ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 03/01/2022 ರಂದು ಮದ್ಯಾಹ್ನ 12:15 ಗಂಟೆಗೆ ದೂರುದಾರ ಸುರೇಶ ಪೂಜಾರಿಯವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ  ದಿನಾಂಕ 02/01/2022 ರಂದು ರಾತ್ರಿ 10:00 ಗಂಟೆ ಸುಮಾರಿಗೆ  ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ಜಂಕ್ಷನ ಬಳಿ KL 15 A 1791  ನೇ ಬಸ್ಸಿನ ಚಾಲಕ ತನ್ನ ಬಾಬ್ತು ಬಸ್ಸನ್ನು ಕೊಲ್ಲೂರಿನಿಂದ ಕುಂದಾಪುರ ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿದ್ದು  NH66 ರಸ್ತೆಯ ಎಡಬದಿಯಲ್ಲಿ ನಿಂತಿದ್ದ ದೂರುದಾರರ ತಮ್ಮ ಸುರೇಂದ್ರ ಎಂಬುವರಿಗೆ ಬಸ್ಸಿನ ಹಿಂಬದಿ ತಾಗಿ  ಆತ ಕುಸಿದು ಬಿದಿದ್ದು ಸಾರ್ವಜನಿಕರು ಮತ್ತು ಬಸ್ಸಿನ ಚಾಲಕ  ಹಾಗೂ ನಿರ್ವಾಹಕ ಆತನನ್ನು ಉಪಚರಿಸಿದ್ದು ಆತನಿಗೆ ಆ ಸಮಯ ಯಾವುದೇ ಗಾಯ ಉಂಟಾಗಿರುವುದಿಲ್ಲ. ಚಿಕಿತ್ಸೆ ಬೇಡವೆಂದು ಹೇಳಿದ ಆತನಿಗೆ ಅವರೆಲ್ಲ ಪಕ್ಕದ ಅಂಗಡಿಯ ಬಳಿ ಆತನನ್ನು ಕುಳ್ಳಿರಿಸಿ ಹೋಗಿದ್ದು ಈ ಅಪಘಾತದಿಂದಲೇ ಆತ ಮೃತ ಪಟ್ಟಿದ್ದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022 ಕಲಂ 279, 304 (A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿ ಪ್ರಜ್ವಲ್ ಕೆ ಇವರು ದಿನಾಂಕ:02-01-2022 ರಂದು ಎಳ್ಳು ಅಮಾವಾಸೆಯ  ಹಬ್ಬದ ಪ್ರಯುಕ್ತ ಅವರ ಚಿಕ್ಕಪ್ಪನ ಮಗನಾದ ಭುವನ್(11) ಹಾಗೂ ಪಕ್ಕದ ಮನೆಯ ಶ್ರೇಯಸ್ (12) ರವರೊಂದಿಗೆ ಮಲ್ಪೆ ಬೀಚ್‌ ಗೆ ತನ್ನ ಅಣ್ಣನ ಬಾಬ್ತು KA-20-ER-9601 ನಂಬ್ರದ ಆಕ್ಟಿವಾ ಹೋಂಡಾ ಸ್ಕೂಟರ್ ಅಲ್ಲಿ ಬ್ರಹ್ಮಾವರದಿಂದ ಸಂಜೆ ಸುಮಾರು 4:45 ಗಂಟೆಗೆ ಮಲ್ಪೆ ಕೊಳ ಮಾರ್ಗವಾಗಿ ಮಲ್ಪೆ ಬೀಚ್‌ಗೆ ಹೋಗುತ್ತಿರುವಾಗ ಕೊಳ ಬಾಲಕರ ರಾಮ ಮಂದಿರ ಬಳಿ ತಲುಪಿದಾಗ ಸ್ಕೂಟರ್‌ ಹಿಂದಿನಿಂದ ಅಂದರೆ ಮಲ್ಪೆ ಕಡೆಯಿಮದ ಮಲ್ಪೆ ಬೀಚ್‌ ಕಡೆಗೆ ಓರ್ವ ಕಾರು ಚಾಲಕನು ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಪಿರ್ಯಾದಿದಾರರ ಸ್ಕೂಟರ್‌ ಗೆ ಡಿಕ್ಕಿ ಹೊಡೆದು ಸ್ವಲ್ಪ ದೂರ ದೂಡಿಕೊಂಡು ಹೋಗಿದ್ದು ಆ ಸಮಯ ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದ 1 ಗಂಡಸು 2 ಹೆಂಗಸರಿಗೆ  ಸ್ಕೂಟರ್‌ ತಾಗಿ ಅವರೊಂದಿಗೆ ನಾವು ಕೂಡ ರಸ್ತೆಗೆ ಬಿದ್ದಿದ್ದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರು 1)ಭಾಸ್ಕರ್ ಸೋನ್ಸ್ ರವರಿಗೆ ತಲೆಯ ಮೇಲ್ಬಾಗ ರಕ್ತಗಾಯ,ಎಡಕೈಯ ಮೊಣಗಂಟಿಗೆ ರಕ್ತಗಾಯ ಕುತ್ತಿಗೆಯಲ್ಲಿ ಒಳ ನೋವು ಆಗಿರುತ್ತದೆ 2)ಜಾಕ್ಲಿನ್ ರವರಿಗೆ ಎಡಕೈ ಮೊಣಗಂಟಿಗೆ ರಕ್ತ ಗಾಯ ಬಲ ಎಡಕಾಲಿಗೆ ರಕ್ತಗಾಯ ಆಗಿರುತ್ತದೆ 3)ಜಾಯ್ಸ್‌ ರವರಿಗೆ ಎಡ ಕೈ  ಮೊಣಗಂಟಿಗೆ ರಕ್ತಗಾಯ ಆಗಿರುತ್ತದೆ, ಮತ್ತು ಸ್ಕೂಟರ್‌ ನಲ್ಲಿದ್ದ ಪಿರ್ಯಾದಿದಾರರಿಗೆ ಬಲಕೈಯ ಭುಜದ ಕೆಳಗೆ ಬಲಕೈಯ ಮೊಣಗಂಟಿನ ಬಳಿ ಕೋಲು ಕೈಯಿಗೆ ತರುಚಿದ ಗಾಯ ಹಾಗೂ ಬಲಬದಿಯ ಮೂಗಿನ ಬಳಿ ತರುಚಿದ ಗಾಯ, ಬಲಕಾಲಿನ ಮೊಣಗಂಟಿನ ಬಳಿ ತರುಚಿದ ಗಾಯ ಹಾಗೂ ಬಲಬದಿ ಸೊಂಟದ ಮೇಲೆ ಗುದ್ದಿದ್ದು ನೋವು ಉಂಟಾಗಿರುತ್ತದೆ, ಸ್ಕೂಟರ್‌ ನಲ್ಲಿದ್ದ ಸಹಸವಾರ ಭುವನ್‌ ಗೆ ತಲೆಯ ಎಡಬದಿ ತೀವ್ರ ಸ್ವರೂಪದ ರಕ್ತಗಾಯ ಮೂಗಿನ ಮೇಲ್ಭಾಗದಲ್ಲಿ ರಕ್ತ ಗಾಯ ,ಕೈ ಬೆರಳಿಗೆ ತರುಚಿದ ಗಾಯ ಹಾಗೂ ಸ್ಕೂಟರ್‌ನ ಇನ್ನೋರ್ವ ಸಹಸವಾರನಾದ ಶ್ರೇಯಸ್‌ ಇವರಿಗೆ ತಲೆಯ ಬಲಭಾಗದಲ್ಲಿ ತೀವ್ರ ಗಾಯ,  ಮುಖದ ಎಡಬದಿಯಲ್ಲಿ ತರುಚಿದ ಗಾಯ, ಮುಖದ ಬಲ ಕಣ್ಣಿನ ಬಳಿ ತರುಚಿದ ಗಾಯ ಬಲ ಕೈಯ ಮೊಣಗಂಟಿಗೆ ರಕ್ತಗಾಯ ,2ಕೈಗಳ ಬೆರಳಿಗೆ ರಕ್ತಗಾಯ , ಬಲಕೈಯ ಮೊಣಗಂಟಿಗೆ ರಕ್ತಗಾಯ ಆಗಿರುತ್ತದೆ, ಈ ಅಪಘಾತಕ್ಕೆ KA-20-MJ-0066  ಸ್ವೀಫ್ಟ್‌ ಕಾರಿನ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022  ಕಲಂ 279,337,338  ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 02.01.2022 ರಂದು ಪಿರ್ಯಾದಿದಾರರಾದ ಧನುಷ್ ಮರಕಾಲ ರವರು ತನ್ನ ಬಾಬ್ತು ಆಟೋರಿಕ್ಷಾವನ್ನು ಮಡಿ ಶಾಲೆಯಿಂದ ಪೇತ್ರಿ ರಿಕ್ಷಾ ಸ್ಟ್ಯಾಂಡ್‌ಗೆ ಚಲಾಯಿಸಿಕೊಂಡು ಬರುತ್ತಾ ಸಂಜೆ 7:00 