ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಪ್ರಶಾಂತ್ ಎನ್ ಮೊಯ್ಲಿ  (28), ತಂದೆ: ನರಸಿಂಹ, ವಾಸ: ದುರ್ಗಿಮನೆ ಬಂಕೇಶ್ವರ ಬೈಂದೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 02/03/2022  ರಂದು ಸಂಜೆ 5:30 ಗಂಟೆಗೆ ಅವರ  ಕಾರಿನಲ್ಲಿ  ಕುಂದಾಪುರಕ್ಕೆ ಹೋಗಲು  ಬೈಂದೂರಿನಿಂದ  ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಬದಿಯ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ 5:45 ಗಂಟೆಗೆ  ಕಿರಿಮಂಜೇಶ್ವರ ಗ್ರಾಮದ  ರಾಷ್ಟ್ರೀಯ ಹೆದ್ದಾರಿ 66 ಅಂಡರ್ ಪಾಸ್ ಹತ್ತಿರ ಪಿರ್ಯಾದುದಾರರ ಮುಂದಿನಿಂದ KA-05-ML-1915 ನೇ ಇನ್ನೋವಾ ಕಾರನ್ನು ಅದರ ಚಾಲಕನು  ಅತೀ ವೇಗ ಹಾಗೂ ಅಜಾಗರೂ ಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿದಾಗ  ಆತನ ಹತೋಟಿ ತಪ್ಪಿ ಕಾರು ಡಿವೈಡರ್ ಮೇಲೆ ಹತ್ತಿ ಡಿವೈಡರ್ ಮೇಲಿದ್ದ  ದೀಪದ ಕಂಬಕ್ಕೆ ಕಾರಿನ ಬಲ ಬದಿಯ ಹಿಂಬದಿಯ  ಡೋರಿಗೆ  ಡಿಕ್ಕಿ ಹೊಡೆಯಿತು. ಪರಿಣಾಮ ಕಾರು ರಸ್ತೆಗೆ ಮುಗುಚಿ ಬಿದ್ದಿದ್ದು  ಪಿರ್ಯಾದಿದಾರರು ಹಾಗೂ  ಸಮೀಪದವರು ಕಾರನ್ನು ಎತ್ತಿ  ನೋಡಿದಾಗ ಕಾರಿನ ಹಿಂಬದಿಯ ಬಲ ಬದಿಯ ಡೋರಿನ ಬದಿಯಲ್ಲಿ ಕುಳಿತುಕೊಂಡವರ ತಲೆ ಛಿದ್ರವಾಗಿ  ಕಾರಿನಲ್ಲಿಯೇ  ಮೃತಪಟ್ಟಿರುತ್ತಾರೆ. ಕಾರಿನ ಚಾಲಕ ಹಾಗೂ ಉಳಿದ ಇಬ್ಬರಿಗೆ  ಅಲ್ಪ ಸ್ವಲ್ಪ ಪೆಟ್ಟಾಗಿದ್ದು ಅವರನ್ನು  ವಿಚಾರಿಸಿದಾಗ  ಅವರಲ್ಲಿ ತೇಜಸ್ ಎನ್ನುವವನು ಮಾತನಾಡಿದ್ದು  ಆತನಲ್ಲಿ  ಮೃತನ ಹೆಸರು ವಿಚಾರಿಸಲಾಗಿ ಅಕ್ಷಯ ಎಂಬುದಾಗಿ ಹಾಗೂ ಕಾರನ್ನು  ತಾನೇ ಚಲಾಯಿಸಿದ್ದು ನನ್ನೊಂದಿಗೆ ಪವನ್ ಹಾಗೂ ಹರ್ಷ ಶರ್ಮ ಇರುವುದಾಗಿ ತಿಳಿಸಿದ್ದು ನಂತರ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ 108 ವಾಹನದಲ್ಲಿ  ಕುಂದಾಪುರಕ್ಕೆ ಕಳುಹಿಸಿದ್ದು, ಮೃತ ದೇಹವನ್ನು ಸ್ಥಳೀಯ ಅಂಬುಲೆನ್ಸ್ ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕಳುಹಿಸಿಕೊಟ್ಟಿರುತ್ತಾರೆ.  ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2022 ಕಲಂ: 279, 337,  338,304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ರಾಘವೇಂದ್ರ ಪೂಜಾರಿ (40), ತಂದೆ: ಮಂಜು ಪೂಜಾರಿ, ವಾಸ: ಗುಬ್ಬಿಗುಲ್ಲಿ ಹೌಸ್, ಕಟ್‌ಬೆಲ್ತೂರು ಅಂಬ್ಲಾಡಿ ಗ್ರಾಮ, ಕಟ್‌ಬೆಲ್ತೂರು ಅಂಚೆ, ಕುಂದಾಪುರ ತಾಲೂಕು ಇವರು ದಿನಾಂಕ 01/03/2022 ರಂದು ತನ್ನ ಸ್ಕೂಟರ್ ನಂಬ್ರ KA-03-HK-7545 ನ್ನು ಸವಾರಿ ಮಾಡಿಕೊಂಡು ಉಡುಪಿಯಿಂದ ಕುಂದಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿರುವಾಗ ಸಂಜೆ 6:10 ಗಂಟೆಗೆ ಪುತ್ತೂರು ಗ್ರಾಮದ ಬಾಳಿಗ ಜಂಕ್ಷನ್ ತಲುಪುವಾಗ ಬಾಳಿಗ ಫಿಶ್‌ನೆಟ್ ರಸ್ತೆಯಿಂದಾಗಿ KA-20-EG-9219 ನೇ ಸ್ಕೂಟರ್ ಸವಾರ ಶ್ರೀಧರ್ ಹಿಂಬದಿ ಓರ್ವ ಮಹಿಳೆಯನ್ನು ಕುಳ್ಳಿರಿಸಿಕೊಂಡು ಒಮ್ಮೆಲೆ ರಾಷ್ಟ್ರೀಯ ಹೆದ್ದಾರಿಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿ ನೇರವಾಗಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅಫಘಾತಪಡಿಸಿದ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು  ಪಿರ್ಯಾದಿದಾರರ ತಲೆಗೆ ಗಾಯವಾಗಿದ್ದು, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಹಾಗೂ ಅಫಘಾತಪಡಿಸಿದ ಸ್ಕೂಟರ್ ಸವಾರ ಶ್ರೀಧರ ರವರಿಗೂ ಕಾಲಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸದಾನಂದ (42), ತಂದೆ: ದಿ. ಅಂಗರ, ವಾಸ: ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಕೊರಂಗ್ರಪಾಡಿ ಗ್ರಾಮ, ಉಡುಪಿ ತಾಲೂಕು ಇವರ ಅಣ್ಣ ದಯಾನಂದ (45) ರವರು  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 02/03/2022 ರಂದು ಬೆಳಿಗ್ಗೆ 10:00 ಗಂಟೆಯಿಂದ 17:00 ಗಂಟೆ ನಡುವಿನ ಸಮಯದಲ್ಲಿ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಡಿಸಿಎಂ ಕಾಲೋನಿಯಲ್ಲಿರುವ  ಆತನ ಹೆಂಡತಿ ಮನೆಯ ಹಾಲ್‌ನಲ್ಲಿ ಚೂಡಿದಾರ ಶಾಲ್‌ ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ದಯಾನಂದ ರವರು ಅದಾಗಲೇ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2022 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ರತಿ ನಾಯ್ಕ್ (58), ಗಂಡ: ಕೃಷ್ಣ ನಾಯ್ಕ್,  ವಾಸ: ಪಿದಾಯಿಗುಡ್ಡೆ , ಕದಿಕೆ, ನಕ್ರೆ ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ ಗಂಡ ಕೃಷ್ಣ ನಾಯ್ಕ (75) ಎಂಬುವವರೊಂದಿಗೆ ವಾಸ ಮಾಡಿಕೊಂಡಿದ್ದು ಕುಕ್ಕುಂದೂರು ಗ್ರಾಮದ ಪಡ್ಯ ಅಂಗನವಾಡಿಯಲ್ಲಿ ಸಹಾಯಕಿ ಕೆಲಸ ಮಾಡಿಕೊಂಡಿರುತ್ತಾರೆ.  ಎಂದಿನಂತೆ ದಿನಾಂಕ 02/03/2022 ರಂದು ಬೆಳಿಗ್ಗೆ  08:30 ಗಂಟೆಗೆ ಕೆಲಸಕ್ಕೆ ಹೋಗಿದ್ದು ಕೃಷ್ಣ ನಾಯ್ಕ್ ಮನೆಯಲ್ಲಿ ಇದ್ದರು,  ಕೆಲಸ ಮುಗಿಸಿ ಸಂಜೆ 16:30 ಗಂಟೆಗೆ  ವಾಪಾಸು ಮನೆಗೆ ಬಂದಾಗ ಕೃಷ್ಣ ನಾಯ್ಕ್ ರವರು ಮನೆಯಲ್ಲಿ ಇಲ್ಲದ ಕಾರಣ ಹುಡುಕಾಡಿದಾಗ ಮನೆಯ ಹಿಂಬದಿಯಲ್ಲಿರುವ ಮರಕ್ಕೆ ಏಣಿ ಇಟ್ಟುಕೊಂಡು ನೈಲಾನ್  ಹಗ್ಗದಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2022 ಕಲಂ:  ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಸುಧಿರ.ಪಿ.ಎ (42), ತಂದೆ: ದಿ.ಅಹಮ್ಮದ ಕುಟ್ಟಿ, ವಾಸ: ಪುಜಿತರಹ ಹೌಸ್ ಪಾಲಪಿಲ್ಲಿ ಚಿಮ್ಮಣ್ಣ ಎಸ್ಟೇಟ್ ಪುರಂದರ ಪಿಲ್ಲಿ ತ್ರಿಶೂರ ಜಿಲ್ಲೆ ಕೇರಳ ರಾಜ್ಯ ಇವರು ಅವರ ಕೆಲಸಗಾರ ರತೀಶ.ಕೆ.ಟಿ ರವರೊಂದಿಗೆ ದಿನಾಂಕ 28/02/2022 ರಂದು ಸಂಜೆ  ಚಾರ ಗ್ರಾಮದ ಮಂಡಾಡಿಜಡ್ಡು ಎಂಬಲ್ಲಿರುವ ಅಜಿತ್ ಅಗಸ್ಟಿನ್ ರವರ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಸಜೀಕುಮಾರ ರವರ ಹುಟ್ಟುಹಬ್ಬಕ್ಕೆ ಬಂದಿದ್ದು ಅದೇ ದಿನ ರಾತ್ರಿ ಪಿರ್ಯಾದಿದಾರರು ಮತ್ತು ರತೀಶ್.ಕೆ.ಟಿ ರವರು ಜೊತೆಗೆ ಮದ್ಯಪಾನ ಮಾಡಿದ್ದು. ಪಿರ್ಯಾದಿದಾರರು ರತೀಶ್.ಕೆ.