ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ರಿತೇಶ್ ಕುಮಾರ್, ಪ್ರಾಯ: 40 ವರ್ಷ, ತಂದೆ: ಪುರಂದರ ಕೆ ಸಾಲ್ಯಾನ್, ವಾಸ: ಮನೆ ನಂಬ್ರ: 4-66, ಟೆಲಿಫೋನ್  ಎಕ್ಸ್‌‌‌‌‌ಚೇಂಜ್ ಬಳಿ. ಹೆಜಮಾಡಿ ಇವರ ತಂಗಿಯ ಮಗ ಅದ್ವಿಕ್(11) ಎಂಬಾತನು ದಿನಾಂಕ: 29.04.2022 ರಂದು ಸಂಜೆ 16:15 ಗಂಟೆಯ ವೇಳೆಗೆ ರಿಕ್ಷಾದಲ್ಲಿ ಹೊರಟಿರುವ ಅವರ ಅಜ್ಜಿಗೆ ಟಾಟಾ ಮಾಡಲು ಕಾಪು ತಾಲೂಕು ಹೆಜಮಾಡಿ ಗ್ರಾಮದಲ್ಲಿರುವ ತಮ್ಮ ಮನೆಯ ಎದುರು ರಸ್ತೆಯ ಬದಿಯಲ್ಲಿ ನಿಂತಿರುವ  ಸಮಯ, KA-20-D-9305 ನೇ ನಂಬ್ರದ ಕಾರು ಚಾಲಕ ರಾಘವೇಂದ್ರ ಹೆಜಮಾಡಿ ಎಂಬುವರು ತಮ್ಮ ಬಾಬ್ತು ಕಾರನ್ನು ಹೆಜಮಾಡಿ ಟೋಲ್ ರಸ್ತೆಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಅದ್ವಿಕ್‌ನ ಬಲಕಾಲಿನ ಪಾದದ ಮೇಲೆ ಕಾರಿನ ಚಕ್ರ ಹರಿಸಿದ ಪರಿಣಾಮ, ಅದ್ವಿಕ್‌‌ನು ಕಾಲಿಗೆ ಗಾಯಗೊಂಡು ರಸ್ತೆಗೆ ಬಿದ್ದಿದ್ದು, ನಂತರ ಆತನನ್ನು ಚಿಕಿತ್ಸೆ ಬಗ್ಗೆ ಅದೇ ಕಾರಿನಲ್ಲಿ ಸುರತ್ಕಲ್‌‌ನ ಅಥರ್ವ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಬಲ ಕಾಲಿನ ಮೂಳೆ ಮುರಿತ ಉಂಟಾಗಿರುವುದಾಗಿ ತಿಳಿಸಿ ಚಿಕಿತ್ಸೆ ನೀಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಆರೋಪಿತರು ಗಾಯಾಳುವಿನ ಆಸ್ಪತ್ರೆಯ ಚಿಕಿತ್ಸೆಯ ವೆಚ್ಚವನ್ನು ನೀಡುವುದಾಗಿ ಹೇಳಿ ನಂತರ ನಿರಾಕರಿಸಿರುವುದರಿಂದ ಪಿರ್ಯಾದು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್  ಠಾಣೆ ಅಪರಾಧ ಕ್ರಮಾಂಕ 53/2022 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿ ಕು. ಶಾಲಿನಿ ಇವರು ಬಿಸಿಎ ಪದವೀಧರೆಯಾಗಿದ್ದು, ಬೆಂಗಳೂರಿನ ಧನಿರಾಮ್ ಕಂಪನಿಯಲ್ಲಿ ಕಲೆಕ್ಷನ್  ಎಕ್ಸಿಕ್ಯೂಟಿವ್  ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಅದೇ ಕಂಪನಿಗೆ 2021 ಡಿಸೆಂಬರ್ ತಿಂಗಳಲ್ಲಿ ಕಲೆಕ್ಷನ್ ಎಕ್ಸಿಕ್ಯೂಟಿವ್ ಕೆಲಸದಲ್ಲಿದ್ದ ಕೋಲಾರ ಜಿಲ್ಲೆಯ ಮಾಲೂರಿನ ನಿವಾಸಿಯಾದ ನಿತೀನ್ ಕುಮಾರ್ ಎನ್ತನ್ನ ಪರಿಚಯ ಮಾಡಿಕೊಂಡು ಪಿರ್ಯಾದಿಯನ್ನು ನಂಬಿಸಿ ದುಬೈ ಕಂಪನಿಯಲ್ಲಿ ಹಾಗೂ ನಂತರದ ದಿನದಲ್ಲಿ ಅಮೇರಿಕಾದ ಮನಿಮೇಕರ್ ಟೆಕ್ಸ್ ಝೋನ್ ಪ್ರೈ ಲಿ ಕಂಪನಿಯಲ್ಲಿ ಫ್ಲೋರ್ ಮ್ಯಾನೇಜರ್ ಕೆಲಸ  ಕೊಡಿಸುವುದಾಗಿ ನಂಬಿಸಿ, ದಿನಾಂಕ: 07/05/2021 ರಿಂದ ಪಿರ್ಯಾದಿದಾರರ ಹೆಸರನಲ್ಲಿರುವ ಕುಂದಾಪುರ ಶಾಖೆಯ ಯೂನಿಯನ್ ಬ್ಯಾಂಕ್ ಖಾತೆ ಯಿಂದ ರೂ. 