ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 01/05/2022 ರಂದು ಸಂಜೆ ಸುಮಾರು 7:30 ಗಂಟೆಗೆ ಕುಂದಾಪುರ ತಾಲೂಕಿನ ಕೊಟೇಶ್ವರ ಗ್ರಾಮದ ಸಾಯಿ ಅಟೋ ಲಿಂಕ್‌ ಬಳಿ ಪೂರ್ವ ಬದಿಯ NH 66 ಸರ್ವಿಸ್‌ ರಸ್ತೆಯಲ್ಲಿ, ಆಪಾದಿತ ಸುರೇಶ ಗಾಣಿಗ ಎಂಬವರು KA20-EE-3503ನೇ ಸ್ಕೂಟರ್‌ ನಲ್ಲಿ ಅವರ ಹೆಂಡತಿ ಜಯಶ್ರೀರವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು, ಕೊಟೇಶ್ವರ ಕಡೆಯಿಂದ ಅಂಕದಕಟ್ಟೆ (ಕುಂದಾಪುರ) ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಗೆ ಅಡ್ಡ ಬಂದ ನಾಯಿಯನ್ನು ನೋಡಿ ಒಮ್ಮೆಲೆ ಬ್ರೇಕ್‌ ಹಾಕಿದ ಕಾರಣ ಸ್ಕೂಟರ್‌ ಸ್ಕಿಡ್‌ ಆಗಿ ವಾಲಿ ಕಾರಣ ಜಯಶ್ರೀರವರು ಸ್ಕೂಟರ್‌‌ನಿಂದ ಎಸೆದು ರಸ್ತೆಗೆ ಬಿದ್ದು ಅವರ ತಲೆಗೆ ಗಂಭೀರ ರಕ್ತಗಾಯವಾಗಿ. ಕೊಟೇಶ್ವರ ಎನ್‌. ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ: ಫಿರ್ಯಾದಿ ಅಜಿತ್ ಕುಮಾರ್ (38) ಇವರು ನಿನ್ನೆ ದಿನಾಂಕ 02-05-2022 ರಂದು ತನ್ನ ದ್ವಿಚಕ್ರ ವಾಹನದಲ್ಲಿ ಕಾರ್ಕಳದಿಂದ ರೆಂಜಾಳಕ್ಕೆ ತನ್ನ ಮನೆಗೆ ಹೋಗುತ್ತಿರುವಾಗ ಸಂಜೆ 17-30 ಗಂಟೆಗೆ ಕಾರ್ಕಳ ಕಸಬಾದ ಗೋಮಟೇಶ್ವರ ಬೆಟ್ಟದ ಹಿಂಭಾಗದ ರಸ್ತೆಯಲ್ಲಿ ಹೋಂಡಾ ಕಂಪೆನಿಯ ಮೇಸ್ಟ್ರೋ ದ್ವಿಚಕ್ರ ವಾಹನ KA20ED6100 ನೇದನ್ನು ಅದರ ಸವಾರ ಅಜಿತ್ ಕುಮಾರ್, (ಪ್ರಾಯ 63 ವರ್ಷ) ಎಂಬವರು ಕಾರ್ಕಳ ಕಡೆಯಿಂದ ಗ್ಯಾಸ್ ಗೋಡೌನ್ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಾ ಕಸಬಾ ಗ್ರಾಮದ ಗ್ಯಾಸ್ ಗೋಡೌನ್ ಬಳಿ ನಾಯಿಯೊಂದು ರಸ್ತೆಯಲ್ಲಿ ಅಡ್ಡ ಬಂದುದನ್ನು ನೋಡಿ ಒಮ್ಮಲೇ ಬ್ರೇಕ್ ಹಾಕಿದಾಗ ದ್ವಿಚಕ್ರ ವಾಹನ ಸಮೇತ ರಸ್ತೆಗೆಬಿದ್ದು ಅವರ ಎಡಕೆನ್ನೆಗೆ ಮತ್ತು ಕಾಲಿಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಅವರ ಮಗ ಅನಿಲ್ ಕುಮಾರ್ ಎಂಬವರು ಬಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಒಳರೋಗಿಯಾಗಿಚಿಕಿತ್ಸೆ ಪಡೆಯುತ್ತಿರುವ ಅಜಿತ್ ಕುಮಾರ್ ರವರು ಚಿಕಿತ್ಸೆಗೆ ಸ್ಪಂದಿಸದೇ ಈ ದಿನ ದಿನಾಂಕ 03-05-2022 ರಂದು ಬೆಳಿಗ್ಗೆ 04-38 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2022 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿ ಶೈಲಜಾ ಎಂ.ಬಿ ಇವರು ಕುಟುಂಬ ಸಮೇತರಾಗಿ  ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರು ನಾಗಮ್ಮ ನಿಲಯ ಎಂಬ ಮನೆಗೆ ಪಿರ್ಯಾದುದಾರರು ಆಗಾಗ ಬಂದು ಹೋಗುತ್ತಿದ್ದು, ದಿನಾಂಕ 23/04/2022 ರಂದು 23:00 ಗಂಟೆಯಿಂದ ದಿನಾಂಕ 03/05/2022 ರಂದು ಬೆಳಿಗ್ಗೆ 08:30 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಪಿರ್ಯಾದುದಾರರ ಮನೆಯ ಮುಂಬಾಗಿಲನ್ನು ಒಡೆದು, ಒಳಪ್ರವೇಶಿಸಿ, ಮನೆಯಲ್ಲಿ ಹುಡುಕಾಡಿ ಕಳವು ಮಾಡಲು ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2022 ಕಲಂ: 454, 457, 380, 511 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

