ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಗಣೇಶ್ ಪ್ರಸಾದ ಆರ್ (25) ತಂದೆ: ಕೆ.ಎಸ್ ರಾಜಕುಮಾರ್ ವಾಸ: ಮಾತೃಶ್ರೀ ನಿಲಯ ನೆಲ್ಲಿಗುಡ್ಡೆ ಎಳ್ತೂರು ಕಿನ್ನಿಗೋಳಿ ಇವರು ದಿನಾಂಕ 01/03/2023 ರಂದು 08:30 ಗಂಟೆಗೆ ಕಾಲೇಜಿಗೆ ಬರುವರೇ ಕಾರ್ಕಳ ತಾಲೂಕು, ಬೋಳ ಗ್ರಾಮದ ಬೋಳ ಪದವು ಎಂಬಲ್ಲಿ  ಸಂಕಲಕರಿಯ ಕಡೆಯಿಂದ  ಮಂಜರಪಲ್ಕೆ ಕಡೆಗೆ ತನ್ನ KA-50 EF-1044 ನೇ ನಂಬ್ರದ ಬೈಕ್ ನಲ್ಲಿ ಬರುತ್ತಿರುವಾಗ ಎದುರಿನಿಂದ ಮಂಜರಪಲ್ಕೆ ಕಡೆಯಿಂದ KA-20 ER-1229 ನೇ ನಂಬ್ರದ ಬೈಕ್ ಸವಾರ ವಿನೋದ ಎಂಬಾತನು ತನ್ನ ಬೈಕ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಗಣೇಶ್ ಪ್ರಸಾದ ಆರ್ ರವರ ಬೈಕ್ ಗೆ  ಡಿಕ್ಕಿ ಹೊಡೆದ ಪರಿಣಾಮ ಎರಡು ಬೈಕ್ ನ ಸವಾರರು ಹಾಗೂ ಸಹಸವಾರ ಬೈಕ್ ಸಮೇತ ರಸ್ತೆಗೆ ಬಿದ್ದು ಗಣೇಶ್ ಪ್ರಸಾದ ಆರ್ ರವರ ಬಲಕಾಲಿನ ಮಣಿಗಂಟಿಗೆ ಮೂಳೆ ಮುರಿತವಾಗಿದ್ದು, ಬಲಕೈಗೆ ತರಚಿದ ಗಾಯವಾಗಿದ್ದು, ಆರೋಪಿ ವಿನೋದ ಮತ್ತು ಸಹಸವಾರಿಗೆ ಚಿಕ್ಕ ಪುಟ್ಟಗಾಯವಾಗಿದ್ದು. ಚಿಕಿತ್ಸೆ ಬಗ್ಗೆ ಸುರತ್ಕಲ್ ನ ಅಥರ್ವ್ ಅರ್ಥೋಕೇರ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 29/2023 ಕಲಂ: 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  
  • ಹೆಬ್ರಿ: ದಿನಾಂಕ 01/03/2023 ರಂದು ಪಿರ್ಯಾದಿದಾರರಾದ ಅಬ್ದುಲ್‌ ಅಜೀದ್‌ (41) ತಂದೆ: ದಿ.ಮದೀನಾ ಬ್ಯಾರಿ ವಾಸ; ಜನತಾ ಕಾಲೋನಿ ಮಾವಿನಕಟ್ಟೆ ಕುಕ್ಕುಂಜೆ ಅಂಚೆ ಮತ್ತು ಗ್ರಾಮ ಕುಂದಾಪುರ ಇವರು ತನ್ನ ತನ್ನ ಸಂಬಂದಿಕರೊಂದಿಗೆ ಮಗು ಸೇರಿ ಒಟ್ಟು 12 ಜನರೊಂದಿಗೆ ಕಾರ್ಯಕ್ರಮದ ಬಗ್ಗೆ KA-40 A-0362 ನೇ 407 ಮಿನಿ ಬಸ್ಸಿನಲ್ಲಿ ಚಾಲಕ ಗ್ರೇಗೋರಿ ಅನಿಲ್ ಪಿಂಟೋ ಇವರೊಂದಿಗೆ ಕೊಪ್ಪಕ್ಕೆ ಹೋಗಿ ಅಲ್ಲಿ ಕಾರ್ಯಕ್ರಮ ಮುಗಿಸಿ ವಾಪಾಸು ಅಗುಂಬೆ- ಹೆಬ್ರಿ ರಸ್ತೆಯಲ್ಲಿ ಬರುತ್ತಿದ್ದು. ಅವರು ಸಮಯ ಸುಮಾರು ಸಂಜೆ 5-00 ಗಂಟೆಗೆ ನಾಡ್ಪಾಲು ಗ್ರಾಮದ ಸೊಮೇಶ್ವರ ಘಾಟಿಯ 1 ನೇ ತಿರುವಿನಿಂದ ಸ್ವಲ್ಪ ಮುಂದೆ ತಲುಪಿದಾಗ ಚಾಲಕ ಗ್ರೇಗೋರಿ ಅನಿಲ್ ಪಿಂಟೋ ಇವರು ವಾಹನವನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿದ ಪರಿಣಾಮ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಹೋಗಿ ಕಚ್ಚಾ ರಸ್ತೆಯ ಬದಿಯಲ್ಲಿರುವ ಚರಂಡಿಗೆ ಬಿದ್ದು ಎಡಮುಗ್ಗಲಾಗಿ ನಿಂತು ಕೊಂಡಿದ್ದು. ಇದರಿಂದ ವಾಹನದಲ್ಲಿದ್ದ ಮಗು ಅಯಿಶಾ ಅಲಿಮ ಸುಲ್ತಾನ (7 ತಿಂಗಳು) ಇವರಿಗೆ ತಲೆಯ ಬಳಿ ತೀವ್ರ ಸ್ವರೂಪದ ನೋವಾಗಿರುತ್ತದೆ. ವಾಹನದಲ್ಲಿದ್ದ ಪಿರ್ಯಾದಿದಾರರಿಗೆ ಹಾಗೂ ಇತರರಿಗೆ ಸಣ್ಣ ಪುಟ್ಟ ಗುದ್ದಿದ ನೋವಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 11/2023 ಕಲಂ: 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಕಳವು ಪ್ರಕರಣ

  • ಮಣಿಪಾಲ: ದಿನಾಂಕ 26/02/2023 ರಂದು 19:50 ಗಂಟೆಯಿಂದ ಬೆಳಿಗ್ಗೆ ದಿನಾಂಕ 27/02/2023 ರಂದು ಬೆಳಿಗ್ಗೆ 14:00 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ಶಿರಡಿಸಾಯಿ ಬಾಬಾ ಕ್ಯಾನ್ಸರ್‌ಆಸ್ಪತ್ರೆಯ ಎದುರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಪಿರ್ಯಾದಿದಾರರಾಧ ದತ್ತಾತ್ರೇಯ ಪ್ರಭು (41) ತಂದೆ: ಸುಬ್ರಾಯ ಪ್ರಭು ವಾಸ: 4-7ಎ “ಶ್ರೀ ಹರಿ” ಕಾಜಜರಗುತ್ತಿ ಅಂಜಾರು ಗ್ರಾಮ ಮತ್ತು ಅಂಚೆ ಹಿರಿಯಡ್ಕ ಉಡುಪಿ ಇವರ KA-20 U-0218 ನೇ ಸ್ಪೆಂಡರ್‌ ಮೋಟಾರ್‌ ಸೈಕಲ್‌ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ  ಸ್ಪೆಂಡರ್‌ಮೋಟಾರ್‌ಸೈಕಲ್‌ನ ಅಂದಾಜು ಮೌಲ್ಯ 12,000/- ಆಗಬಹುದುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 39/2023 ಕಲಂ: 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಫಿರ್ಯಾದಿದಾರರಾಧ ಸುಶೀಲಾ ಮೊಗವೀರ (41) ತಂದೆ: ಗೋಪಾಲ ವಾಸ: ಲಕ್ಷ್ಮಿ ನಿಲಯ ಡಿಗ್ರಿ ಕಾಲೇಜು ರಸ್ತೆ, ವಿದ್ಯಾನಗರ ಬೈಂದೂರು ಗ್ರಾಮ ಮತ್ತು ತಾಲೂಕು ಇವರ ಗಂಡ ಗೋಪಾಲ (48) ಇವರು ಸುಶೀಲಾ ಮೊಗವೀರ ರವರೊಂದಿಗೆ ವಾಸವಾಗಿದ್ದು, ಇವರಿಗೆ ಸುಮಾರು 5 ವರ್ಷಗಳಿಂದ ಹಳೆ ಮನೆಯ ಪಕ್ಕದಲ್ಲಿ ಹೊಸ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಹಣದ ಅಡಚಣೆಯಿಂದ ಮನೆ ಕೆಲಸ ನಿಧಾನಕ್ಕೆ ನಡೆದಿದ್ದು, ಮನೆ ನಿರ್ಮಾಣದ ಸಲುವಾಗಿ ಸುಶೀಲಾ ಮೊಗವೀರ ರವರ ಗಂಡ ಬ್ಯಾಂಕ್ ಹಾಗೂ ಸಂಘಗಳಲ್ಲಿ ಸುಮಾರು 7-8 ಲಕ್ಷ ಸಾಲ ಮಾಡಿ, ಮನೆ ನಿರ್ಮಾಣ ಮಾಡುತ್ತಿದ್ದು, ಇನ್ನು ಹೆಚ್ಚಿನ ಹಣ ಬೇಕಾಗಿರುವ ಬಗ್ಗೆ ಸುಶೀಲಾ ಮೊಗವೀರ ರವರಲ್ಲಿ ಪದೇ ಪದೇ ಹೇಳುತ್ತಿದ್ದರು. ಸುಶೀಲಾ ಮೊಗವೀರ ರವರಿಗೂ ಕೂಡಾ ಆರೋಗ್ಯ ಹದಗೆಟ್ಟು, ಹಾಸಿಗೆ ಹಿಡಿದ ಕಾರಣ ಇವರ ಗಂಡ ಮಾನಸಿಕ ಖಿನ್ನತೆಗೆ ಒಳಗಾಗಿ ಮಧ್ಯಪಾನ ಸಹ ಮಾಡುತ್ತಿದ್ದರು. ದಿನಾಂಕ 01/03/2023 ರಂದು ಕೆಲಸಕ್ಕೆ ಹೋಗದೇ ಹೊಸ ಮನೆಯ ಬಳಿ ಕೆಲಸ ಮಾಡಿಕೊಂಡಿದ್ದು, ಸಂಜೆ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಮನೆಗೆ ವಾಪಾಸ್ಸು ಬಾರದೇ ಇದ್ದು, ರಾತ್ರಿ 8:30 ಗಂಟೆಗೆ ಸುಶೀಲಾ ಮೊಗವೀರ ರವರ ಮೊಬೈಲ್ ಗೆ ಕರೆ ಮಾಡಿ ಯಕ್ಷಗಾನಕ್ಕೆ ಹೋಗಿ ಬರುವುದಾಗಿ ಹೇಳಿದ್ದು, ದಿನಾಂಕ 02/03/2023 ರಂದು ಬೆಳಿಗ್ಗೆ 6:30 ಗಂಟೆಗೆ ಮನೆಗೆ ಬಂದು ಮಲಗಿದ್ದು, ಬೆಳಿಗ್ಗೆ 7:30 ಗಂಟೆಗೆ ಎದ್ದು ಹೊಸ ಮನೆ ಕೆಲಸದ ಬಗ್ಗೆ ಹೋಗಿದ್ದವರನ್ನು ಸುಶೀಲಾ ಮೊಗವೀರ ರವರು ಚಹಾ ಕುಡಿಯಲು ಬೆಳಿಗ್ಗೆ 8:30 ಗಂಟೆಗೆ ಕರೆಯಲು ಹೋದಾಗ ಇವರ ಗಂಡ ಕಾಣಿಸದೇ ಇದ್ದು, ಸುಶೀಲಾ ಮೊಗವೀರ ಇವರ ಗಂಡ ಮದ್ಯವ್ಯಸನಿಯಾಗಿದ್ದು, ಸಾಲಬಾದೆ ಹಾಗೂ ಸುಶೀಲಾ ಮೊಗವೀರ ಇವರು ಅನಾರೋಗ್ಯದಿಂದ ಬಳಲುತ್ತಿರುವುದನ್ನು ಕಂಡು ಮನನೊಂದು ಈ ದಿನ ಬೆಳಿಗ್ಗೆ 7:30 ಗಂಟೆಯಿಂದ 8:30 ಗಂಟೆಯ ಮಧ್ಯಾವಧಿಯಲ್ಲಿ ಹೊಸ ಮನೆಯ ಒಳಗಡೆ ಇರುವ ಟಾಯಲೇಟ್ ನ ಕಬ್ಬಿಣದ ಜಂತಿಗೆ ಟವೆಲ್ ನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣೆ: ಯು.ಡಿ.ಆರ್ 11/2023ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  
