ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬೈಂದೂರು: ಪಿರ್ಯಾದಿದಾರರಾದ ಪಾಂಡುರಂಗ ಖಾರ್ವಿ (40), ತಂದೆ:ಮರ್ಲ ಖಾರ್ವಿ, ವಾಸ: ಉಡುಪನ ಮನೆ ಓಲಗ ಮಂಟಪ ಉಪ್ಪುಂದ ಗ್ರಾಮ ಬೈಂದೂರು  ತಾಲೂಕು ಇವರು ದಿನಾಂಕ 02/03/2021 ರಂದು 11:00 ಗಂಟೆಗೆ  ಅವರ ವಾಹನದ ಬಳಿ ಉಪ್ಪುಂದ ಗ್ರಾಮದ ಶಾಲೆ ಬಾಗಿಲು ಬಳಿ ನಿಂತುಕೊಂಡಿರುವಾಗ ಕುಂದಾಪುರ ಕಡೆಯಿಂದ ಒಂದು ಪಿಕಪ್ ವಾಹನ ಬೈಂದೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯ ರಸ್ತೆಯಲ್ಲಿ ಶಾಲೆ ಬಾಗಿಲು ಜಂಕ್ಷನ್ ನಿಂದ ಸ್ವಲ್ಪ ಹಿಂದೆ ಹೋಗುತ್ತಿರುವಾಗ ಅದರ ಹಿಂದಿನಿಂದ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಲಾರಿ ಚಾಲಕನು ಆತನ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿಕಪ್ ವಾಹನದ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಫುಟ್ ಫಾತ್ ಹತ್ತಿರ ಮುಂದೆ ಹೋಗಿ ನಿಂತಿರುತ್ತದೆ. ಪಿರ್ಯಾದಿದಾರರು ಹೋಗಿ ನೋಡಲಾಗಿ ಪಿಕಪ್ ವಾಹನದ ಚಾಲಕ ಪರಿಚಯದ ಮಂಜುನಾಥ ಆಗಿದ್ದು ವಾಹನದಲ್ಲಿ ಅಶೋಕ ದೇವಾಡಿಗರು ಸಹ ಇದ್ದಿದ್ದು ಮಂಜುನಾಥ ಅವರಿಗೆ ತಲೆಯ ಹಿಂಭಾಗಕ್ಕೆ ರಕ್ತ ಗಾಯವಾಗಿದ್ದು ಅಶೋಕ ದೇವಾಡಿಗರವರಿಗೆ ಬಲಕಾಲು ಮತ್ತು ಎಡ ಭುಜಕ್ಕೆ ರಕ್ತ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಪುರಂದರ ಗಾಣಿಗರವರು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ಸಂತೋಷ (36), ತಂದೆ: ಆನಂದ ಶೆಟ್ಟಿ, ವಾಸ: ಅನ್ನಪೂರ್ಣಶ್ವರಿ ಲೇಔಟ್ ನಂ 8/2 ಶ್ರೀ ಸಂಪದ 1 ನೇ ಮೇನ್ 4 ನೇ ಕ್ರಾಸ್ ಜೆಪಿ ನಗರ ಚುಂಚುಗಟ್ಟ ಬೆಂಗಳೂರು ಇವರು ದಿನಾಂಕ 02/03/2021 ರಂದು KA-18 -P-5165 ನೇ ಕಾರಿನಲ್ಲಿ ಸ್ನೇಹಿತರಾದ ನಾಗೇಂದ್ರ ಭಟ್, ಉಮಾ ಅಡಿಗ, ನಾಗರತ್ನ ಇವರನ್ನು ಕುಳ್ಳಿರಿಸಿಕೊಂಡು ಕೊಪ್ಪದಿಂದ ಉಡುಪಿಗೆ ಕಡೆಗೆ ಹೊರಟು  ಅಗುಂಬೆ –ಉಡುಪಿ ರಸ್ತೆಯಲ್ಲಿ ಬರುತ್ತಿದ್ದು. ಅವರು ಮದ್ಯಾಹ್ನ 12:50 ಗಂಟೆಗೆ ಹೆಬ್ರಿ ಗ್ರಾಮದ ಕೈಕಂಬ ಜಂಕ್ಷನ್ ಬಳಿ ತಲುಪಿದಾಗ ಮುದ್ರಾಡಿ ಕಡೆಯಿಂದ KA-17-C-9164 ನೇ ಮಹೇಂದ್ರ ಪಿಕಾಪ್ ವಾಹನವನ್ನು ಅದರ ಚಾಲಕ ಪರಶುರಾಮ್ ಇವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೈಕಂಬ ಜಂಕ್ಷನ್ ಬಳಿ ತಲುಪಿ ಯಾವುದೇ ನಿಯಮವನ್ನು ಪಾಲಿಸದೇ ಒಮ್ಮೆಲೇ ಬಲಕ್ಕೆ ಅಗುಂಬೆ ಕಡೆಗೆ ಹೋಗುವ ರಸ್ತೆಗೆ ತಿರುಗಿಸಿ ಎದುರುಗಡೆಯಿಂದ ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದ KA-18-P-5165 ನೇ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಗೇಂದ್ರ ಭಟ್ ಇವರಿಗೆ ಹಣೆಯ ಬಳಿ ಹಾಗೂ ಉಮ ಅಡಿಗ ಇವರಿಗೆ ಸೊಂಟದ ಬಳಿ ತೀವ್ರ ಸ್ವರೂಪದ ಗಾಯವಾಗಿದ್ದು. ಪಿರ್ಯಾದಿದಾರರಿಗೆ ಎಡಕಾಲಿನ ಗಂಟಿನ ಬಳಿ ಗುದ್ದಿದ ನೋವಾಗಿರುತ್ತದೆ. ನಾಗರತ್ನ ಇವರಿಗೆ ಯಾವುದೇ ನೋವಾಗಿರುವುದಿಲ್ಲ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ದಿನಾಂಕ 01/03/2021 ರಂದು ಮಧ್ಯಾಹ್ನ 3:00 ಗಂಟೆಗೆ ಕಡಿಯಾಳಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಪಿರ್ಯಾದಿದಾರರಾದ ಕೆ ಗಣೇಶ (36), ತಂದೆ: ಕೃಷ್ಣ ಶೇರಿಗಾರ್, ವಾಸ: “ರಾಘವೆಂದ್ರ ನಿಲಯ” ಕಡಿಯಾಳಿ ದೇವಸ್ಥಾನದ ಬಳಿ ಕುಂಜಿಬೆಟ್ಟು ಶಿವಳ್ಳಿ ಗ್ರಾಮ ಉಡುಪಿ ಇವರೊಂದಿಗೆ ರಸ್ತೆ ಬದಿ ನಿಂತಿದ್ದ ಪಿರ್ಯಾದಿದಾರರ ಮಾವ ರಾಘವೆಂದ್ರ ಶೇರಿಗಾರ್ ರವರಿಗೆ ಮಣಿಪಾಲದ ಕಡೆಯಿಂದ ಕಲ್ಸಂಕದ ಕಡೆಗೆ KA-20-EJ-6672 ನೇ ಮೋಟಾರ್ ಸೈಕಲ್ ಸವಾರ ಹಾರ್ದಿಕ್ ಸನಿಲ್ ಎಂಬಾತ ತನ್ನ ಮೋಟಾರ್ ಸೈಕಲ್ ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಸವಾರಿ ಮಾಡಿ ರಾಘವೆಂದ್ರ ಶೇರಿಗಾರ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಾಘವೆಂದ್ರ ಶೇರಿಗಾರ್ ರವರು ರಸ್ತೆಗೆ ಎಸೆಯಲ್ಪಟ್ಟು ಎಡಕಾಲಿನ ಮೂಳೆ ಮುರಿತ ಉಂಟಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಮಂಜುನಾಥ ಪೂಜಾರಿ (45), ತಂದೆ: ರಾಮ ಪೂಜಾರಿ, ವಾಸ: ಸಸಿಹಿತ್ಲು, ಕಳುವಾಡಿ, ಬೈಂದೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 01/03/2021 ರಂದು  ಮನೆಗೆ ಹೋಗಲು ಅವರ ಕಾರಿನಲ್ಲಿ ಯಡ್ತರೆ- ಕೊಲ್ಲೂರು ರಾಷ್ರೀಯ ಹೆದ್ದಾರಿ 766 ಸಿ ಯಲ್ಲಿ ಹೋಗುತ್ತಿರುವಾಗ 5:30 ಗಂಟೆಗೆ ಯಡ್ತರೆ ಬಂಟರ ಸಭಾ ಭವನದಿಂದ ಸ್ವಲ್ಪ  ಮುಂದೆ ಅಂದರೆ  ಪಿರ್ಯಾದಿದಾರರ ಎದುರಿನಲ್ಲಿ ಒಂದು ಮೋಟಾರ್ ಸೈಕಲ್ ಸವಾರ KA-20-EN- 4107 ನೇ  ಮೋಟಾರು ಸೈಕಲ್ ನಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು  ಅತೀವೇಗ ಹಾಗೂ ಅಜಾಗರೂಕತೆಯಿಂದ ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಎದುರಿನಿಂದ ಬಂದ ಒಂದು ಕಾರನ್ನು ನೋಡಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಸವಾರ ಹಾಗೂ ಸಹ ಸವಾರ ಇಬ್ಬರು ಮೋಟಾರು ಸೈಕಲ್ ಸಮೇತ  ರಸ್ತೆಗೆ ಬಿದ್ದ ಪರಿಣಾಮ ಮೋಟಾರು ಸೈಕಲ್ ಸವಾರನಿಗೆ ಎಡಕೈ ಬೆರಳಿಗೆ ರಕ್ತಗಾಯ, ಎಡಕೈ ಬುಜ ಹಾಗೂ ಎಡಕಾಲಿಗೆ ತರಚಿದ ಗಾಯ, ಸಹ ಸವಾರನಿಗೆ ಸೊಂಟ, ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಒಳಜಖಂ ಉಂಟಾಗಿರುತ್ತದೆ. ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಿಸಿರುತ್ತಾರೆ.  ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 02/03/2021 ರಂದು ಪಿರ್ಯಾದಿದಾರರಾದ ಸುರೇಶ (29), ತಂದೆ: ಜಗನ್ನಾಥ, ವಾಸ: ಮಂಗಳೂರು ಮಾಳ ಗ್ರಾಮ , ಹರ್ನಳ್ಳಿ ಪೋಸ್ಟ್, ಹುಣಸೂರು ತಾಲೂಕು, ಮೈಸೂರು ಜಿಲ್ಲೆ ಇವರು KA-45-Y-9042 ನೇ ಸ್ಕೂಟಿಯಲ್ಲಿ  ಸಹ ಸವಾರರಾಗಿ ಮಣಿಕಂಠ ಎಂಬುವವರನ್ನು ಕಳ್ಳಿರಿಸಿಕೊಂಡು ಕಡಾರಿ-ಬಜಗೊಳಿ ಮಾರ್ಗವಾಗಿ ಬರುತ್ತಿರುವಾಗ 21:20 ಗಂಟೆಗೆ ಮುಡಾರು ಗ್ರಾಮದ ಅಬ್ಬೆಂಜಾಲು ಎಂಬಲ್ಲಿ ಎದುರಿನಿಂದ ಶಿಪ್ಟ್ ಕಾರಿನ ಚಾಲಕನು ಕಾರನ್ನು ಅತೀ ವೇಗ ಹಾಗೂ ಅಜಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೆ  ಬಲಗಡೆಗೆ  ತಿರುಗಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಸಹ ಸವಾರ ಮಣಿಕಂಠ ರವರಿಗೆ ಎಡ ಕಾಲಿನ ಮಣಿಗಂಟಿಗೆ ಹಾಗೂ ಎಡ ಕಾಲಿನ ಬೆರಳಿಗೆ ತರಚಿದ ಗಾಯವಾಗಿದ್ದು, ಅಪಘಾತವೆಸಗಿದ ಕಾರನ್ನು ಅದರ ಚಾಲಕನು ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ್ದು, ಪಿರ್ಯಾದಿದಾರರು ಗಾಯಾಳುವನ್ನು ಒಂದು ವಾಹನದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25 /2021 ಕಲಂ: 279, 337 ಐಪಿಸಿ  ಮತ್ತು 134(ಎ ಮತ್ತು ಬಿ) ಐಎಂವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.     

