ಅಭಿಪ್ರಾಯ / ಸಲಹೆಗಳು

ಜುಗಾರಿ ಪ್ರಕರಣ

  • ಮಲ್ಪೆ: ದಿನಾಂಕ 02/03/2023  ರಂದು  ಗುರುನಾಥ್‌ ಬಿ ಹಾದಿಮನಿ ಪೊಲೀಸ್ ಉಪನಿರೀಕ್ಷಕರು ಠಾಣಾ ಸರಹದ್ದಿನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಸಂಜೆ 07:15 ಗಂಟೆ ಸಮಯಕ್ಕೆ ಬಾತ್ಮೀದಾರರು ಕರೆ ಮಾಡಿ  ಕೊಡವೂರು ಗ್ರಾಮದ ಸಿವ್ಯೂ ಬಾರ್‌ ಹಿಂಬದಿ ಸಾರ್ವಜನಿಕ  ಜಾಗದಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಖಚಿತ ಮಾಹಿತಿ ಬಂದಂತೆ   ಸಿಬ್ಬಂದಿಯವರಾದ  ಶಿವನಾಯ್ಕ್, ರವಿರಾಜ್‌, ಸಚಿನ್‌, ರವಿ ಜಾಧವ್  ಮತ್ತು ಪಂಚರೊಂದಿಗೆ  ಕೊಡವೂರು ಗ್ರಾಮದ ಸಿವ್ಯೂ ಬಾರ್‌ ಹಿಂಬದಿ ತಲುಪಿ ಸಮಯ ರಾತ್ರಿ ಸುಮಾರು 08;15 ಗಂಟೆಗೆ ದಾಳಿ ನಡೆಸಿ ಜುಗಾರಿ ಆಟ ಆಡುತ್ತಿದ್ದ  ಆರೋಪಿತರಾದ 1) ರೂಪೇಶ್‌  2)ಪ್ರಕಾಶ್  3) ಜಯರಾಮ್‌  4) ರಾಜು   ರವರನ್ನು ವಶಕ್ಕೆ  ಪಡೆದು  ಇಸ್ಪೀಟು ಎಲೆಗಳು 52, ಪ್ಲಾಸ್ಟಿಕ್‌  ಚೀಲ  ಹಾಗೂ  ಜೂಜಾಟಕ್ಕೆ ಬಳಸಿದ ಒಟ್ಟು ಹಣ 9310/- ರೂ ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ  ಸ್ವಾಧೀನಪಡಿಸಿಕೊಂಡು  ಆರೋಪಿತರು, ಸ್ವತ್ತುಗಳು ಹಾಗೂ ವರದಿಯನ್ನು ನೀಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 20/2023 ಕಲಂ: 87 KP ACTರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾಧ ಕಿರಣ (36) ಗಂಡ: ಬಾಬು ದೇವಾಡಿಗ ವಾಸ: ಚಾವಡಿಮನೆ ಐತಾಳಬೆಟ್ಟು ಕೋಟೇಶ್ವರ ಗ್ರಾಮ ಕುಂದಾಪುರ ಇವರ ಅಣ್ಣನಾದ ರಘು (40) ರವರು ದಿನಾಂಕ 02/03/2023  ರಂದು 22:00  ಗಂಟೆಗೆ ಮನೆಯಲ್ಲಿ ಮಲಗಿದವರು ಕಿರಣ ರವರು ದಿನಾಂಕ 03/03/2023 ರಂದು ಬೆಳಿಗ್ಗೆ 06:30ಗಂಟೆಗೆ ಎದ್ದು ನೋಡುವಾಗ ರಘುರವರು ಮನೆಯಲ್ಲಿ ಇಲ್ಲದೇ ಇದ್ದು ಅವರನ್ನು ಹುಡುಕಾಡಿದಾಗ ಅವರು ಯಾವುದೋ ಕಾರಣಕ್ಕೆ ಜೀವನದಲ್ಲಿ  ಜುಗುಪ್ಸೆಗೊಂಡು ದಿನಾಂಕ 02/03/2023  ರಂದು 22:00 ಗಂಟೆಯಿಂದ ದಿನಾಂಕ 03/03/2023 ರಂದು ಬೆಳಿಗ್ಗೆ 07:00ಗಂಟೆಯ ಮಧ್ಯಾವದಿಯಲ್ಲಿ ಮನೆಯ ಸಮೀಪದ ಗೋಪಾಲಕೃಷ್ಣ ಗೋಟರವರ ಬಾಬ್ತು ತೋಟದಲ್ಲಿರುವ ಹೊಂಗೆ ಮರದ ಗೆಲ್ಲಿಗೆ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 12/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-03-2023 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080