  • ಕಾರ್ಕಳ: ಪಿರ್ಯಾದಿದಾರರಾಧ ಶೀಲಾವತಿ ಶೆಡ್ಡಿ (45) ಗಂಡ ದಿ/ ಕುಮಾರ   : ವಾಸ: 5/67 ದುರ್ಗಯ್ಯ ಶೆಟ್ರ ಮನೆ ಕರಾವಳಿ ಶಿರೂರು ಕುಂದಾಪುರ   ತಾಲೂಕು ಇವರ ಮಗಳು ಕುಮಾರಿ ಸೀಮಾ (22) ಇವರು ನಿಟ್ಟೆ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಕಲಿಯುತ್ತಿದ್ದು, ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಕಾಲೇಜಿನ ಹಾಸ್ಟೆಲ್ ನ ರೂಮ್ ನಂಬ್ರ 227 ನೇದರಲ್ಲಿ ವಾಸಮಾಡಿಕೊಂಡಿದ್ದು, ನರದ  ಸಮಸ್ಯೆ ಹಾಗೂ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದು ಈ ಬಗ್ಗೆ ಹಲವಾರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರೂ ಗುಣಮುಖವಾಗದೇ ಇದ್ದು ಇದೇ ಕಾರಣದಿಂದ ಮನನೊಂದು ಈ ಹಿಂದೆ 4-5 ತಿಂಗಳ ಹಿಂದೆ ನಿದ್ರೆ ಮಾತ್ರೆ ಹಾಗೂ ಆರೋಗ್ಯದ ಸಮಸ್ಯೆಯ ಬಗ್ಗೆ ಇದ್ದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅದೇ ಕಾರಣದಿಂದ ಮನನೊಂದು ಈ ದಿನ ದಿನಾಂಕ 02/03/2023 ರಂದು ಮಧ್ಯಾಹ್ನ 2:30 ಗಂಟೆಯಿಂದ ಸಂಜೆ 4:00 ಗಂಟೆಯ ನಡುವಿನ ಅವಧಿಯಲ್ಲಿ ಹಾಸ್ಟೆಲ್ ನ ಕೊಠಡಿಯಲ್ಲಿನ ಫ್ಯಾನ್ ಗೆ ಚೂಡಿದಾರ್ ಶಾಲ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ಠಾಣೆ: ಯು.ಡಿ.ಆರ್ 14/2023ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಮನುಷ್ಯ ಕಾಣೆ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾಧ ಕೃಷ್ಣ ಪಾಂಡೆ (18)  ತಂದೆ: ಗೋವಿಂದ್‌ ಪಾಂಡೆ ವಾಸ: 8-2-310/A/61, ರೋಡ್‌ ನಂಬರ್‌ 10, ಇನ್‌ ಕಮ್‌ ಟ್ಯಾಕ್ಸ್‌ ಕಾಲೋನಿ ಇಬ್ರಾಹಿಮ್‌ ನಗರ ಬಂಜಾರ ಹಿಲ್ಸ್‌ ಹೈದರಾಬಾದ್‌. ತೆಲಂಗಾಣ ಇವರ ಅಣ್ಣ ಆದಿತ್ಯ ಪಾಂಡೆ  (20)  ಎಂಬವರು ಉಡುಪಿ ತಾಲೂಕು ಮಣಿಪಾಲ ಹೆರ್ಗಾ ಗ್ರಾಮದ ಈಶ್ವರ ನಗರದಲ್ಲಿರುವ ಪವಿತ್ರ ರೆಸಿಡೆನ್ಸಿ ರೂಮ್ ನಂಬರ್‌ 006 ರಲ್ಲಿ ವಾಸವಾಗಿದ್ದು ಎಂ ಐ ಟಿ ಕಾಲೇಜಿನಲ್ಲಿ 3 ನೇ ವರ್ಷದ ವ್ಯಾಸಾಂಗ ಮಾಡಿಕೊಂಡಿರುತ್ತಾರೆ. ಇವರಿಗೆ  ಮೊಬೈಲ್‌ ನಲ್ಲಿ ಆನ್‌ ಲೈನ್‌ ಆಟ ಆಡುವ ಅಭ್ಯಾಸವಿದ್ದು ಇದೇ ವಿಷಯದಲ್ಲಿ ಮಾನಸಿಕ ಕಿನ್ನತೆಗೊಳಗಾಗಿದ್ದು ದಿನಾಂಕ 01/03/2023 ರಂದು ಸಮಯ ರಾತ್ರಿ 10.45 ಗಂಟೆಗೆ ತನ್ನ ರೂಮಿನಿಂದ ಹೊರಗೆ ಹೋಗಿರುತ್ತಾರೆ.  