ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 02/02/2022 ರಂದು ಮಧ್ಯಾಹ್ನ  14:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಅಹಮ್ಮದ್ ಕಬೀರ್ (55), ತಂದೆ: ಆದಮ್ ಸಾಹೇಬ್, ವಾಸ: ದೇವಿ ನಗರ 2 ನೇ ಮೇನ್6 ನೇ ಅಡ್ಡ ರಸ್ತೆ ಪರ್ಕಳ ಪೋಸ್ಟ್ 80 ಬಡಗುಬೆಟ್ಟು ಗ್ರಾಮ, ಉಡುಪಿ ಜಿಲ್ಲೆ ಇವರು ತಮ್ಮ ಮನೆಯ ಹೊರಗಡೆಯ ಅಂಗಳದಲ್ಲಿ ಕುಳಿತುಕೊಂಡಿದ್ದಾಗ ಅವರ ಮನೆಯ ಮುಂಭಾಗದಲ್ಲಿ ಹಾದು ಹೋಗಿರುವ  ದೇವಿನಗರ 6 ನೇ ಅಡ್ಡ  ರಸ್ತೆಯಲ್ಲಿ ಆರೋಪಿತ ಅಬುಬಕ್ಕರ್ ರವರು KA-20-P-8486 ನೇ Fortuner Car ನ್ನು ಪರ್ಕಳ ಕಡೆಯಿಂದ ಕಬ್ಯಾಡಿ ಪುತ್ತಬ್ಬ ಬಿ ಫಾತೀಮಾ ಎಂಡ್ ರೋಡ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ಪಿರ್ಯಾದಿದಾರರ ಮನೆಯ ಗೇಟಿಗೆ ಗುದ್ದಿ ನಂತರ ಮನೆಯ ಬಾಲ್ಕನಿಯ ಮೇಲೆ ಹತ್ತಿ ಪ್ರವೇಶ ದ್ವಾರ  ಮತ್ತು ಕಿಟಕಿಗೆ ಡಿಕ್ಕಿ ಹೊಡೆದು ಕಾರಿನ ಮುಂಭಾಗ, ಎಡಭಾಗ ಹಾಗೂ ಪಿರ್ಯಾದಿದರರ ಮನೆಯ ಗೇಟ್, ಬಾಲ್ಕನಿಯ ಗ್ರಾನೈಟ್, ಪ್ರವೇಶ ದ್ವಾರದಬಾಗಿಲು, ದಾರಂಧ, ಕಿಟಕಿ, ಗೋಡೆಗೆ ಹಾನಿಯಾಗಿರುತ್ತದೆ, ಹಾಗೂ ಹಾಲ್ ನಲ್ಲಿಟ್ಟಿದ್ದ ಒಂದು ಟಿ.ವಿ ಹಾಳಾಗಿರುತ್ತದೆ, ಈ ಅಪಘಾತದಿಂದ ಪಿರ್ಯಾದಿದಾರರಿಗೆ 2,50,000/- ರೂಪಾಯಿ ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2022  ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಫೌಜಿಯಾ ಬಾನು (32), ಗಂಡ: ಶಬ್ಬೀರ್ ಹುಸೇನ್, ವಾಸ:  ಡೋರ್  ನಂ. 6-22 ತೆಂಕ ಎರ್ಮಾಳ್ ಎರ್ಮಾಳ್ ತೆಂಕ ಗ್ರಾಮ ಉಡುಪಿ ಜಿಲ್ಲೆ ಇವರ ಗಂಡ ಶಬ್ಬೀರ್ ಹುಸೇನ್ ರವರು ದಿನಾಂಕ 02/02/2022 ರಂದು ಉಡುಪಿ ಆದಿ ಉಡುಪಿ ಕಡೆಗೆ ಹೋದವರು ವಾಪಾಸು ಕುಕ್ಕಿಕಟ್ಟೆ ಮನೆಯ ಕಡೆಗೆ ತಮ್ಮ ಸೈಕಲ್ ನಲ್ಲಿ ಬರುತ್ತಿರುವಾಗ ಸಿ.ಟಿ ಬಸ್ ನಿಲ್ದಾಣ- ಕಲ್ಸಂಕದ ನಾಗಬನದ ಬಳಿ ಶಂಕರನಾರಾಯಣ ದೇವಸ್ಥಾನದ ಎದುರು ತಲುಪುವಾಗ ಬೆಳಿಗ್ಗೆ 09:45 ಗಂಟೆಗೆ KA-20-EM-4753ನೇ ಸ್ಕೂಟರ್ ಸವಾರ ಉಮೇಶ್ ಆಚಾರ್ಯರವರು ತನ್ನ ಸ್ಕೂಟರ್ ನ್ನು ಸಿ .