22,63,999/-, ಕೋರಮಂಗಳ ಶಾಖೆಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ನ ಎಸ್.ಬಿ ಖಾತೆ ಯಿಂದ ರೂ. 5,85,500/- ಹಾಗೂ ಪಿರ್ಯಾದಿಯ ತಂದೆ ಕೆ. ನರಸಿಂಹ ಪೂಜಾರಿ ಯವರ ಕುಂದಾಫುರ ಶಾಖೆಯ ಎಸ್.ಬಿ.ಐ ಬ್ಯಾಂಕ್ ಖಾತೆ ಯಿಂದ ರೂ. 5,16,302/- ನಂತೆ ಒಟ್ಟು ರೂ. 33,65,801/- ನಗದು ಹಣವನ್ನು ಆರೋಪಿ ನಿತೀನ್ ಕುಮಾರ ನ ಕೋರಮಂಗಲ ಶಾಖೆಯ  ಹೆಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಗೆ ಮೊಬೈಲ್ಫೋನ್ ಫೇ ಆ್ಯಪ್ ಮತ್ತು ನೆಪ್ಟ್ಮೂಲಕ ಹಣ ಹಾಕಿಸಿಕೊಂಡು ಫಿರ್ಯಾದಿದಾರರಿಗೆ ಕೆಲಸ ಕೊಡಿಸದೇ ಹಣವನ್ನು ವಾಪಾಸು ನೀಡದೇ ಆರೋಪಿ ನಿತೀನ್ ಕುಮಾರ್ ಎನ್ಈತನು ಅಪರಾಧಿಕ ನಂಬಿಕೆ ದ್ರೋಹ, ವಂಚನೆ ಹಾಗೂ ಮೋಸ ಎಸಗಿರುತ್ತಾನೆ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಉಡುಪಿ ಸೆನ್‌ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  19/2022 ಕಲಂ: 406, 420 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು: ಫಿರ್ಯಾದಿ ಮೊಹಮ್ಮದ್ ಪೈಸೂಲ್ ಬಾರಿ ಇವರು ಬೈಂದೂರು ಜಾಮೀಯಾ ಮಸೀಧಿಯಲ್ಲಿ ಇಮಾಮ್ ಖತೀಬ್ ಆಗಿ ಸುಮಾರು 25 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ದಿನಾಂಕ 02/05/2022 ರಂದು ಫಿರ್ಯಾದಿದಾರರು ಅವರ ಹೆಂಡತಿ ಮಕ್ಕಳೊಂದಿಗೆ ಜಾಮೀಯಾ ಮಸೀಧಿಗೆ ಸಂಬಂದಿಸಿದ ವಸತಿ ಗೃಹದಲ್ಲಿ ಇರುವಾಗ ಸಮಯ ಸುಮಾರು ಸಂಜೆ 5:15 ಗಂಟೆಗೆ ಮೊಹಮ್ಮದ್ ಸುಲ್ತಾನ್, ಮೊಹಮ್ಮದ್ ಅಕ್ಬರ್, ಅಬ್ದುಲ್ ಸುಹಾನ್, ಪೈಜಾನ್, ಮುತಿ ಉರ್ ರೆಹಮಾನ್ ಮತ್ತು ಇತರರು ಸೇರಿ ಫಿರ್ಯಾದಿದಾರರು ವಾಸವಿರುವ ವಸತಿ ಗೃಹದ ಛಾವಡಿಗೆ ಬಂದು, ಫಿರ್ಯಾದಿದಾರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಮನೆಯಿಂದ ಹೊರಗೆ ಬಾ ಎಂದು ಜೋರಾಗಿ ಬೊಬ್ಬೆ ಹಾಕಿದ್ದು, ಆಗ ಫಿರ್ಯಾದಿದಾರರು ಮನೆಯ ಬಾಗಿಲ ಬಳಿ ಬಂದಾಗ ಮೊಹಮ್ಮದ್ ಸುಲ್ತಾನನು ಫಿರ್ಯಾದಿದಾರರ ಅಂಗಿಯ ಕಾಲರ್ ಪಟ್ಟಿಯನ್ನು ಹಿಡಿದು ಎಳೆದು, ಮೊಹಮ್ಮದ್ ಅಕ್ಬರ್ ಮತ್ತು ಅಬ್ದುಲ್ ಸುಹಾನ್ ಸೇರಿ ಫಿರ್ಯಾದಿದಾರರಿಗೆ ಕೈಯಿಂದ ಬೆನ್ನಿಗೆ, ಭುಜಕ್ಕೆ ಹಾಗೂ ಮುಖಕ್ಕೆ ಗುದ್ದಿದ್ದು, ಅಲ್ಲದೇ ಉಳಿದವರು ಬಾಯಿಗೆ ಬಂದಂತೆ ಬೈಯ್ಯುತ್ತಿದ್ದು, ಆಗ ಮನೆಯೊಳಗಿದ್ದ ಫಿರ್ಯಾದಿದಾರರ ಹೆಂಡತಿ ಫರ್ಜಾನಾ ಹಾಗೂ ಮಗಳು ಫಾತೀಮಾ ಫರಾಸತ್ ಳು ಮನೆಯಿಂದ ಹೊರಗೆ ಬಂದು ಫಿರ್ಯಾದಿದಾರರಿಗೆ ಹೊಡೆಯುವುದನ್ನು ತಪ್ಪಿಸುತ್ತಿರುವಾಗ ಮೊಹಮ್ಮದ್ ಸುಲ್ತಾನನು ಫಿರ್ಯಾದಿದಾರರ ಹೆಂಡತಿಯ ರಟ್ಟೆಯನ್ನು ಹಿಡಿದೆಳೆದು ದೂಡಿದ್ದು, ಪೈಜಾನನು ಫಿರ್ಯಾದಿದಾರರ ಮಗಳಾದ ಫಾತೀಮಾ ಫರಾಸತ್ ಳ ಕೈಯನ್ನು ಹಿಡಿದೆಳೆದು ಕೆಳಗೆ ದೂಡಿ ಹಾಕಿದನು. ಆಗ ಅವರೆಲ್ಲರೂ ಜೋರಾಗಿ ಬೊಬ್ಬೆ ಹಾಕಿದ್ದನ್ನು ಕೇಳಿ ಆಸುಪಾಸಿನವರು ಬರುವುದನ್ನು ನೋಡಿ ಈ ದಿನ ನಿಮ್ಮನ್ನು ಇಷ್ಟಕ್ಕೆ ಬಿಟ್ಟಿದ್ದೇವೆ. ಮುಂದಕ್ಕೆ ಒಂದಲ್ಲ ಒಂದು ದಿನ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82/2022 ಕಲಂ. 143, 147, 448, 323, 354, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೊಲ್ಲೂರು: ದಿನಾಂಕ: 01.05.2022 ರಂದು ಬೆಳಿಗ್ಗೆ  10-00 ಗಂಟೆಯಿಂದ  ದಿ: 02.05.2022 ರಂದು ಬೆಳಗ್ಗೆ  05-30 ಗಂಟೆಯ  ಮಧ್ಯದ ಅವಧಿಯಲ್ಲಿ ಕುಂದಾಪುರ ತಾಲೂಕು ಹೊಸೂರು ಗ್ರಾಮದ ಕಾನ್ ಬೇರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಹಿಂಬದಿ ಬಾಗಿಲನ್ನು  ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ  ಗರ್ಭಗುಡಿ ಬಳಿಯಿದ್ದ ಕಾಣೆಕೆ ಡಬ್ಬಿಯ ಬೀಗವನ್ನು  ಒಡೆದು ಅದರಲ್ಲಿರುವ ಸುಮಾರು  20,000 ದಿಂದ 22,000/- ರೂಗಳನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2022 ಕಲಂ; 454, 457, 380 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 03-05-2022 10:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080