ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ: 02/03/2021 ರಂದು 20:00 ಗಂಟೆಗೆ ಕಾರ್ಕಳ ತಾಲೂಕು ಕೆದಿಂಜೆ ಗ್ರಾಮದ ಕೆದಿಂಜೆ ಬಿ,ಎಸ್,ಕೆ ಕ್ಯಾಶ್ಯೂ ಫ್ಯಾಕ್ಟರಿಯ ಎದುರು ಹಾದುಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬೆಳ್ಮಣ್ ಕಡೆಯಿಂದ ನಿಟ್ಟೆ ಕಡೆಗೆ ಕೆ,ಎ20-ಇ,ವಿ-8952 ನೇ ನಂಬ್ರದ ಬೈಕ್ ಸವಾರನು ತನ್ನ ಬಾಬ್ತು ಬೈಕ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ಬೆಳ್ಮಣ್ ಕಡೆಯಿಂದ ನಿಟ್ಟೆ ಕಡೆಗೆ ಪಿರ್ಯಾದಿ ಮಹಮ್ಮದ್ ಹನೀಫ್ ಇವರೊಂದಿಗೆ ರಸ್ತೆಯ ಎಡಭಾಗದಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಕೀಲ್ ರಾಂ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ವಕೀಲ್ ರಾಂ ರವರ ತಲೆಗೆ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ,ಎಂ,ಸಿ,ಆಸ್ಪತ್ರೆಯಲ್ಲಿ ದಾಖಲಾಗಿದ್ದು ಡಿಕ್ಕಿಹೊಡೆದ ಬೈಕ್ ಸವಾರಿನಿಗೆ ಕೂಡಾ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸಿ,ಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021  ಕಲಂ: 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 02/03/2021 ರಂದು ಸಂಜೆ ಸುಮಾರು 5:30  ಗಂಟೆಗೆ  ಕುಂದಾಪುರ  ತಾಲೂಕಿನ ಕಸಬಾ ಗ್ರಾಮದ  KSRTC ಬಸ್‌‌‌ಸ್ಟ್ಯಾಂಡ್‌ ಬಳಿ NH 66 ರಸ್ತೆಯಲ್ಲಿ ಆಪಾದಿತ ಸಂದೀಪ ಎಂಬವರು KA20-AA-5993ನೇ ಬಸ್‌‌ ನ್ನು ಮುಳ್ಳಿಕಟ್ಟೆ ಕಡೆಯಿಂದ ಕುಂದಾಪುರ ಕಡೆಗೆ ಚಾಲನೆ ಮಾಡಿಕೊಂಡು ಬಂದು ಪ್ರಯಾಣಿಕರಿಗೆ ಇಳಿಯಲು ನಿಲ್ಲಿಸಿದ ಸಮಯ ಪಿರ್ಯಾದಿದಾರ ಬಸಪ್ಪರವರ ಜೊತೆಯಲ್ಲಿ ಅವರ ಹೆಂಡತಿ ಶಾಂತವ್ವ ಬಸ್ಸಿಂದ ಇಳಿಯುತ್ತಿರುವ ಸಮಯ ಆಪಾದಿತ ಸಂದೀಪರವರು ಬಸ್‌‌‌ನ್ನು  ಒಮ್ಮೇಲೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಮುಂದಕ್ಕೆ ಚಲಾಯಿಸಿದ ಕಾರಣ ಶಾಂತವ್ವ ಳು ಬಸ್ಸಿನ ಡೋರ್‌ ನಿಂದ  ಕೆಳಗೆ ರಸ್ತೆಗೆ  ಬಿದ್ದು ಅವರ  ತಲೆಗೆ ರಕ್ತಗಾಯವಾಗಿ  ಮೂಗು,  ಕಿವಿ ಹಾಗೂ  ಬಾಯಿಂದ  