ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ

  • ಗಂಗೊಳ್ಳಿ: ದಿನಾಂಕ 03/05/2023 ರಂದು ಪಿರ್ಯಾದಿದಾರರಾದ ಅಶ್ವತ್‌ ಭಂಡಾರಿ ಇವರು ತನ್ನ ಬಾಬ್ತು KA.20.EH.1686 ನೇ ನಂಬ್ರದ ಮೋಟಾರ್‌ ಸೈಕಲ್ ನಲ್ಲಿ ಗೋಪಾಲ್ ಭಂಡಾರಿ ಯವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಮುಳ್ಳಿಕಟ್ಟೆಯಿಂದ ಆಲೂರು ಕಡೆಗೆ ಹೋಗುವ ಡಾಂಬಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 8:30 ಗಂಟೆಗೆ ಆಲೂರು ಗ್ರಾಮದ ಮಾಸ್ತಿಕಟ್ಟೆ ದೇವಸ್ಥಾನದ ಹತ್ತಿರ ಇರುವ ನಡುಬೆಟ್ಟು ಸರ್ಕಲ್‌ ಬಳಿ ತಲುಪುವಾಗ ಆಲೂರು ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ KA.20.D.7257 ನೇ ನಂಬ್ರದ ಮಿನಿ ಬಸ್‌ ಚಾಲಕ ಅಣ್ಣಪ್ಪ ಪೂಜಾರಿ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು  ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್‌ಗೆ ಎದುರಿನಿಂದ ಢಿಕ್ಕಿ ಹೊಡೆದಿದ್ದು ಪರಿಣಾಮ ಪಿರ್ಯಾದಿದಾರರು  ಮತ್ತು ಗೋಪಾಲ ಭಂಡಾರಿ ಮೋಟಾರ್‌ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಬಲ ಕೈ ಗೆ ಒಳ ನೋವು ಉಂಟಾಗಿದ್ದು, ಗೋಪಾಲ ಭಂಡಾರಿ ಯವರಿಗೆ ಬಲ ಕಾಲಿಗೆ ಮೂಳೆ ಮುರಿತ ಉಂಟಾಗಿ, ಮೈಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2023 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕುಂದಾಪುರ: ದಿನಾಂಕ 02/05/2023 ರಂದು ಸಂಜೆ ಸುಮಾರು 17:30  ಗಂಟೆಗೆ, ಕುಂದಾಪುರ  ತಾಲೂಕಿನ, ಹೆಮ್ಮಾಡಿ ಗ್ರಾಮದ ಜಯಶ್ರೀ ಹಾಲ್‌ - ಜ್ಯುವೆಲ್‌ ಪಾರ್ಕ‌ ಬಳಿ, NH 66 ರಸ್ತೆಯಲ್ಲಿ, ಆಪಾದಿತ ಶ್ರೀ ಅಂಶ ಗಂಗಪ್ಪ ಬಸ್ತಿ  ಎಂಬವರು  KA25-D-4597 ನೇ ಲಾರಿಯನ್ನು ಕುಂದಾಪುರ ಕಡೆಯಿಂದ ಬೈಂದೂರು ಅತೀವೇಗ  ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಲಾರಿಯನ್ನು ರಸ್ತೆಯ ತೀರ ಎಡಬದಿಗೆ ಚಾಲನೆ ಮಾಡಿ ಎನ್‌ ಹೆಚ್‌ 66 ರಸ್ತೆಯ ಅಂಚಲ್ಲಿ ನಿಂತುಕೊಂಡಿದ್ದ ಲಕ್ಷ್ಮೀ ಮೇಸ್ತಾ ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ಲಾರಿಯ ಚಕ್ರ ಲಕ್ಷ್ಮೀ ಮೇಸ್ತಾ ರವರ  ಬಲಕಾಲಿನ ಪಾದದ ಮೇಲೆ ಹಾದು ಹೋಗಿ ಪಾದದ ಬೆರಳುಗಳು ಜಖಂಗೊಂಡ ರಕ್ತಗಾಯವಾಗಿದ್ದು, ಅಲ್ಲದೆ ತಲೆಗೆ ಒಳಜಖಂ ಗಾಯವಾಗಿ ಕುಂದಾಪುರ ನ್ಯೂ ಮೆಡಿಕಲ್‌ ಸೆಂಟರ್‌ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಹೋಗಿರುತ್ತಾರೆ.  ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2023 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ

  • ಮಣಿಪಾಲ: ಪಿರ್ಯಾದಿ ಮನೋಜ್‌ ಪೂಜಾರಿ ಇವರು ದಿನಾಂಕ: 27.04.2023 ರಂದು ರಾತ್ರಿ ಪರ್ಕಳ ಹೆರ್ಗಾ ರಸ್ತೆಯಲ್ಲಿರುವ ಕುಬೇರ ಬಾರ್‌ಗೆ ಪಾರ್ಸೆಲ್‌ ತೆಗೆದುಕೊಂಡು ಬರಲು ಹೋಗಿದ್ದು, ರಾತ್ರಿ 10:00 ಗಂಟೆಗೆ ಪಾರ್ಸೆಲ್‌ ತೆಗೆದುಕೊಂಡು ಬಾರ್‌ನ ಹೊರಗಡೆ ನಿಂತಿದ್ದಾಗ ಪಿರ್ಯಾದಿದಾರರ ಪರಿಚಯದ ದಿನೇಶ್‌ ಶೆಟ್ಟಿ ಎಂಬುವವರು ಅವರ ಕಾರ್‌ನ್ನು ರಿವರ್ಸ್ ತೆಗೆಯುವ ಸಮಯದಲ್ಲಿ ಪಿರ್ಯಾದಿದಾರರಿಗೆ ಬದಿಗೆ ಹೋಗುವಂತೆ ಹೇಳಿದ್ದು ಪಿರ್ಯಾದಿದಾರರು ”ನಾನು ಬದಿಯಲ್ಲೇ ನಿಂತಿದ್ದೇನೆ, ನಿಮಗೆ ಜಾಗ ಇದೆಯಲ್ಲ ನೀವು ಹೋಗಿ” ಎಂದು ಹೇಳಿದಾಗ ಕಾರಿನಲ್ಲಿದ್ದ ದಿನೇಶ್ ಶೆಟ್ಟಿ, ಸುದರ್ಶನ್‌, ರಮೇಶ್‌ ಶೆಟ್ಟಿ ಮತ್ತು ವಯಸ್ಸಾದ ಇನ್ನೊಬ್ಬ ವ್ಯಕ್ತಿ ಪಿರ್ಯಾದಿದಾರರು ಇದ್ದಲ್ಲಿಗೆ  ಬಂದು ಅವಾಚ್ಯ ಶಬ್ಧಗಳಿಂದ ಬೈದಿರುತ್ತಾರೆ. ಆ ಸಮಯ ಕುಬೇರ ಬಾರ್‌ನ ಮಾಲಕ ರಮಾನಂದ ನಾಯಕ್‌ ರವರು ಪಿರ್ಯಾದಿದಾರರ ಬಳಿ ಬಂದು ಬೈದು , ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮುಂದಕ್ಕೆ ಕವುಚಿ ಬಿದ್ದಿರುತ್ತಾರೆ, ಆಗ  ದಿನೇಶ್ ಶೆಟ್ಟಿ, ಸುದರ್ಶನ್‌, ರಮೇಶ್‌ ಶೆಟ್ಟಿ ಕಾಲಿನಿಂದ ತುಳಿದಿರುತ್ತಾರೆ. ನಂತರ ಪಿರ್ಯಾದಿದಾರರ ಸ್ನೇಹಿತರಾದ ಸನಿತ್‌, ಸುಧೀಪ್‌ ರವರು ಬಂದು ಹೊಡೆಯುವುದನ್ನು ತಪ್ಪಿಸಿರುತ್ತಾರೆ. ಅವರೆಲ್ಲರೂ ಸೇರಿ ಪಿರ್ಯಾದಿದಾರರನ್ನು ಉದ್ದೇಶಿಸಿ ಇನ್ನೊಮ್ಮೆ ಗಾಂಚಾಲಿ ಮಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 105/2023 ಕಲಂ: 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹುಡುಗ ಕಾಣೆ ಪ್ರಕರಣ

  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು, 52 ಹೇರೂರು ಗ್ರಾಮದ , ರಾಜೀವನಗರ ಕೊಳಂಬೆ ಎಂಬಲ್ಲಿ ಉತ್ತರ ಪ್ರದೇಶದ ಮೂಲದವರಾದ ಫಿರ್ಯಾದಿ ರೇಣು ಇವರು ತನ್ನ ಗಂಡ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದು, ಅವರ ಎರಡನೇ ಮಗನಾದ ಸೀತು ಕುಮಾರ್ (13 ವರ್ಷ) ಎಂಬಾತನು ದಿನಾಂಕ: 02/05/2023 ರಂದು ರಾತ್ರಿ 8.00 ಗಂಟೆಗೆ ಮನೆಯ ಬಳಿ ಮೆಹಂದಿ ಕಾರ್ಯಕ್ರಮಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವನು ಮೆಹಂದಿ ಕಾರ್ಯಕ್ರಮಕ್ಕೂ ಹೋಗದೆ ವಾಪಾಸ್ಸು ಮನೆಗೂ ಬಾರದೇ ಕಾಣೆಯಾಗಿರುತ್ತಾನೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94/2023 : ಕಲಂ 363 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

  • ಉಡುಪಿ: ದಿನಾಂಕ: 28.04.2023 ರಂದು ಉಡುಪಿ ತಾಲೂಕು, ಶಿವಳ್ಳಿ ಗ್ರಾಮದ ಬುಡ್ನಾರು ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿ ಗಿರೀಶ್‌ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದ್ದು, ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 03.05.2023  ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿ ಗಿರೀಶ್‌ ಪೂಜಾರಿ ಈತನು ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟ ಮೇರೆಗೆ ಈ ಬಗ್ಗೆ ಸೆನ್ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 83/2023 ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ ಪ್ರದೀಪ್‌ ಸ್ಯಾಮುವೆಲ್‌ ಸದಾನಂದ ಇವರು ದಿನಾಂಕ 02/05/2023 ರಂದು 21:00 ಗಂಟೆಗೆ ಅವರ ಬಾಬ್ತು ನೀಲಿ ಬಣ್ಣದ ಮೊಟೊರೊಲೊ ಮೊಬೈಲ್‌ ನ್ನು ರಿಪೇರಿ ಮಾಡುವ ಸಲುವಾಗಿ ಉಡುಪಿ ಸಿಟಿ ಬಸ್‌ ನಿಲ್ದಾಣದ ಬಳಿ ಇರುವ ರಾಜ್‌ ಟವರ್‌ ಕಟ್ಟಡದ ನೆಲ ಅಂತಸ್ತಿನಲ್ಲಿರುವ MOBICITY ಎಂಬ ಅಂಗಡಿಗೆ ಬಂದು, ಅಂಗಡಿಯ ಕೌಂಟರ್‌ ನಲ್ಲಿ ಸದರಿ ಮೊಬೈಲ್‌ ನ್ನು ಇಟ್ಟು, ಇನ್ನೊಂದು ಮೊಬೈಲ್‌ ಗೆ ಬಂದ ಕರೆ ಸ್ವೀಕರಿಸಿ ಮಾತನಾಡುತ್ತಿರುವಾಗ, ಕಾಫಿ ಬಣ್ಣದ ಇನ್ನೊವಾ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರಲ್ಲಿ ಓರ್ವನು ಅಂಗಡಿಯ ಕೌಂಟರ್‌ ಮೇಲೆ ಇಟ್ಟಿದ್ದ ಮೊಬೈಲ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೊಬೈಲ್‌ನ ಅಂದಾಜು ಮೌಲ್ಯ ರೂ. 10,000/- ಆಗಬಹುದು . ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2023 ಕಲಂ: 379 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 03-05-2023 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080