ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 02/01/2023  ರಂದು ಸಂಜೆ 6:30 ಗಂಟೆಗೆ, ಕುಂದಾಪುರ ತಾಲೂಕು,  ಹಂಗಳೂರು ಗ್ರಾಮದ ವಿನಾಯಕ ಟಾಕೀಸ್‌ ಬಳಿ ಪೂರ್ವ ಬದಿಯ ಎನ್‌. ಹೆಚ್‌ 66 ರಸ್ತೆಯಲ್ಲಿ,ಆಪಾದಿತ ಮಂಜುನಾಥ  KA-21-B-7288ನೇ ಕಾರನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ  ಅತೀವೇಗ ಹಾಗೂ  ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ರಸ್ತೆಯ ಪೂರ್ವ ದಿಕ್ಕಿಗೆ ಬರಲು ರಸ್ತೆ ದಾಟುತ್ತಿದ್ದ ಮಹಾಬಲ ಶೆಟ್ಟಿ  ಹಾಗೂ  ಬುಡ್ಡಮ್ಮ ಶೆಟ್ಟಿ @  ಸರೋಜಿನಿ ಶೆಟ್ಟಿ ರವರಿಗೆ  ಡಿಕ್ಕಿ ಹೊಡೆದ ಪರಿಣಾಮ , ಇವರಿಗೂ  ತಲೆಗೆ, ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿ ಮಹಾಬಲ ಶೆಟ್ಟಿಯವರು ಸ್ಥಳದಲ್ಲಿಯೇ ಮೃತಪಟ್ಟಿದ್ದು,  ಬುಡ್ಡಮ್ಮ ಶೆಟ್ಟಿ @ ಸರೋಜಿನಿ ಶೆಟ್ಟಿಯವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು   ಹೆಚ್ಚಿನ ಚಿಕಿತ್ಸೆ  ಬಗ್ಗೆ  ಮಣಿಪಾಲ  ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು  ಪರೀಕ್ಷಿಸಿ  ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2023  ಕಲಂ: 279, 304 (ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ: ದಿನಾಂಕ 02/01/2023 ರಂದು ಪಿರ್ಯಾದಿದಾರರಾದ ಶ್ರೀಮತಿ ಸುಜಾತ (57) , ಗಂಡ: ಸಂಜೀವ  ಅಮೀನ್, ವಾಸ: ಮನೆ ನಂ. 11-66M(4) ನಿತ್ಯಾನಂದ ಐಸ್‌ಪ್ಲಾಂಟ್‌ನ ಹತ್ತಿರ, ಕುತ್ಪಾಡಿ ಗ್ರಾಮ, ಉಡುಪಿ ಜಿಲ್ಲೆ ಇವರ ತಮ್ಮ ಸುಮಂತ್‌ ಕುಮಾರ್‌(53) ಎಂದಿನಂತೆ KA-20-EK-6695 ನೇ ಮೋಟಾರ್‌ಸೈಕಲ್‌‌ನಲ್ಲಿ ಕೆಲಸದ ನಿಮಿತ್ತ ತನ್ನ ಮನೆಯಾದ ಕಾಪು  ತಾಲೂಕು ಶಿರ್ವಾ ಗ್ರಾಮದ ಅಟ್ಟಿಂಜೆ  ಎಂಬಲ್ಲಿಂದ  ಶಿರ್ವ-ಕಟಪಾಡಿ  ಮಾರ್ಗವಾಗಿ ಉಡುಪಿಗೆ  ಹೋಗಲು ಬೆಳಿಗ್ಗೆ  8:40 ಗಂಟೆಗೆ ಕುರ್ಕಾಲು ಗ್ರಾಮದ ಸುಭಾಸ್‌ನಗರ  ಪೆಟ್ರೋಲ್‌ ಪಂಪ್‌ಎದುರುಗಡೆ  ಹಾದು ಹೋಗಿರುವ ಸಾರ್ವಜನಿಕ  ಡಾಮಾರು ರಸ್ತೆಯಲ್ಲಿ ತಲುಪುವಾಗ ಸುಭಾಸ್‌ನಗರ ಕಡೆಯಿಂದ KA-20-ET-9470 ನೇ ದ್ವಿಚಕ್ರ ವಾಹನ ಸವಾರನು ಅತೀವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರಾ ಬಲ ಬದಿಗೆ  ಬಂದು ಪಿರ್ಯಾದಿದಾರರ ತಮ್ಮ ಸವಾರಿ ಮಾಡುತ್ತಿದ್ದ KA-20-EK-6695 ನೇ ಮೋಟಾರ್‌ಸೈಕಲ್‌‌ಗೆ  ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ಸೈಕಲ್‌ಸಮೇತ ರಸ್ತೆಗೆ ಬಿದ್ದು, ಬಲ ಭುಜಕ್ಕೆ  ಮೂಳೆ  ಮುರಿತದ ಗಾಯವಾಗಿದ್ದು, ದ್ವಿಚಕ್ರ ವಾಹನ ಸವಾರನಿಗೂ  ಎಡ ಕಾಲಿಗೂ  ಒಳ ಜಖಂ ರಕ್ತಗಾಯವಾಗಿರುತ್ತದೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2023  ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿದಾರರಾದ ಅನಿಲ್ ಕುಮಾರ್ ಸಾಲಿನ್ಸ್ (32), ತಂದೆ: ನೆಲೆಸ್ಸನ್  ಸಾಲಿನ್ಸ್, ವಾಸ: ಐಸ್  ನಿಲಯ 5ನೇ ಅಡ್ಡ ರಸ್ತೆ  ಎಂ ಎಂ ರೋಡ್ ವರ್ಗಿಸ್ ಕಂಪೌಂಡ್ ಹತ್ತಿರ ಕೊಡವೂರು ಗ್ರಾಮ  ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 01/01/2023 ರಂದು ಕೆಲಸದ ನಿಮಿತ್ತ KA-20-EZ-2771 ನೇ ಸ್ಕೂಟರ್ ನಲ್ಲಿ ಕೆಳ ಪರ್ಕಳ ಕಡೆಯಿಂದ ಮಣಿಪಾಲದ ಕಡೆಗೆ NH 169(A) ರಸ್ತೆಯಲ್ಲಿ  ಬರುತ್ತಿರುವಾಗ ಉಡುಪಿ ತಾಲೂಕು ಈಶ್ವರನಗರ ಎಂಬಲ್ಲಿ ಮಣಿಪಾಲ ಪುಡ್ ಕೋರ್ಟ ಹೊಟೇಲ್ ಎದುರು ತಲುಪುವಾಗ 00:55 ಗಂಟೆಗೆ ಹಿಂದಿನಿಂದ KA-20-X-7740 ನೇ ಮೋಟಾರ್ ಸೈಕಲ್ ಸವಾರ ಸೀತಾರಾಮ ಹೆಗಡೆ ತನ್ನ ಮೋಟಾರ್ ಸೈಕಲ್ ನ್ನು ವೈಷ್ಣವಿ ರೆಸಿಡೆನ್ಸಿ ಡಿವೈಡರ್  ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ್ ರಸ್ತೆಗೆ ಬಿದ್ದು ಬಲ ಕಣ್ಣಿಗೆ ಮತ್ತು ಬಲ ಕೆನ್ನೆಗೆ ಗಂಬೀರ ಗಾಯವಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಬಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ರಾಘವೇಂದ್ರ  ಮೊಗವೀರ (31), ತಂದೆ:ಶೇಷು ಮೊಗವೀರ,  ವಾಸ: ಸಸಿಹಿತ್ಲು ಹೌಸ್ ,ಮೊಗವೀರ ಗರಡಿ  ತಗ್ಗರ್ಸೆ ಗ್ರಾಮ ಬೈಂದೂರು ತಾಲೂಕು ಇವರು ತಂದೆ ಶೇಷು ಮೊಗವೀರ ರವರೊಂದಿಗೆ ವಾಸಮಾಡಿಕೊಂಡಿದ್ದು,  ಶೇಷು ಮೊಗವೀರ ರವರು ಗಂಗೊಳ್ಳಿಯಲ್ಲಿ ಮೀನುಗಾರಿಕೆ ಕೆಲಸಮಾಡಿಕೊಂಡಿರುತ್ತಾರೆ. ಶೇಷು ಮೊಗವೀರ ರವರು  ವಿಪರೀತ  ಮದ್ಯಪಾನ ಮಾಡುವ ಚಟವುಳ್ಳವರಾಗಿದ್ದು, ಇದರಿಂದ   ಮಾನಸಿಕ ಖಿನ್ನತೆಗೆ  ಒಳಗಾಗಿದ್ದವರು  ದಿನಾಂಕ 02/01/2023  ರಂದು ಕೂಡಾ ಮದ್ಯಪಾನ ಮಾಡಿ  ಮನೆಯಿಂದ ಹೊರಗಡೆ ಹೋದವರು  ಮಧ್ಯಾಹ್ನ 1:00 ಗಂಟೆಯಿಂದ ಸಂಜೆ 5:30 ಗಂಟೆಯ ಮಧ್ಯಾವಧಿಯಲ್ಲಿ ತಗ್ಗರ್ಸೆ ಗ್ರಾಮದ ಮೊಗವೀರ ಗರಡಿ ಎಂಬಲ್ಲಿನ  ರಾಜೀವ ಹುದಾರ್ ರವರಿಗೆ ಸಂಬಂಧಿಸಿದ ಜಾಗದಲ್ಲಿರುವ  ಗರಚಿನ ಮರದ ಕೊಂಬೆಗೆ ಬೈರಸ್ ನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 01/2023 ಕಲಂ:  174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    

ಇತರ ಪ್ರಕರಣ

