ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 02/02/2021 ರಂದು ಪಿರ್ಯಾದಿದಾರರಾದ ಅಶ್ವಿನ್ ಪ್ರಸನ್ನ ರೋಚ್  (37), ತಂದೆ: ಜೆ.ಎಲ್ ರೋಚ್, ವಾಸ: ಮೀನು ಮಾರ್ಕೆಟಿನ ಬಳಿ, ಕೊಳಲಗಿರಿ, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಮೋಟಾರ್ ಸೈಕಲ್‌ನಲ್ಲಿ ಉಪ್ಪೂರು ಕಡೆಗೆ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಬೆಳಿಗ್ಗೆ 08:30 ಗಂಟೆಗೆ ಉಪ್ಪೂರು ಗ್ರಾಮದ ಮುಟ್ಟಿಕಲ್‌ ಜಂಕ್ಷನ್, ಜಿ.ಟಿ.ಸಿ ಕಾಲೇಜ್ ಎದುರು ತಲುಪುವಾಗ ಲಕ್ಷ್ಮೀ ನಗರ ಕಡೆಯಿಂದ ಜೆಪ್ರಿ ಜಾನ್ (68) ರವರು ಅವರ KA-20-ER-2487 ನೇ ನಂಬ್ರದ ಯಮಹಾ ZRAY ಸ್ಕೂಟರ್‌ನ್ನು ಸವಾರಿ ಮಾಡಿಕೊಂಡು ಬಂದು ಉಪ್ಪೂರು-ಕೊಳಲಗಿರಿ ಮುಖ್ಯ ರಸ್ತೆಯ ಅಂದರೆ ಮುಟ್ಟಿಕಲ್ ಕ್ರಾಸ್‌ನಲ್ಲಿ ರಸ್ತೆಯ ಎಡ ಅಂಚಿನಲ್ಲಿ ತನ್ನ ಸ್ಕೂಟರ್‌ನ್ನು ನಿಲ್ಲಿಸಿಕೊಂಡು ಮುಖ್ಯ ರಸ್ತೆಗೆ ಪ್ರವೇಶಿಸಲು ಬರುತ್ತಿರುವ ವಾಹನಗಳನ್ನು ನೋಡುತ್ತಿರುವಾಗ, ಅದೇ ವೇಳೆಗೆ ಉಪ್ಪೂರು ಕಡೆಯಿಂದ ಆರೋಪಿ ರವಿಚಂದ್ರ ತನ್ನ KA-20-EK-6428 ನೇ ನಂಬ್ರದ ಹೊಂಡಾ UNICORN ಮೋಟಾರ್ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ರಸ್ತೆಯ ಅಂಚಿನಲ್ಲಿ ನಿಂತುಕೊಂಡಿದ್ದ ಜೆಪ್ರಿ ಜಾನ್ ರವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು. ಈ ಅಪಘಾತದ ಪರಿಣಾಮ ಇಬ್ಬರೂ ವಾಹನಗಳ ಸಮೇತ ರಸ್ತೆಯ ಮೇಲೆ ಬಿದ್ದು, ಜೆಪ್ರಿ ಜಾನ್ ರವರ ಬಲಕಾಲಿನ ಮೊಣಗಂಟಿನ ಕೆಳಗೆ ತೀವ್ರ ಮೂಳೆ ಮುರಿತದ ಗಾಯ, ಬಲಭುಜದ ಕೆಳಗೆ ತರಚಿದ ಗಾಯ, ಮೈಕೈಗೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು, ಆರೋಪಿ ರವಿಚಂದ್ರನ ಕೈಗೆ ಸಣ್ಣ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಜೆಪ್ರಿ ಜಾನ್ ರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಯು ಯಾವುದೇ ಚಿಕಿತ್ಸೆ ಪಡೆದಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಪ್ರದೀಪ ಕುಲಾಲ(29), ತಂದೆ: ಅಪ್ಪು ಕುಲಾಲ, ವಾಸ: ಬಾಂಧಬೆಟ್ಟು, ಸಾಂತ್ಯಾರು, ಬೈರಂಪಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಅಕ್ಕ ವಿಮಲ ಕುಲಾಲ್ತಿ ರವರಿಗೆ ಜಯರಾಮ (45) ರವರೊಂದಿಗೆ 16 ವರ್ಷಗಳ ಹಿಂದೆ ಮದುವೆ ಆಗಿದ್ದು, ಜಯರಾಮ ರವರಿಗೆ  3-4 ವರ್ಷಗಳಿಂದ ಉಬ್ಬಸ ಕಾಯಿಲೆ ಇದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಕೊಂಡಿರುತ್ತಾರೆ. ಆದರೂ ಪೂರ್ಣವಾಗಿ ಗುಣಮುಖವಾಗಿರುವುದಿಲ್ಲ. ಅಲ್ಲದೇ ಅಮಲು ಪಧಾರ್ಫ ಸೇವಿಸುತ್ತಿದ್ದವರು ದೂರಕ್ಕೆ ಕೆಲಸಕ್ಕೆ ಹೋದರೇ ಮನೆಗೆ ಬಾರದೇ  ಅಲ್ಲಿಯೇ ಉಳಕೊಳ್ಳುತ್ತಿದ್ದರು. ದಿನಾಂಕ  31/01/2021 ರಂದು ಬೆಳಿಗ್ಗೆ 08:00 ಗಂಟೆಗೆ ಕೆಲಸಕ್ಕೆ  ಹೋದವರೂ  ಮನೆಗೆ ಬಾರದೇ ಇದ್ದು, ಅವರನ್ನು ಹುಡುಕಾಡಿದಲ್ಲಿ ದಿನಾಂಕ 02/02/2021 ರಂದು ಮಧ್ಯಾಹ್ನ 3:00 ಗಂಟೆಗೆ  ಜಯರಾಮರವರ ಹಳೆಯ ಮನೆಯಾದ  ಕೊಂಡಾಡಿ ಭಜನಕಟ್ಟೆಯ ಬಳಿ  ಮಾವಿನಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಕೊಂಡ  ಸ್ಥಿತಿಯಲ್ಲಿ  ಇರುತ್ತದೆ. ಜಯರಾಮ ರವರು ತನಗಿರುವ ಉಬ್ಬಸದ ಕಾಯಿಲೆಯಿಂದ ಮನನೊಂದು  ದಿನಾಂಕ 31/01/2021 ರ ಬೆಳಿಗ್ಗೆ 08:00 ಗಂಟೆಯಿಂದ ದಿನಾಂಕ 02/02/2021 ರ 3:00 ಗಂಟೆಯ ಮಧ್ಯಾವಧಿಯಲ್ಲಿ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿದಾರರಾದ  ಚಂದ್ರಕಲಾ (26), ತಂದೆ: ಬೆಳ್ಳ ನಾಯ್ಕ, ವಾಸ: ವಡ್ಡಪ್ಪಿ, 34ನೇ ಕುದಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 31/01/2021 ರಂದು ಮನೆಯಲ್ಲಿದ್ದು ಮಧ್ಯಾಹ್ನ 1:00 ಗಂಟೆಗೆ ಮನೆಯವರೊಂದಿಗೆ ಮಾತನಾಡುತ್ತಿರುವಾಗ  ಅದನ್ನು ಕೇಳಿ  ಅವರ ಮನೆಯ ಸಮೀಪದ ನಿವಾಸಿಯಾದ 1ನೇ ಆರೋಪಿ ಚೇತನ್‌ ಪಿರ್ಯಾದಿದಾರರು ಕುಳಿತುಕೊಂಡಿದ್ದ ಮನೆಯ ಮೆಟ್ಟಿಲಿನ ಬಳಿ ಬಂದು  ಅವಾಚ್ಯವಾಗಿ ಬೈದು  ಹೊಡೆಯಲು ಬಂದಿರುತ್ತಾನೆ. ಆಗ ಪಿರ್ಯಾದಿದಾರರು ಅವನಿಂದ ತಪ್ಪಿಸಿಕೊಂಡು ಅಲ್ಲೇ ಹತ್ತಿರ ನಿಂತುಕೊಂಡಿದ್ದಾಗ ಅದೇ ವೇಳೆ ಅಲ್ಲಿಗೆ 2ನೇ ಆರೋಪಿ ವಾಸು, 3ನೇ ಆರೋಪಿ ಶೀನ ನಾಯ್ಕ , 4ನೇ ಆರೋಪಿ ಗೋಪಾಲ ನಾಯ್ಕ, 5ನೇ ಆರೋಪಿ ಗಂಗೆ ಬಾಯಿ ಹಾಗೂ ಇತರ ಆರೋಪಿಗಳಾದ 6ನೇ ಲಕುಮಿ, 7ನೇ ನಾಗರತ್ನ, 8 ನೇ ಕವಿತಾ, 9ನೇ ಜಲಜಾ, 10ನೇ ಸೀತಾ ರವರು ಬಂದು  ಪಿರ್ಯಾದಿದಾರರನ್ನು ಮತ್ತು ಅವರ ಮನೆಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ.  ಪಿರ್ಯಾದಿದಾರರು ವಿಡಿಯೋ ಮಾಡುತ್ತಿದ್ದು, ಆಗ 1ನೇ ಆರೋಪಿಯು  ಅವಾಚ್ಯವಾಗಿ ಬೈದಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ: 143,147, 448, 354, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ: ದಿನಾಂಕ 02/02/2021 ರಂದು ಸಂಜೆ 4:00 ಗಂಟೆಗೆ ಆಪಾದಿತ ಸುಬ್ರಮಣ್ಯ ಎಂಬಾತನು ಕೈಯಲ್ಲಿ ಕತ್ತಿಯನ್ನು ಹಿಡಿದು ಪಿರ್ಯಾದಿದಾರರಾದ ರವಿಚಂದ್ರ (48), ತಂದೆ: ದಿ.ತಂಗವೇಲು, ವಾಸ:ಭುವನೇಶ್ವರಿ ನಿಲಯ, ಅಯ್ಯಪ್ಪ ನಗರ ಕುಕ್ಕುಂದೂರು ಗ್ರಾಮ ಕಾರ್ಕಳ  ಇವರ ಮನೆಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ವಾಸ್ತವ್ಯದ ಮನೆಯ ಜಾಗವನ್ನು ಆತನ ಹೆಸರಿಗೆ ಬರೆಸಿಕೊಡಬೇಕು ಎಂದು ಬೆದರಿಸಿ  ಕತ್ತಿಯನ್ನು ಝಳಪಿಸಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2021  ಕಲಂ: 448,506(2) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 03-02-2021 09:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080