ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಕಾಪು: ಪಿರ್ಯಾದಿ ನಳಿನಿ ಶೆಟ್ಟಿ ಇವರು ದಿನಾಂಕ 03/04/2021 ರಂದು  ಬೆಳಿಗ್ಗೆ ದಂಡ ತೀರ್ಥ ಮಠಕ್ಕೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿ  ವಾಪಾಸು ಬರುತ್ತಾ ಉಡುಪಿ ಮಂಗಳೂರು ರಾಹೆ 66 ರ ರಸ್ತೆಯ ಪೂರ್ವದ  ಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ದಂಡತೀರ್ಥ ಮಠಕ್ಕೆ ಹೋಗುವ ಸ್ವಾಗತ ಗೋಪುರಕ್ಕಿಂತ ಸ್ವಲ್ಪ ಹಿಂದೆ ತಲುಪುತ್ತಿದ್ದಂತೆ ಸಮಯ ಸುಮಾರು ಬೆಳಿಗ್ಗೆ 9:00 ಗಂಟೆಗೆ  ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA20 Z-2445 ನೇ ಕಾರು ಚಾಲಕ ತನ್ನ ಬಾಬ್ತು ಕಾರನ್ನು  ಅತೀ ವೇಗ ಹಾಗೂ ಅಜಗರೂತೆಯಿಂದ ಚಲಾಯಿಸಿ  ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ  ಪಿರ್ಯಾದಿದಾರರು ಕೆಳಗೆ  ಬಿದ್ದು ಅವರ ಬಲಕಾಲಿನ  ಕೋಲು ಕಾಲಿಗೆ ತೀವ್ರ ತರಹದ ಮೂಳೆ ಮುರಿತದ ನೋವು,  ಹಣೆಗೆ, ಕೆನ್ನೆಯ ಎಡಬದಿ, ತಲೆಗೆ, ಬಲಕೈ ಮುಂಗೈಗೆ, ಬಲಕೈ ಮತ್ತು ಎಡಕೈಗೆ ಮೊಣಗಂಟಿಗೆ, ತರಚಿದ ಗಾಯವಾಗಿದ್ದು ಈ ಬಗ್ಗೆ ಪಿರ್ಯಾದಿದಾರರು ಉಡುಪಿ  ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಅಪಘಾತಕ್ಕೆ KA20 Z-2445 ನೇ ಕಾರು ಚಾಲಕ ರಮಾನಂದರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2021  ಕಲಂ 279 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿ ರೋಹಿತ್ ಕುಮಾರ್ ಹೆಗ್ಡೆ ಇವರ ಬಳಿಯಿರುವ  ಟಿಪ್ಪರ್ ವಾಹನದ ಚಾಲಕನಾಗಿ ಸಕಲೇಶ ಪುರದ ವಿರಾಗ ಎಂಬವರು ಕೆಲಸ ಮಾಡಿಕೊಂಡಿದ್ದು, ದಿನಾಂಕ 01/04/2021 ರಂದು ವಿರಾಗ ಟಿಪ್ಪರ್ ನ್ನು ಪಿರ್ಯಾದಿದಾರರ ಮನೆಯ ಬಳಿ ನಿಲ್ಲಿಸಿ ಪಿರ್ಯಾದಿದಾರರ ಬಾಬ್ತು KA20ED4656 ನೇ ಹೀರೋ ಹೊಂಡ ಮೊಟಾರ್ ಸೈಕಲ್ ನ್ನು ತೆಗೆದುಕೊಂಡು ಹೋಗಿದ್ದು, ವಿರಾಗನು ಶಾನಾಡಿ ಕೆದೂರು ರಸ್ತೆಯ ರಿಕ್ಷಾ ಚಾಲಕ ಉದಯನ ಮನೆಯ ಬಳಿ ಮೋಟಾರ್ ಸೈಕಲ್ ಸಮೇತ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದು,ಪಿರ್ಯಾದಿದಾರರಿಗೆ ಪರಿಚಯದ ಸಂತೋಷ  ಎಂಬವರು ಪೋನ್ ಕರೆ ಮಾಡಿ ತಿಳಿಸಿದಂತೆ ಪಿರ್ಯಾದಿದಾರರು  ಸ್ಥಳಕ್ಕೆ ಹೋಗಿ ನೋಡಲಾಗಿ ವಿರಾಗ್ ಮೋಟಾರ್ ಸೈಕಲ್ ಸಮೇತ ಸ್ಕಿಡ್ ಅಗಿ ಬಿದ್ದಿದ್ದು,ಕೂಡಲೇ ಸ್ನೇಹಿತರೊಂದಿಗೆ ಉಪಚರಿಸಿ ಚಿಕಿತ್ಸೆಯ ಬಗ್ಗೆ ಕೊಟೇಶ್ವರದ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ,ವಿರಾಗ್ ಗೆ ತಲೆಗೆ ಪೆಟ್ಟಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಪಿರ್ಯಾದಿದಾರರು ಗಾಯಾಳು ವಿರಾಗನ ಆರೈಕೆಯಲ್ಲಿ ಇದ್ದುದರಿಂದ ಈ ದಿನ ದೂರು ಪಿರ್ಯಾದಿ ನೀಡಿದ್ದಾಗಿದೆ. ಈ ಅಪಘಾತಕ್ಕೆ KA20ED4656 ನೇ ಹೀರೋ ಹೊಂಡ ಮೊಟಾರ್ ಸೈಕಲ್ ಸವಾರ ವಿರಾಗ್ ನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ  ಕಾರಣವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

 • ಶಂಕರನಾರಾಯಣ: ಪಿರ್ಯಾದಿ ದಿವ್ಯಾ ಶೆಟ್ಟಿ ಇವರಿಗೂ ಆರೋಪಿ ಶಂಕರ ಶೆಟ್ಟಿ ಇವರಿಗೂ  ಸುಮಾರು  ಸಮಯದಿಂದ   ಜಾಗದ  ತಕರಾರು ಇದ್ದು  ಅದರಂತೆ  ದಿನಾಂಕ  03/04/2021 ರಂದು  ಬೆಳಿಗ್ಗೆ  08:30  ಗಂಟೆಗೆ ಆರೋಪಿತ ಶಂಕರ ಶೆಟ್ಟಿ ಅಂಪಾರು ಅಂಚೆ ಮತ್ತು ಗ್ರಾಮ , ಕೃಷ್ಣಾವತಿ ಶೆಟ್ಟಿ ಅಂಪಾರು ಅಂಚೆ ಮತ್ತು ಗ್ರಾಮ , ಶ್ರೀಕಲಾ ಅಂಪಾರು ಅಂಚೆ ಮತ್ತು ಗ್ರಾಮ, ಶ್ರೀನಿಧಿ ಅಂಪಾರು ಅಂಚೆ ಮತ್ತು ಗ್ರಾಮ  ಇವರುಗಳು  ಕುಂದಾಪುರ ತಾಲೂಕು ಅಂಪಾರು ಗ್ರಾಮದ  ಮೂಡುಬಗೆ ತಗ್ಗುಂಜೆ ಎಂಬಲ್ಲಿ ಮಾನ್ಯ  ನ್ಯಾಯಾಲಯದಲ್ಲಿ ತಡೆಯಾಜ್ಜೆ  ಇರುವ  ಜಾಗದಲ್ಲಿ  ಮಣ್ಣು ತೆಗೆಯುವ  ಕೆಲಸ  ಮಾಡುತ್ತಿದ್ದು, ಈ  ಸಮಯ ಫಿರ್ಯಾದುದಾರರು  ಹಾಗೂ ಅವರ ತಂದೆ ಆನಂದ  ಶೆಟ್ಟಿ ಇವರು ಆರೋಪಿಗಳಲ್ಲಿ  ಮಾನ್ಯ ನ್ಯಾಯಾಲಯದಲ್ಲಿ ತಡೆಯಾಜ್ಜೆ  ಇರುವ  ಜಾಗದಲ್ಲಿ  ಮಣ್ಣು   ತೆಗೆಯಬೇಡಿ ಎಂದು  ಹೇಳಿದಾಗ  ಅವರುಗಳು ಸೇರಿ  ಸಮಾನ ಉದ್ದೇಶದಿಂದ ಫಿರ್ಯಾದುದಾರರಿಗೆ   ಕೈಯಿಂದ  , ಕಲ್ಲಿನಿಂದ ಹಾಗೂ ಕತ್ತಿಯಿಂದ  ಬಲ  ಕಣ್ಣಿನ  ಬಳಿ    ಹಲ್ಲೆ  ಮಾಡಿರುತ್ತಾರೆ.  