ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿ ಶ್ರೀಧರ  ಅಮೀನ್ (48 ವರ್ಷ)ತಂದೆ: ದಿ/ ಕಾಳು ಪೂಜಾರಿ ವಾಸ: ರಾಘವೇಂದ್ರ ನಿಲಯ ಹ್ಯೋಗೆತೋಟ, ಕಡೇಕಾರು  ಇವರ ತಮ್ಮ ರಾಜೇಂದ್ರ (40 ವರ್ಷ) ರವರು ಗಾರೆ ಕೆಲಸ ಮಾಡಿಕೊಂಡಿದ್ದು,  ಮದುವೆ ಆಗಿರುವುದಿಲ್ಲ, ಪಿರ್ಯಾದಿದಾರರ  ತಮ್ಮ  ರಾಜೇಂದ್ರನಿಗೆ ವಿಪರೀತ ಮಧ್ಯಪಾನ ಮಾಡುವ ಚಟ ಇದ್ದು , ಮಧ್ಯಪಾನ ಬಿಡಿಸುವ  ಕುರಿತು 2-3 ಬಾರಿ   ಮಧ್ಯವರ್ಜನ  ಶಿಬಿರಕ್ಕೆ  ಸೇರಿಸಿರುತ್ತಾರೆ.  ಆದರೂ ಕೂಡ ಪಿರ್ಯಾದಿದಾರ ತಮ್ಮ ಮಧ್ಯಪಾನ ಸೇವನೆ  ಬಿಟ್ಟಿರುವುದಿಲ್ಲ.  ಪಿರ್ಯಾದಿದಾರರ ತಮ್ಮ ದಿನಾಂಕ: 02-01-2023 ರಂದು  ರಾತ್ರಿ ಊಟ ಮಾಡಿ ಮಲಗಿದ್ದು, ದಿನಾಂಕ: 03-01-2023 ರಂದು  ರಾತ್ರಿ 2:00 ಗಂಟೆಯ  ಸಮಯಕ್ಕೆ  ರಾಜೇಂದ್ರ ಮಲಗಿದ್ದಲ್ಲಿ ಇಲ್ಲದೆ ಇದ್ದು , ಮನೆಯ ಎಲ್ಲರೂ ಸೇರಿ ಹುಡುಕಾಡಿದಾಗ ಮನೆಯ ಹಿಂಭಾಗ ಮಾವಿನ  ಮರಕ್ಕೆ  ನೈಲಾನ ಹಗ್ಗ ಕಟ್ಟಿ  ಕುತ್ತಿಗೆ ಗೆ ನೇಣು  ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರ ತಮ್ಮ ವಿಪರೀತ ಕುಡಿಯುವ ಚಟವಿದ್ದು ಅದರಿಂದಲೆ ಅನಾರೋಗ್ಯದಿಂದ ಒಳಲುತ್ತಿದ್ದು, ಇದರಿಂದಲೋ ಅಥವಾ ಇನ್ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಯಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಲ್ಪೆ ಠಾಣಾ ಯು.ಡಿ.ಆರ್ ನಂಬ್ರ 02/2023  ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹಿರಿಯಡ್ಕ:ಪಿರ್ಯಾದಿ: ನವೀನ (30) ತಂದೆ: ಗಣಪ ನಾಯ್ಕ್ ವಾಸ: ಅಕ್ಷಯ ನಿಲಯ , ಕಂಬ್ಳ ಮಜಲು , ಬೆಳ್ಳಂಪಳ್ಳಿ ಗ್ರಾಮ, ಇವರ ಮಾವನಾದ ಸುಮಾರು 41 ವರ್ಷ ಪ್ರಾಯದ ನಾಗೇಶ್ ನಾಯ್ಕ್ ಎಂಬವರು ದಿನಾಂಕ: 27/12/2022 ರಂದು ನಾಪತ್ತೆಯಾದವರು ದಿನಾಂಕ: 01/01/2023 ರಂದು 4:30 ಗಂಟೆಗೆ ಬೆಳ್ಳಂಪಳ್ಳಿ ಗ್ರಾಮದ ಪುಣ್ಚೂರು ಬ್ರಹ್ಮಾಸ್ತಾನದ ಬಳಿಯ ಮಡಿಸಾಲು ಹೊಳೆಯಲ್ಲಿ ಪತ್ತೆಯಾಗಿದ್ದು ಸದ್ರಿಯವರು