ಟಿ ರವರಿಗೆ ನೀನು ಸರಿಯಾಗಿ ಕೆಲಸ ಮಾಡುವುದಿಲ್ಲ ಇಲ್ಲಿ ನೋಡು ಅಜಿತ್ ಅಗಸ್ಟಿನ್ ರವರ ಕೆಲಸಗಾರರು ಎಷ್ಟು ಒಳ್ಳೇಯ ರೀತಿಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಾರೆ ನೀನು ಮುಂದಕ್ಕೆ ಸರಿಯಾಗಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುವಂತೆ ತಿಳಿಸಿದಾಗ ನಶೆಯಲ್ಲಿದ್ದ ರತೀಶ್.ಕೆ.ಟಿ ರವರು ನಾನು ಸರಿಯಾಗಿ ಕೆಲಸ ಮಾಡುತ್ತಿದ್ದೇನೆ ನೀನು ಸುಳ್ಳು ಹೇಳುತ್ತಿಯಾ ಎಂದು ಬೈದಿರುತ್ತಾರೆ. ಆಗ ಅವರಿಬ್ಬರ ಮದ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿ  ಅವರಿಬ್ಬರ ನಡುವೆ ಉರುಳಾಟವಾದಾಗ ಪಿರ್ಯಾದಿದಾರರ ಕೈಬೆರಳು ರತೀಶ್.ಕೆ.ಟಿ ರವರ ಎಡಕಣ್ಣಿಗೆ ತಾಗಿರುತ್ತದೆ. ಆಗ ಅಲ್ಲಿದ್ದವರು ಜಗಳವನ್ನು ಬಿಡಿಸಿರುತ್ತಾರೆ. ಇದೇ ವಿಚಾರದಲ್ಲಿ ಅಪಾದಿತ ರತೀಶ್.ಕೆ.ಟಿ ರವರು ಪಿರ್ಯಾದಿದಾರರ ಮೇಲೆ ದ್ವೇಷಗೊಂಡು ದಿನಾಂಕ 02/03/2022 ರಂದು ಬೆಳಗಿನ ಜಾವ 01:00 ಗಂಟೆಗೆ ಪಿರ್ಯಾದಿದಾರರು ಚಾರ ಗ್ರಾಮದ ಮಂಡಾಡಿಜಡ್ಡು ಎಂಬಲ್ಲಿರುವ ಅಜಿತ್ ಅಗಸ್ಟಿನ್ ರವರ ಕೆಲಸದವರು ಮಲಗುವ ಮೆಟ್ಟಿಲು ಬಳಿ ಮಲಗಿರುವಾಗ ಅವರನ್ನು ಕೊಲ್ಲುವ ಉದ್ದೇಶದಿಂದ ಅಪಾದಿತನು ಯಾವುದೋ ಬಿಸಿ ಇರುವ ಕೆಮಿಕಲ್ ನ್ನು ಪಿರ್ಯಾದಿದಾರರ  ದೇಹ ಮತ್ತು ಮುಖ ಹಾಗೂ ಎದೆಯ ಮೇಲೆ ಎರಚಿ ಕೊಲೆಗೆ ಪ್ರಯತ್ನಿಸಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022 ಕಲಂ: 326(A), 307, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಕೋಟ: ಪಿರ್ಯಾದಿದಾರರಾದ ಆನಂದ ಶೆಟ್ಟಿ (53), ತಂದೆ: ಮಂಜಯ್ಯ ಶೆಟ್ಟಿ ಇವರು ಸರಕಾರಿ ಪ್ರೌಢ  ಶಾಲೆ  ವಡ್ಡರ್ಸೆ ಯ ಮುಖ್ಯ ಶಿಕ್ಷಕರ ರಾಗಿದ್ದು, ದಿನಾಂಕ 28/02/2022 ಸಂಜೆ 05:30 ರಿಂದ ದಿನಾಂಕ 02/03/2022 ರ ಬೆಳಿಗ್ಗೆ 09.00 ಗಂಟೆಯ ಮಧ್ಯಾವಧಿ ಯಲ್ಲಿ ಯಾರೋ ಕಿಡಿಗೇಡಿಗಳು ಶಾಲೆಯ ಒಳಗೆ ಅಕ್ರಮ ಪ್ರವೇಶ ಮಾಡಿದ್ದು ಶಾಲೆಯ ಕಿಟಕಿಗೆ ಅಳವಡಿಸಿದ 5 ಕಿಟಕಿಯ ಗ್ಲಾಸ್ ,ನೀರು ಸರಬರಾಜು  ಉದ್ದೇಶಕ್ಕೆ ಅಳವಡಿಸಿದ ಪಿವಿಸಿ ಪೈಪ್ ಮತ್ತು ಶೌಚಾಲಯಕ್ಕೆ ಅಳವಡಿಸಿದ್ದ  5 ಕಿಟಕಿಯ ಗ್ಲಾಸ್, ಶಾಲೆಯ ರೂಫ್ ಮೇಲೆ ಅಳವಡಿಸಿದ ನೀರು ಸಂಗ್ರಹಣಾ ಸಿಂಟೆಕ್ಸ ಟ್ಯಾಂಕನ್ನು ಒಡೆದು ಹಾಕಿದ್ದು ಸರಕಾರಿ ಸೊತ್ತಿಗೆ ಹಾನಿ ಮಾಡಿ ಶಾಲೆಗೆ 50,000/- ನಷ್ಟ ವುಂಟು ಮಾಡಿರುತ್ತಾರೆ. ಇದರಿಂದಾಗಿ ಶಾಲೆಯ ಬಿಸಿ ಊಟದ ವ್ಯವಸ್ಥೆಗೆ ತೊಂದರೆಯಾಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2022  ಕಲಂ: 447, 427 ಐಪಸಿ & 3 PDLP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಹಂಝ (33),  ತಂದೆ:ಅಬ್ದುಲ್ ಖಾದರ್, ವಾಸ: ಹೆಚ್.ಆರ್. ಮಂಜೀಲ್  ಮಲ್ಲಾರು  ಪಂಚಾಯತ್  ಹಿಂಭಾಗ,ಮಲ್ಲಾರು ಗ್ರಾಮ  ಕಾಪು ತಾಲೂಕು,  ಉಡುಪಿ ಜಿಲ್ಲೆ ಇವರಿಗೆ ಮಜೂರು ಗ್ರಾಮದ ಇಮ್ರಾನ್ ಬಾಲ್ಯದಿಂದಲೂ ಪರಿಚಯದವನಾಗಿದ್ದು ಪಿರ್ಯಾದಿದಾರರು  2021 ರಲ್ಲಿ  ನಡೆದ ಕಾಪು ಪುರಸಭೆ ಚುನಾವಣೆ  ಸಂಧರ್ಭ  ಬಿ.ಜೆ.ಪಿ  ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದು ಇಮ್ರಾನ್ ಕಾಂಗ್ರೇಸ್  ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ  ಸ್ಪರ್ದಿಸಿದ್ದ ಇಮ್ರಾನ್ ಸೋತಿದ್ದು  ಅದೇ ಕಾರಣದಿಂದ  ಇಮ್ರಾನ್ ನ ಸ್ನೇಹಿತನಾದ ರಿಯಾಜ್ ನನ್ನು ಕೊಂಬುಗುಡ್ಡೆ ಅಂಗಡಿ ಬಳಿ   ಪಿರ್ಯಾದಿದಾರರು  ನಿಂತಿರುವಾಗ ಅವರಲ್ಲಿ ಜಗಳ  ಮಾಡಿ   ಹೊಡೆಯಲು ಪ್ರಯತ್ನಿಸಿದ್ದು  ಈ ಬಗ್ಗೆ ಪಿರ್ಯಾದಿದಾರರು ಕಾಪು ಠಾಣೆಯಲ್ಲಿ ದೂರು ಸಹ ನೀಡಿರುತ್ತಾರೆ. ಆ ಬಳಿಕ  ಇಮ್ರಾನ್ ನ ಅಣ್ಣ ಪೈಸಲ್ ಪಿರ್ಯಾದಿದಾರರಿಗೆ ಹೊರಗಡೆ ಸಿಕ್ಕಿದಾಗಲೆಲ್ಲಾ  ಬೈಯುತ್ತಿದ್ದು, ದಿನಾಂಕ 02/03/2022 ರಂದು ಸಂಜೆ 8:00 ಗಂಟೆಗೆ ಪಿರ್ಯಾದಿದಾರರಿಗೆ  ದಾರಿಯಲ್ಲಿ  ಸಿಕ್ಕಿದ ಪೈಜಲ್ ನು  ಬೈದಿದ್ದು  ಆಗ  ಅವರು ಆತನ ಬಳಿ ಮಾತನಾಡದೇ ಮನೆಗೆ ಹೋಗಿದ್ದು ಬಳಿಕ ರಾತ್ರಿ  9:00  ಗಂಟೆಗೆ  ಪಿರ್ಯಾದಿದಾರರು  ಮನೆಯಲ್ಲಿರುತ್ತಾ ಇಮ್ರಾನ್  ಹಾಗೂ ಆತನ ಅಣ್ಣ ಫೈಜಲ್ ಸ್ನೇಹಿತರಾದ ಶಾಹೀದ್ ಗುಡ್ಡೆಕೇರಿ, ಶಮಾನ್ ರವರು