ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಕೃಷ್ಣ (36), ತಂದೆ: ದಿ.ಲಚ್ಚು  ವಾಸ: ಸೂರಜೆಡ್ಡು  ಗುಮ್ಮಲ ಬೆಳ್ವೆ  ಗ್ರಾಮ ಹೆಬ್ರಿ ತಾಲೂಕು  ಇವರ  ತಾಯಿ  ಶ್ರೀಮತಿ  ರಾಧ  ನಾಯ್ಕ (67)  ಇವರು   ದಿನಾಂಕ 11/03/2023 ರಂದು   ಬೆಳಿಗ್ಗೆ  9:00  ಗಂಟೆಗೆ  ಹೆಬ್ರಿ ತಾಲೂಕಿನ  ಬೆಳ್ವೆ  ಗ್ರಾಮದ ಸೂರಜೆಡ್ಡು   ಗುಮ್ಮಲ  ಎಂಬಲ್ಲಿ   ಕೃಷ್ಣ ನಾಯ್ಕ  ಎಂಬುವವರ  ಮನೆಗೆ  ಕೃಷಿ  ಕೆಲಸ  ಮಾಡಲು ಹೋಗಿದ್ದು, ಅಲ್ಲಿ ಅವರ  ಮನೆಯ ಹಾಡಿಯಲ್ಲಿ  ದರಲೆಯನ್ನು  ಗುಡಿಸುತ್ತಿರುವಾಗ  ಅವರ ಎಡಕೈಯ  ತೋರು ಬೆರಳಿನ  ಮೇಲ್ಬಾಗಕ್ಕೆ  ಅಕಸ್ಮಾತ   ಯಾವುದೋ ವಿಷ  ಪೂರಿತವಾದ  ಹಾವು  ಕಚ್ಚಿದ್ದು, ಅವರಿಗೆ   ಹಾವು  ಕಚ್ಚಿದ   ಬಗ್ಗೆ ನಾಟಿ ಚಿಕಿತ್ಸೆ  ಕೊಡಿಸಿದ್ದು, ಆದರೆ  ಸರಿಯಾಗಿ ಗುಣವಾಗದೇ  ಇರುವ  ಕಾರಣ  ದಿನಾಂಕ  25/03/2023 ರಂದು    ಬೆಳಿಗ್ಗೆ  ಬೆಳ್ವೆ  ಪ್ರಾಥಮಿಕ ಆರೋಗ್ಯ  ಕೇಂದ್ರಕ್ಕೆ  ಕರೆದುಕೊಂಡು  ಹೋಗಿದ್ದು, ಅಲ್ಲಿಂದ  ಹೆಚ್ಚಿನ  ಚಿಕಿತ್ಸೆಯ ಬಗ್ಗೆ  ಉಡುಪಿ  ಜಿಲ್ಲಾ  ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ನೀಡಿ   ಒಳರೋಗಿಯಾಗಿ   ದಾಖಲು ಮಾಡಿಕೊಂಡಿರುತ್ತಾರೆ  ಆ ಬಳಿಕ  ದಿನಾಂಕ  27/03/2023  ರಂದು ಹೆಚ್ಚಿನ  ಚಿಕಿತ್ಸೆಯ  ಬಗ್ಗೆ  ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ  ಹೋಗುವಂತೆ ಕಳುಹಿಸಿರುತ್ತಾರೆ.  ಮಂಗಳೂರು  ವೆನ್ಲಾಕ್  ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ   ಇದ್ದ  ಶ್ರೀಮತಿ ರಾಧ  ಇವರು  ದಿನಾಂಕ  02/04/2023 ರಂದು ಬೆಳಿಗ್ಗೆ  11:27  ಗಂಟೆಗೆ   ಚಿಕಿತ್ಸೆ  ಫಲಕಾರಿಯಾಗದೇ   ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 09/2023  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಉಮೇಶ ನಾಯ್ಕ (42), ತಂದೆ : ಪರಮ ನಾಯ್ಕ, ವಾಸ : ಆರೂರು. ಜೆಪಿ ನಗರ, ಆರೂರು ಗ್ರಾಮ ಬ್ರಹ್ಮಾವರ ತಾಲೂಕು ಇವರು ಮನೆಯಲ್ಲಿ ಮಲಗಿರುವಾಗ ದಿನಾಂಕ 02/04/2023 ರಂದು ಬೆಳಿಗ್ಗಿನ ಜಾವ 02:00 ಗಂಟೆಗೆ ಮನೆಯ ಮಾಡಿನಲ್ಲಿ ಏನೋ ಶಬ್ದವಾಗಿದ್ದು ಪಿರ್ಯಾದಿದಾರರು ಮತ್ತು ಅವರ ಹೆಂಡತಿ  ಎಚ್ಚರವಾಗಿ ನೋಡಿದಾಗ ಮನೆಯ ಶೌಚಾಲಯದ ಮಾಡಿನ ಮೇಲೆ  ಇರುವ ಹಂಚನ್ನು ಯಾರೋ ಒಬ್ಬ ವ್ಯಕ್ತಿಯು ತೆಗೆಯುತ್ತಿದ್ದು