ರಕ್ತ ಬಂದಿದ್ದು,  ಹಾಗೂ ಬಲಕೈಗೆ ತರಚಿದ ಗಾಯವಾಗಿದ್ದು, ಗಾಯಾಳು ಕುಂದಾಪುರ  ಸರಕಾರಿ ಆಸ್ಪತ್ರೆ ಹಾಗೂ  ಉಡುಪಿ ಜಿಲ್ಲಾ ಸರಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಂಗಳೂರು  ವೆನ್ಲಾಕ್‌   ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಕುಮದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 28/02/2021 ರಂದು 19:45 ಗಂಟೆಗೆ ಪಿರ್ಯಾದಿದಾರರಾದ ಸೈಯದ್‌ ಇನುಸ್‌ (44), ತಂದೆ:ಸೈಯದ್‌ ಇಸ್ಮಾಯಿಲ್‌,  ವಾಸ: ಮಹಮ್ಮದ್‌ ಆಯುಬ್‌ ಮಿಲನ್‌ ಕಂಪೌಡ್‌ ಬಸ್‌ ನಿಲ್ದಾಣದ ಬಳಿ ಕಾರ್ಕಳ ಇವರು KA-20-EL-5121 ನೇ ದ್ವಿಚಕ್ರ ವಾಹನದಲ್ಲಿ ಆನೆಕೆರೆ ಕಡೆಯಿಂದ ಆನೆಕೆರೆ ಮಸೀದಿ ಕಡೆಗೆ ಸವಾರಿ ಮಾಡಿಕೊಂಡಿರುವಾಗ ಆನೆಕೆರೆ ಮಸೀದಿಯ ಕಡೆಯಿಂದ KA-19-Y-4211 ನೇ ಮೋಟಾರ್ ಸೈಕಲ್‌ ಸವಾರನು ಅತೀವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಬಲ ಬದಿಗೆ ಬಂದು ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಆಪಾದಿತ ಮೋಟಾರ್‌ ಸೈಕಲ್‌ನಲ್ಲಿದ್ದವರು ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರಿಗೆ ಬಲ ಕಾಲಿನ ತೊಡೆಯ ಮೂಳೆ ಮುರಿತದ ಹಾಗೂ ಮಂಡಿನ ಚಿಪ್ಪಿಗೆ ಜಖಂಗೊಂಡು ರಕ್ತವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಹಿರಿಯಡ್ಕ: ಪಿರ್ಯಾದಿ ಶ್ರೀಮತಿ ಅಂಜಲಿಸ ಇವರು ಮಗಳೊಂದಿಗೆ ವಾಸ ಮಾಡಿಕೊಂಡಿದ್ದು ಮಣಿಪಾಲದಲ್ಲಿ ಎಂಜಲ್ ಡ್ರೈವಿಂಗ್ ಸ್ಕೂಲ್ ನಡೆಸಿಕೊಂಡಿರುತ್ತಾರೆ. ದಿನಾಂಕ: 02/03/2021 ರಂದು ಬೆಳಿಗ್ಗೆ 09.45 ಗಂಟೆಗೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು  ಸಂಜೆ ಕೆಲಸ ಮುಗಿಸಿ ವಾಪಾಸು 5.45 ಗಂಟೆಗೆ ಮನೆಗೆ ಬಂದು ಮನೆಯ ಹಿಂಭಾಗದಲ್ಲಿರುವ ಕೋಳಿಗಳನ್ನು ನೋಡಲು ಹೋದಾಗ ಮನೆಯ ಹಿಂದಿನ ಬಾಗಿಲು ತೆರೆದಿದ್ದು ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆಗೆದಿರುವುದು ಕಂಡುಬಂದಿದ್ದು  ಪಿರ್ಯಾದುದಾರರು ಮನೆಯ ಒಳಗೆ ಹೋಗಿ ಮಲಗುವ ಕೊಣೆಯಲ್ಲಿ ನೋಡಲಾಗಿ ಅಲ್ಲಿದ್ದ ವಾರ್ಡ್‌ರೋಬ್ ನಲ್ಲಿದ್ದ ಬಟ್ಟೆ ಚೆಲ್ಲಾಪಿಲ್ಲಿಯಾಗಿ ನೆಲದ ಮೇಲೆ ಬಿದ್ದುಕೊಂಡಿದ್ದು ವಾರ್ಡ್‌ ರೋಬ್‌ನ ಎಡ ಭಾಗದಲ್ಲಿ 2 ಡ್ರಾವರ್‌ ಇದ್ದು ಒಂದು ಡ್ರಾವರ್‌ನ್ನು  ಯಾವುದೋ ಆಯುಧದಿಂದ ಮೀಟಿ ತೆಗೆದು  ಅದರಲ್ಲಿದ್ದ 1)  70 ಗ್ರಾಂ  ತೂಕದ ಅಂದಾಜು 1,40,000 ಮೌಲ್ಯದ ಚಿನ್ನದ ಕರಿಮಣಿ ಸರ -1 ಮತ್ತು 2) 20 ಗ್ರಾಂ ತೂಕದ ಅಂದಾಜು 40,000 ಮೌಲ್ಯದ ಚಿನ್ನದ ಚೈನ್‌ -1 ಹಾಗೂ 3)  20 ಗ್ರಾಂ ತೂಕದ 40,000 ಮೌಲ್ಯದ ಚಿನ್ನದ ಬಳೆ -1 ಮತ್ತು ಕಿರಣ್‌ ಹೋಗುವಾಗ ಅವನಿಂದ ತೆಗೆದುಕೊಂಡಿದ್ದ  4) 26 ಗ್ರಾಂ  ತೂಕದ ಸುಮಾರು 52 ,000 ಮಾಲ್ಯದ ಚಿನ್ನದ ಚೈನ್‌ -1 ಹಾಗೂ 5) 24 ಗ್ರಾಂ ತೂಕದ 48,000 ಮೌಲ್ಯದ ಇನ್ನೊಂದು ಚಿನ್ನದ ಚೈನ್‌  ಮತ್ತು 6) ತಲಾ 1 ಗ್ರಾಂ ತೂಕದ ಒಟ್ಟು 6000 ಮೌಲ್ಯದ ಮಗಳ ಕಿವಿಯ ಓಲೆ 2 ಜೊತೆ ಹಾಗೂ 7) ತಲಾ 2 ಗ್ರಾಮ್‌  ತೂಕದ ಅಂದಾಜು 16.000 ಮೌಲ್ಯದ ಪಿರ್ಯಾದುದಾದರ ಕಿವಿಯ  ಓಲೆ  2  ಜೋತೆಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದ್ದು ಅಲ್ಲದೆ ಆಭರಣವಿದ್ದ ಡ್ರಾವರ್‌ ಪಕ್ಕದ ಡ್ರಾವರ್‌ನಲ್ಲಿದ್ದ ಆಸ್ತಿ ಪತ್ರ ಹಾಗೂ ಇತರ ದಾಖಲಾತಿಗಳನ್ನು ಕಳವು ಮಾಡಿದ್ದು ಅಲ್ಲದೆ ಡೈನಿಂಗ್‌ ಟೇಬಲ್‌ ಮೇಲೆ ಇಟ್ಟಿದ್ದ ಡೆಲ್‌ ಕಂಪೆನಿಯ ಅಂದಾಜು 5,000 ಮೌಲ್ಯದ ಲ್ಯಾಪ್‌ ಟ್ಯಾಪ್‌ ಮತ್ತು ಹಾಲ್‌ನಲ್ಲಿ ಸೋಪಾ ಮೇಲೆ ಹ್ಯಾಂಡ್‌ ಬ್ಯಾಗ್‌ನಲ್ಲಿ ಇಟ್ಟಿದ್ದ  ಸುಮಾರು 9,000 ಮೌಲ್ಯದ 2 ಜೊತೆ ಬೆಳ್ಳಿಯ ಕಾಲು ಗೆಜ್ಜೆ ಕೂಡ ಕಳವು ಆಗಿದ್ದು ಒಟ್ಟು ಚಿನ್ನಾಭರಣ 3,42,000 ಮೌಲ್ಯದ 172 ಗ್ರಾಂ ಚಿನ್ನಾಭರಣ ಹಾಗೂ 9.000 ಮೌಲ್ಯದ ಬೆಳ್ಳಿಯ ಗೆಜ್ಜೆ ಹಾಗೂ ಲ್ಯಾಪ್‌ ಟ್ಯಾಪ್‌ ಸೇರಿ ಒಟ್ಟು 3,56,000 ಮೌಲ್ಯದ ಸ್ವತ್ತುಗಳು ಕಳವು ಆಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2021  ಕಲಂ: 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

.

ಇತ್ತೀಚಿನ ನವೀಕರಣ​ : 03-03-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080