ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ ದಿನಾಂಕ: 02/04/2022 ರಂದು 16:00 ಗಂಟೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಕರಿಮಾರುಕಟ್ಟೆ ಎಂಬಲ್ಲಿ ಹಾದುಹೋಗಿರುವ ಕಾರ್ಕಳ-ಧರ್ಮಸ್ಥಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕಾರ್ಕಳ ಕಡೆಯಿಂದ ಬಜಗೊಳಿ ಕಡೆಗೆ KA20-Z-7697 ನೇ ನಂಬ್ರದ ಕಾರು ಚಾಲಕ ಶಾಕೀರ್ ಎಂಬವರು ತನ್ನ ಬಾಬ್ತು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ  ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು  ಕಾರ್ಕಳ ಕಡೆಯಿಂದ ಬಜಗೊಳಿ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಶ್ರೀ ನಾರಾಯಣ ಶೆಟ್ಟಿ (55) ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ನಾರಾಯಣ ಶೆಟ್ಟಿರವರ ತಲೆ ಹಾಗೂ ಎಡಕಾಲಿಗೆ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಂಡಸರಿಗೆ ಗಾಯವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  41/2022 ಕಲಂ: 279,337, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿ ಹೆರಿಯಕ್ಕ  ಇವರ ಅಜ್ಜನ ಬಾಬ್ತು  ಬೈಂದೂರು ತಾಲೂಕು  ಬೈಂದೂರು ಗ್ರಾಮದ ಸರ್ವೆ ನಂಬ್ರ 366-1 ರಲ್ಲಿ  7.25 ಎಕ್ರೆ ಮತ್ತು ಯಡ್ತರೆ ಗ್ರಾಮದ ಸರ್ವೆ ನಂಬ್ರ 4-10 ಬಿ ರಲ್ಲಿ  0.17 ಎಕ್ರೆ , 29-1ಎ2 ರಲ್ಲಿ 0.64 ಎಕ್ರೆ  ಮತ್ತು 29-1ಎ 5 ರಲ್ಲಿ  0.07 ಎಕ್ರೆ ಸ್ಥಳಗಳು ಪಿರ್ಯಾದುದಾರರ ಕುಟುಂಬದ ಹಿರಿಯರಾದ ಖಂಡೋಜಿ ಸುಬ್ಬ ರವರ ಹಕ್ಕಿನ ಸ್ಥಳವಾಗಿದ್ದು ಖಂಡೋಜಿ ಸುಬ್ಬರವರು ಮೃತಪಟ್ಟ ನಂತರ ಸದ್ರಿ ಆಸ್ತಿಗಳು ಪಿರ್ಯಾದುದಾರ ಅಜ್ಜ   ವೆಂಕ್ಟ ರವರ ಹೆಸರಿಗೆ ಖಾತಾ ಬದಲಾವಣೆಗೊಂಡಿದ್ದು   ವೆಂಕ್ಟ ರವರು 1964  ರಲ್ಲಿ  ಮೃತಪಟ್ಟಿದ್ದು ಮೃತಪಟ್ಟ ವಿವರರನ್ನು ಕುಟುಂಬದ ಸದಸ್ಯರು ಸಂಬಂದಪಟ್ಟಇಲಾಖೆಯಲ್ಲಿ  ನಮೂದು ಮಾಡಿರುವುದಿಲ್ಲ.  2016 ರಲ್ಲಿ ಜಟ್ಟು ಬಿನ್ ಅಮ್ಮಕ್ಕ ಎಂಬವರು ವೆಂಕ್ಟ  ರವರ ಮರಣ ದೃಡಪತ್ರವನ್ನು  ವೆಂಕ್ಟರವರು 10-10-2012 ರಂದು ಮೃತ ಪಟ್ಟಿರುವುದಾಗಿ  ಸುಳ್ಳು  ದಾಖಲಾತಿಯನ್ನು ಸೃಷ್ಟಿಸಿ  ವೆಂಕ್ಟ  ರವರು ತನ್ನ ಅಣ್ಣ  ಎಂಬುದಾಗಿ ಅಲ್ಲದೇ ಅವಿವಾಹಿತ ಎಂಬುದಾಗಿ ನಿಸ್ಸಂತತಿದಾರನೆಂದು ತಾನೊಬ್ಬಳೆ ವಾರಿಸುದಾರಳೆಂದು ಕುಂದಾಪುರ ತಹಶೀಲ್ದಾರ್  ಗೆ ಸುಳ್ಳು, ದಾಖಲೆಗಳನ್ನು ನೀಡಿ ನಿಸ್ಸಂತತಿ ದೃಡೀಕರಣ ಪತ್ರವನ್ನು ಪಡೆದುಕೊಂಡು ಮೇಲ್ಕಾಣಿಸಿದ ಜಾಗವನ್ನು  ತನ್ನ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಂಡು ದಿನಾಂಕ 17-06-2017 ರಂದು   ಬೈಂದೂರು ಸಬ್ ರಿಜಿಸ್ಟರ್ ಕಚೇರಿಯ ದಸ್ತಾವೇಜು ನಂಬ್ರ 685/2017-18 ನೇ ವ್ಯವಸ್ಥಾ ಪತ್ರದ ಮೂಲಕ  ಜಟ್ಟು  ಬಿನ್ ಅಮ್ಮಕ್ಕ  ತನ್ನ ಮಗಳು ಸೀತುರವರ ಹೆಸರಿಗೆ ನೊಂದಣಿ ಮಾಡಿಕೊಟ್ಟಿರುವುದಾಗಿದೆ.  ಅಲ್ಲದೇ    ಬೈಂದೂರು ಗ್ರಾಮದ ಸರ್ವೆ ನಂಬ್ರ 366 -1 ರಲ್ಲಿನ 7.025 ಎಕ್ರೆ ಸ್ಥಳದ ಮೇಲೆ  ವೆಂಕಟೇಶ್ ಬಿನ್ ಈರ ಮೋಗವೀರ ರವರು ನಮೂನೆ7ಎ ರಲ್ಲಿ ಭೂಸುಧಾರಣೆ ಕಾಯಿದೆಯಂತೆ  ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದು  ಎಲ್ ಆರ್ ಎಫ್ ನಂಬ್ರ 504/1998-99 ರಂತೆ ತನಿಖೆಗೆ ಬಾಕಿ ಇರುತ್ತದೆ.  ಇಂದಿಗೂ  ಬೇರೆ ಯಾರಿಗೂ ಭೂ ಸುಧಾರಣೆ ಕಾಯಿದೆ ಯಂತೆ   ಸದ್ರಿ ಸ್ಥಳವು ಮಂಜೂರು ಆಗಿರುವುದಿಲ್ಲ ಆದರೇ  ಜೋಗ ಮೊಗೇರ, ಜಟ್ಟು ಮೊಗೇರ್ತಿ, ದೇವಮ್ಮ ಮೊಗೇರ್ತಿ,   ದುರ್ಗಿ ಮೊಗೇರ್ತಿ, ರಾಮು ಮೊಗೇರ್ತಿ,  ಗಂಗಾ ಮೊಗೇರ್ತಿ,ನಾಗಮ್ಮ ಮೊಗೇರ್ತಿ, ಆನಂದ ಮೊಗೇರ,   ವೆಂಕಟೇಶ್  