ಮನೆಯ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದನು ನೋಡಿ ಪಿರ್ಯಾದಿದಾರರು ಬೊಬ್ಬೆ  ಹಾಕಿದಾಗ ಅ ವ್ಯಕ್ತಿಯು ಮಾಡಿನಿಂದ ಹಾರಿ ಅಲ್ಲಿಂದ ಓಡಿ ಹೋಗಿದ್ದುದನ್ನು ಮನೆಯ ಕಿಟಕಿಯಿಂದ  ನೋಡಿದ್ದು ಅತನು ಒಳ ಬನಿಯಾನ್‌ ಮತ್ತು ಪ್ಯಾಂಟ್‌ ಧರಿಸಿರುತ್ತಾನೆ. ನಂತರ ಪಿರ್ಯಾದಿದಾರರು ಮನೆಯ ಎದುರಿನ ಬಾಗಿಲು ತೆಗೆದು ಲೈಟ್‌ ಹಾಕಿ ನೋಡಿದಾಗ ಮನೆಯ ಹೊರಗೆ ಅಂಗಳದಲ್ಲಿ ಒಂದು ಮೆರೂನ್‌ ಬಣ್ಣದ ಜರ್ಕಿನ್‌ ಹಾಗೂ ನೀಲಿ ಬಣ್ಣದ ಅಂಗಿ ಸಿಮೇಂಟ್‌ ಶೀಟಿನ ತಗಡಿನ ಮೇಲೆ ಇದ್ದಿದ್ದು, ಅಲ್ಲೆ ಹತ್ತಿರದಲ್ಲಿ ಒಂದು ಜೊತೆ ಕಪ್ಪು ಬಣ್ಣದ ಚಪ್ಪಲಿ ಇರುತ್ತದೆ.  ಆ ವ್ಯಕ್ತಿಯು ಪಿರ್ಯಾದಿದಾರರ ಮನೆಯ ಮಾಡಿನ ಹಂಚನ್ನು ತೆಗೆದು ಒಳಗೆ ಪ್ರವೇಶಿಸಿ ರಾತ್ರಿ  ಕಳ್ಳತನ ಮಾಡಲು ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2023 ಕಲಂ: 457, 380, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಶ್ರೀಕಾಂತ್ ಆಚಾರ್ಯ (25), ತಂದೆ: ಗುರುರಾಜ್ ಆಚಾರ್ಯ , ವಾಸ;4-67/1 ಕೆಮ್ತೂರು ರಸ್ತೆ ರಾಂಪುರ ಅಲೆವೂರು ಗ್ರಾಮ ಕಾಪು ತಾಲೂಕು ಇವರು  ಮಲ್ಪೆ ಟೆಗ್ಮಾ ಶಿಫ್ ಯಾರ್ಡ್‌ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 31/03/2023 ರಂದು ಬೆಳಿಗ್ಗೆ 08:30 ಗಂಟೆಗೆ  ತನ್ನ ಮೋಟಾರ್‌  ಸೈಕಲ್‌ ನಂಬ್ರ  KA-20-EL-7874 YAMAHA ನೇ  ಯದನ್ನು ಟೆಗ್ಮಾ ಶಿಫ್‌ ಯಾರ್ಡ್‌ ನ ಗೇಟಿನ ಎದುರುಗಡೆ ಬೀಗ  ಹಾಕಿ  ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು ದಿನಾಂಕ 31/03/202 ರಂದು ಮದ್ಯಾಹ್ನ 03:30 ಗಂಟೆಗೆ ಬಂದು ನೋಡಿದಾಗ ಬೈಕ್‌ ಕಾಣದೆ ಇದ್ದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ಪತ್ತೆಯಾಗಿರುವುದಿಲ್ಲಾ. ಮೋಟಾರ್‌ ಸೈಕಲ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ , ಕಳವಾದ ಮೋಟಾರ್‌ ಸೈಕಲ್‌ ನ  ಮೌಲ್ಯ 32000/- ರೂಪಾಯಿ ಆಗಿರುತ್ತದೆ. CHASIS NUMBER: ME1RG0723G0198004, ENGINE NUMBER:G3C8E0303165 ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 32/2023   ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-04-2023 01:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080