ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕೋಟ: ಪಿರ್ಯಾದಿದಾರರಾದ ಗುಲಾಬಿ ಪೂಜಾರ್ತಿ (43) ಗಂಡ:ವಿನೋದ ಪೂಜಾರಿ ವಾಸ: ನಂದಿನಿ ನಿಲಯ ಚಚಕೇರಿ  ಕೋಟ ಇವರ ತಾಯಿ ಶ್ರೀಮತಿ  ಸೀತು  ಪೂಜಾರ್ತಿ (70) ರವರು  ಕಳೆದ  15 ವರ್ಷಗಳಿಂದ  ಮಾನಸಿಕ  ಕಾಯಿಲೆಯಿಂದ  ಬಳಲುತ್ತಿದ್ದು, ಬೆಂಗಳೂರಿನ  ನಿಮಾನ್ಸ್‌ ಆಸ್ಪತ್ರೆಯಲ್ಲಿ  ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು, ದಿನಾಂಕ 02/05/2021 ರಂದು ರಾತ್ರಿ 10:00 ಘಂಟೆಯಿಂದ  ದಿನಾಂಕ 03/05/2021  ರಂದು  ಮುಂಜಾವಿನ 6:00 ಘಂಟೆ ಮಧ್ಯಾವಧಿಯಲ್ಲಿ ಅವರಿಗೆ ಇದ್ದ ಮಾನಸಿಕ ಕಾಯಿಲೆಯಿಂದ ಅಥವಾ  ಬೇರಾವುದೋ ಕಾರಣದಿಂದ ಜೀವನದಲ್ಲಿ  ಜಿಗುಪ್ಸೆಗೊಂಡು ಮನೆಯ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 12/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಪೊಣ್ಣಿ ಸ್ವಾಮಿ (40) ತಂದೆ: ಗುರು ಸ್ವಾಮಿ ವಾಸ: ನಾಲ್ಕೂರು ನಂಚಾರು ಗ್ರಾಮ ಬ್ರಹ್ಮಾವರ ಇವರ ಚಿಕ್ಕಮ್ಮನ ಮಗ ಗೋವಿಂದ (58) ರವರು ಪಿರ್ಯಾದಿದಾರರ ಜೊತೆಯಲ್ಲಿ ಕಲ್ಲು ಕೋರೆಯಲ್ಲಿ ಕಲ್ಲು ಒಡೆಯುವ ಕೆಲಸ  ಮಾಡಿಕೊಂಡಿದ್ದರು. ಗೋವಿಂದನು ವಿಪರೀತ ಮದ್ಯಪಾನ ಕುಡಿತದ ಚಟ ಹೊಂದಿದ್ದು, ದಿನಾಂಕ 02/05/2021ರಂದು ಕೆಲಸಕ್ಕೆ ರಜೆ ಇದ್ದ ಕಾರಣ ಮನೆಯಲ್ಲಿಯೇ ಕುಡಿದು ಊಟ ಮಾಡದೇ ಹಾಗೆಯೇ ಮಲಗಿದ್ದವನು ದಿನಾಂಕ 03/05/2021 ರಂದು ಬೆಳಗ್ಗಿನ ಜಾವ ಸಮಯ ಸುಮಾರು 03.00 ಗಂಟೆಯ ಸುಮಾರಿಗೆ ಮಲಗಿದ್ದಲ್ಲಿಯೇ ಅಸ್ವಸ್ಥಗೊಂಡವನನ್ನು  ಕೂಡಲೇ ಚಿಕಿತ್ಸೆಯ ಬಗ್ಗೆ ಪೇತ್ರಿ ಆರೋಗ್ಯ  ಕೇಂದ್ರಕ್ಕೆ  ಕರೆದುಕೊಂಡು ಬಂದಾಗ ಗೋವಿಂದನು ಮೃತ ಪಟ್ಟಿರುವುದಾಗಿ ವೈದ್ಯಾಧಿಕಾರಿಯವರು ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 13/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಫು: ಪಿರ್ಯಾದಿದಾರರಾದ ಅರುಣ್ ಶೆಟ್ಟಿ (47) ತಂದೆ: ದಿ. ಧರ್ಮಪಾಲ ಶೆಟ್ಟಿ, ವಾಸ: ಮಜಲುಗುತ್ತು ಕಲ್ಯ, ಉಳಿಯಾರಗೋಳಿ ಗ್ರಾಮ ಕಾಪು ಇವರ ಅಣ್ಣ ಸತೀಶ್ ಶೆಟ್ಟಿ (55) ರವರು ಅವರು ಹಿರಿಯರ ಮನೆಯಾದ ಉಳಿಯಾರಗೋಳಿ ಗ್ರಾಮದ ಕಲ್ಯಾದಲ್ಲಿ ವಾಸ ಮಾಡಿಕೊಂಡಿದ್ದು ಅವರು ಕಾಪು ಮಯೂರ ಹೋಟೆಲ್‌‌ನಲ್ಲಿ ಸಪ್ಲೈಯರ್ ಕೆಲಸ ಮಾಡಿಕೊಂಡಿರುತ್ತಾರೆ. ಅವರು ಟಿಬಿ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದು ಅಲ್ಲದೇ ಅವರಿಗೆ ಕುಡಿತದ ಅಭ್ಯಾಸವು ಇರುತ್ತದೆ. ಸತೀಶ್ ಶೆಟ್ಟಿ ಯವರು ತನಗಿರುವ ಟಿಬಿ ಖಾಯಿಲೆಯ ವಿಚಾರದಲ್ಲಿ ಮತ್ತು ಶರಾಬು ಕುಡಿಯುವ ಅಭ್ಯಾಸದ ವಿಚಾರದಲ್ಲಿ ಖಿನ್ನತೆಗೆ ಒಳಗಾಗಿ  ದಿನಾಂಕ 02/05/2021 ರಾಂದು ರಾತ್ರಿ 9:00 ಗಂಟೆಯಿಂದ ದಿನಾಂಕ 03/05/2021 ರ ಬೆಳಿಗ್ಗೆ 7:30 ಗಂಟೆಯ ಮಧ್ಯಾವಧಿಯಲ್ಲಿ ಅವರು ವಾಸವಾಗಿರುವ ಕಲ್ಯಾದ ಹಿರಿಯರ ಮನೆಯ ಸ್ಲ್ಯಾಬಿನ ಹುಕ್ಕಿಗೆ ನೈಲಾನ್ ಹಗ್ಗವನ್ನು ಕಟ್ಟಿಕೊಂಡು ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 16/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-05-2021 06:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080