ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಮಣಿಪಾಲ: ದಿನಾಂಕ 02/04/2021 ರಂದು  ಬೆಳಿಗ್ಗೆ 10:00 ಗಂಟೆಗೆ ಉಡುಪಿ ತಾಲೂಕು ಅಲೆವೂರು ಗ್ರಾಮದ ದುರ್ಗಾ ನಗ ರ  ಎಂಬಲ್ಲಿ  ನೀಲಪ್ಪ  ಸುರಕೋಡ (30)  ಎಂಬುವವರು  ತನ್ನ  ಹೊಸ ಪಲ್ಸರ್  ಮೋಟಾರು ಸೈಕಲನ್ನು  ಪಡು ಅಲೆವೂರು  ಕಡೆಯಿಂದ  ದೆಂದೂರು ಕಟ್ಟೆ ಕಡೆಗೆ  ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಸ್ಕಿಡ್ ಆಗಿ ರಸ್ತೆಗೆ  ಬಿದ್ದು, ತಲೆಗೆ ಗಂಭೀರ ಗಾಯವಾಗಿದ್ದು, ಈ ಬಗ್ಗೆ  ಉಡುಪಿ ಜಿಲ್ಲಾ ಸರ್ಕಾರಿ  ಆಸ್ಪತ್ರೆಯಲ್ಲಿ  ಚಿಕಿತ್ಸೆಯಲ್ಲಿರುತ್ತಾ ಮದ್ಯಾಹ್ನ 03:55 ಗಂಟೆಗೆ  ಚಿಕಿತ್ಸೆ ಫಲಕಾರಿಯಾಗದೇ  ಉಡುಪಿ ಜಿಲ್ಲಾ ಸರ್ಕಾರಿ  ಆಸ್ಪತ್ರೆಯಲ್ಲಿ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021 ಕಲಂ: 279, 304(a) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಕುಪ್ಪಯ್ಯ ತಿಮ್ಮಪ್ಪ ನಾಯ್ಕ (50), ತಂದೆ:ತಿಮ್ಮಪ್ಪ ನಾಯ್ಕ ವಾಸ: ಗೊರಟೆ ಕ್ರಾಸ್ ,ಕಟ್ಟಗೇರಿ ಬೆಳ್ಕೆ ಗ್ರಾಮ ಮತ್ತು ಭಟ್ಕಳ ತಾಲೂಕು,ಉತ್ತರ ಕನ್ನಡ ಜಿಲ್ಲೆ ಇವರು ದಿನಾಂಕ 01/04/2021 ರಂದು ಎನ್ ಎಚ್ 66 ರಲ್ಲಿ ಗೊರಟೆ ಕಡೆಯಿಂದ ಅವರ ರಿಕ್ಷಾದಲ್ಲಿ  ಗೊರಟೆ ಕಡೆಯಿಂದ ಶಿರೂರು ಕಡೆ ಬಾಡಿಗೆಗೆ ಬರುತ್ತಿರುವ ಸಮಯ 18:45 ಗಂಟೆಗೆ ಸಂಕದ ಗುಂಡಿಸೇತುವೆ ಬಳಿ ಬರುತ್ತಿರುವಾಗ ಪಿರ್ಯಾದಿದಾರರ ಎದುರುಗಡೆಯಿಂದ ಓರ್ವ ಮೋಟಾರ್ ಸೈಕಲ್ ಸವಾರ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಶಿರೂರು ಕಡೆಗೆ ಹೋಗುತ್ತಿದ್ದು ಅದೇ ಸಮಯಕ್ಕೆ ಏಕಮುಖ ರಸ್ತೆ ಶಿರೂರು ಕಡೆಯಿಂದ ಗೊರಟೆ ಕಡೆ ವಿರುದ್ಧ ದಿಕ್ಕಿನಿಂದ ಒಂದು ಅಪೆ ಗೂಡ್ಸ್ ರೀಕ್ಷಾ ಚಾಲಕ ಆತನ ರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಹೋಗುತ್ತಿರುವ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಹಾಗೂ ಸಹ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರು ಉಪಚರಿಸಿ ನೋಡಲಾಗಿ   ಪರಿಚಯದವರಾದ ಕೇಶವ ನಾಯ್ಕ ಹಾಗೂ ಅವರ ಅಕ್ಕನ  ಮಗ ಗಗನ್ ಆಗಿರುತ್ತಾರೆ.ಅಪಘಾತ ಪಡಿಸಿದ ರಿಕ್ಷಾ ನಂಬರ್ ನೋಡಲಾಗಿ KA-47-6001 ನೇದ್ದಾಗಿದ್ದು ಹಾಗೂ ಗಾಯಾಳು ಕೇಶವ  ರವರ ಮೋಟಾರ್ ಸೈಕಲ್ ನಂಬ್ರ KA-47-L- 3675 ನೇದ್ದಾಗಿರುತ್ತದೆ. ಪಿರ್ಯಾದಿದಾರರು ಹಾಗೂ ಗಾಯಾಳುಗಳ ಸಂಬಂಧಿ ವಾಸುದೇವ ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ಕೆ ಎಮ್ ಸಿ ಆಸ್ಪತ್ರೆ ಮಣಿಪಾಲದಲ್ಲಿ ದಾಖಲಿಸಿರುವುದಾಗಿದೆ. ಈ ಅಪಘಾತದಿಂದ ಕೇಶವರವರ ಬಲಕಾಲು, ಬಲ ಭುಜ, ಬಲಕೈ ಮೂಳೆ ಮುರಿತ ಹಾಗೂ ಬಲ ಬದಿಯ ಹಣೆಗೆ ರಕ್ತ ಗಾಯವಾಗಿರುತ್ತದೆ.  ಗಗನ್ ರವರಿಗೆ ಬಲ ಕೈ ಮೂಳೆ ಮುರಿತ ಹಾಗೂ ಎಡಬದಿಯ ತಲೆಯ ಎಡಬದಿಯ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿ ರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2021 ಕಲಂ: 279, 337 ಐಪಿಸಿ ಮತ್ತು 128(1) ಐ ಎಮ್ ವಿ ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಶೇಖರ ಪೂಜಾರಿ(55), ತಂದೆ: ದಿ. ಮುತ್ತ ಪೂಜಾರಿ, ವಾಸ: ಸಹನ ನಿಲಯ, ಕರ್ಕಿ ನಂಜನ ಕೋಡಿ, ಗುಲ್ವಾಡಿ ಪೋಸ್ಟ್‌, ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 02/04/2021 ರಂದು ತನ್ನ KA-20-W-3562 ನೇ TVS ಸ್ಪೋರ್ಟ್ಸ್ ಬೈಕ್‌ ನಲ್ಲಿ ಮುಳ್ಳಿಕಟ್ಟೆಯಿಂದ ನಾಯಕ್‌ವಾಡಿ ಕಡೆಗೆ ಹೋಗುವ ಸಲುವಾಗಿ ಮಧ್ಯಾಹ್ನ 3:20 ಗಂಟೆಗೆ ಮುಳ್ಳಿಕಟ್ಟೆ ಜಂಕ್ಷನ್ ಬಳಿ ಎನ್‌.ಹೆಚ್‌-66 ರ ಬದಿಯಲ್ಲಿ ಬೈಕ್ ನ್ನು ನಿಲ್ಲಿಸಿಕೊಂಡಿರುವಾಗ ಎನ್‌.