ಅಲ್ಲದೆ  ಶಂಕರ  ಶೆಟ್ಟಿ  ಕೈಯಿಂದ ಹಲ್ಲೆ   ಮಾಡಿ ಕಾಲಿನಿಂದ ತುಳಿದಿರುತ್ತಾರೆ    ಹಾಗೂ   ಜಗಳ ಬಡಿಸಲು  ಹೋದ ಆನಂದ ಶೆಟ್ಟಿ ಇವರಿಗೆ ಸಹ   ಹಲ್ಲೆ  ಮಾಡಿರುತ್ತಾರೆ   ಇದರ  ಪರಿಣಾಮ ಫಿರ್ಯಾದುದಾರರ   ಬಲ ಕಣ್ಣಿನ  ಬಳಿ  ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021 ಕಲಂ : 323, 324, 354, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿ ತಬಸ್ಸುಂ ಮತ್ತು ಆಪಾದಿತ  1ನೇ ಸಿಖಂದರ್ ಪಾಷಾ (60) ತಂದೆ: ಯೂಸುಫ್  ವಿಳಾಸ:ಮನೆ ನಂಬ್ರ 2-495, ನಾಗಬನ ರಸ್ತೆ, ಪುತ್ತೂರು, ಸಂತೆಕಟ್ಟೆ, ಉಡುಪಿ ತಾಲೂಕು ಇವರು ಪರಿಚಯದವರಾಗಿದ್ದು, ಪಿರ್ಯಾದಿದಾರರು  ಆಪಾದಿತ 1 ನೇ ರವರ  ಪರಿಚಯದಲ್ಲಿ  ಆಪಾದಿತ 2 ನೇ ಅನೀಶ್ (34) ತಂದೆ: ಸಿಖಂದರ್ ಪಾಷಾ ವಿಳಾಸ:ಮನೆ ನಂಬ್ರ 2-495, ನಾಗಬನ ರಸ್ತೆ, ಪುತ್ತೂರು, ಸಂತೆಕಟ್ಟೆ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರಿಗೆ 10 ಲಕ್ಷ  ಮೊತ್ತವನ್ನು  ಚೆಕ್ ಮೂಲಕ ಸಾಲವಾಗಿ ನೀಡಿದ್ದು,  ಸಾಲದ ಮೊತ್ತವನ್ನು  ಆಪಾದಿತರಲ್ಲಿ ಮರು ಪಾವತಿಸಲು ಕೇಳಿದಾಗ ಸಾಲದ ಹಣ ವಾಪಾಸು  ಮಾಡದೆ  ಇದ್ದು, ದಿನಾಂಕ 08/01/2021 ರಂದು  ರಾತ್ರಿ 08:00 ಗಂಟೆ  ಸಮಯಕ್ಕೆ ಆಪಾದಿತ 1 ಮತ್ತು 2ನೇಯವರು ಪಿರ್ಯಾದಿದಾರರು ವಾಸವಿರುವ  ಉಡುಪಿ ತಾಲೂಕು ಮಣಿಪಾಲದ ಮಾಂಡವಿ ಎಮೆರಾಲ್ಡ್  ಫ್ಲಾಟ್ ನಂಬ್ರ 407 ಕ್ಕೆ ಬಂದು ಪಿರ್ಯಾದಿದಾರರ ಹೊಡೆದು  ಅವಮಾನ ಮಾಡಿರುವುದಲ್ಲದೆ ಪಿರ್ಯಾದಿದಾರರನ್ನು   ಉದ್ದೇಶಿಸಿ  ಅವಾಚ್ಯ ಶಬ್ಬಗಳಿಂದ  ಬೈದು  ಇನ್ನು ಮುಂದೆ  ನಮ್ಮ  ಬಳಿ ಹಣ ಕೇಳಿದಲ್ಲಿ  ಕೈ ಕಾಲು ಕಡಿದು ಕೊಂದು  ಹಾಕುವುದಾಗಿ  ಬೆದರಿಕೆ  ಹಾಕಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2021 ಕಲಂ: 323,354,504,506 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-04-2021 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080