 • ಇತರ ಪ್ರಕರಣ

 • ಬೈಂದೂರು: ಪಿರ್ಯಾದಿ ಸತೀಶ ತೋಳಾರ್ ಇವರು ಬಿಜೂರು ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿದ್ದು, ಬಿಜೂರು ಗ್ರಾಮದ ದೀಟಿ ದೇವಸ್ಥಾನ ರಸ್ತೆಯಿಂದ ಹೊಲ್ಮನೆ ಕೆರೆಯ ತನಕ ಪಂಚಾಯತ್ ರಸ್ತೆಯಿದ್ದು, ಸದ್ರಿ ರಸ್ತೆಯನ್ನು 2008 ರಲ್ಲಿ ಮಾಡಿ, 2009 ನೇ ಇಸವಿಯಲ್ಲಿ ರಸ್ತೆಗೆ ಪಂಚಾಯತ್ ನಿಂದ ಅನುದಾನ ಹಾಕಿ ಅಭಿವೃದ್ದಿ ಮಾಡಲಾಗಿರುತ್ತದೆ. ದಿನಾಂಕ; 30-04-2022 ರಂದು ಮಧ್ಯಾಹ್ನ ಸಮಯ ಸುಮಾರು 01:30 ಗಂಟೆಗೆ ಪಡುವಾಯನ ಹಿತ್ಲು ದೇವಿ ಮನೆ ಹತ್ತಿರ ಕೃಷ್ಣ ದೇವಾಡಿಗ, ನಾಗರಾಜ ದೇವಾಡಿಗ, ಉದಯ ದೇವಾಡಿಗ, ಸಂತೋಷ ದೇವಾಡಿಗ ಮತ್ತು KA-35-M-4182  ನೇದರ ಜೆ ಸಿ ಬಿ ಚಾಲಕ ಸೇರಿ ಜೆ ಸಿ ಬಿ ಸಹಾಯದಿಂದ ಸದ್ರಿ ರಸ್ತೆಯಲ್ಲಿ ಹೊಂಡ ತೋಡುತ್ತಿರುವುದಾಗಿ ಪಿರ್ಯಾದುದಾರರಿಗೆ ಮಾಹಿತಿ ಬಂದಿದ್ದು, ಪಿರ್ಯಾದುದಾರರು ಕುಂದಾಪುರ ತಾಲೂಕು ಪಂಚಾಯತನಲ್ಲಿ ಮೀಟಿಂಗ್ ನಲ್ಲಿದ್ದುದ್ದರಿಂದ ಪಂಚಾಯತ್ ನ ಕಾರ್ಯದರ್ಶಿಯವರಾದ ನಾಗರಾಜ ದೇವಾಡಿಗರವರಿಗೆ ವಿಷಯ ತಿಳಿಸಿ, ನಾಗರಾಜ ದೇವಾಡಿಗರವರು ಪಂಚಾಯತನ ಅಧ್ಯಕ್ಷರಾದ ರಮೇಶ ವಿ ದೇವಾಡಿಗರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಆರೋಪಿತರಾದ ಕೃಷ್ಣ ದೇವಾಡಿಗ, ನಾಗರಾಜ ದೇವಾಡಿಗ,ಉದಯ ದೇವಾಡಿಗ, ಸಂತೋಷ ದೇವಾಡಿಗ ಮತ್ತು ಜೆ ಸಿ ಬಿ ಚಾಲಕ ಸೇರಿ ರಸ್ತೆಯಲ್ಲಿ ಹೊಂಡ ತೋಡುತ್ತಿದ್ದು, ಆಗ ಅವರಲ್ಲಿ ಯಾಕೆ ಪಂಚಾಯತ್ ನ ರಸ್ತೆಯಲ್ಲಿ ಹೊಂಡ ತೋಡುತ್ತೀರಿ ಎಂದು ಕೇಳಿದ್ದಕ್ಕೆ, ಇದು ನಮಗೆ ಸಂಬಂಧಪಟ್ಟ ರಸ್ತೆ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂಬುದಾಗಿ ಹೇಳಿದ್ದು, ಪಿರ್ಯಾದುದಾರರು ಮೀಟಿಂಗ್ ಮುಗಿಸಿ ಬಿಜೂರಿಗೆ ಬಂದು ಸ್ಥಳ ಪರಿಶೀಲನೆ ಮಾಡಿದಾಗ ಪಂಚಾಯತ್ ರಸ್ತೆಯಲ್ಲಿ ಸುಮಾರು 3 ಅಡಿ ಆಳ ಹಾಗೂ ಸುಮಾರು 15 ರಿಂದ 20 ಅಡಿ ಉದ್ದದ ತನಕ ಹೊಂಡ ತೋಡಿ ರಸ್ತೆಯಲ್ಲಿ ಸಾರ್ವಜನಿಕರಿಗೆ ನಡೆದಾಡಲು ತೊಂದರೆ ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 83/2022 ಕಲಂ. 431 ಜೊತೆಗೆ 34 ಐಪಿಸಿ ಮತ್ತು 2 (A) PDLP Act.  ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