ಹೆಚ್‌-66 ರಲ್ಲಿ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ KA-20-MD-2052 ನೇ ಟೊಯೊಟೋ ಗ್ಲಾನ್ಸರ್‌ ಕಾರನ್ನು ಅದರ ಚಾಲಕ ಮಣಿಕಂಠ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಗಂಭೀರ ಸ್ವರೂಪದ ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಪುಟ್ಟಯ್ಯ (22), ತಂದೆ:ಸುರೇಶ ಮರಾಠಿ,  ವಾಸ:ಕೆಳಬೈಲು ಕೊಡೇಳಕೇರಿ ,ಗೋಳಿಹೊಳೆ  ಗ್ರಾಮ ಮತ್ತು ಬೈಂದೂರು ತಾಲೂಕು ಇವರು ದಿನಾಂಕ 01/04/2021 ರಂದು ಮೋಟಾರ್ ಸೈಕಲ್ ನಂಬ್ರ KA-20-EU-4527 ರಲ್ಲಿ  ಕುಂದಾಫುರ ಹಾಸ್ಟೆಲ್ ನಲ್ಲಿರುವ ತನ್ನ ತಂಗಿಯ ಆರೋಗ್ಯ ವಿಚಾರಿಸಲು ತೆರಳಿ ವಾಪಾಸು ದಿನಾಂಕ 02/04/2021 ರಂದು ಬೆಳಿಗ್ಗೆ 2:00 ಗಂಟೆಗೆ ಮೋಟಾರು ಸೈಕಲ್ ನಲ್ಲಿ ಕುಂದಾಪುರದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಾ ಬೆಳಿಗ್ಗೆ 03:00  ಗಂಟೆಗೆ ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಕಿರಿಮಂಜೇಶ್ವರ PHC ಗೆ ಹೋಗುವ ಕ್ರಾಸ್ ರಸ್ತೆಯ ಬಳಿ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡಿದ್ದ ಸುಧಾಕರ ರವರು ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಕ್ಕೆ ಚಲಾಯಿಸಿ  ರಸ್ತೆಯ ಅಂಚಿನಲ್ಲಿದ್ದ ಫುಟ್ ಫಾತ್ ಕಟ್ಟೆಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಸುಧಾಕರ ಹಾಗೂ ಸಹ ಸವಾರರಾದ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡಕೈಗೆ ಜಖಂ ಹಾಗೂ ಕೈ ಕಾಲುಗಳಿಗೆ ತರಚಿದ ಗಾಯವಾಗಿದ್ದು ಮೋಟಾರ್ ಸೈಕಲ್ ಸವಾರನಿಗೆ ಮೈ ಕೈ ಒಳನೋವು ಆಗಿದ್ದು ಅವರುಗಳನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ದಿನಾಂಕ 02/04/2021 ರಂದು ಮಧ್ಯಾಹ್ನ 2:30 ಗಂಟೆಗೆ ಪಿರ್ಯಾದಿದಾರರಾದ ದಾಸು @ ಗುರುದಾಸ್ (44), ತಂದೆ: ರಾಜು ಪೂಜಾರಿ, ವಾಸ: ಕೆಕೆ ನಿಲಯ ಹಾಡಿಬೆಟ್ಟು ಪಡುತೋನ್ಸೆ ಗ್ರಾಮ  