ಟಿ ಬಸ್ ನಿಲ್ದಾಣದ ಕಡೆಯಿಂದ  ಕಲ್ಸಂಕದ ಕಡೆಗೆ  ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಒಮ್ಮೆಲೇ ಶಬ್ಬೀರ್ ಹುಸೇನ್ ರವರ   ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸಮೇತ ರಸ್ತೆಗೆ ಬಿದ್ದು,  ಸೈಕಲ್ ಜಖಂಗೊಂಡು ಚಿಕಿತ್ಸೆಯ ಬಗ್ಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಪ್ರಮೋದ್ ಆಚಾರ್ಯ (28), ತಂದೆ: ಶ್ರೀಧರ್ ಆಚಾರ್ಯ, ವಾಸ: ಮಾತೃಶ್ರೀ, 123-4-9, ಬಿ.ಸಿ ರಸ್ತೆ,ವಡೇರಹೋಬಳಿ ಗ್ರಾಮ, ಕುಂದಾಪುರ ತಾಲೂಕು ಇವರು KA-20-EX-2059 Honda Dio ದ್ವಿಚಕ್ರ  ವಾಹನದ ಮಾಲಕರಾಗಿದ್ದು, ದಿನಾಂಕ 10/01/2022 ರಂದು 14:30 ಗಂಟೆಗೆ ವಾಹನವನ್ನು ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಗಾಂಧಿ ಮೈದಾನದ ಎದುರು ಪೂರ್ವ ಬದಿಯ ಸರ್ವಿಸ್ ರಸ್ತೆಯಲ್ಲಿನ ನಿರ್ಮಾಣ ಹಂತದ ಕಟ್ಟಡದ ಗೇಟಿನ ಬಳಿ ನಿಲ್ಲಿಸಿ ಕೆಲಸಕ್ಕೆ  ಹೋಗಿದ್ದು ವಾಪಾಸು 16:30 ಗಂಟೆಗೆ ವಾಪಾಸು ಬಂದು ನೋಡಲಾಗಿ ವಾಹನವು ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು ವಾಹನವನ್ನು ವಾಹನದಲ್ಲಿದ್ದ ವಾಹನದ ಮೂಲ ದಾಖಲೆಗಳ ಸಮೇತ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ವಾಹನದ ಮೌಲ್ಯ 72,000/- ರೂಪಾಯಿ ಅಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

 ಇತರ ಪ್ರಕರಣ

  • ಮಲ್ಪೆ: ಆರೋಪಿತರಾದ ಅಭಿಲಾಷ , ರಾಜೀವಕುಮಾರ , ಮಧುಕರ ಬೋಜ ಸುವರ್ಣ ಇವರು ಪಿರ್ಯಾದಿದಾರರಾದ ಪ್ರಮೋದ್ ಕರ್ಕೆರಾ, ತಂದೆ: ಕೃಷ್ಣಪ್ಪ ಕರ್ಕೆರಾ, ವಾಸ: ಪ್ಲಾಟ್ ನಂಬ್ರ 301  4 ನೇ ಮಹಡಿ ಪ್ರಣವಿ ಎ3 ರೆಸಿಡೆನ್ಸಿ ಮಲ್ಪೆ,ಕೊಡವೂರು ಗ್ರಾಮ ಇವರ ಪರಿಚಯದಾರಾಗಿದ್ದು ,ಆರೋಪಿತರು  ಮರಿಯಂ ಸೀ ಪುಡ್ ಉದ್ಯಮದಲ್ಲಿ ಪಾಲುದಾರರಾಗಿ ಮಾಡಿಕೊಳ್ಳುತ್ತೇವೆ ತುಂಬಾ ಲಾಭದಾಯವಾಗಿರುತ್ತದೆ ಎಂಬುದಾಗಿ ಪಿರ್ಯಾದಿದಾರರನ್ನು ನಂಬಿಸಿ ಪಿರ್ಯಾದಿದಾರರಿಂದ ದಿನಾಂಕ 17/06/2020 ರಂದು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಶಾಖೆ ಉಡುಪಿಯಲ್ಲಿ 5 ಲಕ್ಷ ರೂಪಾಯಿ ಪಿರ್ಯಾದಿದಾರರು ಆರೋಪಿರ ಖಾತೆಗೆ ಜಮಾ ಮಾಡಿದ್ದು , ಆರೋಪಿತರು  ಪಿರ್ಯಾದಿದಾರರನ್ನು ಮರಿಯಂ ಸೀ ಪುಡ್  ಉದ್ಯಮದ ಪಾಲುದಾರರನ್ನಾಗಿ  