ಮೊಗೇರ ಮತ್ತು  ರಮೇಶ್ ಮೊಗೇರ ಇವರುಗಳು ಸೇರಿಕೊಂಡು ಮೇಲಿನ ಸ್ಥಳವನ್ನು  ಟಿ ಆರ್ ಐ ನಂಬ್ರ 6703/1980-81 ರಂತೆ ಭೂ ಸುಧಾರಣಾ ಕಾಯಿದೆ ಅಡಿ ಜಟ್ಟು ಎಂಬವರಿಗೆ ಭೂ ಮಂಜೂರಾತಿ  ಆಗಿರುವುದಾಗಿ  ಮೋಸದಿಂದ ಬೈಂದೂರು  ಸಬ್ ರಿಜಿಸ್ಟರ್  ಕಚೇರಿಯ ದಸ್ತಾವೇಜು  ನಂಬ್ರ 671/2003-04 ರಂತೆ ವಿಭಾಗ ಪತ್ರದ ಮೂಲಕ ಮೇಲ್ಕಾಣಿಸಿದವರ ಹೆಸರಿಗೆ ಹಿಸೆ ವಿಂಗಡಿಸಿಕೊಂಡಿರುವುದಾಗಿದೆ. ಆಪಾದಿತ  ಜಟ್ಟು ಬಿನ್ ಅಮ್ಮಕ್ಕ ಎಂಬವರು  ಪಿರ್ಯಾದುದಾರರ ಅಜ್ಜನ ಮರಣದ ಸುಳ್ಳು ದಾಖಲಾತಿಯನ್ನು ಸೃಷ್ಟಿಸಿ  ಪಿರ್ಯಾದುದಾರರ  ಅಜ್ಜನಿಗೆ ಸಂಬಂದಪಟ್ಟ ಜಾಗವನ್ನು  ಆರೋಪಿತರು ತಮ್ಮ ಹೆಸರಿಗೆ ನೊಂದಾವಣಿ ಮಾಡಿಕೊಂಡಿರುದಾಗಿರುತ್ತದೆ ಎಂಬಿತ್ಯಾದಿ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 69/2022 ಕಲಂ. 465, 468,471, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ

 • ಬೈಂದೂರು: ಫಿರ್ಯಾದಿ ಆನಂದ ಎಮ್ ಇವರು ಬೈಂದೂರು ತಾಲೂಕು ಯಡ್ತರೆ ಗ್ರಾಮದ ರತ್ತುಬಾಯಿ ಜನತಾ ಪ್ರೌಢ ಶಾಲೆಯ ಮುಖ್ಯೋಪಧ್ಯಾಯರಾಗಿದ್ದು  ದಿನಾಂಕ 01/04/2022 ರಂದು ಸಂಜೆ 5:00 ಗಂಟೆಗೆ ಶಾಲಾ ಕರ್ತವ್ಯವನ್ನು ನಿರ್ವಹಿಸಿ ಕೊಠಡಿಗಳಿಗೆ ಬೀಗ ಹಾಕಿ ಮನೆಗೆ ಹೋಗಿದ್ದು ದಿನಾಂಕ 02/04/2022 ರಂದು ಬೆಳಿಗ್ಗೆ 09:20 ಗಂಟೆಗೆ  ಪಿರ್ಯಾದುದಾರರು ಶಾಲೆಗೆ ಬಂದು  ಅಧ್ಯಾಪಕರ ಕೊಠಡಿಯ ಬೀಗವನ್ನು ತೆಗೆದು ನೋಡಿದಾಗ ಪಕ್ಕದಲ್ಲಿರುವ ಶಾಲಾ ಕಚೇರಿಯ ಬೀಗ ಮುರಿದಿರುವುದು ಕಂಡು ಬಂದಿದ್ದು ಯಾರೋ ಕಳ್ಳರು ದಿನಾಂಕ 01/04/2022 ರಂದು ಸಂಜೆ 5:00 ಗಂಟೆಯಿಂದ ದಿನಾಂಕ: 02/04/2022  ರ ಬೆಳಿಗ್ಗೆ 9:20 ಗಂಟೆಯ ನಡುವಿನ ಅವಧಿಯಲ್ಲಿ ಶಾಲಾ  ಕಚೇರಿಯ ಬಾಗಿಲಿನ ಬೀಗ ಮುರಿದು ಕಪಾಟುಗಳ ಬೀಗವನ್ನು ತೆರೆದು ಶಾಲಾ ದಾಖಲೆಗಳನ್ನು ಮತ್ತು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ,ಮುಖ್ಯೋಪಧ್ಯಾಯರ ಕೊಠಡಿಯಲ್ಲಿರುವ ಸಿ.