ಹಾಗೂ ಅವರ ಹೆಂಡತಿ ಸಬಿತಾ(43) ರವರು ಅವರ ಅಕ್ಕನ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದು ತೆಂಗಿನಕಟ್ಟೆಯಲ್ಲಿ ಹುಲ್ಲು ತೆಗೆಯುತ್ತಿದ್ದಾಗ  ಸಬಿತಾ ರವರ ಬಲಕಾಲಿನ ಪಾದದ ಹಿಂಭಾಗಕ್ಕೆ ವಿಷಪೂರಿತ ಹಾವು ಕಚ್ಚಿದ್ದು ಪಿರ್ಯಾದಿದಾರರು ಅವರಿಗೆ ಗಾಯದ ಮೇಲ್ಭಾಗದಲ್ಲಿ ಬಿಗಿಯಾಗಿ  ಬಟ್ಟೆ ಕಟ್ಟಿ ಕೂಡಲೆ ಸ್ಥಳಿಯರ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷೀಸಿದ ವೈದ್ಯರು ಚಿಕಿತ್ಸೆ ನೀಡಿ ಮಧ್ಯಾಹ್ನ 3:30 ಗಂಟೆಗೆ ಒಂದು ಚುಚ್ಚು ಮದ್ದು ನೀಡಿ ವಾರ್ಡಿಗೆ ಸ್ಥಳಾಂತರಿಸಿದ್ದು ನಂತರ 10 ನಿಮಿಷದಲ್ಲಿ ಸಬಿತಾ ರವರು 3 ಬಾರಿ ವಾಂತಿ ಮಾಡಿಕೊಂಡಿದ್ದು ನಂತರ ಊಸಿರಾಟದ ತೊಂದರೆ ಕಾಣಿಸಿಕೊಂಡಿರುತ್ತದೆ. ಅಲ್ಲಿಯ ವೈದ್ಯಾಧೀಕಾರಿಯವರು ನೀವು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಟಿಎಂಐ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ  ತಿಳಿಸಿದ್ದು ಕೂಡಲೇ ಟಿಎಂಐ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ ವೈದ್ಯಾಧಿಕಾರಿಯವರು  ಚಿಕಿತ್ಸೆ ನೀಡಿದ್ದು ಸಂಜೆ 6:20 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಯುಡಿಆರ್ ಕ್ರಮಾಂಕ 16/2021  ಕಲಂ: 174 (C) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ಇಸ್ಮಾಯಿಲ್, ತಂದೆ: ಬಿ ಎಚ್ ಬಾವ, ವಾಸ: ಮನೆ ನಂ 6-2-130,1 ನೇ ಪಿಪಿಸಿ ಅಡ್ಡ ರಸ್ತೆ  ಉಡುಪಿ ಇವರು ಅರೋಪಿ 1) ಕೆ ವಿಶ್ವನಾಥರಾವ್, ತಂದೆ: ದಿ. ಕುಪ್ಪಯ್ಯ ಆಚಾರ್ಯ, ವಾಸ: ಮಿಥುನ್ ಕಂಪೌಂಡ್, ಕಾಡಬೆಟ್ಟು,ಉಡುಪಿ ಇವರ ಮಾಲಿಕತ್ವದ ಬಾಡಿಗೆ ಅಂಗಡಿ ಕೋಣೆಯಲ್ಲಿ “ ನ್ಯೂ ಉಡುಪಿ ಮೊಬೈಲ್”  ಎಂಬ ಹೆಸರಿನ ಮೊಬೈಲ್ ಅಂಗಡಿಯನ್ನು ಮಾಡಿಕೊಂಡು ಬೇರೆ ಬೇರೆ ಕಂಪನಿಯ ಮೊಬೈಲ್ ಮಾರಾಟ ಸರ್ವಿಸ್ ರಿಪೇರಿ ಇತ್ಯಾದಿಗಳನ್ನು ಮಾಡುತ್ತಿದ್ದು, ಕೋರೋನಾ ಲಾಕ್‌ಡೌನ್ ಸಮಯ ಪಿರ್ಯಾದಿದಾರರು ಅಂಗಡಿಯನ್ನು ತೆರೆದಿರುವುದಿಲ್ಲ. ದಿನಾಂಕ 21/05/2020 ರಂದು ಬೆಳಿಗ್ಗೆ 11:00 ಗಂಟೆಗೆ ಅಂಗಡಿಯ ಹತ್ತಿರ ಹೋದಾಗ ಅಂಗಡಿ ಕೋಣೆ ತೆರೆದಿದ್ದು ಅರೋಪಿ  2)ಕೆ ಜಯರಾಮ ಅಚಾರ್ಯ, ವಾಸ: ಅರ್‌ಸಿ ಕನ್ ಬಿಲ್ಡರ್ಸ್ ಸಿವಿಲ್ ಇಂಜಿನಿಯಯರ್ಸ್ , ಕನ್ಸ್‌‌ಟ್ರಕ್ಷನ್ ಮತ್ತು ವಾಸ್ತು ಕನ್ಸ್‌‌‌ಟರ್ಸ್‌, ಅನಂತ ಕೃಪಾ ,ಮಾರುತಿ ವಿಥಿಕ ಉಡುಪಿ ಇವರು ಪಿರ್ಯಾದಿದಾರರ ಕೆಲಸಗಾರರೊಂದಿಗೆ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಅಲ್ಲಿ ಅಳವಡಿಸಿದ ಸಿಸಿಟಿವಿ, ಫ್ಯಾನ್ ಲೈಟ್ ಕಿತ್ತು ಹಾಕಿದ್ದು ಪಿರ್ಯಾದಿದಾರರು ಇದು ನನ್ನ ಸ್ವಾದೀನಾದಲ್ಲಿದೆ ಎಂದು ಭಾವಚಿತ್ರವನ್ನು ತೆಗೆಯಲು ಪ್ರಾರಂಬಿಸಿದ್ದು ಅ ಸಮಯ ಕೆಲಸಗಾರರು ಅಲ್ಲಿಂದ ಓಡಿ ಹೋಗಿರುತ್ತಾರೆ. ನಂತರ ಪಿರ್ಯಾದಿದಾರರು ಹೊಸ ಬೀಗವನ್ನು ಅಳವಡಿಸಿ ಬಂದಿರುತ್ತಾರೆ. ದಿನಾಂಕ 25/05/2020 ರಂದು ಪಿರ್ಯಾದಿದಾರರು ಅಂಗಡಿ ಬಳಿ ಹೋದಾಗ ಎಡಬದಿಯ ಪಕ್ಕದ ಅಂಗಡಿ ಕೋಣೆಯ ಮುಖಾಂತರ ಗೋಡೆಯನ್ನು ಕೊರೆದು ಅಂಗಡಿಯಲ್ಲಿದ್ದ  ಬೇರೆ ಬೇರೆ ಕಂಪೆನಿಗೆ ಸೇರಿದ 55 ಹೊಸ ಮೊಬೈಲ್ ಗಳು ಹಾಗೂ ರಿಪೇರಿಗೆ ಬಂದ 127 ಮೊಬೈಲ್‌ಗಳು ಅಲ್ಲದೆ ಸಿಸಿ ಟಿವಿ ಫೂಟೇಜ್ ಹಾರ್ಡ್ ಡಿಸ್ಕ್‌‌ಗಳನ್ನು, ಪಿಟೋಪಕರಣ, ಅಂಗಡಿಯ ನಾಮಫಲಕ, ಮತ್ತು ಅಲಂಕಾರಿಕ ವಿನ್ಯಾಸದ ವಸ್ತುಗಳನ್ನು ಕದ್ದು ಪರಾರಿಯಾಗಿರುತ್ತಾರೆ.  ಒಟ್ಟು ಮೌಲ್ಯ 12,20,000/- ರೂಪಾಯಿ ಅಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2021 ಕಲಂ: 379, 454 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಹರೀಶ(36), ತಂದೆ: ನರಸಿಂಹ ಮರಕಾಲ, ವಾಸ: ಕುದೀಪ ನಿಲಯ ಕೋಟ ಪಡುಕೆರೆ ಕೋಟತಟ್ಟು ಗ್ರಾಮ , ಬ್ರಹ್ಮಾವರ, ಉಡುಪಿ ಜಿಲ್ಲೆ ಇವರು ಮಲ್ಪೆ ಯಲ್ಲಿ  ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರ KA-20 –EM-1132 ಪಲ್ಸರ್ ಮೋಟಾರು ಸೈಕಲ್ ನ್ನು  ದಿನಾಂಕ 17/03/2021 ರಂದು 21:00 ಗಂಟೆಗೆ ಮಲ್ಪೆ ಬಾಪುತೋಟ ಧಕ್ಕೆಯ ಬಳಿ ಬೀಗ ಹಾಕಿ ನಿಲ್ಲಿಸಿ  ಮೀನುಗಾರಿಕೆಗೆ ತೆರಳಿದ್ದು, ದಿನಾಂಕ 24/03/2021 ರಂದು ಬೆಳಿಗ್ಗೆ 10:00 ಗಂಟೆಗೆ ಮೀನುಗಾರಿಕೆ ಮುಗಿಸಿ ವಾಪಸ್ಸು ಮಲ್ಪೆ ಬಾಪುತೋಟ ಧಕ್ಕೆಗೆ ಬಂದು ನೋಡಿದಾಗ ಪಿರ್ಯಾದಿದಾರರ KA-20-EM-1132 ಪಲ್ಸರ್ ಮೋಟಾರು ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಕಾಣದೆ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ದಿನಾಂಕ 17/03/2021 ರ  21:00 ಗಂಟೆಯಿಂದ ದಿನಾಂಕ 24/03/2021 ರ  ಬೆಳಿಗ್ಗೆ 10:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಮೋಟಾರು ಸೈಕಲ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಮೌಲ್ಯ 45,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಹಿರಿಯಡ್ಕ: ಪಿರ್ಯಾದಿದಾರರಾದ ರಾಜು ಶೆಟ್ಟಿ (67), ತಂದೆ: ದಿ: ಜೋಗಪ್ಪ ಶೆಟ್ಟಿ, ವಾಸ: ಭಾಗವತ ಬೆಟ್ಟು ಬೆಳ್ಳರಪಾಡಿ  ಗ್ರಾಮ, ಉಡುಪಿ ತಾಲೂಕು , ಉಡುಪಿ ಜಿಲ್ಲೆ ಇವರ ತಾಯಿಯ ತಂಗಿಯ ಮಗ ರಘುನಾಥ ಶೆಟ್ಟಿ ಹಾಗೂ ತಾಯಿಯ ತಮ್ಮ ಗೋಪಾಲ ಶೆಟ್ಟಿಯವರ  ಮಕ್ಕಳಿಗೆ 41 ನೇ ಶೀರೂರು ಗ್ರಾಮದ ಕೊಡ್ಸರಬೆಟ್ಟು ಎಂಬಲ್ಲಿರುವ  ಜಾಗದ ವಿಚಾರದಲ್ಲಿ ಸುಮಾರು 7 ವರ್ಷದಿಂದ ತಕಾರಾರು ಇದ್ದು ಈ ಬಗ್ಗೆ ರಘುನಾಥ ಶೆಟ್ಟಿಯವರು  ನ್ಯಾಯಾಲಯದಲ್ಲಿ ದಾವೆ ಹೂಡಿ ಅವರ ಪರವಾಗಿ ತಿರ್ಪು ಆಗಿರುತ್ತದೆ. ಜಾಗವನ್ನು ಅಳತೆ ಮಾಡಲು ದಿನಾಂಕ 02/04/2021 ರಂದು ನ್ಯಾಯಾಲಯದಿಂದ ದಿನ ನಿಗದಿಯಾಗಿರುತ್ತದೆ.  