  ಬೈಂದೂರು: ಫಿರ್ಯಾದಿ ಶ್ರೀಮತಿ ಸುನಂದ ನಾಗರಾಜ ಇವರಿಗೆ ದಿನಾಂಕ 20/02/2020 ರಂದು ಹಿಂದೂ ಸಂಪ್ರದಾಯದಂತೆ ಹಿರಿಯರ ಸಮ್ಮಖದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಆರೋಪಿ 1ನೇ ನಾಗರಾಜ್ ಇವರೊಂದಿಗೆ ವಿವಾಹವಾಗಿದ್ದು, ಮದುವೆಯ ನಂತರ ಫಿರ್ಯಾದಿದಾರರು ಆರೋಪಿತ 1] ನಾಗರಾಜ್ ಪ್ರಾಯ 35 ವರ್ಷ ತಂದೆ: ದಿ. ಶಂಕರ ದೇವಾಡಿಗ 2] ಗಿರಿಜ ಪ್ರಾಯ 55 ವರ್ಷ ಗಂಡ: ಶಂಕರ ದೇವಾಡಿಗ3] ಶಿವರಾಜ್ ಪ್ರಾಯ 30 ವರ್ಷ ತಂದೆ:ದಿ. ಶಂಕರ ದೇವಾಡಿಗ4] ಆಶಿಕಾ ಪ್ರಾಯ 23 ವರ್ಷ ತಂದೆ: ದಿ.ಶಂಕರ ದೇವಾಡಿಗ5] ರಘುನಾಥ ಪ್ರಾಯ 40 ವರ್ಷ ತಂದೆ: ಮಂಜುನಾಥ ದೇವಾಡಿಗ6] ಪ್ರೇಮ ಪ್ರಾಯ 45 ವರ್ಷ ಗಂಡ: ಶೇಷ ದೇವಾಡಿಗ ಎಲ್ಲರ ವಾಸ: 1-122 ಸೂರುಬೆಟ್ಟು ಹೌಸ್ ಕಂಬದಕೋಣೆ ಗ್ರಾಮ ಬೈಂದೂರು ತಾಲೂಕು ಇವರ ಮನೆಯಲ್ಲಿ ವಾಸವಾಗಿದ್ದು, ಅವರ  ವೈವಾಹಿಕಾ ಜೀವನದಲ್ಲಿ ಒಂದು ಗಂಡು ಮಗು ಇರುತ್ತದೆ. ಫಿರ್ಯಾದಿದಾರರ ಮದುವೆಗೆ ಆರೋಪಿತರು 25 ಪವನ್ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಬೇಡಿಕೆ ಇಟ್ಟಿದ್ದು, ಅದರಂತೆ ಫಿರ್ಯಾದಿದಾರರ ಮನೆಯವರು 25 ಪವನ್ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಿದ್ದು,  ಅಲ್ಲದೇ ಮದುವೆಯ ಅರ್ಧ ಖರ್ಚನ್ನು ಕೂಡಾ ನೀಡಿರುತ್ತಾರೆ. ಫಿರ್ಯಾದಿದಾರರು ಮದುವೆಯಾದ 15 ದಿನದ ಒಳಗೆ ಆರೋಪಿತರೆಲ್ಲರೂ ಸೇರಿ ಮಾನಸಿಕ ಹಿಂಸೆ ನೀಡುತ್ತಿದ್ದುದ್ದಲ್ಲದೇ ಕೀಳು ದೃಷ್ಟಿಯಿಂದ ನೋಡುತ್ತಿದ್ದರು. ಆರೋಪಿ 2ನೇ ಗಿರಿಜ ಇವರು ಫಿರ್ಯಾದಿದಾರರು ಏನೇ ಕೆಲಸ ಮಾಡಿದರೂ ಕೂಡಾ ಮಾಡಿದ ಕೆಲಸ ಸರಿಯಾಗಿಲ್ಲ ಎಂದು ಪದೇ ಪದೇ ಕಿರುಕುಳವನ್ನು ನೀಡುತ್ತಿದ್ದುದ್ದಲ್ಲದೇ ಆರೋಪಿ 1ನೇಯವರಲ್ಲಿ ಇಲ್ಲ ಸಲ್ಲದ ಸುಳ್ಳು ಆರೋಪ ಹೇಳಿ,  ಫಿರ್ಯಾದಿದಾರರೊಂದಿಗೆ ಜಗಳ ಮಾಡುವಂತೆ ಮಾಡುತ್ತಿದ್ದರು. ಫಿರ್ಯಾದಿದಾರರು ಗರ್ಭಿಣಿ ಇರುವಾಗ ಆರೋಫಿ 1ನೇಯವನು ಫಿರ್ಯಾದಿದಾರರನ್ನು ಅವರ ತಾಯಿ ಮನೆಯಲ್ಲಿ ಬಿಟ್ಟು ಹೋಗಿ, ಅವರ ಬಳಿ ಇದ್ದ 25 ಪವನ್ ಚಿನ್ನಾಭರಣವನ್ನು ಪಡೆದುಕೊಂಡಿರುತ್ತಾನೆ. ಫಿರ್ಯಾದಿದಾರರು 7 ತಿಂಗಳು ಗರ್ಭಿಣಿ ಇರುವಾಗ ಮನೆಯವರೊಂದಿಗೆ ಆರೋಪಿತರ ಮನೆಗೆ ಹೋದಾಗ, ಫಿರ್ಯಾದಿದಾರರನ್ನು ಮನೆಯೊಳಗೆ ಸೇರಿಸದೇ, ಅವಾಚ್ಯ ಶಬ್ದಗಳಿಂದ ಬೈದು ಕಳುಹಿಸಿರುತ್ತಾರೆ. ದಿನಾಂಕ 01/05/2022 ರಂದು ಫಿರ್ಯಾದಿದಾರರು ತಾಯಿ ಮನೆಯಲ್ಲಿರುವಾಗ ಆರೋಪಿತರು ಫಿರ್ಯಾದಿದಾರರ ತಾಯಿ ಮನೆಯೊಳಗೆ ನುಗ್ಗಿ, ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಇನ್ನು ಮುಂದೆ ಹೆಂಡತಿಯಾಗಿ ಪರಿಗಣಿಸುವುದಿಲ್ಲ. ನೀನು ನಾನು ಹೇಳಿದಲ್ಲಿಗೆ ಬಂದು ವಿವಾಹ ವಿಚ್ಚೇಧನ ಪತ್ರಕ್ಕೆ ಸಹಿ ಹಾಕು. ಇಲ್ಲದಿದ್ದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಬೈಂದೂರು  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2022 ಕಲಂ. 498(A), 504, 506  ಜೊತೆಗೆ  34 ಐಪಿಸಿ   ಮತ್ತು 3, 4, 6 DP Act  ನಂತೆ  ಪ್ರಕರಣ ದಾಖಲಿಸಲಾಗಿದೆ.

