲಿ ಹೋಗುತ್ತಿರುವಾಗ  ಎದುರುಗಡೆಯಿಂದ ಅಂದರೆ ರಸ್ತೆಯ ಇನ್ನೊಂದು ಪಥದಲ್ಲಿ ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ  KA-20 C-8425 ನೇ ಆಟೋ ರಿಕ್ಷಾವನ್ನು ಚಾಲಕ  ಗೋಪಾಲ ಎಂಬಾತನು  ಅತೀವೇಗ ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು ಅದೇ  ವೇಗದಲ್ಲಿ  ಯಾವುದೇ  ಸೂಚನೆಯನ್ನು ನೀಡದೆ  ಕುಂದಾಪುರ -  ಉಡುಪಿ  ರಾ.ಹೆ.  66  ರಿಂದ ಒಮ್ಮೆಲೇ  ಬಲಕ್ಕೆ ತಿರುಗಿಸಿದ ಕಾರಣ  ಕುಂದಾಪುರ  ಕಡೆಯಿಂದ  ಉಡುಪಿ ಕಡೆಗೆ  ರಾ.ಹೆ.  66  ರಲ್ಲಿ  ರಿಕ್ಷಾದ  ಬಲಬದಿಯಲ್ಲಿ  ಸವಾರಿ  ಮಾಡಿಕೊಂಡು  ಬರುತ್ತಿದ್ದ  ಮೋಟಾರು  ಸೈಕಲ್‌‌ ‌‌‌‌ KA-20 EM-8528 ಗೆ ಡಿಕ್ಕಿ  ಹೊಡೆದ ಪರಿಣಾಮ  ಮೋಟಾರು  ಸೈಕಲ್‌‌‌‌‌‌‌‌‌‌‌‌‌‌‌ ಸವಾರ ಮೊಹಮದ್ ಅಲ್ತಾಫ್ ಎಂಬುವವರು ಮೋಟಾರು  ಸೈಕಲ್‌‌‌‌‌‌‌‌‌ ಸಮೇತ ರಸ್ತೆಗೆ  ಬಿದ್ದಿದ್ದು ಅವನ ತಲೆಯ ಬಲಬದಿಗೆ, ಗಲ್ಲಕ್ಕೆ, ಬಲ ಕೈಗೆ  ತೀವ್ರ  ತರದ  ಹಾಗೂ  ತರಚಿದ ರಕ್ತ ಗಾಯವಾಗಿರುತ್ತದೆ ಹಾಗೂ ರಿಕ್ಷಾದ ಎದುರು  ಬಲಬದಿ  ಜಖಂಗೊಂಡಿದ್ದು ರಿಕ್ಷಾ ಚಾಲಕನ ಬಲಕೈಗೂ ಸ್ವಲ್ಪ  ಪೆಟ್ಟಾಗಿರುವುದಾಗಿದೆ. ಈ  ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2023 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ: ದಿನಾಂಕ 02/05/2023 ರಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಯಾದ ಫಿರ್ಯಾದಿ ವಿಶಾಲ (47), ಗಂಡ: ಮಯೂರ್‌, ವಾಸ: ಮನೆ ನಂ. 4-135, ರಾಮ ವಿ. ನಿಕೇತನ, ಪೊಲಿಪು, ಪಡು ಗ್ರಾಮ, ಕಾಪು ರವರು ತಮ್ಮ ಚುನಾವಣಾ ಪ್ರಚಾರದ ಕೆಲಸದ ಬಗ್ಗೆ ಪಕ್ಷದ ಕಾರ್ಯಕ್ರಮ ಮಧ್ಯಾಹ್ನ 1:45 ಗಂಟೆಯ ಸಮಯಕ್ಕೆ ವಾರಂಬಳ್ಳಿ ಗ್ರಾಮದ, ಬ್ರಹ್ಮಾವರದಲ್ಲಿರುವ ಐಶ್ವರ್ಯ ಹೊಟೇಲ್‌ ಎದುರು ರಾ.ಹೆ 66 ರ ರಸ್ತೆಯ ಬದಿಯಲ್ಲಿ ರಸ್ತೆ ದಾಟಲು ನಿಂತುಕೊಂಡಿರುವಾಗ ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆಗೆ ಆರೋಪಿ ಶರತ್‌ಭಟ್‌ ರವರು ತನ್ನ KA-20 HA-2211 ನೇ ಮೋಟಾರ್‌ಸೈಕಲ್‌ಅನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆದಾಟಲು ಫಿರ್ಯಾದಿದಾರರೊಂದಿಗೆ ನಿಂತುಕೊಂಡಿದ್ದ ಶ್ರೀಮತಿ ವಾಮನ ರವರಿಗೆ ಡಿಕ್ಕಿಹೊಡೆದ ಪರಿಣಾಮ ಶ್ರೀಮತಿ ವಾಮನ ರವರು ರಸ್ತೆಯ ಮೇಲೆ ಬಿದ್ದು ಅವರ ಬಲಭುಜದ ಬಳಿ ಹಾಗೂ ಎಡ ಕಾಲಿಗೆ ಮೂಳೆ ಮುರಿತದ ಒಳ ಜಖಂ ಉಂಟಾಗಿ, ಅಲ್ಲಲ್ಲಿ ರಕ್ತಗಾಯವಾಗಿರುತ್ತದೆ. ಅವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರದ ಪ್ರಣವ್‌ಆಸ್ಪತ್ರೆ ದಾಖಲಿಸಿರುವುದಾಗಿದೆ. ಈ  ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 93/2023 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ಅಜಯ್  (35) ತಂದೆ, ಅಗ್ರಹಾರದ  ತಿಪ್ಪೇಸ್ವಾಮಿ  ವಾಸ, ಹಾರಕಬಾವಿ  ಕೂಡ್ಲಿಗಿ ತಾಲೂಕು  ವಿಜಯ ನಗರ ಇವರು ದಿನಾಂಕ 01/05/2023  ರಂದು  ಧರ್ಮಸ್ಥಳ ದಿಂದ ಕೊಲ್ಲೂರಿಗೆ KA-35 P-1074 ನೇ ನಂಬ್ರದ  ಕಾರಿನಲ್ಲಿ ಹೊರಟಿದ್ದು, ಸುಮಾರು 14:00 ಘಂಟೆಗೆ   ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಕಟ್ಟೆಮಕ್ಕಿ  ಎಂಬಲ್ಲಿ ಕೊಲ್ಲೂರು ಕಡೆಗ ಹೋಗುತ್ತಿರುವಾಗ ಆರೋಪಿಯು  KA-20 MD-2820 ನೇ ನಂಬ್ರದ ಕಾರನ್ನು ಶಂಕರನಾರಾಯಣ ಕಡೆ ಯಿಂದ ಹಾಲಾಡಿ  ಕಡೆಗೆ ಅತೀ ವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿ ಅಜಯ ರವರು ಚಲಾಯಿಸುತ್ತಿದ್ದ  ಕಾರಿಗೆ ಡಿಕ್ಕಿ ಹೊಡೆದಿರುತ್ತಾರೆ, ಇದರ ಪರಿಣಾಮ ಎರಡು ಕಾರು ಜಖಂಗೊಂಡು  ಕಾರಿನಲ್ಲಿ ಪ್ರಯಾಣ  ಮಾಡುತ್ತಿದ್ದ ಅಜಯ ರವರಿಗೆ ಹಾಗೂ  ಸೂರ್ಯ, ಮಹೇಂಧ್ರ,ಮೂಗಪ್ಪ  ನಾಗರಾಜ   ಮತ್ತು  KA-20  MD.2820   ನೇ ನಂಬ್ರದ  ಕಾರಿನಲ್ಲಿ ಇದ್ದವರಿಗೆ ಸಹ  ಗಂಭೀರ ಸ್ವರೂಪದ ಹಾಗೂ ಸಾಮಾನ್ಯ ಸ್ವರೂಪದ  ರಕ್ತಗಾಯವಾಗಿರುವುದಾಗಿದೆ. ಈ  ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2023 ಕಲಂ: 279,337, 338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು: ಫಿರ್ಯಾದಿದಾರರಾಧ ಮಹಮ್ಮದ್ ಸಿರಾಜ್ (34) ತಂದೆ: ಉಮ್ಮರ್ ಸಾಹೇಬ್ ವಾಸ: ಆಕಳಬೈಲು ಕಿರಿಮಂಜೇಶ್ವರ ಗ್ರಾಮ , ಬೈಂದೂರು ಇವರು ನಾವುಂದದಲ್ಲಿ  ಟಯರ್ ವರ್ಕ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದು  ದಿನಾಂಕ 01/05/2023 ರಂದು KA-20 AB-0969 ನೇ ಮೀನು ಸಾಗಿಸುವ ಇನ್ಸುಲೇಟರ್ ವಾಹನ  ಟಯರ್ ಪಂಚರ್ ಗಾಗಿ ರಿಪೇರಿಗೆ ಬಂದಿದ್ದು ಇವರು ಪಂಚರ್ ಹಾಕಿದ್ದು  ನಂತರ ಅದರ ಚಾಲಕ ಶೇಖರನು ಸರ್ವಿಸ್ ಗಾಗಿ ಅಲ್ಲಿಯೇ  ಪಕ್ಕದಲ್ಲಿದ್ದ ಎ. ಎಸ್  ಸರ್ವಿಸ್ ಸ್ಟೇಷನ್ ನ ರಾಂಪ್ ಮೇಲೆ KA-20 AB-0969 ನೇ  ಇನ್ಸುಲೇಟರ್ ವಾಹನವನ್ನು ಚಲಾಯಿಸಿಕೊಂಡು ಹೋಗಿ ಸಾರ್ವಜನಿಕರ ಸುರಕ್ಷತೆಗೆ ಅಪಾಯಕರ ಉಂಟಾಗುವ ಸ್ಥಿತಿಯಲ್ಲಿ ನಿಲ್ಲಿಸಿದ ಕಾರಣ   ವಾಹನವು ಹಿಮ್ಮುಖವಾಗಿ ಚಲಿಸಿ ಮಧ್ಯಾಹ್ನ 1:30 ಗಂಟೆಗೆ  ಹೊಟೇಲ್ ಗೆ ನಡೆದುಕೊಂಡು  ಹೋಗುತ್ತಿದ್ದ  ಮಹಮ್ಮದ್ ಸಿರಾಜ್ ರವರ ಪರಿಚಯದ ರೇವತಿ (40)  ಎಂಬವರಿಗೆ  ಡಿಕ್ಕಿ ಹೊಡೆದ  ಪರಿಣಾಮ ರೇವತಿವರು ಪಕ್ಕಕ್ಕೆ ಬಿದ್ದು ಅವರ ಸೊಂಟ ಮತ್ತು ಬಲ ಕೈ ಭುಜಕ್ಕೆ ಪೆಟ್ಟಾಗಿದ್ದು  ಕೂಡಲೇ ಸ್ಥಳಕ್ಕೆ  ಹೋಗಿ  ರೇವತಿಯವರನ್ನು ಎತ್ತಿ  ಉಪಚರಿಸಿ ಚಿಕಿತ್ಸೆ ಬಗ್ಗೆ  ಸುಲೈಮಾನ್ ಎಂಬವರ ಜೊತೆಯಲ್ಲಿ ಅಂಬುಲೆನ್ಸ್ ವಾಹನದಲ್ಲಿ ಕುಂದಾಪುರದ ನ್ಯೂ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿಅಲ್ಲಿಯ ವ್ಯೆದ್ಯರು ಪ್ರಥಮ ಚಿಕಿತ್ಸೆ ನೀಡಿ  ಹೆಚ್ಚಿನ  ಚಿಕಿತ್ಸೆಗೆ ಸೂಚಿಸಿದ ಮೇರೆಗೆ   ರೇವತಿಯವರನ್ನು  ಉಡುಪಿ ಆದರ್ಶ  ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು  ಅಲ್ಲಿಯ ವೈದ್ಯರು  ಪರೀಕ್ಷಿಸಿ ರೇವತಿಯವರನ್ನು ಒಳರೋಗಿಯಾಗಿ  ದಾಖಲಿಸಿಕೊಂಡಿರುವುದಾಗಿದೆ. ಈ  ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 69/2023 ಕಲಂ: 338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾಧ ರಾಮ ಬಿಲ್ಲವ (55) ತಂದೆ: ಮರ್ಲ ಪೂಜಾರಿ  ವಾಸ:ಮುಲ್ಲಿ ಮನೆ  ಸೈಬ್ರಹಿತ್ಲು  ಯಡ್ತರೆ ಗ್ರಾಮ ಬೈಂದೂರು ತಾಲೂಕು ಇವರ ತಂಗಿ  ಭಾಗೀರಥಿ (50) ರವರು ರಾಮ ಬಿಲ್ಲವ ರವರೊಂದಿಗೆ ಯಡ್ತರೆ ಗ್ರಾಮದ ಮುಲ್ಲಿಮನೆ ಎಂಬಲ್ಲಿ  ವಾಸ ಮಾಡಿಕೊಂಡಿದ್ದು  ಭಾಗೀರಥಿರವರಿಗೆ   ಕಳೆದ 15 ವರ್ಷಗಳ ಹಿಂದೆ ಪಿತ್ತಕೋಶ, ಗರ್ಭಕೋಶ ಸಂಬಂದಿಸಿದ ಖಾಯಿಲೆಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿದ್ದು , ನಂತರ ಭಾಗೀರಥಿ ರವರು  ಅದೇ ಕಾರಣಕ್ಕೆ ಮಾನಸಿಕವಾಗಿ ನೊಂದು ಖಿನ್ನತೆಗೆ ಒಳಗಾಗಿದ್ದು , ಖಿನ್ನತೆಗೆ ಚಿಕಿತ್ಸೆ  ಕೊಡಿಸಿದರೂ ಸರಿಯಾಗಿ ಗುಣಮುಖವಾಗದ ಕಾರಣಕ್ಕೆ   ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 02/05/2023 ರಂದು  ಮಧ್ಯಾಹ್ನ 12:50 ಗಂಟೆಗೆ ಮನೆಯ ಕೋಣೆಯಲ್ಲಿ  ಯಾರೂ ಇಲ್ಲದ  ಸಮಯ  ಕೋಣೆಯಲ್ಲಿನ  ಫ್ಯಾನಿಗೆ  ಚೂಡಿದಾರದ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡವರನ್ನು ರಾಮ ಬಿಲ್ಲವ ರವರು ಕೋಣೆಗೆ ಹೋಗಿ ನೋಡಿ ಮನೆಯವರೊಂದಿಗೆ ಸೇರಿ  ಕುತ್ತಿಗೆಗೆ ಕಟ್ಟಿದ್ದ ಚೂಡಿದಾರದ ಶಾಲ ನ್ನು ಬಿಡಿಸಿ ಚಿಕಿತ್ಸೆ ಬಗ್ಗೆ ಅಂಬುಲೆನ್ಸ್ ನಲ್ಲಿ  ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ  ಕರೆ ತಂದಲ್ಲಿ  ವೈದ್ಯರು  ಪರೀಕ್ಷಿಸಿ  ಭಾಗೀರಥಿ ರವರು ಮೃತಪಟ್ಟಿರುವುದಾಗಿ  ತಿಳಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 27/2023 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಫಿರ್ಯಾದಿದಾರರಾದ ಆಶಾ ಎಸ್.‌(50), ಗಂಡ: ಸುಧಾಕರ ಪೂಜಾರಿ, ವಾಸ: ಹವರಾಲು ಕಗ್ಗನಾಟ ಮನೆ, ಕಾವಡಿ ಅಂಚೆ & ಗ್ರಾಮ, ಬ್ರಹ್ಮಾವರ  ತಾಲೂಕು ಇವರ ಗಂಡನಾದ ಸುಧಾಕರ ಪೂಜಾರಿ,(52) ಎಂಬವರು ಸುಮಾರು 25 ವರ್ಷಗಳಿಂದ ವಿಪರೀತ ಮಧ್ಯಸೇವನೆ ಮಾಡುತ್ತಿದ್ದು, ಇದರಿಂದ ಅವರಿಗೆ ಲಿವರ್‌ ನ ಸಮಸ್ಯೆ ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ದಿನಾಂಕ 28/04/2023  ರಂದು ಬೆಳಿಗ್ಗೆ ಸುಮಾರು 10:00 ಗಂಟೆಯ ಸಮಯಕ್ಕೆ ಸುಧಾಕರ ಪೂಜಾರಿ ರವರು ಮನೆಯಲ್ಲಿ ಕಾಲುಜಾರಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದವರನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಜಿಲ್ಲಾ  ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ದಿನಾಂಕ 02/05/2023 ರಂದು ಸುಧಾಕರ ಪೂಜಾರಿ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯಿಂದ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸುಧಾಕರ ಪೂಜಾರಿ ರವರು ಚಿಕಿತ್ಸೆಗೆ ಸ್ಪಂದಿಸದೇ ಮಧ್ಯಾಹ್ನ 1:57 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ.  ಸುಧಾಕರ ಪೂಜಾರಿ ರವರು ತನಗಿರುವ ಲಿವರ್‌ನ ಸಮಸ್ಯೆಯಿಂದಲೊ ಅಥವಾ ಇನ್ಯಾವುದೋ ಕಾರಣದಿಂದ ಕಾಲು ಜಾರಿ ಬಿದ್ದು ಅಸ್ವಸ್ಥಗೊಂಡು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 35/2023 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾಧ ಜೆರಾಲ್ಡ್‌ ವಿಲ್ಸನ್‌ ಲೂವಿಸ್‌ (41) ತಂದೆ: ದಿ. ಸಿ.ಆರ್‌ ಲೂವಿಸ್‌  ವಾಸ:  ಮನೆ ನಂಬ್ರ: 7/53ಎ9, ರಾಜೀವ ನಗರ, ನಿಟ್ಟೂರು, ಪುತ್ತೂರು ಗ್ರಾಮ, ಉಡುಪಿ ಇವರ ಅಣ್ಣ ಫಿಲಿಪ್‌ ಎಡ್ವರ್ಡ್‌ ಲೂವಿಸ್‌ (46) ರವರು ಅವಿವಾಹಿತರಾಗಿದ್ದು, ಉಡುಪಿಯಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಇವರು ವಿಪರೀತ ಮದ್ಯಸೇವನೆ ಮಾಡುತ್ತಿದ್ದು, ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 01/05/2023 ರಂದು ಉಡುಪಿ ಅಂಬಲ್ಪಾಡಿಯ ಬಳಿ ಅಸ್ವಸ್ಥರಾದವರನ್ನು ವಿಶು ಶೆಟ್ಟಿ ಯವರು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 02/05/2023 ರಂದು 00:40 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 23/2023 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಗೌತಮ್‌ ಶಾಸ್ತ್ರಿ.