ಸಿ ಕ್ಯಾಮೆರಾದ ಡಿ.ವಿ.ಆರ್ ನ್ನು ಹಾಳುಗೆಡವಿದ್ದು  ಕಪಾಟಿನಲ್ಲಿದ್ದ ನಗದು ರೂ 35,000/- ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 70 /2022 ಕಲಂ. 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಪಿರ್ಯಾಧಿ ಪ್ರದೀಪ ಶೆಟ್ಟಿ ಇವರು ಕಳೆದ ವರ್ಷ  ದಿನಾಂಕ 22.08.2021 ರಂದು ಮಂದಾರ್ತಿಯಲ್ಲಿ ಹೆಂಡತಿಯ ಸಂಬಂಧಿಕರ ಮದುವೆ ಹೋಗಿ ವಾಪಾಸು ಬಂದು ಹೆಂಡತಿ ಧರಿಸಿದ್ದ ಚಿನ್ನದ ಕಂಠಿ ಸರವನ್ನು ಮನೆಯ ಒಳಕೋಣೆಯಲ್ಲಿರುವ ಕಪಾಟಿನ ಲಾಕರ್‌ನಲ್ಲಿ ‌ ಇಟ್ಟು ಬೀಗ ಹಾಕಿರುತ್ತಾರೆ.ಈ ದಿನ ದಿನಾಂಕ:02-04-2022 ರಂಧು  ಯುಗಾದಿ ಹಬ್ಬ ಇದ್ದುದರಿಂದ ಪಿರ್ಯಾಧಿದಾರರ  ಹೆಂಡತಿಯು ಚಿನ್ನದ ಸರ ಹಾಕಿಕೊಳ್ಳಲು ಕಪಾಟಿನ ಲಾಕರ್‌‌‌ ಬೀಗ ತೆಗೆದು ನೋಡುವಾಗ ಚಿನ್ನದ ಕಂಠಿ ಸರ ಇಟ್ಟಿದ್ದ  ಸ್ಥಳದಲ್ಲಿ ಇದ್ದಿರುವುದಿಲ್ಲ. ಈ ಬಗ್ಗೆ  ಎಲ್ಲ ಕಡೆ ಹುಡುಕಾಡಿದರೂ ಸರ ಪತ್ತೆಯಾಗಿರುವುದಿಲ್ಲ.ಪಿರ್ಯಾಧಿದಾರರ ಸಂಬಂಧಿಕರ ಮದುವೆ ಸಮಯದಲ್ಲಿ ದೂರದ ಸಂಬಂಧಿಕ ರಾಘವೇಂದ್ರ ಎಂಬಾತನು ಆಗಾಗ ಪಿರ್ಯಾಧಿದಾರರ  ಮನೆಗೆ ಬರುತ್ತಿದ್ದು, ಈ ಚಿನ್ನದ ಸರವನ್ನು ಕಪಾಟಿನ ಲಾಕರ್‌‌‌‌‌ನ ಕೀ ಬಳಸಿ ರಾಘವೇಂದ್ರನೆ ಕಳವು ಮಾಡಿರುವ ಬಗ್ಗೆ  ಸಂಶಯ ಇರುತ್ತದೆ. ಈ ಚಿನ್ನದ ಸರದ ತೂಕ ಸುಮಾರು 50 ಗ್ರಾಂ ಆಗಿದ್ದು ಮೌಲ್ಯ 2 ಲಕ್ಷ ಆಗಬಹುದು ಎಂಬಿತ್ಯಾದಿ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 15/2022 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 03-04-2022 10:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080