 ಅಸ್ವಾಭಾವಿಕ ಮರಣ ಪ್ರಕರಣಗಳು

  • ಶಂಕರನಾರಾಯಣ: ಪಿರ್ಯಾದಿದಾರರಾದ ಪ್ರಜ್ವಲ್ ಶೆಟ್ಟಿ (27), ತಂದೆ: ಪ್ರಭಾಕರ  ಶೆಟ್ಟಿ, ವಾಸ: ಅಚ್ಚೆಬೆಟ್ಟು ಹಡಾಳಿ  ಅಂಪಾರು ಗ್ರಾಮ  ಕುಂದಾಪುರ  ತಾಲೂಕು ಇವರ ತಂದೆ  ಪ್ರಬಾಕರ  ಶೆಟ್ಟಿ  ಇವರು ವಿಪರೀತ  ಶರಾಬು ಕುಡಿಯುವ  ಚಟ ಹೊಂದಿದ್ದು, ಅದೇ  ವಿಷಯದಲ್ಲಿ   ಜೀವನದಲ್ಲಿ  ಜಿಗುಪ್ಸೆಗೊಂಡು ದಿನಾಂಕ  01/03/2021  ರಂದು 16:00 ಗಂಟೆಯಿಂದ ದಿನಾಂಕ  02/03/2021  ರಂದು  10:00 ಗಂಟೆಯ ಮಧ್ಯದ ಅವಧಿಯಲ್ಲಿ  ಕುಂದಾಪುರ ತಾಲೂಕಿನ  ಅಂಪಾರು ಗ್ರಾಮದ  ಹಡಾಳಿ ಎಂಬಲ್ಲಿ  ಸರಕಾರಿ  ಕಾಡಿನಲ್ಲಿ  ಯಾವುದೊ ವಿಷ  ಸೇವಿಸಿ   ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2021 ಕಲಂ:174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ :ಪಿರ್ಯಾದಿದಾರರಾದ ರೂಪ (39), ಗಂಡ:ಚಂದ್ರಶೇಖರ, ವಾಸ:ಅಶ್ವತಪುರ ರೋಡ್‌ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಕುಕ್ಕುಂದುರು ಗ್ರಾಮ ಕಾರ್ಕಳ ಇವರ ಗಂಡ ಚಂದ್ರಶೇಖರ ಎನ್‌ ಒಬ್ಬರೇ ವಾಸ್ತವ್ಯ ಇದ್ದು  ವಿಪರೀತ ಮದ್ಯವ್ಯಸನಿಯಾಗಿದ್ದು ದಿನಾಂಕ 28/02/2021 ರಂದು ಸಂಜೆ 07:30 ಗಂಟೆಯಿಂದ ದಿನಾಂಕ 02/03/2021 ರಂದು ಮದ್ಯಾಹ್ನ 02:00 ಗಂಟೆಯ ಮದ್ಯಾವದಿಯಲ್ಲಿ ತನ್ನ ಮನೆಯ ಒಳಗಡೆ  ಬೆಡ್‌ರೂಮ್‌ನಲ್ಲಿ ಪ್ಯಾನಿಗೆ ನೈಲಾನ್‌ ಹಗ್ಗದ ಸಹಾಯದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 05/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಕಾರ್ಕಳ: ದಿನಾಂಕ 02/03/2021 ರಂದು ನಾಗರಾಜ ರವರ ಕೆಲಸದವರಾದ ಮಣಿಕಂಠ(25) ಮತ್ತು ಗಿರೀಶರವರು  ನೀರೆ ಗ್ರಾಮದ ನೀರೆ ಪಂಚಾಯತ್‌ಬಳಿ ಇರುವ ಲೇ ಔಟ್‌ನಲ್ಲಿ ಅಚ್ಚುತ ನಾಯಕ್‌ ಎಂಬುವವರ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಮನೆ ಸಮೀಪ ಇರುವ ಬಾವಿಯ ಕೆಲಸವನ್ನು ಮಾಡಲು ಬಾವಿಗೆ ಇಳಿದು ಕೆಲಸ ಮಾಡಲು ಪ್ರಾರಂಬಿಸುವರಷ್ಟರಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದು ಅವರನ್ನು ರಕ್ಷಿಸಲು ಅಲ್ಲಿಯೇ ಇದ್ದ ನಜೀರ್‌ಸಾಹೇಬ್‌ ರವರು ಬಾವಿಗೆ ಇಳಿದಿದ್ದು ಅವರು ಕೂಡ ಪ್ರಜ್ಞೆ ತಪ್ಪಿ ಬಿದ್ದಿದ್ದು ಆ ಮೂರು ಜನರನ್ನು ಬಾವಿಯಿಂದ ಸುಜೀತ್‌ ಎಂಬುವವರು ಮೇಲಕ್ಕೆ ಎತ್ತಿ ಆಸ್ಪತ್ರೆಗೆ ಸಾಗಿಸಿದ್ದು ಮಣಿಕಂಠ ರವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆತಂದಿದ್ದು ವೈದ್ಯರು ಪರೀಕ್ಷಿಸಿ ಮಣಿಕಂಠ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮಣಿಕಂಠ ಮತ್ತು ಗಿರೀಶ್‌ರವರಿಂದ ಕೆಲಸ ಮಾಡಿಸುವ ಸಮಯದಲ್ಲಿ ಅವರಿಗೆ ಬಾವಿಯ ಒಳಗಡೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡದೇ ಹಾಗೂ ಬಾವಿಗೆ ಇಳಿಸುವ ಸಮಯದಲ್ಲಿ ಸುರಕ್ಷತೆ  ಮತ್ತು ಮುಂಜಾಗ್ರತಾ ಕ್ರಮಗಳನ್ನು ಮಾಡದೇ ಬಾವಿಗೆ ಇಳಿಸಿದ್ದರಿಂದ ದಿನಾಂಕ 02/03/2021 ರಂದು ಬೆಳಿಗ್ಗೆ 10:00 ಗಂಟೆಗೆ ಆಗಿರುತ್ತದೆ. ಈ ಘಟನೆಗೆ ಮನೆಯ ಮಾಲೀಕರಾದ ಅಚ್ಚುತ್ತ ನಾಯಕ್‌ ಮತ್ತು ಗುತ್ತಿಗೆದಾರರಾದ ನಾಗರಾಜರವರ ನಿರ್ಲಕ್ಷತನವೇ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2021 ಕಲಂ: 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 27/02/2021 ರಂದು ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಮಿಯ್ಯಾರು ಕಂಬಳ ನಡೆಯುವ ಸ್ಥಳದಲ್ಲಿ ಪಿರ್ಯಾದಿದಾರರಾದ ಅಶ್ವಿನಿ, ಗಂಡ:ಪ್ರಕಾಶ್‌, ವಾಸ: ಜೋಡುಕಟ್ಟೆ ಮಂಗಲಪಾದೆ ಮಿಯ್ಯಾರು ಕಾರ್ಕಳ ಇವರು ಸುಧಾಕರ, ವಿಜಯ ಎಂಬುವವರೊಂದಿಗೆ ಮಿನಿ ಕ್ಯಾಂಟಿನ್‌ ವ್ಯವಹಾರ ನಡೆಸುತ್ತಿದ್ದು ರಾತ್ರಿ ಗಂಟೆ 12:30 ಕ್ಕೆಆಪಾದಿತ ಕಾಳು ಎಂಬಾತನು ಪಿರ್ಯಾದಿದಾರರು ನಡೆಸುತ್ತಿದ್ದ ಕ್ಯಾಂಟಿನ್‌ನಲ್ಲಿ 4 ಪ್ಲೇಟ್‌ತಿಂಡಿ ತಿಂದು ಹಣ ಕೊಡದೇ ಹೋಗುವಾಗ ಪಿರ್ಯಾದಿದಾರರು ಆಪಾದಿತನಲ್ಲಿ ಹಣವನ್ನು ಕೇಳಿದಾಗ ಹಣ ಕೊಡುವುದಿಲ್ಲ ನೀನು ಏನು ಮಾಡುತ್ತೀಯಾ ಎಂದು ಬೆದರಿಕೆ ಹಾಕಿದ್ದು, ತಡೆಯಲು ಬಂದ ವಿಜಯ ಮತ್ತು ಸುಧಾಕರ ರವರನ್ನು ದೂಡಿ ಹಾಕಿ ಕಲ್ಲಿನಿಂದ ತಲೆಗೆ ಹೊಡೆದು ಗಾಯ ಉಂಟು ಮಾಡಿದ್ದು ಈ ಸಮಯ ತಡೆಯಲು ಬಂದ ಪಿರ್ಯಾದಿದಾರರ ಕಾಲಿಗೆ ಕೂಡ ಕಲ್ಲು ಎತ್ತಿ ಹಾಕಿ ಜೀವ ಬೆದರಿಕೆ ಹಾಕಿ ಓಡಿ ಹೋಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021 ಕಲಂ: 354,324, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