ಮಾಡಕೊಳ್ಳದೆ ,ಪಿರ್ಯಾದಿದಾರರು ಪದೇ ಪದೇ ವ್ಯವಹಾರದ ಬಗ್ಗೆ ಕೇಳಿಕೊಂಡಾಗ ಒಂದಲ್ಲಾ ಒಂದು ರೀತಿಯ ನೆಪವೋಡ್ಡಿ ಪಿರ್ಯಾದಿದಾರಿಗೆ  ನಂಬಿಸಿ  ಹಣ ಪಡೆದುಕೊಂಡು ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2022 ಕಲಂ: 406, 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಲ್ಪೆ: ತೆಂಕನಿಡಿವೂರು ಗ್ರಾಮದ ಸ.ನಂ:306/7ಎ2 ಸೆಂಟ್ಸ್ 0.02.45 ಪಿರ್ಯಾದಿದಾರರಾದ ಚಂದ್ರಕಾಂತ(49), ತಂದೆ:  ಗೋಪಾಲರಾವ್, ವಾಸ:ತೊಟ್ಟಂ, ತೆಂಕನಿಡಿಯೂರು ಗ್ರಾಮ ಇವರ ತಾಯಿಗೆ ಹಕ್ಕು ಪತ್ರದ ಮೂಲಕ ಬಂದಿದ್ದು ಪಿರ್ಯಾದಿದಾರರು ಜಾಗದಲ್ಲಿ ಕಟ್ಟಡವನ್ನು ಕಟ್ಟಿದ್ದು ಆರೋಪಿ 1) ರವಿಪ್ರಕಾಶ್  ಇವರು ಕಟ್ಟಡದಲ್ಲಿ ಬಾಡಿಗೆ ಅಂಗಡಿ ನಡೆಸಿಕೊಂಡು ಹೋಗಿತ್ತಿದ್ದು ವಿನಾ ಕಾರಣ ಪಿರ್ಯಾದಿದಾರರ ಹೆಂಡತಿ ಮಕ್ಕಳಿಗೆ ತೊಂದರೆ ಕೊಡುತಿದ್ದು ದಿನಾಂಕ 30/01/2022 ರಂದು ಪಿರ್ಯಾದಿದಾರರು ಕಾಂಪ್ಲೆಕ್ಸ್ ಹತ್ತಿರ ನಿಂತುಕೊಂಡಿರುವಾಗ ಆರೋಪಿತರು ಪಿರ್ಯಾದಿದಾರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕೈಯಲ್ಲಿ ಇಟ್ಟಿಗೆ ಹಿಡಿದುಕೊಂಡು ಹಲ್ಲೆ ನಡೆಸಲು ಮುಂದಾದಾಗ  ಪಿರ್ಯಾದಿದಾರರು ತಪ್ಪಿಸಿಕೊಳ್ಳಲು  ಪ್ರಯತ್ನಿಸಿದಾಗ 1 ನೇ ಆರೋಪಿಯು ಪಿರ್ಯಾದಿದಾರರನ್ನು  ಗಟ್ಟಿಯಾಗಿ ಹಿಡಿದುಕೊಂಡಿದ್ದು  3 ನೇ ಆರೋಪಿ ಆಶ್ರಿತ್ ಪಿರ್ಯಾದಿದಾರರಿಗೆ ಇಟ್ಟಿಗೆ  ಬಿಸಾಡಿದ್ದು ,ಆರೋಪಿತರಾದ 2) ಗಾಯತ್ರಿ ಮತ್ತು 4)ಮಾರ್ಕ ರೋಡ್ರಿಗಸ್ ಇವರು ಅವಾಚ್ಯ ಶಬ್ದಗಳಿಂದ  ಬೈದು  ಬೆದರಿಕೆ ಹಾಕಿದ್ದು, 3 ನೇ ಆರೋಪಿಯು  ಪಿರ್ಯಾದಿದಾರರ ಬೈಕ್ ಮೇಲೆ ಇಟ್ಟಿಗೆ ಬಿಸಾಡಿ ಬೈಕ್ ಗೆ ಹಾನಿ ಮಾಡಿ 4 ಸಾವಿರ ರೂಪಾಯಿ ನಷ್ಟ ಉಂಟು ಮಾಡಿರುವುದಾಗಿದೆ , ಅಲ್ಲದೆ ಪಿರ್ಯಾದಿದಾರರ ಬಲ ಕೈಬೆರಳು ಮತ್ತು ತಲೆಯ ಹಿಂದೆ ಬಲ ಬದಿಯ ಕಿವಿ ಗಾಯವಾಗಿದ್ದು, ಬಲ ಬದಿಯ ಪಾದ ಜಜ್ಜಿತ ಗಾಯವಾಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2022 ಕಲಂ: 427, 341, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 03-02-2022 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080