ಗಂಟೆಗೆ ಚೇರ್ಕಾಡಿ ಗ್ರಾಮದ  ಮಡಿ ನಿಡೂರು ಬೈಲು ಎಂಬಲ್ಲಿ ತಲುಪುವಾಗ ಅವರ ಎದುರುಗಡೆಯಿಂದ ಪೇತ್ರಿ ಕಡೆಗೆ ಹೋಗುತ್ತಿದ್ದ ಆರೋಪಿ ರೋಕಿ ಡಿಸೋಜಾ ರವರು ಅವರ ಬಾಬ್ತು KA.20.EW.6099 ನೇ ನೊಂದಣಿ ನಂಬ್ರದ ಬಜಾಜ್ ಪಲ್ಸರ್ 150ಸಿಸಿ ಮೋಟಾರ್ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ, ಠಾರ್ ರಸ್ತೆಯ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನಾರ್ಧನ ಆಚಾರ್ಯ (55 ವರ್ಷ) ಎಂಬವರಿಗೆ ಡಿಕ್ಕಿ ಹೊಡೆದು ಪಾದಚಾರಿ ಹಾಗೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಸದ್ರಿ ಅಪಘಾತದ ಪರಿಣಾಮ ಪಾದಚಾರಿ ಜನಾರ್ಧನ ಆಚಾರ್ಯ ರವರ ಬಲಬದಿಯ ಸೊಂಟಕ್ಕೆ ತೀವ್ರ ಮೂಳೆ ಮುರಿತದ ಒಳ ಜಖಂ ಆಗಿದ್ದು  ಅಲ್ಲದೇ ಆರೋಪಿಗೂ ಕೂಡ ಬಲಕೈ, ಮೊಣಗಂಟು, ಬಲಕಾಲಿಗೆ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022 ಕಲಂ 279, 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಲ್ಪೆ: ಪಿರ್ಯಾಧಿ ಧೀರಜ್ ಇವರು ಮತ್ತು  ಅವರ ಸ್ನೇಹಿತರಾದ ರಾಕೇಶ, ಅಜನೇಕ, ಯೊಗೇಶ, ಈಶಾನ್,  ಸಂಜನ್ , ನಿರ್ಮಿತ, ವರ್ಷ, ಯುದುವೀರ, ಉಮೇಶ, ಚೇತನ್, ಸುನೀಲ್ ರವರೊಂದಿಗೆ  ಪ್ರವಾಸದ ಬಗ್ಗೆ ದಿನಾಂಕ:31-12-2021 ರಂದು  ಬೆಂಗಳೂರಿನಿಂದ ಕಾರಿನಿಂದ  ಹೊರಟು  ದಿನಾಂಕ: 01-01-2022 ರಂದು  ಸಂಜೆ  5:00 ಗಂಟೆಗೆ  ಮಲ್ಪೆಗೆ ಬಂದು " ಸಿಲ್ವರ್ ಸ್ಯಾಂಡ್ ಹೋಮ್  ಸ್ಟೇ" ನಲ್ಲಿ ಉಳಕೊಂಡಿದ್ದು  ರಾತ್ರಿ 11:00 ಗಂಟೆಯ ಸುಮಾರಿಗೆ  ರೂಮಿನಿಂದ ಕೆಳಗಡೆ ಬಂದು  ಊಟ ಮಾಡಿ ಮೇಲಗಡೆ ರೂಮ್ ಗೆ ಹೋಗುತ್ತಿರುವ ಸಮಯ ಒಬ್ಬ ಅಪರಿಚಿತ ವ್ಯಕ್ತಿ ಪಿರ್ಯಾಧಿದಾರರನ್ನು ನೋಡಿ ಓಡಿ ಹೋಗಿರುತ್ತಾನೆ, ಪಿರ್ಯಾಧಿದಾರರು ಮತ್ತು ಸ್ನೇಹಿತರು ರೂಮಿನ ಒಳಗಡೆ ಹೋಗಿ  ನೋಡಿದಾಗ  ಪಿರ್ಯಾಧಿದಾರರ ಸ್ನೇಹಿತ  ರಾಕೇಶನ ಬ್ಯಾಗ್  ತೆರೆದಿದ್ದು  ಅದರಲ್ಲಿದ್ದ 1500 ರೂ, ಮತ್ತು ವರ್ಷ ರವರ ಬ್ಯಾಗನಲ್ಲಿದ್ದ  2000 ರೂ ಹಾಗೂ ಸಂಜನ ರವರ ಬ್ಯಾಗ್ ನಲ್ಲಿದ್ದ 27,000 ರೂ ಮತ್ತು 3 ಎಟಿಎಂ ಕಾರ್ಡ್, ಆದಾರಕಾರ್ಡ್, ಪಾನ್ ಕಾರ್ಡ್ ಇರುವುದಿಲ್ಲ , ಯಾವುದೋ ಅಪರಿಚಿತ ವ್ಯಕ್ತಿ ದಿನಾಂಕ: 01-01-2022 ರಂದು ರಾತ್ರಿ ಸಮಯ11:00 ಗಂಟೆಯ ಸುಮಾರಿಗೆ ಪಿರ್ಯಾಧಿದಾರರು ಮತ್ತು ಪಿರ್ಯಾಧಿದಾರರ  ಸ್ನೇಹಿತರು  ತಂಗಿದ್ದ ಹೋಮ್ ಸ್ಟೇ ಗೆ  ಅಕ್ರಮ ಪ್ರವೇಶ ಮಾಡಿ ಒಟ್ಟು 30,500 ರೂ ಮತ್ತು 3 ಎಟಿಎಂ ಕಾರ್ಡ್, ಆಧಾರ ಕಾರ್ಡ್, ಪಾನ್ ಕಾರ್ಡ್ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022 ಕಲಂ 448,379 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಫಿರ್ಯಾದಿ ಶಂಕರ ನಾಯ್ಕ ಇವರ  ತಮ್ಮ ಜಯಂತ (35) ರವರು ಕೂಲಿ ಕೆಲಸವನ್ನು ಮಾಡಿಕೊಂಡಿದ್ದು ಅವರಿಗೆ ಮದುವೆಯಾಗಿರುವುದಿಲ್ಲ, ಇತ್ತೀಚಿಗೆ ಜಯಂತ ರವರು ಮಾನಸಿಕ ಖಿನ್ನತೆಗೆ ಒಳಗಾಗಿ ಸರಿಯಾಗಿ ಕೆಲಸಕ್ಕೆ ಹೋಗದೇ ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದರು. ದಿನಾಂಕ: 31/12/2021 ರಂದು ರಾತ್ರಿ 08:30 ಗಂಟೆಗೆ ಕುಚ್ಚೂರು ಗ್ರಾಮದ ಬಾದ್ಲು ಎಂಬಲ್ಲಿರುವ ಅವರ ಮನೆಯಲ್ಲಿ ಒಮ್ಮೇಲೆ ಅಸ್ವಸ್ಥರಾಗಿ ಬಿದ್ದವರನ್ನು ಮನೆಯವರು ಎಬ್ಬಿಸಿ ಉಪಚರಿಸಿ ಕೇಳಿದಾಗ ಯಾವುದೋ ವಿಷ ಪದಾರ್ಥವನ್ನು ಸೇವಿಸಿರುವುದಾಗಿ ತಿಳಿಸಿರುತ್ತಾರೆ ನಂತರ ಅವರನ್ನು ಚಿಕಿತ್ಸೆಯ ಬಗ್ಗೆ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪ್ರಥಮ ಚಿಕಿತ್ಸೆಯನ್ನು ನೀಡಿರುತ್ತಾರೆ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅದೇ ದಿನ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ದಿನಾಂಕ:03/01/2022 ಜಯಂತರವರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆಗೆ ಸ್ಪಂದಿಸದೇ ಮುಂಜಾನೆ 05:20 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ . ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 03-01-2022 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080