ದಿನಾಂಕ: 27/12/2022 ರಂದು ರಾತ್ರಿ 12:00 ಗಂಟೆಗೆ ಹೊರಟು ಹೋದವರು  ಪುಣ್ಚೂರು ಬ್ರಹ್ಮಾಸ್ತಾನದ ಬಳಿಯ ಮಡಿಸಾಲು ಹೊಳೆಯನ್ನು ದಾಟುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ. ಯುಡಿಆರ್ ನಂಬ್ರ: 01/2023 ಕಲಂ: 174  ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ:  ಪಿರ್ಯಾದಿ: ಸೆಡ್ರಿಕ್‌ ರೋಕಿ ಡಿಸೋಜಾ, (47), ತಂದೆ: ಲೂವಿಸ್‌ ಡಿಸೋಜಾ, ವಾಸ: ನೀಲಾವರ ಗೋಶಾಲೆ ಬಳಿ, ಮಧ್ಯಸ್ಥರ ಬೆಟ್ಟು, ನೀಲಾವರ ಗ್ರಾಮ, ಬ್ರಹ್ಮಾವರ ಇವರ ತಮ್ಮನಾದ ಸುನಿಲ್‌ಡೊಮೆನಿಕ್‌ಡಿಸೋಜಾ (43 ವರ್ಷ) ಎಂಬವರು ಸುಮಾರು 10 ವರ್ಷ ಕುವೈಟ್‌ನಲ್ಲಿ ಉದ್ಯೋಗದಲ್ಲಿದ್ದು, ಮದುವೆ ಆಗಿ ಇಬ್ಬರೂ ಮಕ್ಕಳಿರುತ್ತಾರೆ. ಪ್ರಸ್ತುತ   1 ವರ್ಷದಿಂದ ಮನೆಯಲ್ಲಿ ಬೇಸಾಯದ ಕೆಲಸ ಮಾಡಿಕೊಂಡು ಇರುತ್ತಾರೆ. ದಿನಾಂಕ 02.01.2023 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಸುನಿಲ್‌ಡೊಮೆನಿಕ್‌ಡಿಸೋಜಾ ರವರಿಗೆ ಎದೆ ನೋವು ಉಂಟಾಗಿದ್ದು, ಈ ಬಗ್ಗೆ ಅವರನ್ನು ಬ್ರಹ್ಮಾವರ ಮಹೇಶ್‌ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವಾಪಾಸ್ಸು ಮನೆಗೆ ಕರೆದುಕೊಂಡು ಬಂದಿರುವುದಾಗಿದೆ. ಅವರು ಊಟ ಮಾಡಿ ಮನೆಯಲ್ಲಿದ್ದಾಗ ಸಂಜೆ ಸುಮಾರು 7:30 ಗಂಟೆಗೆ  ಅವರಿಗೆ ಎದೆ ನೋವು ಹಾಗೂ ವಾಂತಿಯಾಗಿದ್ದು, ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈಧ್ಯರು ಪರೀಕ್ಷಿಸಿ ಸುನಿಲ್‌ಡೊಮೆನಿಕ್‌ಡಿಸೋಜಾ ರವರು ಮೃತಪಟ್ಟಿರುವುದಾಗಿ ರಾತ್ರಿ 8:15 ಗಂಟೆಗೆ ತಿಳಿಸಿರುವುದಾಗಿದೆ. ಸುನಿಲ್‌ಡೊಮೆನಿಕ್‌ಡಿಸೋಜ ರವರು ಯಾವುದೋ ಹೃದಯಾ ಸಂಬಂಧಿ ಖಾಯಿಲೆಯಿಂದ ಮೃತಪಟ್ಟಿರ ಬಹುದು, ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 01/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 03-01-2023 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080