ಈ ವೆರೆಗೂ ವಾಪಾಸು ಬಾರದೇ ಕಾಣೆಯಾಗಿದ್ದು, ಆದಿತ್ಯ ಪಾಂಡೆರವರ ಬಗ್ಗೆ ನಮ್ಮ ಸಂಬಂದಿಕರ ಮತ್ತು ಸ್ನೇಹಿತರ ಮನೆಯಲ್ಲಿ  ವಿಚಾರಿಸಿ ಆದಿತ್ಯ ಪಾಂಡೆರವರನ್ನು ಹುಡುಕಾಡಿದ್ದು ಈ ತನಕ ಪತ್ತೆಯಾಗಿರುವುದಿಲ್ಲವಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ಠಾಣೆ: ಯು.ಡಿ.ಆರ್ 40/2023ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   
  • ಬೈಂದೂರು: ಫಿರ್ಯಾದಿದಾರರಾಧ ಎಂ ಹೆಚ್ ಮಾಜೀನ್ (26) ತಂದೆ: ಎಂ ಹೆಚ್ ಮೊಹಸೀನ್ ವಾಸ: ಬಾಬ್ ಈ ನೂರ್ ಹಬೀಬುಲ್ಲಾ ಗಾರ್ಡನ್ ರಸ್ತೆ ಯಡ್ತರೆ ಗ್ರಾಮ ಬೈಂದೂರು ಇವರ ಅಣ್ಣ ಮಹಮ್ಮದ್ ಹಬಿಬೀ ಮಹಮ್ಮದ್ ಮುವಾಜ್ (35) ಇವರು ದಿನಾಂಕ 28/02/2023 ರಂದು ಬೆಳಿಗ್ಗೆ 5:00 ಗಂಟೆಗೆ ಎದ್ದು ಮಸೀಧಿಗೆ ಪ್ರತಿನಿತ್ಯದಂತೆ ಪ್ರಾರ್ಥನೆಗೆ ಹೋಗಿದ್ದವರು ಪ್ರಾರ್ಥನೆ ಮುಗಿಸಿ ವಾಪಾಸ್ಸು ಮನೆಗೆ ಬಾರದೇ ಇರುವುದನ್ನು ಕಂಡು ಫಿರ್ಯಾದಿದಾರರು ಮಸೀಧಿಗೆ ಪೋನ್ ಮಾಡಿ ವಿಚಾರಿಸಿದಾಗ ಪ್ರಾರ್ಥನೆಗೆ ಬಂದಿಲ್ಲವಾಗಿ ತಿಳಿಸಿರುತ್ತಾರೆ. ಫಿರ್ಯಾದಿದಾರರು ಆತನ ಮೊಬೈಲ್ ಸಂಖ್ಯೆಯದಕ್ಕೆ ಬೆಳಿಗ್ಗೆ 7:30 ಗಂಟೆಗೆ ಕರೆ ಮಾಡಿದಾಗ ಮೂರು ಬಾರಿ ರಿಂಗ್ ಆಗಿ, ಕರೆಯನ್ನು ಸ್ವೀಕರಿಸಿರುವುದಿಲ್ಲ. ನಂತರ ಕರೆ ಮಾಡಿದಾಗ ಸ್ವಿಚ್ ಆಪ್ ಆಗಿರುತ್ತದೆ. ಫಿರ್ಯಾದಿದಾರರು ಅವರ ಅಣ್ಣನ ಪತ್ತೆ ಬಗ್ಗೆ ಸಂಬಂಧಿಕರ ಮನೆಗೆ ಹಾಗೂ ಸ್ನೇಹಿತರ ಮನೆಗೆ ಹೋಗಿ, ಪೋನ್ ಮಾಡಿ ಹುಡುಕಾಡಿದ್ದು, ಈತನಕ ವಾಪಾಸ್ಸು ಮನೆಗೆ ಬಾರದೇ ಕಾಣಿಯಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣೆ: ಯು.ಡಿ.ಆರ್ 34/2023ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   

ಇತ್ತೀಚಿನ ನವೀಕರಣ​ : 03-03-2023 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080