ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಉಡುಪಿ:  ದಿನಾಂಕ: 31.01.2023 ರಂದು ಉಡುಪಿ ತಾಲೂಕು, ಶಿವಳ್ಳಿ ಗ್ರಾಮದ ರಾಯಲ್ ಎಂಬೆಸ್ಸಿ ಅಪಾರ್ಟ್‌ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು ಸಿಬ್ಬಂದಿ ಹೆಚ್.ಸಿ. 39 ನೇಯವರು ಬೆಳಿಗ್ಗೆ 10:30 ಗಂಟೆಗೆ ವಶಕ್ಕೆ ಪಡೆದ್ದು, ಠಾಣೆಗೆ ಹಾಜರುಪಡಿಸಿದ್ದು, ಪೊಲೀಸ್ ನಿರೀಕ್ಷಕರು ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆ ಗೊಳಪಡಿಸಿರುತ್ತಾರೆ. ದಿನಾಂಕ 03.02.2023 ರಂದು ಪಿರ್ಯಾದಿ ಅಶೋಕ, ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ರವರು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿಯು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಈತನ ವಿರುದ್ಧ ಸೆನ್ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 21/2023 ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಚೇರ್ಕಾಡಿ ಗ್ರಾಮದ ಹೊಸಮನೆ, ಕುದ್ಕುಂಜೆ ಎಂಬಲ್ಲಿ  ಪಿರ್ಯಾದಿ: ವನಿತಾ ರವಿರಾಜ್‌ಶೆಟ್ಟಿ (53 ವರ್ಷ), ಗಂಡ: ರವಿರಾಜ್‌ಟಿ. ಶೆಟ್ಟಿ, ವಾಸ: ಕುದ್ಕುಂಜೆ, ಹೊಸಮನೆ, ಪೇತ್ರಿ ಅಂಚೆ, ಚೇರ್ಕಾಡಿ ಗ್ರಾಮ ಇವರ ಗಂಡನಾದ ರವಿರಾಜ್‌ ಟಿ. ಶೆಟ್ಟಿ  (59 ವರ್ಷ)  ಎಂಬವರು ತನ್ನ ಅಕ್ಕನ ಮನೆಯ ಗೃಹ ಪ್ರವೇಶಕ್ಕೆ ಬಂದವರು ಮನೆಯಲ್ಲಿಯೇ ಇದ್ದಾಗ ದಿನಾಂಕ 02.02.2023 ರಂದು ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಆಗ ಫಿರ್ಯಾದಿದಾರರು ಅವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈಧ್ಯರು ಅವರನ್ನ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ, ಕೂಡಲೇ ಅಂಬುಲೆನ್ಸ್‌ ನಲ್ಲಿ  ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ಸಂಜೆ 5:05 ಗಂಟೆಯ ಸಮಯಕ್ಕೆ ಕರೆದು ಕೊಂಡು ಹೋದಾಗ ಪರೀಕ್ಷಿಸಿದ ವೈಧ್ಯರು  ರವಿರಾಜ್‌ಟಿ. ಶೆಟ್ಟಿ ರವರು ಈಗಾಗಲೇ ದಾರಿಮಧ್ಯೆ ಬರುವಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ರವಿರಾಜ್‌ಟಿ. ಶೆಟ್ಟಿ ರವರು ಹೃದಯಾಘಾತದಿಂದ ಅಥವಾ ಇನ್ಯಾವುದೋ ದೈಹಿಕ ಖಾಯಿಲೆಯಿಂದ ಮೃತಪಟ್ಟಿರುತ್ತಾರೆ, ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 10/2023 ಕಲಂ 174 ಸಿಆರ್‌ಪಿಸಿ ಯಂತೆ  ಪ್ರಕರಣ ದಾಖಲಿಸಲಾಗಿದೆ.
  • ಕೋಟ: ಪಿರ್ಯಾದಿ: ಪ್ರೇಮಾ ಪ್ರಾಯ 50 ವರ್ಷ ಗಂಡ: ಗುರುವ ವಾಸ: ಬೇಳೂರು ಗ್ರಾಮ ಇವರು ತಾಯಿ ಮತ್ತು ಗಂಡ ಮಕ್ಕಳು ಅಳಿಯ ರಘುರಾಮ ಹಾಗೂ ಕುಟುಂಬದವರೊಂದಿಗೆ  ವಾಸವಾಗಿದ್ದು, ಪಿರ್ಯಾದಿದಾರರ ಗಂಡ ಗುರುವ ಪ್ರಾಯ 63 ವರ್ಷ ಇವರಿಗೆ ಮಧ್ಯ ಸೇವನೆಯ ಅಭ್ಯಾಸವಿದ್ದು ರೇಖಾಳ ಗಂಡ ರಘರಾಮ ಇವರನ್ನು ಕಂಡರೆ ಆಗುತ್ತಿರಲಿಲ್ಲ. ಅದೇ ವಿಚಾರಕ್ಕೆ ನಿನ್ನೆ ದಿನ ದಿನಾಂಕ 02/02/2023 ರಂದು ಸಂಜೆ ಅಳಿಯ ರಘುರಾಮ ಎಂಬವನ ಮೇಲೆ ಹಲ್ಲೆ ಮಾಡಿ ತಲೆಗೆ ಹೊಡೆದು ಗಾಯ ಮಾಡಿದ್ದರಿಂದ ರಘುರಾಮರವರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವುದರಿಂದ ತನ್ನ ಮೇಲೆ ಪೊಲೀಸ್ ಕೇಸ್ ಆಗುತ್ತದೆ ಎನ್ನುವ ಭಯದಿಂದಲೋ ಅಥವಾ ಯಾವುದೋ ಕಾರಣಕ್ಕೋ ದಿನಾಂಕ 02/02/2023 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 03-02-2023  ರಂದು ಬೆಳಿಗ್ಗೆ  6-00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಮಲಗುವ ಕೋಣೆಯಲ್ಲಿದ್ದ ಪ್ಯಾನಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಯು.ಡಿ.ಆರ್ ನಂಬ್ರ 02/2023 ಕಲಂ:174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 03-02-2023 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080