ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ 02/02/2023 ರಂದು ಮಧ್ಯಾಹ್ನ 2:30 ಗಂಟೆಗೆ ಕಾರ್ಕಳ ತಾಲೂಕು, ಮಾಳ ಗ್ರಾಮದ ಮಾಳ ಘಾಟ್‌ನಲ್ಲಿ ಮಾಳ ಗೇಟ್‌ನಿಂದ 10 ಕಿ.ಮೀ ಮೇಲ್ಗಡೆ ಹೇರ್ ಪಿನ್ ಟರ್ನ್ ಎಂಬಲ್ಲಿ ತಿರುವಿನಲ್ಲಿ ಹಾದು ಹೋಗಿರುವ ಕಾರ್ಕಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತೀನ್ ರಾಥೋಡ್‌  ಎಂಬುವವರು ಮೋಟಾರು ಸೈಕಲ್‌ ನಂಬ್ರ KA-19-ER-4979 ನೇಯದರಲ್ಲಿ ಕೀರ್ತನಾ ರವರನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಶೃಂಗೇರಿ ಕಡೆಯಿಂದ, ಮಾಳ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಆತನ ತೀರಾ ಬಲಭಾಗಕ್ಕೆ ಸವಾರಿ ಮಾಡಿಕೊಂಡು ಹೋಗಿ ಮಾಳ ಕಡೆಯಿಂದ ಶೃಂಗೇರಿ ಕಡೆಗೆ ಹೋಗುತ್ತಿದ್ದ ಟ್ಯಾಂಕರ್‌‌ ನಂಬ್ರ KA-18-B-8366 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸಹಸವಾರೆ ಕೀರ್ತನಾ ರವರಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 13/2023 ಕಲಂ: 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ರೋಶನ್‌ಡಿಸೋಜ (35), ತಂದೆ: ಪೀಟರ್‌ಡಿಸೋಜಾ, ವಾಸ; ಮನೆ ನಂ 1/188, ಸ್ಟಾರ್‌ವಿಲ್ಲಾ, ಅಮ್ಮುಂಜೆ, ತೆಂಕಬೆಟ್ಟು ಅಂಚೆ, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಂದೆ ಪೀಟರ್‌ ಡಿಸೋಜ (62) ರವರು ಈ ಹಿಂದೆ ಹೃದಯಕ್ಕೆ ಸಂಬಂಧಿಸಿ ಆಸ್ಪತ್ರೆಯಲ್ಲಿ NGO Plast ಚಿಕಿತ್ಸೆ ಪಡೆದಿರುತ್ತಾರೆ, ಅವರಿಗೆ ದಿನಾಂಕ 02/02/2023 ರಂದು ಮಧ್ಯಾಹ್ನ 2:00 ಗಂಟೆಗೆ ವಿಪರೀತ ಎದೆ ನೋವು ಕಾಣಿಸಿಕೊಂಡಿದ್ದು,  ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಮಧ್ಯಾಹ್ನ 2:30 ಗಂಟೆಯ ಸಮಯಕ್ಕೆ ಹೋದಾಗ ಅವರನ್ನು ಪರೀಕ್ಷಿಸಿದ ವೈಧ್ಯರು ಪೀಟರ್‌ ಡಿಸೋಜ ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 09/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಪಿರ್ಯಾದಿದಾರರಾದ ಜಗದೀಶ (48), ತಂದೆ: ಹೆರಿಯಣ್ಣ ಶೇರಿಗಾರ್‌, ವಾಸ:  ಸೌಕೂರುಮನೆ, ಮೂಡ್ಲಕಟ್ಟೆ, ಕಂದಾವರ ಗ್ರಾಮ, ಕುಂದಾಪುರ ತಾಲೂಕು ಇವರು ಹೆಂಡತಿ ಮಕ್ಕಳೊಂದಿಗೆ ಒಟ್ಟಿಗೆ ದಿನಾಂಕ 01/02/2023 ರಂದು ರಾತ್ರಿ 11:30 ಗಂಟೆಗೆ ಊಟ ಮಾಡಿ ಮಲಗಿದ್ದು ದಿನಾಂಕ 02/02/2023 ರಂದು ಬೆಳಿಗ್ಗೆ 05:15 ಗಂಟೆಗೆ ಎದ್ದು ನೋಡಿದಾಗ ಪಿರ್ಯಾದಿದಾರರ ಹೆಂಡತಿ ಜಯಂತಿ (42) ಪಕ್ಕದಲ್ಲಿ ಇಲ್ಲದೇ ಇದ್ದು ನೋಡಿ ಹೊರಗಡೆ ಬಂದು ನೋಡಿದಾಗ ಮನೆಯ ಛಾವಡಿಯ ಮಾಡಿನ ಪಕ್ಕಾಸಿಗೆ ರೋಪ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವುದು ಕಂಡು ಬಂದಿದ್ದು ಕೂಡಲೇ ಮಕ್ಕಳನ್ನು ಎಬ್ಬಿಸಿ ಹೆಂಡತಿಯ ಕುತ್ತಿಗೆಯಲ್ಲಿದ್ದ ರೋಪ್‌ ಹಗ್ಗವನ್ನು ತುಂಡರಿಸಿ ಕೆಳಗಡೆ ಇಳಿಸಿ ನೋಡಿದಾಗ ಜಯಂತಿ ರವರು ಅದಾಗಲೇ ಮೃತ ಪಟ್ಟಿರುತ್ತಾರೆ. ಜಯಂತಿ ರವರಿಗೆ ಕಳೆದ 2 ವರ್ಷದಿಂದ ಕ್ಯಾನ್ಸರ್‌ ಖಾಯಿಲೆಯಿಂದ ಬಳಲುತ್ತಿದ್ದು ಪ್ರತಿದಿನ ವಿಪರೀತ ನೋವಿನಿಂದ ನರಳಾಡುತ್ತಿದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 01/02/2023 ರಂದು ರಾತ್ರಿ 11:30 ಗಂಟೆಯಿಂದ ದಿನಾಂಕ 02/02/2023 ರ ಬೆಳಿಗ್ಗೆ 05:15 ಗಂಟೆಯ ನಡುವೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 06/2023 ಕಲಂ:174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಮಣಿಪಾಲ: ದಿನಾಂಕ 28/01/2023 ರಂದು ಬೆಳಿಗ್ಗೆ 07:30 ಗಂಟೆಯಿಂದ ಬೆಳಿಗ್ಗೆ  09:30 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲ್ಲೂಕು  ಶಿವಳ್ಳಿ ಗ್ರಾಮದ ಮಣಿಪಾಲ ವಿದ್ಯಾರತ್ನ ನಗರದಲ್ಲಿರುವ ಕೀರ್ತಿ ಸಾಮ್ರಾಟ್‌ ಅಪಾರ್ಟ್ ಮೆಂಟ್‌ 2 ನೇ ಮಹಡಿ ರೂಮ್‌ ನಂಬರ್‌ 201 ಮತ್ತು  ಮೊದಲನೇ ಮಹಡಿಯ ರೂಮ್‌ ನಂಬರ್‌ 101 ನೇದಕ್ಕೆ ಯಾರೋ ಕಳ್ಳರು ಪ್ರವೇಶಿಸಿ ಎರಡು ರೂಮ್‌ಗಳಲ್ಲಿದ್ದ ಲ್ಯಾಪ್ ಟಾಪ್‌, ಕೆನಾನ್‌ ಕಂಪನಿಯ ಕ್ಯಾಮರಾ, ಸ್ಮಾರ್ಟ್ ವಾಚ್‌, ಪವರ್‌ ಬ್ಯಾಂಕ್‌  ಪರ್ಸ್‌ ಮತ್ತು 3 ಮೊಬೈಲ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ  ಸೊತ್ತುಗಳ ಒಟ್ಟು  ಮೌಲ್ಯ 3,23,500/- ಆಗಿರುವುದಾಗಿ  ಪ್ರವೀಣ್‌ ಕುಮಾರ್(21), ತಂದೆ: ಸಣ್ಮುಕ್‌ ರಾಜ್‌ , ವಾಸ:  ರೂಮ್‌ ನಂ 201 ಕೀರ್ತಿ ಸಾಮ್ರಾಟ್‌ ಅಪಾರ್ಟ್ ಮೆಂಟ್‌ ಮಣಿಪಾಲ ಇವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 19/2023, ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 03-02-2023 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080