ರಘುನಾಥ ಶೆಟ್ಟಿಯವರು ಸಂತೆಕಟ್ಟೆಯ ಗೋಪಾಲಪುರದಲ್ಲಿ ವಾಸವಾಗಿದ್ದು ಅವರು ಪ್ರಾಯದವರಾಗಿದ್ದು ಅಲ್ಲದೆ ಅನಾರೋಗ್ಯದ ಕಾರಣ ಅವರ ಬದಲು ಅಳತೆ ಮಾಡುವ ಜಾಗಕ್ಕೆ ಪಿರ್ಯಾದಿದಾರರು ಹೋಗುವಂತೆ ತಿಳಿಸಿದ್ದು ಅದರಂತೆ  ದಿನಾಂಕ 02/04/2021 ರಂದು  ಬೆಳಿಗ್ಗೆ ರಘುನಾಥ ಶೆಟ್ಟಿಯವರ ವಕೀಲರಾದ ಶ್ರೀನಿವಾಸ ನಾಯಕ್‌, ಸರ್ವೆಯರ್‌ ಪದ್ಮನಾಭ ಹಾಗೂ ಅವರ ಸಹಾಯಕ ಶಂಕರ್‌, ಕೊರ್ಟ್‌ ಕಮೀಷನರ್‌ ಸುದರ್ಶನ್‌ ಮತ್ತು ಕೆಲಸಗಾರರಾದ ಪೆರ್ಡೂರಿನ ಆನಂದ ಮತ್ತು ದರ್ಶನ್‌ರವರೊಂದಿಗೆ ಅಳತೆ ಮಾಡುತ್ತಿದ್ದಾಗ ಮದ್ಯಾಹ್ನ 1.45 ಗಂಟೆಗೆ ಪಿರ್ಯಾದಿದಾರರಾದ ಮಾವನ ಮಕ್ಕಳಾದ ಬಾಲಕೃಷ್ಣ , ಪ್ರವೀಣ ಹಾಗೂ ಅವಿನಾಶ್‌ರವರು ಅಲ್ಲ್ಲಿಗೆ ಬಂದು ಅದರಲ್ಲಿ ಪ್ರವೀಣನು ಪಿರ್ಯಾದಿದಾರರನ್ನು ಉದ್ದೇಶಿಸಿ ನಿಮಗೆ ಸರ್ವೆ ಮಾಡಲು ಯಾರು ಹೇಳಿದ್ದು ಎಂದು ಹೇಳಿ ಪಿರ್ಯಾದುದಾರರ ಮುಖಕ್ಕೆ ಕೈಯಿಂದ ಗುದ್ದಿದನು ಆಗ ನೆಲಕ್ಕೆ ಬಿದ್ದಾಗ ಪ್ರವೀಣ ಕಾಲಿನಿಂದ ಪಿರ್ಯಾದಿದಾರರ ಸೊಂಟಕ್ಕೆ ತುಳಿದನು ನಂತರ ಬಾಲಕೃಷ್ಣನು ಹಾರೆಯ ಹಿಡಿಯ ಭಾಗದಿಂದ ಪಿರ್ಯಾದುದಾರರ ಸೊಂಟದ ಬಳಿ ಚುಚ್ಚಿದ್ದು  ಅವಿನಾಶನು ಕೈಯಲ್ಲಿ ಕಬ್ಬಣದ ಸರಳನ್ನು ಹಿಡಿದು ಹೊಡೆಯಲು ಬಂದಾಗ ವಕೀಲರು ಹಾಗೂ ಸರ್ವೆಯರ್‌ ಆತನನ್ನು ತಡೆದರು ಆಗ ಪ್ರವೀಣನು ಇನ್ನು ಮುಂದಕ್ಕೆ ನಮ್ಮ ಜಾಗದ ವಿಚಾರಕ್ಕೆ ಬಂದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿದ್ದು ಆಗ ಅವಿನಾಶ ಕಾಲಿನಿಂದ ಪಿರ್ಯಾದಿದಾರರಿಗೆ ತುಳಿದಿರುತ್ತಾನೆ ಬಳಿಕ ಪಿರ್ಯಾದಿದಾರರು ಅಲ್ಲಿಂದ ಓಡಿದ್ದು ಗಾಯಗೊಂಡ ಅವರನ್ನು ಜಯಾನಂದ ಹೆಗ್ಡೆಯವರು ಕಾರಿನಲ್ಲಿ ಚಿಕಿತ್ಸೆಗೆ  ಉಡುಪಿ ಅಜ್ಜರಕಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021  ಕಲಂ: 323, 324, 506, ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
     

ಇತ್ತೀಚಿನ ನವೀಕರಣ​ : 03-04-2021 09:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080