      

  ಅಸ್ವಾಭಾವಿಕ ಮರಣ ಪ್ರಕರಣ

  ಉಡುಪಿ: ಉಡುಪಿ  ತಾಲೂಕು  ಮೂಡನಿಡಂಬೂರು ಗ್ರಾಮದ ಬ್ರಹ್ಮಗಿರಿ  ನಿಕ್ಕಿ ಅಪಾರ್ಟ್‌ಮೆಂಟ್‌ 407  ರಲ್ಲಿ  ಫಿರ್ಯಾದಿ ಮಮತಾ ಚಂದ್ರಹಾಸನ್‌ ಇವರೊಂದಿಗೆ  ವಾಸವಿದ್ದ ಫಿರ್ಯಾದುದಾರರ ಗಂಡನಾದ  ಮಟ್ಟು ಚಂದ್ರಹಾಸನ್‌ ಶರ್ಮಾ ಪ್ರಾಯ: 63  ವರ್ಷರವರು ನಿವೃತ್ತ ಬ್ಯಾಂಕ್‌ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಸುಮಾರು 3-4 ದಿನದಿಂದ ನಿತ್ರಾಣದಿಂದ ಬಳಲುತ್ತಿದ್ದು, ಈ ಬಗ್ಗೆ ಉಡುಪಿ ಆಸ್ಪತ್ರೆಯಿಂದ ಔಷಧಿಯನ್ನು ತೆಗೆದುಕೊಂಡು ಬರುತ್ತಿದ್ದರು. ದಿನಾಂಕ: 03/05/2022 ರಂದು ಬೆಳಿಗ್ಗೆ 04:00 ಗಂಟೆಯ ಸುಮಾರಿಗೆ  ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆ ತಂದಲ್ಲಿ  ಬೆಳಿಗ್ಗೆ 07:40 ಗಂಟೆ ಸುಮಾರಿಗೆ ಪರೀಕ್ಷಿಸಿದ ವೈದ್ಯರು ಮಟ್ಟು ಚಂದ್ರಹಾಸನ್‌ ಶರ್ಮಾ ರವರು ಅದಾಗಲೇ ಮೃತಪಟ್ಟಿರುವುದಾಗಿ  ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

  ಹಿರಿಯಡ್ಕ: ಪಿರ್ಯಾದಿ ಸುಧಾಕರ ಶೆಟ್ಟಿ ಇವರ ತಮ್ಮ (53) ವರ್ಷ ಸುಬಾಶ್ಚಂದ್ರ ಶೆಟ್ಟಿ ಎಂಬವರು ಕಳೆದ ಮೂರು ದಿನಗಳ ಹಿಂದೆ ತನ್ನ ಹೆಂಡತಿ ಮನೆಯಾದ ಪೆರ್ಡೂರಿಗೆ ಬಂದಿದ್ದು ಅಲ್ಲಿ ಮನೆಯ ದುರಸ್ಥಿ ಕಾರ್ಯವನ್ನು ಮಾಡಿ ಮನೆಯ ಗೃಹ ಪ್ರವೇಶ ಕೆಲಸ ಕಾರ್ಯಗಳಿಗೆ ಬಂದವರಾಗಿದ್ದು  ಅವರು  ಸಕ್ಕರೆ ಕಾಯಿಲೆ ಮತ್ತು ಅಮಲು ಪದಾರ್ಥ ಸೇವಿಸುವ ಚಟದವರಾಗಿದ್ದು ಈ ದಿನ ದಿನಾಂಕ: 03/05/2022 ರಂದು ಬೆಳಿಗ್ಗೆ 9:30 ಗಂಟೆಯಿಂದ ಮಧ್ಯಾಹ್ನ 12:30 ಗಂಟೆಯೊಳಗೆ ಪೆರ್ಡೂರ ಗ್ರಾಮದ ಪಕ್ಕಾಲಿನ ಯಕ್ಷಿ ಮಠದ ಬಳಿ ರಾಮಮೂರ್ತಿ ಹೆಬ್ಬಾರ್‌ ಎಂಬವರ ಹಾಡಿಯ ಬಳಿಯಲ್ಲಿ ಅನ್ನ ಅಹಾರವಿಲ್ಲದೆ ಮಲಗಿದವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 23/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

 

ಇತ್ತೀಚಿನ ನವೀಕರಣ​ : 04-05-2022 09:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080