ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿ ಕೃಷ್ಣ ಗೌಡ ಪ್ರಾಯ: 55 ವರ್ಷ, ತಂದೆ: ವೆಂಕಪ್ಪಗೌಡ, ವಾಸ: ಮನೆ ನಂ 3-33 ಮಂಜು ನಾಥ ಕೃಪಾ, ನೆಲ್ಲಿಗುಡ್ಡೆ ಹೌಸ್, ಮಿತ್ತಬೈಲು ಅಂಚೆ, ಪುತ್ತಿಗೆ ಗ್ರಾಮ ಇವರು ದಿನಾಂಕ: 01.04.2023 ರಂದು KA19EX7197 ನೇ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಹೆಂಡತಿ ಶಾಂತ, ಪ್ರಾಯ: 51 ವರ್ಷ ರವರನ್ನು ಸಹಸವಾರಳಾಗಿ ಕುಳ್ಳಿರಿಸಿಕೊಂಡು ಮೂಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಸಾಗಿದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಸಂಜೆ 4:00 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಚಿಲಿಂಬಿ ತಲುಪಿದಾಗ ಮೂಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ KA20P2395 ನೇ ನೋಂದಣಿ ಸಂಖ್ಯೆಯ ಮಾರುತಿ ಕಂಪೆನಿಯ ಓಮಿನಿಯನ್ನು ಅದರ ಚಾಲಕ ಉಮರುಲ್‌ ಫಾರೂಕ್‌ ಎಂಬಾತನು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹೆಂಡತಿ ಶಾಂತರವರೊಂದಿಗೆ ದ್ವಿಚಕ್ರ ವಾಹನ ಸಮೇತ ಡಾಂಬಾರು ರಸ್ತೆಗೆ ಬಿದ್ದಿದ್ದು, ಈ ಅಪಘಾತದಿಂದ ಪಿರ್ಯಾದಿದಾರರ ಎಡಕೈ ಮೂಳೆ ಮುರಿತಗೊಂಡು, ಬೆನ್ನಿನ ಹಿಂಬದಿಗೆ ರಕ್ತ ಗಾಯವಾಗಿರುತ್ತದೆ ಹಾಗೂ ಶಾಂತರವರಿಗೆ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ರಕ್ತ ಗಾಯ ಹಾಗೂ ಬೆನ್ನಿಗೆ ತರಚಿದ ಗಾಯವಾಗಿರುತ್ತದೆ.  ಗಾಯಗೊಂಡ ಪಿರ್ಯಾದಿದಾರರು ಹಾಗೂ ಶಾಂತರವರನ್ನು ಚಿಕಿತ್ಸೆಯ ಬಗ್ಗೆ ಕಾರ್ಕಳದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ವೈದ್ಯರ ಸಲಹೆಯಂತೆ ಶಾಂತರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ದೇರಳಕಟ್ಟೆ ಕೆ ಎಸ್‌ ಹೆಗ್ಡೆ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ.  ಪಿರ್ಯಾದಿದಾರರು ಕಾರ್ಕಳದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಿಂದ ಬಿಡುಗಡೆಗೊಂಡು ಕೆ ಎಸ್‌ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ಹೆಂಡತಿ ಶಾಂತರವರ ಆರೈಕೆಯಲ್ಲಿದ್ದುದ್ದರಿಂದ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 42/2023  ಕಲಂ 279,338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಉಡುಪಿ: ಪಿರ್ಯಾದಿ: ನಿತ್ಯಾನಂದ ಒಳಕಾಡು ಪ್ರಾಯ: 66  ವರ್ಷ ತಂದೆ: ದಿ. ರಾಮ ವಾಸ: ಮನೆ ನಂಬ್ರ 4-419ಎ1, ನಿಮ್ಮ ಮನೆ, ಶಾಂತಿನಗರ ಮುಖ್ಯರಸ್ತೆ, ಮಣಿಪಾಲ ಇವರಿಗೆ ದಿನಾಂಕ 01/04/2023 ರಂದು ಸಾರ್ವಜನಿಕರೊಬ್ಬರು ಕರೆ ಮಾಡಿ ಉಡುಪಿ ಕಲ್ಸಂಕ ಜಂಕ್ಷನ್‌ ಬಳಿ ಕನಕಮಾಲ್‌ ನ ಪಾಳು ಬಿದ್ದ ಕಟ್ಟಡದ ಪಾರ್ಕಿಂಗ್‌ ಸ್ಥಳದಲ್ಲಿ ಓರ್ವ ಅಪರಿಚಿತ ಗಂಡಸಿನ ಮೃತದೇಹ ಇರುವುದಾಗಿ ತಿಳಿಸಿದ ಮೇರೆಗೆ, ಕೂಡಲೇ ಪಿರ್ಯಾದುದಾರರು 13:00 ಗಂಟೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ, ಅಂದಾಜು 35 ರಿಂದ 40 ವರ್ಷ ಪ್ರಾಯದ ಗಂಡಸಿನ ಮೃತದೇಹವಾಗಿದ್ದು, ಆತನು 2-3 ದಿನಗಳ ಹಿಂದೆ ಮೃತಪಟ್ಟಿರಬಹುದಾಗಿದ್ದು, ಮೃತದೇಹವು ಕೊಳೆತ ಸ್ಥಿತಿಯಲ್ಲಿರುತ್ತದೆ. ಮೃತನು ಎತ್ತರದಿಂದ ಕಟ್ಟಡದಲ್ಲಿ ಮೇಲಿನಿಂದ ಕೆಳಗೆ ಬಿದ್ದೊ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದಾಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿ ಆರ್  ಕ್ರಮಾಂಕ 13/2023 ಕಲಂ 174   CrPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು ಫಿರ್ಯಾದಿ: ದಿವ್ಯ ಮೇಸ್ತಪ್ರಾಯ: 42 ವರ್ಷ ಗಂಡ: ದಿವಾಕರ ಮೇಸ್ತ  ವಾಸ: ಹಡವಿನ ಕೋಣೆ , ಶಿರೂರು ಗ್ರಾಮ, ಇವರ ಅಣ್ಣ ಸುರೇಶ್ ಮೇಸ್ತ ( ಪ್ರಾಯ:46 ವರ್ಷ ) ರವರು ಶಿರೂರು ಗ್ರಾಮದ ಹಡವಿನಕೋಣೆಯ  ಉಷಾ ರವರನ್ನು ಸುಮಾರು 10 ವರ್ಷಗಳ ಹಿಂದೆ ವಿವಾಹವಾಗಿದ್ದು ಅವರ ಮನೆಯಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಸುರೇಶ್ ಮೇಸ್ತ ರವರು   ಮದುವೆಯಾಗಿ 10 ವರ್ಷ ಕಳೆದರೂ ಮಕ್ಕಳಾಗದೇ ಇರುವ  ಕಾರಣ ಚಿಂತೆಯಿಂದ  ಮದ್ಯಪಾನ ಮಾಡುವ ಅಭ್ಯಾಸವನ್ನು  ಹೊಂದಿದ್ದು   ದಿನಾಂಕ 31/03/2023 ರಂದು  19:00 ಗಂಟೆಗೆ ಮನೆಯಲ್ಲಿಇಲಿಗೆ ಹಾಕಲು ತಂದು ಇರಿಸಿದ್ದ  ಮದ್ದನ್ನು ಆಕಸ್ಮಿಕವಾಗಿ ಕುಡಿದು ಅಸ್ವಸ್ಥಗೊಂಡವರನ್ನು  ಹೆಂಡತಿ  ಉಷಾ ರವರು  ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು  ಚಿಕಿತ್ಸೆಯಲ್ಲಿದ್ದ ಸುರೇಶ್ ಮೇಸ್ತ ರವರು ಚಿಕಿತ್ಸೆಗೆ ಸ್ಪಂದಿಸಿದೇ  ದಿನಾಂಕ 03/04/2023 ರಂದು ಬೆಳಿಗ್ಗೆ 10:38 ಗಂಟೆಗೆ  ಮೃತಪಟ್ಟಿರುತ್ತಾರೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಆರ್  19/2023 ಕಲಂ 174 ಸಿ ಆರ್ ಪಿ ಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 03-04-2023 06:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080