ಪಿರ್ಯಾದಿದಾರರ ಮನೆಯ ಒಳಗೆ ಅಕ್ರಮವಾಗಿ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದ್ದಿದ್ದು ಅಲ್ಲದೇ ಇಮ್ರಾನ್ ತಾನು ತಂದಿದ್ದ ಹರಿತವಾದ ಚಾಕುವನ್ನು ಏಕಾಏಕಿಯಾಗಿ ಪಿರ್ಯಾದಿದಾರರ ಕುತ್ತಿಗೆಯನ್ನು ಕತ್ತರಿಸಲು ಬೀಸಿದ್ದು ಆಗ ಪಿರ್ಯಾದಿದಾರರು ತನ್ನ ಎಡ ಕೈಯನ್ನು ಅಡ್ಡ  ಹಿಡಿದ ಪರಿಣಾಮ ಚಾಕು ಎಡಕೈಗೆ ತಾಗಿ ಗಾಯವಾಗಿದ್ದು ಬಳಿಕ ಎರಡು  ಮೂರು ಬಾರಿ ಚಾಕು ಬೀಸಿದ್ದು ಆ ವೇಳೆ ಅವನ  ಜೊತೆಯಲ್ಲಿದ್ದ ಶಾಹೀದ್ ಗುಡ್ಡೆಕೇರಿ ಎಂಬುವವನು ತಾನು ತಂದಿದ್ದ ರಾಡ್ ನಿಂದ  ಪಿರ್ಯಾದಿದಾರರ ತಲೆಯ ಎಡಬದಿಗೆ ಹೊಡೆದಿದ್ದು ಆ ವೇಳೆ ಪಿರ್ಯಾದಿದಾರರು ಇಕ್ಕಟ್ಟಿನಲ್ಲಿ ತಪ್ಪಿಸಿಕೊಂಡಿದ್ದು ಆಗ ಶಮನ್ ಮತ್ತು ಪೈಜಲ್  ಪಿರ್ಯಾದಿದಾರರಿಗೆ ಕೈಗಳಿಂದ ಹೊಡೆದು ಕಾಲಿನಿಂದ ತುಳಿದಿದ್ದು ಆ ವೇಳೆ ತಪ್ಪಿಸಲು ಬಂದ  ಪಿರ್ಯಾದಿದಾರರ ತಾಯಿಯ ಯವರನ್ನು ಕೈಯಿಂದ  ಎಳೆದು, ದೂಡಿ ಹೊಡೆದಿದ್ದು ಇದನ್ನು ಕಂಡ  ಪಿರ್ಯಾದಿದಾರರ ತಮ್ಮ ಇವರಿಂದ  ತಪ್ಪಿಸಿಕೊಂಡು ಓಡಿ  ಹೋಗಿದ್ದು ಬಳಿಕ ಇಮ್ರಾನ್ ಹಾಗೂ  ಆತನ  ಸ್ನೇಹಿತರು ಪಿರ್ಯಾದಿದಾರರು ಹಾಗೂ ಅವರ ಮನೆಯವರಿಗೆ ಅವಾಚ್ಯ ಶಬ್ದಗಳಿಂದ  ಬೈದು ಪೊಲೀಸರಿಗೆ ಕಂಪ್ಲೇಟ್ ನೀಡಿದರೇ ನಿನ್ನನ್ನು  ಹಾಗೂ ನಿನ್ನ ಮನೆಯವರನ್ನು ಜೀವ  ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿದ್ದು, ಪಿರ್ಯಾದಿದಾರರನ್ನು ಪೂರ್ವದ್ವೇಷದಿಂದ ಕೊಲ್ಲುವ ಉದ್ದೇಶದಿಂದ ಇಮ್ರಾನ್ ಫೈಜಲ್, ಶಾಹೀದ್ ಗುಡ್ಡೆಕೇರಿ, ಶಮನ್ ಗುಂಪು ಮಾಡಿಕೊಂಡು ಪಿರ್ಯಾದಿದಾರರ ಮನೆಗೆ ಪೂರ್ವ ದ್ವೇಷದಿಂದ ಅಕ್ರಮ ಪ್ರವೇಶ ಮಾಡಿ  ಕೊಲ್ಲುವ ಉದ್ದೇಶದಿಂದ  ಹಲ್ಲೆ ಮಾಡಿ  ಅವಾಚ್ಯ ಶಬ್ದಗಳಿಂದ ಬೈದು  ಜೀವ  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2022 ಕಲಂ: 307, 354, 448, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 03-03-2022 01:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080