 • ಕಾರ್ಕಳ: ದಿನಾಂಕ 02/01/2023 ರಂದು 12:40 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಕೆ ಲಕ್ಷ್ಮಿ ಟೀಚರ್,  ಗಂಡ:  ಆರ್ ಕೆ ಪಿಳೈ, ವಾಸ: ಆರ್ ಕೆ ಎಲ್ ನಿವಾಸ, ಕಡಾರಿ, ಬಜಗೊಳಿ ಅಂಚೆ, ಕಾರ್ಕಳ ತಾಲೂಕು,  ಉಡುಪಿ  ಜಿಲ್ಲೆ ಇವರು ತನ್ನ ಮನೆಯಾದ ಕಾರ್ಕಳ ತಾಲೂಕು ಮುಡಾರು ಗ್ರಾಮದ ಕಡಾರಿ ಎಂಬಲ್ಲಿ ಇರುವ ಆರ್ ಕೆ ಎಲ್ ನಿವಾಸ ಮನೆಯಲ್ಲಿ ಇರುವಾಗ ಆರೋಪಿತರುಗಳಾದ ಸಂದೀಪ್ ಕುಮಾರ್ , ಪ್ರಶಾಂತ್ ಕುಮಾರ್, ಸುಜಾತ ಸಂದೀಪ್, ಸ್ಮಿತಾ ನಾಯರ್ ಇವರುಗಳು ಅಕ್ರಮ ಕೂಟ ಸೇರಿಕೊಂಡು ಮಾರಕಾಸ್ತ್ರಗಳೊಂದಿಗೆ ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶಿಸಿ ಪಿರ್ಯಾದಿದಾರರಲ್ಲಿ ಆಸ್ತಿಯಲ್ಲಿ ಪಾಲು ನೀಡಬೇಕಾಗಿ ಹೇಳಿದ್ದು ಇದನ್ನು ಪಿರ್ಯಾದಿದಾರರು ತಿರಸ್ಕರಿಸಿದ್ದರಿಂದ ಆರೋಪಿತರುಗಳು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿದಾರರಿಗೆ ಹಾಗೂ ಅವರ ಮಗಳು ಆರತಿ ಮತ್ತು ಅಳಿಯ ಅಶೋಕ್ ನಾಯ್ಕ್ ರವರುಗಳ ಮೇಲೆ ಹಲ್ಲೆ ನಡೆಸಿದ್ದು ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  03/2023 ಕಲಂ: 452, 324, 307 ಐಪಿಸಿಯಂತೆ ಪ್ರಕರಣದ ದಾಖಲಾಗಿರುತ್ತದೆ .  
 • ಮಣಿಪಾಲ: ದಿನಾಂಕ 02/01/2023 ರಂದು ಸುಧಾಕರ ತೋನ್ಸೆ, ಪೊಲೀಸ್‌ ಉಪನಿರೀಕ್ಷಕರು, ಮಣಿಪಾಲ ಪೊಲೀಸ್‌ ಠಾಣೆ ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ 16:00 ಗಂಟೆಗೆ 80 ಬಡಗಬೆಟ್ಟು ಗ್ರಾಮದ ಅಲೆವೂರು ರಸ್ತೆಯ ಬಾಳಿಗ ಟವರ್ಸ್ ಕಟ್ಟಡದಲ್ಲಿರುವ ರಿಂಗ್ ಝೋನ್  ಹೋಟೆಲ್ ಮತ್ತು ರೆಸ್ಟೋರೆಂಟ್ ಎಂಬಲ್ಲಿ ಪ್ರಜ್ವಲ್ ಎಂಬಾತ ಮದ್ಯಪಾನ ಸೇವಿಸಲು ಅನುಮತಿ ಇಲ್ಲದೇ ಇದ್ದರೂ ಸಹ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದಾಗಿ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ರಿಂಗ್ ಝೋನ್ ಹೋಟೆಲ್ ಮತ್ತು ರೆಸ್ಟೋರೆಂಟ್ ನ ಒಳಗಡೆ ಮದ್ಯಪಾನ  ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿದ್ದು, ಮದ್ಯಪಾನ ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಲ್ಲಿ ತನ್ನ ಹೆಸರು ಸುಶಾಂತ್ (18) ಎಂಬುದಾಗಿ ತಿಳಿಸಿರುತ್ತಾನೆ. ಹಾಗೂ  ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟ ವ್ಯಕ್ತಿಯ ಹೆಸರು ಕೇಳಲಾಗಿ ತನ್ನ ಹೆಸರು ಪ್ರಜ್ವಲ್ (20) ಎಂಬುದಾಗಿ ತಿಳಿಸಿರುತ್ತಾನೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 04/2023 ಕಲಂ: 15 (A) KE Act ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 03-01-2023 09:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080