ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ : ದಿನಾಂಕ 31/12/2021 ರಂದು ಪಿರ್ಯಾದಿದಾರರಾದ ರವೀಶ(30), ತಂದೆ: ಶೇಖರ ನಾಯ್ಕ್‌‌, ವಾಸ: ಮಾತೃಕೃಪಾ, ದಾಸಬೆಟ್ಟು ಹಾವಂಜೆ, ಹಾವಂಜೆ ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ಮೋಟಾರ್‌‌ ‌ಸೈಕಲಿನಲ್ಲಿ ಕುಕ್ಕಿಹಳ್ಳಿಯಿಂದ ಮನೆ ಕಡೆಗೆ ಹೊರಟು ಹಾವಂಜೆ ಗ್ರಾಮದ ಶೇಡಿಗುರಿ ಎಂಬಲ್ಲಿ ಪೆರ್ಡೂರು- ಕೆಜಿ ರೋಡ್‌‌ಮುಖ್ಯ ರಸ್ತೆಯಲ್ಲಿ ಬರುತ್ತಿರುವಾಗ ರಾತ್ರಿ 9:30 ಗಂಟೆಗೆ ತನ್ನ ಮುಂಭಾಗದಲ್ಲಿ ಕೆ.ಜಿ ರೋಡ್‌‌ ಕಡೆಗೆ ಹೋಗುತ್ತಿದ್ದ KA-20-ED-1586 HERO HONDA SPLENDER  ಮೋಟಾರ್‌‌ಸೈಕಲ್‌ನಲ್ಲಿ ಸಹಸವಾರನೊಂದಿಗೆ ಹೋಗುತ್ತಿದ್ದ ಸವಾರ ತನ್ನ ಮೋಟಾರ್‌ಸೈಕಲ್‌‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಆತನ ತೀರ ಎಡಬಾಗಕ್ಕೆ ರಸ್ತೆಯ ಅಂಚಿಗೆ  ಹೋಗಿ ನಿಯಂತ್ರಣ ತಪ್ಪಿ ಸ್ಕಿಡ್‌  ‌ಆಗಿ ಎಡಭಾಗದ  ಪಾದಚಾರಿ ರಸ್ತೆಗೆ ಬಿದ್ದ ಪರಿಣಾಮ ಮೋಟಾರ್‌ಸೈಕಲ್‌‌ ಸಹಸವಾರ ಶರತ್‌ ಕುಂದರ್‌ ರವರ ಮುಖಕ್ಕೆ ಹಾಗೂ ತಲೆಗೆ ಪೆಟ್ಟಾಗಿದ್ದು ಮಾತನಾಡುತ್ತಿರಲಿಲ್ಲ. ಮೋಟಾರ್‌ಸೈಕಲ್‌‌ ಸವಾರ ಕಿರಣ್‌ನಿಗೆ ಕುತ್ತಿಗೆಯ ಬಳಿ ಸ್ವಲ್ಪ ನೋವಾಗಿರುತ್ತದೆ. ಶರ್‌ತ್‌ ಕುಂದರ್‌‌ರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈಧ್ಯರು ಪರೀಕ್ಷಿಸಿ, ಅವರ ಮುಖ ಹಾಗೂ ತಲೆಯ ಭಾಗಕ್ಕೆ ತೀವ್ರ ಜಖಂ ಉಂಟಾಗಿರುವುದಾಗಿ ತಿಳಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಪಿರ್ಯದಿದಾರರು ಆಸ್ಪತ್ರೆಯಲ್ಲಿ ಗಾಯಾಳು ಶರತ್‌ ಕುಂದರ್‌‌ರವರ ಆರೈಕೆಯಲ್ಲಿದ್ದು, ಅಪಘಾತದ ಬಗ್ಗೆ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ರೋಶನ್‌‌ ಡೊನಾಲ್ಡ್‌ ಡಿಸೋಜಾ (42), ತಂದೆ: ವಿನ್ಸೆಂಟ್‌ ಡಿಸೋಜಾ, ವಾಸ: ಬೆಳ್ಮಣ್ಣು ಚರ್ಚ್‌ಬಳಿ, ಬೆಳ್ಮಣ್ಣು ಅಂಚೆ ಮತ್ತು ಗ್ರಾಮ ಕಾರ್ಕಳ ಇವರು ದಿನಾಂಕ 01/01/2022 ರಂದು ತನ್ನ KA-20-MB-6411 ನಂಬ್ರದ ಕಾರಿನಲ್ಲಿ ಕೊಕ್ಕಡಕ್ಕೆ ಹೋಗಿ ತನ್ನ ಜೊತೆ ಕೆಲಸ ಮಾಡುವ ಅಮಿತ್  ಎಂಬುವವರ ಜೊತೆ ಬಜಗೋಳಿ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಮಣ್‌ಗೆ ಕಾರು ಚಲಾಯಿಸಿಕೊಂಡು  ಬರುತ್ತಿದ್ದಾಗ ಮಿಯಾರು ಗ್ರಾಮದ ಜೋಡುಕಟ್ಟೆ ಜಂಕ್ಷನ್‌ನಿಂದ ಸ್ವಲ್ಪ ಮುಂದಕ್ಕೆ ತಲುಪುವಾಗ ರಾತ್ರಿ 19:30 ಗಂಟೆಗೆ ಎದುರಿನಿಂದ ಒಂದು ಅಟೋ ರಿಕ್ಷಾವನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಮೋಟಾರ್‌ ಸೈಕಲೊಂದನ್ನು ಓವರ್‌ಟೇಕ್ ಮಾಡುತ್ತಾ  ತೀರಾ ಬಲಬದಿಗೆ ರಿಕ್ಷಾವನ್ನು ಚಲಾಯಿಸಿ  ಕಾರಿಗೆ ಡಿಕ್ಕಿಹೊಡೆದ ಪರಿಣಾಮ ರಿಕ್ಷಾ  ಮಗುಚಿಬಿದ್ದು ಅಟೋರಿಕ್ಷಾ ಪ್ರಯಾಣಿಕರಾದ  ಕೃಷ್ಣಪ್ಪ ಮೂಲ್ಯ ಎಂಬುವವರಿಗೆ ಬಲಕೈಗೆ ಮೂಳೆ ಮುರಿತವಾಗಿ ತಲೆಗೆ ರಕ್ತಗಾಯವಾಗಿರುತ್ತದೆ ಮತ್ತು ಅಟೋರಿಕ್ಷಾದ ಇನ್ನೊಬ್ಬ ಪ್ರಯಾಣಿಕರಾದ ಅಮಿತ  ರವರ ತಲೆಗೆ ಹಾಗೂ ಕಾಲಿಗೆ ರಕ್ತಗಾಯವಾಗಿರುತ್ತದೆ.  ಡಿಕ್ಕಿ ಹೊಡೆದ ಅಟೋ ರಿಕ್ಷಾ KA-20-C-3482 ನಂಬ್ರದ್ದಾಗಿದ್ದು ಎರಡೂ ವಾಹನಗಳು ಜಖಂಗೊಂಡಿದ್ದಲ್ಲದೇ ಅಟೋರಿಕ್ಷಾ ಚಾಲಕ ವಿಲ್ಸನ್  ಸಹಾ ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2022  ಕಲಂ: 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 02/01/2022 ರಂದು ಸಂಜೆ 6:10 ಗಂಟೆಗೆ ಕಾರ್ಕಳ ತಾಲೂಕು, ಮಾಳ ಗ್ರಾಮದ ಮಾಳ ಗೇಟ್ ನಿಂದ 3 ಕಿ.ಮೀ ದೂರದಲ್ಲಿ ಮಾಳ ಘಾಟ್ ನ ರಾಷ್ಟೀಯ ಹೆದ್ದಾರಿಯ ತಿರುವು ರಸ್ತೆಯಲ್ಲಿ ಪಿರ್ಯಾದಿದಾರರಾದ ಮಹೇಶ್ ಎಸ್ (48), ಗಂಡ : ಶ್ರೀನಿವಾಸ ಪೂಆಜಾರಿ  ವಾಸ: ಗೋಳ್ಗಾರ್ ಕಸವೆ ಅಂಚೆ ಕಸವೆ  ಗ್ರಾಮ, ಕೊಪ್ಪ ತಾಲೂಕು ಇವರು ತನ್ನ KA-18-Z-3988 ನೇ ಓಮ್ನಿ ವಾಹನದಲ್ಲಿ ಮಾಳ ಕಡೆಯಿಂದ ಕೊಪ್ಪ ಕಡೆಗೆ ಹೋಗುತ್ತಿರುವಾಗ ಕಳಸ ಕಡೆಯಿಂದ ಮಾಳ ಕಡೆಗೆ KA-02-MH-1525 ನೇ ಇನ್ನೋವಾ ಕಾರನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ತೀರಾ ಬಲಗಡೆಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಓಮಿನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಕಾರು ಜಖಂ ಗೊಂಡಿದ್ದು, ಪಿರ್ಯಾದಿದಾರರ ಕಾರಿನಲ್ಲಿದ್ದ ನವೀನ್  ರವರ ಬಲಕಾಲಿನ ಮೊಣಗಂಟಿಗೆ ಗುದ್ದಿದ್ದ ಒಳ ಜಖಂ ಆಗಿದ್ದು, ಮತ್ತು ಇನ್ನೋವಾ ಕಾರಿನಲ್ಲಿದ್ದ ಒಬ್ಬ ಮಹಿಳೆಗೆ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಸುರೇಶ್ ಆರ್‌ನಾಯ್ಕ್ (29), ತಂದೆ: ರಾಮ ನಾಯ್ಕ್, ವಾಸ: ಗೇರು ಸೋಪ್ಪ, ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ ಇವರು ಶಂಕರ್ ಮೆಂಡನ್ ರವರ ಮಾಲಕತ್ವದ ಶಿವಸಾಯಿ ಬೋಟ್‌ IND KA-02-MM-4969  ನಂಬ್ರದ ಮೀನುಗಾರಿಕಾ ಬೋಟಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದು ಅದೇ ಬೋಟಿನಲ್ಲಿ ಕಲಾಸಿಗಳಾಗಿ ಸಚಿನ್, ಹರೀಶ್, ಸಂದೀಪ್, ಹನುಮಂತ, ಹುಲಿಯಾ, ವಿಠ್ಠಲ ತೋಕು ಖಾರ್ವಿ, ಪಾಂಡುರಂಗ,  ಹಾಗೂ ಇತರ 17 ಜನರು ಕೆಲಸ ಮಾಡಿಕೊಂಡಿದ್ದು, ದಿನಾಂಕ 02/01/2022 ರಂದು 15:45 ಗಂಟೆಯ ಸಮಯಕ್ಕೆ ಮಲ್ಪೆ ಬಂದರಿನ ಟೆಗ್ಮಾ ಬಳಿಯಲ್ಲಿರುವ ಇಂಡಿಯನ್ ಓಯಿಲ್ ಡಿಸೇಲ್ ಬಂಕ್ ಬಳಿಯ ಧಕ್ಕೆಯಿಂದ ಸಮುದ್ರದಲ್ಲಿ ಮೀನುಗಾರಿಕೆ ಮಾಡಲು ತೆರಳುತ್ತಿರುವ ಸಮಯ ಮಲ್ಪೆಯ ಬಂದರಿನ ಅಳಿವೆ ಬಾಗಿಲು ಬಳಿ ಹೋಗುತ್ತಿರುವಾಗ ವಿಠ್ಠಲ ತೋಕು ಖಾರ್ವಿ (49) ಇವರು ಬೋಟಿನ ಹಿಂದುಗಡೆ ಬಲೆಯನ್ನು ಸರಿಪಡಿಸುತ್ತಿರುವ ಸಮಯ ಆಯಾ ತಪ್ಪಿ ಕಾಲು ಜಾರಿ ಬೋಟಿನಿಂದ ಧಕ್ಕೆಯ ನೀರಿಗೆ ಬಿದ್ದು ಮುಳುಗಿ ಕಾಣೆಯಾಗಿದ್ದು  17:30 ಗಂಟೆಗೆ ಬಂದರಿನಿಂದ ಅಳಿವೆ ಬಾಗಿಲಿನಿಂದ ಸ್ವಲ್ಪ ದೂರದಲ್ಲಿ ವಿಠ್ಠಲ ತೋಕು ಖಾರ್ವಿ ಮೃತ ದೇಹ ದೊರಕಿರುತ್ತದೆ, ಮೃತ ವಿಠ್ಠಲ ತೋಕು ಖಾರ್ವಿ ರವರು ಶಿವಸಾಯಿ ಬೋಟ್‌IND KA-02-MM-4969  ನಂಬ್ರದ ಮೀನುಗಾರಿಕಾ ಬೋಟಿನಿಂದ ಆಯತಪ್ಪಿ ಧಕ್ಕೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 02/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು: ದಿನಾಂಕ 02/01/2022 ರಂದು ರಾತ್ರಿ 07:45 ಗಂಟೆಗೆ ಪಿರ್ಯಾದಿದರರಾದ ರತ್ನಾ ಶೆಟ್ಟಿ (64), ಗಂಡ: ಪ್ರವೀಣ್ ಶೆಟ್ಟಿ, ವಾಸ: ಕಲ್ಯಾ ಮೂಡುಮನೆ ಉಳಿಯಾರಗೋಳಿ ಗ್ರಾಮ ಕಾಪು ಹಾಗೂ ಮಗಳು ಇಬ್ಬರೇ ಮನೆಯಲ್ಲಿರುವ ಸಮಯ ಚಂದ್ರಹಾಸ್ ಶೆಟ್ಟಿ , ಮದನ್, ಸ್ನೇಹಾಲಿ, ಹಾಗೂ ಸ್ನೇಹಾಲಿಯ ತಾಯಿ ಪಿರ್ಯಾದಿರಾರರ ಮನೆಗೆ ನುಗ್ಗಿ ಚಂದ್ರಹಾಸ ಶೆಟ್ಟಿ ಎಂಬುವವನು ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರಿಗೆ  ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022  ಕಲಂ: 448, 323, 354, 504, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
             

ಇತ್ತೀಚಿನ ನವೀಕರಣ​ : 03-01-2022 09:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080