  •   ಶಿರ್ವಾ: ಪಿರ್ಯಾದಿದಾರರಾದ ಶ್ರುತಿಕ ಶೆಟ್ಟಿ (29) ಕೋ೦. ಅವಿನಾಶ್ ಶೆಟ್ಟಿ ಆರ್,  ಬಿನ್.ಸುಧಾಕರ ಶೆಟ್ಟಿ, ವಾಸ; ಮನೆ ನ೦.1-41,ಕಳತ್ತೂರು ವಯಾ ಕಾಪು, 108 ಕಳತ್ತೂರು ಅ೦ಚೆ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 19/05/2017 ರಂದು ಮಂಗಳೂರು ಧರ್ಮಸ್ಥಳದಲ್ಲಿ  ಗುರುಹಿರಿಯರ ಸಮಕ್ಷಮದಲ್ಲಿ ಹಿಂದೂ  ಸಂಪ್ರದಾಯದಂತೆ 1 ನೇ ಆರೋಪಿ ಅವಿನಾಶ್‌.ಶೆಟ್ಟ.ಆರ್‌. ರವರೊಂದಿಗೆ ಮದುವೆಯಾಗಿದ್ದು, ಮದುವೆ ಸಮಯದಲ್ಲಿ  ಪಿರ್ಯಾದಿದಾರರ ಮನೆಯವರು ಮದುವೆಯ ಎಲ್ಲಾ ಖರ್ಚು ವೆಚ್ಚವನ್ನು ಭರಿಸಿದ್ದು, ಹಾಗೂ 50 ಪವನ್‌ ಚಿನ್ನಾಭರಣವನ್ನು  ವರದಕ್ಷಿಣೆ ರೂಪದಲ್ಲಿ ನೀಡಿದ್ದು,  ಅಲ್ಲದೇ  ಮದುವೆಯಾದ ನಂತರ ಪಿರ್ಯಾದಿದಾರರು ಬೆಂಗಳೂರಿನ ಆರೋಪಿತರ ವಾಸ್ತವ್ಯದ  ಮನೆಯಲ್ಲಿರುವಾಗ 1ನೇ ಹಾಗೂ 2ನೇ  ಆರೋಪಿತರಾದ ಸುಮಿತ್ರ ಶೆಟ್ಟಿ  ಕೋಂ. ದಿ.ರಮೇಶ್ ಶೆಟ್ಟಿ  ವಾಸ:  ನಂಬ್ರ.20, 2ನೇ ಅಡ್ಡ ರಸ್ತೆ, ನಾರಾಯಣಪ್ಪ ಗಾರ್ಡನ್, ತಾವರೆಕೆರೆ, ಬೆಂಗಳೂರು-560029 ಇವರು ಪದೇ ಪದೇ  ಪಿರ್ಯಾದಿದಾರರಲ್ಲಿ ಹಣಕ್ಕಾಗಿ  ಪೀಡಿಸುತ್ತಿದ್ದು,  1 ನೇ ಆರೋಪಿ ಕೈಯಿಂದ ಹಲ್ಲೆಮಾಡಿ ಕೆಟ್ಟದಾಗಿ ಬೈದಿರುತ್ತಾರೆ.  ಪಿರ್ಯಾದಿದಾರರು ಬೆಂಗಳೂರಿನಲ್ಲಿರುವಾಗಲೇ  ಆರೋಪಿತರುಗಳು ಪಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕವಾಗಿ  ಕಿರುಕುಳ ನೀಡುತ್ತಿದ್ದುದಲ್ಲದೆ  1 ನೇ ಅಪಾದಿತನು ಮದುವೆಯಾದ ಬಳಿಕ ಹೆಚ್ಚುವರಿ ಹಣಕ್ಕಾಗಿ ಬೇಡಿಕೆಯನ್ನು ನೀಡಿ ಒಟ್ಟು 20 ಲಕ್ಷ ರೂಪಾಯಿ ಹಣವನ್ನು 1 ನೇ ಆರೋಪಿಗೆ ನೀಡಿದ್ದು,  ಹಣ ನೀಡಿದ ಬಗ್ಗೆ ಎಲ್ಲಾ ದಾಖಲಾತಿಗಳು ಇರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2021 ಕಲಂ : 498(A),  323, 504 ಜೊತೆಗೆ 34 ಐಪಿಸಿ & 3, 4 D.P.Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-03-2021 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080