ಹೆಚ್‌ (32) ವಿಳಾಸ: ಭೂವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ರಜತಾದ್ರಿ, ಮಣಿಪಾಲ, ಉಡುಪಿ ಜಿಲ್ಲೆ. ಅಧಿಕಾರಿ, ಫ್ಲೈಯಿಂಗ್‌ ಸ್ಕ್ವ್ಯಾಡ್‌ ಟೀಮ್‌-2, 120-ಉಡುಪಿ ವಿಧಾನಸಭಾ ಕ್ಷೇತ್ರ, ಉಡುಪಿ ಇವರು 120-ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಫ್ಲೈಯಿಂಗ್‌ ಸ್ಕ್ವ್ಯಾಡ್‌ ಟೀಮ್‌-2 ರಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 29/04/2023 ರಂದು ಗೌತಮ್‌ ಶಾಸ್ತ್ರಿ.ಹೆಚ್‌ ರವರು ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಅಂಬಲ್ಪಾಡಿ ಗಾಂಧಿನಗರ ಎಂಬಲ್ಲಿ ರಾ.ಹೆ-66 ರ ಪೂರ್ವಬದಿಯಲ್ಲಿರುವ ಕಟ್ಟಡ ಸಂಖ್ಯೆ: 4-1-34ಸಿ1 ಕಾನ್ಸೆಪ್ಟ್‌ ಕಾರ್ಸ್‌ ಎಂಬ ಹೆಸರಿನ ಅಂಗಡಿಯಲ್ಲಿ ಯಾವುದೇ ಪ್ರಕಾಶಕರ, ಮುದ್ರಿಸಿದವರ ಮತ್ತು ಮುದ್ರಿತ ಪ್ರತಿಗಳ ವಿವರಗಳಿರದ ಹಾಗೂ ನಿಯಮಾನುಸಾರ ಪ್ರಕರಣೆ ಇಲ್ಲದಿರುವ ಕೈಪಿಡಿ ಪುಸ್ತಕಗಳನ್ನು ಹಂಚಿಕೆ ಮಾಡುವ ಸಲುವಾಗಿ ಸಂಗ್ರಹಿಸಿಟ್ಟಿರುವುದಾಗಿ 15:30 ಗಂಟೆಗೆ ದೊರೆತ ಖಚಿತ ಮಾಹಿತಿಯಂತೆ, 16:20 ಗಂಟೆಗೆ ಸ್ಥಳಕ್ಕೆ ತಲುಪಿ, ಅಂಗಡಿಯೊಳಗಿನ ಹಿಂಭಾಗದ ಕೋಣೆಯೊಂದರಲ್ಲಿ ರಟ್ಟಿನ ಬಾಕ್ಸ್‌ ಒಂದರಲ್ಲಿ ಬಿಜೆಪಿ ಪಕ್ಷದ ಚಿಹ್ನೆಯಾದ ಕಮಲದ ಹೂವಿನ ಉಲ್ಟಾ ಚಿತ್ರವಿರುವ ಒಟ್ಟು 24 ಪುಟಸಂಖ್ಯೆಯ ಒಟ್ಟು 1,500 ಪ್ರತಿಗಳಿದ್ದು, ಸದರಿ ಕೈಪಿಡಿಯಲ್ಲಿ ನಿಯಮಾನುಸಾರವಾಗಿ ಪ್ರಕಾಶಕರ, ಮುದ್ರಿಸಿದವರ ಮತ್ತು ಮುದ್ರಿತ ಪ್ರತಿಗಳ ವಿವರಗಳು ಇಲ್ಲದೆ ಇದ್ದು, ಪ್ರಜಾಪ್ರಾತಿನಿಧ್ಯ ಕಾಯಿದೆ ಕಲಂ: 27ಎ ನ್ನು ಉಲ್ಲಂಘಿಸಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗೌತಮ್‌ ಶಾಸ್ತ್ರಿ.ಹೆಚ್‌ ರವರು ದಿನಾಂಕ 29/04/2023 ರಂದು ಠಾಣೆಯಲ್ಲಿ ದೂರು ನೀಡಿದ್ದು, ಸದರಿ ದೂರನ್ನು ಸ್ವೀಕರಿಸಿ ಠಾಣಾ ಎನ್‌.ಸಿ ನಂಬ್ರ: 98/ಪಿಟಿಎನ್‌/ಯುಟಿಪಿಎಸ್‌/2023 ರಂತೆ ಸ್ವೀಕರಿಸಿ, ದಿನಾಂಕ 02/05/2023 ರಂದು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2023 ಕಲಂ: 127A REPRESENTATION OF PEOPLES ACT 1951ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 03-05-2023 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080