ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕೋಟ: ದಿನಾಂಕ 02/04/2022 ರಂದು ಪಿರ್ಯಾದಿದಾರರಾದ ಜಿ.ನಾಗೇಶ (44), ತಂದೆ: ಜಿ ಗೋವಿಂದ ರಾಜು, ಕ ರಾ ರ ಸಾ ನಿಗಮ 4 ನೇ ಘಟಕ ಬೆಂಗಳೂರು ಕೇದ್ರೀಯ ವಿಭಾಗ ಬೆಂಗಳೂರು ಇವರು KA- –57-F&-3007 ನೇ KSRTC ವೋಲ್ವೋ ಬಸ್ ನಲ್ಲಿ ಚಾಲಕರಾಗಿ ಹಾಗೂ ಚಂದ್ರ ಶೇಖರ ಎಂಬವರು ನಿರ್ವಾಹಕರಾಗಿ ಕುಂದಾಪುರದಿಂದ ಬೆಂಗಳೂರಿಗೆ ರಾ ಹೆ 66 ರಲ್ಲಿ ಸಾಗುತ್ತಾ ಸಂಜೆ 07.40 ಗಂಟೆಗೆ ಸಾಸ್ತಾನ ಬಸ್ ನಿಲ್ದಾಣದ ಸ್ವಲ್ಪ ಮುಂದಕ್ಕೆ ಹೋಗುತ್ತಿರುವಾಗ ಪಿರ್ಯಾದಿದಾರರ ಬಸ್ಸಿನ ಎದುರಿನಿಂದ ಹೋಗುತ್ತಿದ್ದ ವಾಹನವನ್ನು ಅದರ ಚಾಲಕ ನಿಲ್ಲಿಸಿದಾಗ ಪಿರ್ಯಾದಿದಾರರು ಬಸ್ಸನ್ನು ನಿಧಾನಗೊಳಿಸಿ ಹೋಗುವಾಗ ಪಿರ್ಯಾದಿದಾರರ ಬಸ್ಸಿನ ಹಿಂದಿನಿಂದ ಬರುತ್ತಿದ್ದ ಕುಂದಾಪುರದಿಂದ ಉಡುಪಿ ಕಡೆಗೆ ಹೋಗುತ್ತಿದ್ದ KA-20-AB-3788 H.M T ಬಸ್ ಹಿಂದಿನಿಂದ ಢಿಕ್ಕಿ ಹೊಡೆದು ಪಿರ್ಯಾದಿದಾರರ ಬಸ್ಸಿನ ಹಿಂಬದಿ ಜಖಂ ಗೊಂಡಿರುತ್ತದೆ ಹಾಗೂ ಆಯಿಲ್ ಟ್ಯಾಂಕು ಹಾಗೂ ಇತರೆ ಭಾಗಗಳು ಜಖಂ ಗೊಂಡಿರುತ್ತದೆ ಅಫಘಾತ ಉಂಟು ಮಾಡಿದ ಬಸ್ಸಿಗೆ ಕೂಡ ಎದುರು ಭಾಗ ಜಖಂ ಗೊಂಡಿರುತ್ತದೆ ಈ ಅಪಘಾತದಿಂದ ಯಾರಿಗೂ ಯಾವುದೇ ಗಾಯ ಉಂಟಾಗಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 02/04/2022 ರಂದು 10:00 ಗಂಟೆಗೆ ಅಂಪಾರು ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿನ ಜನತಾ ಕಾಲೋನಿ ಜೈ ಭಾರತಿ ಶಾಲೆಯ ಬಳಿಯ ಸಾರ್ವಜನಿಕ ರಸ್ತೆಯ ರಸ್ತೆಯಲ್ಲಿ ಆರೋಪಿತ ಮನೋಜ ರವರು KA-20-EK-6200 ನೇ ನಂಬ್ರದ ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಗೆ ಅಡ್ಡಲಾಗಿ ಬಂದ ನಾಯಿಗೆ ಅಪಘಾತ ತಪ್ಪಿಸುವ ಉದ್ದೇಶದಿಂದ ಬಲ ಬದಿಗೆ ಮೋಟಾರ್ ಸೈಕಲ್ ನ್ನು ಚಲಾಯಿಸಿದಾಗ ಮೋಟಾರ್ ಸೈಕಲ್ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದ ಪರಿಣಾಮ ಮೋಟಾರ್ ಸೈಕಲ್ ನಲ್ಲಿ ಸಹಸವಾರಳಾಗಿ ಪ್ರಯಾಣಿಸುತ್ತಿದ್ದ ಸುಶ್ಮಿತಾರವರಿಗೆ ಎಡ ಮೊಣಗಂಟಿಗೆ ತರಚಿದ ಗಾಯ ಹಗೂ ಬಲ ಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-04-2022 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080