ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬ್ರಹ್ಮಾವರ: ದಿನಾಂಕ  02/03/2022 ರಂದು ಪಿರ್ಯಾದಿದಾರರಾದ ಜನಾರ್ಧನ ಮೇಲಾಂಟ (57), ತಂದೆ: ದಿ. ಹರಿದಾಸ ಮೇಲಾಂಟ, ವಾಸ: ಗುಡ್ಡೆಮನೆ, ಜಾತಬೆಟ್ಟು, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರು ಬ್ರಹ್ಮಾವರ ಕಡೆಯಿಂದ ಸಸ್ತಾನ ಕಡೆಗೆ ತನ್ನ ಮೋಟಾರ್‌ ಸೈಕಲ್‌ ‌ನಂಬ್ರ KA-20-EP-137 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಾ 19:30ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ತಾಲೂಕು ಕುಮ್ರಗೋಡು ಗ್ರಾಮದ Old Jesus Shrine ಬಳಿಯ ಯೂಟರ್ನ್‌ಬಳಿ ತಲುಪಿದಾಗ ರಸ್ತೆಯ ಎಡಗಡೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-19-AA-2888ನೇ ಮಹೇಂದ್ರ ಪಿಕ್‌‌ಆಪ್‌ ವಾಹನದ ಚಾಲಕನು ತಾನು ಚಲಾಯಿಸಿಕೊಂಡಿದ್ದ ಪಿಕ್‌‌ಆಪ್‌ ವಾಹನವನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ರಸ್ತೆಯ ಬದಿ ಡಿವೈಡರ್‌ ಯೂಟರ್ನ್‌ ತಿರುಗಿಸಿ ಪಿರ್ಯಾದಿದಾರರ ಮೋಟಾರ್‌ ಸೈಕಲ್‌‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್‌ಸೈಕಲ್ ಸಮೇತ ರಸ್ತೆಗೆ ಬಿದ್ದು, ಅವರ ಎರಡು ಕಾಲುಗಳ ಮೊಣಗಂಟಿನ ಕೆಳಗೆ ಮೂಳೆ ಮುರಿತ, ಹಣೆಯ ಮೇಲೆ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರು ಬ್ರಹ್ಮಾವರ ಮಹೇಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿರುವುದಾಗಿದೆ, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರ ನಾರಾಯಣ :  ದಿನಾಂಕ 02/03/2022 ರಂದು  ಪಿರ್ಯಾದಿ ಸುನೀತ್ ಶೆಟ್ಟಿ ಪ್ರಾಯ 21  ವರ್ಷ ತಂದೆ : ಶಂಕರ ಶೆಟ್ಟಿ  ವಾಸ: ನಾಗಶ್ರೀ, ಕೃಪಾ ಹರ್ಕೇಬಾಳು, ಸಿದ್ದಾಪುರ  ಗ್ರಾಮ ಕುಂದಾಪುರ   ಇವರು ಅವರ  ತಾಯಿ  ಶ್ರೀಮತಿ  ಸುಜಾತ  ಇವರನ್ನು  KA-20EX-6394 ನೇ  ಸ್ಕೂಟಿಯಲ್ಲಿ ಸಿದ್ದಾಪುರಕ್ಕೆ  ಬಂದು  ವಾಪಾಸು   ಮನೆಗೆ  ಹೋಗಲು  ಸುಮಾರು  16.30   ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ   ಗ್ರಾಮದ ಸಿದ್ದಾಪುರ ಜಾನಕಿ ನರ್ಸಿಂಗ್ ಹೋಂ  ಬಳಿ   ಹೋಗುತ್ತಿರುವಾಗ   ಆರೋಪಿ  KA-20 AB-1943 ನೇ  ನಂಬ್ರದ   ಆಟೋ ರಿಕ್ಷಾವನ್ನು   ಯಾವುದೇ ಮುನ್ಸೂಚನೇ  ನೀಡದೇ  ನಿರ್ಲಕ್ಷತನದಿಂದ    ಒಮ್ಮಲೇ ಮುಖ್ಯ   ರಸ್ತೆಯ ಕಡೆಗೆ ಅತೀ ವೇಗದಿಂದ ಚಲಾಯಿಸಿ   ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಅದರ  ಪರಿಣಾಮ ಸ್ಕೂಟಿಯ ಒಂದುಕಡೆ  ಮಗ್ಗುಲಾಗಿದ್ದು ಈ  ಸಮಯ   ಹಿಂಬದಿ  ಕುಳಿತ್ತಿದ್ದ  ಶ್ರೀಮತಿ     ಸುಜಾತರವರು  ಸ್ಕೂಟಿಯಿಂದ   ಕೆಳಗೆ ಬಿದಿದ್ದು, ಇದರ   ಪರಿಣಾಮ  ಅವರ ತಲೆಯ ಹಿಂಭಾಗಕ್ಕೆ   ರಕ್ತಗಾಯವಾಗಿರುತ್ತದೆ, ಚಿಕಿತ್ಸೆಯ  ಬಗ್ಗೆ      ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ  ಅಲ್ಲಿಂದ   ಹೆಚ್ಚಿನ    ಬಗ್ಗೆ  ಮಣಿಪಾಲ ಕೆ,ಎಂ,ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು  ಮಾಡಿರುತ್ತಾರೆ . ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ  ಅಪರಾದ ಕ್ರಮಾಂಕ  30/2022  ಕಲಂ: 279, 338,ಐ.ಪಿಸಿ , ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಬ್ರಹ್ಮಾವರ: ಪಿರ್ಯದಿದಾರರಾದ ಜಾನಕಿ ದೇವಾಡಿಗ (64), ಗಂಡ: ದಿ.ನಾರಯಣ ದೇವಾಡಿಗ, ವಾಸ: ಸಾಲ್ಮರ, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರ ಮಗ ರತ್ನಾಕರ ದೇವಾಡಿಗ(45)ರವರು ಕಳೆದ ಸುಮಾರು 6 ವರ್ಷಗಳಿಂದ ತಲೆಯ ನರದ ಸಮಸ್ಯೆಯಿಂದ ಇದ್ದವರು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ಮೇಣದ ಬತ್ತಿ ತಯಾರಿಸಿಕೊಂಡು ಜೀವನ ಸಾಗಿಸುತ್ತಿದ್ದರು. ರತ್ನಾಕರ ದೇವಾಡಿಗರವರು ಹಿರಿಯಡ್ಕದ ಕೋಡಿಬೆಟ್ಟು ನಿವಾಸಿ ಸಾಗರ್‌ ಆಚಾರ್ಯ ಎಂಬುವವರಿಗೆ ಬಡ್ಡಿಯವರಿಂದ 3 ಲಕ್ಷ ರೂಪಾಯಿಯನ್ನು ತೆಗೆಸಿಕೊಟ್ಟಿದ್ದು, ಆತನು ಹಣವನ್ನು ವಾಪಸ್ಸು ನೀಡುತ್ತಿಲ್ಲ, ತನಗೆ ಹಣದ ತುಂಬಾ ಸಮಸ್ಯೆಯಾಗುತ್ತಿದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪಿರ್ಯಾದಿದಾರರ ಬಳಿ ಹೇಳಿದ್ದರು. ದಿನಾಂಕ 02/03/2022ರಂದು ರತ್ನಾಕರ ದೇವಾಡಿಗರವರು 16:00 ಗಂಟೆಯಿಂದ 18:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ  ಮನೆಯ ಹಾಲ್‌‌ನ ಮರದ ಪಕ್ಕಾಸಿಗೆ ಶಾಲ್‌‌ನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿರುತ್ತದೆ. ತನ್ನ ಮಗ ರತ್ನಾಕರ ದೇವಾಡಿಗನ ಸಾವಿಗೆ ಕಾರಣನಾದ ಸಾಗರ ಆಚಾರ್ಯ ರವರ ಮೇಲೆ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2022 ಕಲಂ: 306 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಅಧಿಕಾಂತ ಮಲ್ಲಿಕ್(40), ತಂದೆ: ವೈಧ್ಯನಾಥ ಮಲ್ಲಿಕ್, ವಾಸ: ಬಸುದೇಪುರ, ಬದ್ರಿಕ್, ಬಾದ್ರಗಢ, ಓರಿಸ್ಸಾ ಇವರು ಮಲ್ಪೆಯ ಏಕನಾಥ ರವರ ಮಹಾಕಾಳಿ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು , ಅವರೊಂದಿಗೆ ಅದೇ ಬೋಟಿನಲ್ಲಿ ಬಬಲಿ ಮಲ್ಲಿಕ್ ,ಅರುಣ್ ಮಲ್ಲಿಕ್ , ದಿನ್ ಬಂದು ಮಲ್ಲಿಕ್ ಎಂಬುವವರು ಕೆಲಸ ಮಾಡಿಕೊಂಡಿರುತ್ತಾರೆ. ಅರುಣ್ ಮಲ್ಲಿಕ್ ಒಂದು ತಿಂಗಳ ಹಿಂದೆ ಪಿರ್ಯಾದಿದಾರರ ಮೊಬೈಲ್ ತೆಗೆದಿದ್ದು. ಇದೆ ವಿಚಾರವಾಗಿ ಈ ಹಿಂದೆ ಅವರೊಳಗೆ ಗಲಾಟೆಯಾಗಿದ್ದು, ದಿನಾಂಕ 02/03/2022 ರಂದು ರಾತ್ರಿ 08:30 ಗಂಟೆಗೆ ಅರುಣ್ ಮಲ್ಲಿಕ್  ಪಿರ್ಯಾದಿದಾರರಲ್ಲಿ ಮೊಬೈಲ್ ವಿಚಾರದಲ್ಲಿ  ಗಲಾಟೆ ಮಾಡಿ ಪೂರ್ವದ್ದೇಶದಿಂದ ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದಲೆ ಆತನ ಕೈಯಲ್ಲಿದ್ದ ಚಾಕುವನ್ನು ಪಿರ್ಯಾದಿದಾರರ ಕುತ್ತಿಗೆಗೆ ಹಾಕಿದ್ದು ಆಗ ಪಿರ್ಯಾದಿದಾರರು ತಪ್ಪಿಸಿಕೊಂಡು ಓಡಿ ಹೋಗಿ ತನ್ನ ಪ್ರಾಣ ರಕ್ಷಣೆಗಾಗಿ ಆರೋಪಿತ ಅರುಣ್ ಮಲ್ಲಿಕ್ ಗೆ ಒಂದು ಮರದ ತುಂಡಿನಿಂದ ತಲೆಗೆ ಹೊಡೆದ ಪರಿಣಾಮ ಆರೋಪಿತನಿಗೆ ತಲೆಗೆ ಗಾಯವಾಗಿರುತ್ತದೆ. ಆರೋಪಿತನು ಪಿರ್ಯಾದಿದಾರರಿಗೆ ಕೊಲೆ ಮಾಡುವ ಉದ್ದೇಶದಿಂದಲೆ ಚಾಕುವಿನಿಂದ ಕುತ್ತಿಗೆಗೆ ಚುಚ್ಚಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 24/2022 ಕಲಂ: 307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ:

  • ಮಣಿಪಾಲ: ಪಿರ್ಯಾದಿ ಮಮತಾ ಶೆಟ್ಟಿ ಪ್ರಾಯ:34 ವರ್ಷ, ಗಂಡ: ಯಶೋಧರ ಶೆಟ್ಟಿ ವಾಸ: ಕೊಡಂಗೆ ಮನೆ ಕೊಡಂಗೆ ಹೆರ್ಗಾ ಗ್ರಾಮ ಇವರ ಗಂಡನಾದ ಯಶೋಧರ ಶೆಟ್ಟಿ ರವರು ಈ ಹಿಂದೆ ಬ್ಯಾಂಕ್ ಸಾಲ ಮಾಡಿದ್ದು ತೀರಿಸಲಾಗದೆ ಅವರ ಭಾವಂದಿರ ಸಾಹಾಯದಿಂದ ಸಾಲವನ್ನು ತೀರಿಸಿರುತ್ತಾರೆ,  ಆ ಬಳಿಕವೂ ಬ್ಯಾಂಕ್, ಪೈನಾನ್ಸ್, ಮತ್ತು ಇತರೆ ಕೈ ಸಾಲ ಮಾಡಿದ್ದು ತೀರಿಸಲಾಗದೆ ಇದೆ ಕಾರಣದಿಂದವೂ ಅಥವಾ ಇನ್ಯಾವೂದೊ ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 03.03.2022 ರಂದು ಬೆಳಿಗ್ಗೆ 07:00 ಗಂಟೆಯಿಂದ 07:30 ಗಂಟೆಯ ಮದ್ಯಾವಧಿಯಲ್ಲಿ ಮನೆಯ ಅಡುಗೆಕೋಣೆಯ ಮಾಡಿನ ಮರದ ಜಂತಿಗೆ ನೈಲಾನ ಹಗ್ಗವನ್ನು ಕುತ್ತಿಗೆಗೆ ಕಟ್ಟಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ . ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ನಂಬ್ರ 07/2022 ಕಲಂ: 174 ಸಿ ಆರ್ ಪಿಸಿ ಯಂತೆ ಪ್ರಕರಣ ದಖಲಿಸಲಾಗಿದೆ.
  • ಕುಂದಾಪುರ: ಪಿರ್ಯಾಧಿ ಸುಭಾನ್ ಪ್ರಾಯ: 20 ವರ್ಷ ತಂದೆ ನಜೀರ್  ವಾಸ: ವಂಡ್ಟೆ ಪೋಸ್ಟ್ ವಂಡ್ಸೆ ಗ್ರಾಮ ಇವರ  ಅಣ್ಣ ನಾದ ರಿಜ್ವಾನ್ ಎಂಬುವರು ಸುಮಾರು 3 ವರ್ಷದಿಂದ  ಪ್ರೀತಿಸುತ್ತಿದ್ದ  ಗಂಗೊಳ್ಳಿ ನಿವಾಸಿ ಉಷಾ ಎಂಬುವರು ಇತ್ತೀಚಿಗೆ ತಮ್ಮ ಪ್ತೀತಿಯನ್ನು ತಿರಸ್ಕರಿಸಿದ  ಪರಿಣಾಮ ಮಾನಸಿಕವಾಗಿ ಕುಗ್ಗಿಹೋಗಿರುತ್ತಾರೆ ಸದ್ರಿಯವರು ಈ ವಿಚಾರದಲ್ಲಿ ದಿನಾಂಕ: 02/03/2022 ರಂದು ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿ ದವರನ್ನು ಸಮಾಧಾನ ಪಡಿಸಿ ಬಳಿಕ ಆತನ ಮಾಲಕರಾದ ಗುಲ್ವಾಡಿಯ ಇರ್ಪಾನ್ ರಿಗೆ ಕರೆಮಾಡಿದಲ್ಲಿ ಸದ್ರಿಯವರು ಆತನನ್ನು ಕೆಲಸಕ್ಕೆ ಕರೆದುಕೊಂಡು  ಹೋಗಿರುತ್ತಾರೆ. ಬಳಿಕ ಇರ್ಪಾನ್ ರವರು ರಿಜ್ವಾನನಿಗೆ ಬುದ್ದಿವಾದ ಹೇಳಿ   ಗುಲ್ವಾಡಿಯ ಬಾಡಿಗೆ ಮನೆಯಲ್ಲಿ ರಾತ್ರಿ 10:30 ಗಂಟೆ ತನಕ ಬುದ್ದಿ ವಾದ ಹೇಳಿ  ಬುಡಾನ್ ಸಾಬ್ ರೊಂದಿಗೆ ಮಲಗುವಂತೆ ತಿಳಿಸಿ ಇರ್ಪಾನ್ ನು ತಮ್ಮ ಮನೆಗೆ ಹೋಗಿರುತ್ತಾರೆ ಈ ದಿನ ಬೆಳ್ಳಗ್ಗೆ ಸುಮಾರು 07:45 ಗಂಟೆಗೆ ಬುಡಾನ್ ಸಾಬ್  ರವರು  ರೂಂ ನಲ್ಲಿ ನೋಡಿದಾಗ  ರಿಜ್ವಾನ್ ರೂಂನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಸದ್ರಿಯವರು ಊಷಾರವರ ಪ್ರೀತಿಯಿಂದ  ತಿರಿಸ್ಕ್ರತವಾದುದರಿಂದ  ಮಾನಸಿಕವಾಗಿ ಕುಗ್ಗಿಹೋದವರು  ಜೀವನದಲ್ಲಿ ಜಿಗುಪ್ಸೆ ಗೊಂಡು ನೇಣುಬಿಗಿದು ಆತ್ಮಹತ್ಯ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್‌‌ ನಂ: 07/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 03-03-2022 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080