ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಬೈಂದೂರು: ಫಿರ್ಯಾದಿ ಇಮ್ತಿಯಾಜ್ ಇವರು ದಿನಾಂಕ 02-02-2022ರಂದು ತನ್ನ ಬಾಬ್ತು  ರಿಕ್ಷಾದಲ್ಲಿ ರಾ.ಹೆ 66 ರಲ್ಲಿ ಬೈಂದೂರಿನಿಂದ ಶಿರೂರು ಕಡೆಗೆ ರಾ ಹೆ 66 ಪಶ್ಚಿಮ ಬದಿಯ ರಸ್ತೆಯಲ್ಲಿ ಶಿರೂರು ಗ್ರಾಮದ ತೌಹಿದ್ ಶಾಲೆಯ ಬಳಿ ರಾತ್ರಿ 9:30 ಗಂಟೆಗೆ ಹೋಗುತ್ತಿರುವಾಗ ರಾ.ಹೆ 66 ರಸ್ತೆಯ ಪಶ್ಚಿಮ ಬದಿಯಲ್ಲಿ ಒಂದು ಟ್ಯಾಂಕರ್ ಲಾರಿ ನಂಬ್ರ KA 01 AH 7359 ನೇದನ್ನು ಯಾವುದೇ ಸಿಗ್ನಲ್ ಹಾಕದೇ  ನಿಲ್ಲಿಸಿದ್ದನ್ನು  ಅದರ ಚಾಲಕನು ಒಮ್ಮೇಲೆ ಟ್ಯಾಂಕರ್ ಲಾರಿಯನ್ನು ರಸ್ತೆಯ ಬಲಬದಿಗೆ ಚಲಾಯಿಸಿದ ಪರಿಣಾಮ ಪಿರ್ಯಾದುದಾರರ ಎದುರಿನಿಂದ ಹೋಗುತ್ತಿರುವ KA 47 J 6590ನೇ  ಮೋಟಾರು ಸೈಕಲ್ ಸವಾರನು ಟ್ಯಾಂಕರ್ ಲಾರಿಯ ಹಿಂಬಾಗಕ್ಕೆ ಡಿಕ್ಕಿ ಹೊಡೆದು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಪಿರ್ಯಾದುದಾರರು ಹಾಗೂ ಲಾರಿ ಚಾಲಕ ಮೋಟಾರು ಸೈಕಲ್  ಸವಾರನನ್ನು ಎತ್ತಿ ಉಪಚರಿಸಿದ್ದು ಮೋಟಾರು ಸೈಕಲ್ ಸವಾರಿನಿಗೆ ತಲೆಗೆ ರಕ್ತಗಾಯವಾಗಿದ್ದು, ಎದೆಗೆ ಗುದ್ದಿದ ಒಳನೋವು ಉಂಟಾಗಿದ್ದು, ನಂತರ ಐ.ಆರ್.ಬಿ ಗೆ ಸಂಬಂದಪಟ್ಟ ಅಂಬುಲೆನ್ಸ್ ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು  ಹೋದಲ್ಲಿ ಅಲ್ಲಿಯ ವೈದ್ಯರು ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು ಉಡುಪಿ ಸರಕಾರಿ ಆಸ್ಪತ್ರೆಗೆ ಕೊಂಡು ಹೋದಲ್ಲಿ  ಅಲ್ಲಿಯ ವೈದ್ಯರು ಪರೀಕ್ಷೀಸಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೋಗುವರೇ ತಿಳಿಸಿದ್ದು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ  ದಾಖಲಿಸಿದ್ದು ಗಾಯಾಳು ಮಂಜುನಾಥ ರವರು  ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 03-02-2022 ರಂದು  ಬೆಳಿಗ್ಗೆ 08:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 35/2022 ಕಲಂ. 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ : ಮಾನ್ಯ ಕಾರ್ಕಳ ಎರಡನೇ ಎ,ಸಿ,ಜೆ ಮತ್ತು ಜೆ,ಎಂ,ಎಫ್,ಸಿ ನ್ಯಾಯಾಲಯದ ಖಾಸಗಿ ಪಿರ್ಯಾದಿ ನಂಬ್ರ PCR 333/2021 ರ ಸಾರಾಂಶವೇನೆಂದರೆ ದಿನಾಂಕ: 21/09/2021 ರಂದುಬೆಳಿಗ್ಗೆ 09:30 ಗಂಟೆಗೆ ಪಿರ್ಯಾದುದಾರರಾದ ಶ್ರೀ ಸುಹೇಲ್ ಖಾನ್ ರವರು ಕೆಲಸ ನಿಮಿತ್ತ ಕಾರ್ಕಳಕ್ಕೆ ಬರುವ ಬಗ್ಗೆ ಮನೆಯಿಂದ ತನ್ನ ಬಾಬ್ತು ಕೆ,ಎ20-ಇ,ಎಮ್-7533 ನೇ ನಂಬ್ರದ ಬೈಕಿನಲ್ಲಿ ಹೊರಟಿದ್ದು ಪಿರ್ಯಾದುದಾರರು ನಾರಾವಿ-ಬಜಗೊಳಿ ಡಾಮಾರು ರಸ್ತೆಯಲ್ಲಿ ಕಾರ್ಕಳ ಕಡೆಗೆ ಬರುತ್ತಾ ಸಮಯ ಸುಮಾರು ಬೆಳಿಗ್ಗೆ 09:45 ಗಂಟೆಗೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಪಾಜಿಗುಡ್ಡೆ ಎಂಬಲ್ಲಿ ತಲುಪುವಾಗ ಬಜಗೊಳಿ ಕಡೆಯಿಂದ ನಾರಾವಿ ಕಡೆಗೆ ಕೆ,ಎ05-ಎಮ್,ಹೆಚ್-8944 ನೇ ನಂಬ್ರದ ಕಾರಿನ ಚಾಲಕ ಜಗದೀಶ್ ಹೆಗ್ಡೆರವರು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಮುಂದೆ ಹೋಗುತ್ತಿದ್ದ ಬೇರೊಂದು ವಾಹನವನ್ನು ಓವರ್ ಟೇಕ್ ಮಾಡಿ ಕಾರನ್ನು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಪಿರ್ಯಾದುದಾರರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಸುಹೈಲ್ ಖಾನ್ ರವರು ಬೈಕ್ ಸಮೇತ ರಸ್ತೆಗೆ ಬಿದ್ದು ಅವರ ಎಡಗೂ ಮುಂಗೈಯ ಮೂಳೆ ಮುರಿತದ ಗಾಯವುಂಟಾಗಿದ್ದು ಕಾರ್ಕಳ ಸಿ,ಟಿ, ನರ್ಸಿಂಗ್ ಹೋಮ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 13/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿ ಡಾ. ನಾಗರಾಜ್‌ ಇವರು ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜ್‌ ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕರಾಗಿದ್ದು, ದಿನಾಂಕ 03/02/2022 ರಂದು ಕುತ್ಪಾಡಿಯ ಮನೆಯಲ್ಲಿರುವಾಗ ಕಡೆಕಾರಿನ ಜತಿನ್ ಎಂಬವರು ದೂರವಾಣಿ ಕರೆ ಮಾಡಿ ಕಡೆಕಾರು ಗ್ರಾಮದ ಕಡೆಕಾರು ಪಂಚಾಯತ್ ಕಛೇರಿ ಬಳಿಯ ಅರುಣ್ ಜನರಲ್‌ ಸ್ಟೋರ್ ಬಳಿ ಓರ್ವ ರಸ್ತೆ ಅಪಘಾತಗೊಂಡು ಗಂಭೀರ ಗಾಯಗೊಂಡು ಬಿದ್ದಿರುವುದಾಗಿ ತಿಳಿಸಿದಂತೆ ಫಿರ್ಯಾದಿದಾರರು ಕೂಡಲೆ ಅಪಘಾತ ನಡೆದ ಸ್ಥಳಕ್ಕೆ ತೆರಳಿ ನೋಡಿದಾಗ ಆತನು ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜ್‌ ಮತ್ತು ಆಸ್ಪತ್ರೆಯಲ್ಲಿ ಕಿರು ವೈದ್ಯನಾಗಿ ಕಲಿಯುತ್ತಿರುವ ಬೀದರ್ ನಿವಾಸಯಾದ ಡಾ. ಕದಂ ರಿಷಿಕೇಶ್ ಸಂಜಯ್‌ ಪ್ರಾಯ : 24 ವರ್ಷ ಆಗಿದ್ದು, ಬಳಿಕ ತಿಳಿದಾಗ ಆತನು ತನ್ನ ಬಾಬ್ತು KA 20 EY 2036 ನೇದರಲ್ಲಿ ಮಲ್ಪೆ ಬೀಚ್‌ಗೆ ಹೋಗುವ ಉದ್ದೇಶದಿಂದ ಕುತ್ಪಾಡಿ ಮನೆಯಿಂದ 00:10 ಗಂಟೆಗೆ ಹೊರಟು ಕಡೆಕಾರು ಪಂಚಾಯತ್ ಕಛೇರಿಯ ಬಳಿಯ ಅರುಣ್‌ ಜನರಲ್ ಸ್ಟೋರ್‌ ಹತ್ತಿರ ಸಮಯ ಸುಮಾರು 00:20 ಗಂಟೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಅರುಣ್‌ ಜನರಲ್ ಸ್ಟೋರ್‌ ನ ಅಂಗಡಿ ಗೋಡೆಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ಅಕ್ರ17/2022 ಕಲಂ 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಅಮಾಸೆಬೈಲು: ಫಿರ್ಯಾದಿ ಮನೋಜ್ ಸಿ ಇವರು ಹೊಸಂಗಡಿ ಕೆ.ಪಿ.ಸಿ ಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದು ದಿನಾಂಕ: 02-02-2022 ರಂದು ರಾತ್ರಿ ಗಾರ್ಡ್ ಕರ್ತವ್ಯದಲ್ಲಿದ್ದು 20:20 ಗಂಟೆ ಸಮಯಕ್ಕೆ ಫಿರ್ಯಾದಿದಾರರು ಕಛೇರಿಯ ನೊಟಿಸ್ ಬೋರ್ಡ್ ನೋಡುತ್ತಿರುವಾಗ ಫಿರ್ಯಾದಿದಾರರಿಗೆ ಗುರುತು ಪರಿಚಯವಿರುವ ಸೀತಾದೇವಿ ಎಂಬವರು ಅಲ್ಲಿಯೇ ಇರುವ ಭದ್ರತಾ ಕೊಠಡಿಗೆ ಬರುವಂತೆ ತಿಳಿಸಿ ಫಿರ್ಯಾದಿದಾರರು ಭದ್ರತಾ ಕೊಠಡಿಗೆ ಹೋದಾಗ ಮಗಳಿಗೆ ಯಾಕೆ ಮೆಸೆಜ್ ಮಾಡುತ್ತೀ ಎಂದು ಹೇಳಿ ಒಮ್ಮೆಲೆ ಕೈಯಿಂದ ಬೆನ್ನಿಗೆ ಹೊಡೆದಿದ್ದು ನಂತರ ಅಲ್ಲಿಯೇ ದೇವರ ಫೋಟೋದ ಹತ್ತಿರವಿರುವ ಚಾಕು ತೆಗೆದು ಚಾಕುವಿನ ಹಿಡಿ ಬದಿಯಿಂದ ಫಿರ್ಯಾದಿದಾರರ ಬೆನ್ನಿಗೆ ಮತ್ತು ಕುತ್ತಿಗೆಗೆ ಹೊಡೆದು ನೋವುಂಟು ಮಾಡಿದ್ದು ನಂತರ ಸೀತಾದೇವಿ ಮತ್ತು ಅವರ ಗಂಡ ರಾಜು ಇಬ್ಬರೂ ಸೇರಿಕೊಂಡು  ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದಕ್ಕೆ ನಮ್ಮ ಮಗಳ ಸುದ್ದಿಗೆ ಬಂದರೆ ಕೊಲ್ಲದೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದು ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 03/2022 ಕಲಂ: 323,324,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 03-02-2022 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080