ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶಕುಂತಲಾ (43), ಗಂಡ: ಶಂಕರ ಪೂಜಾರಿ, ವಾಸ: ದೊಡ್ಡ ಬಸವನ ಕಲ್ಲು ಮೂಡು ಗಿಳಿಯಾರು ಗಿಳಿಯಾರು ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 30/11/2022 ರಂದು ಸಂಜೆ ಕೋಟ ಕಡೆಯಿಂದ ಮಣೂರು ಕಡೆಗೆ ಸರ್ವಿಸ್ ರಸ್ತೆಯಲ್ಲಿ  ರಸ್ತೆಯ ಎಡ ಬದಿಯಲ್ಲಿ ಎ.ಪಿ ಶೆಟ್ಟಿಯವರ ಮನೆಯ ಎದುರು ನಡೆದುಕೊಂಡು ಬರುತ್ತಿರುವಾಗ 18:45 ಗಂಟೆಗೆ  KA-20-ET-8604 ನೆ ಸ್ಕೂಟಿ  ಸವಾರ ಯೊಗೀಶ್ ಸಾಲಿಯಾನ್ ತನ್ನ ಸ್ಕೂಟಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು  ಬಲ ಬದಿಯ ಹೊಟ್ಟೆಯ ಕೆಳಭಾಗದ ಬಳಿ ತೀವೃ ಗಾಯವಾಗಿದ್ದು  ಬಲಬದಿಯ ಕಾಲಿನ ಹೆಬ್ಬೆರಳು  ಜಖಂ ಗೊಂಡಿರುತ್ತದೆ.  ಎಡಬದಿಯ ಕೆನ್ನೆ ಗಲ್ಲ ಹಣೆಗೆ  ತರಚಿದ ಗಾಯವಾಗಿರುತ್ತದೆ. ಈ ಬಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 214/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 29/11/2022 ರಂದು ಪಿರ್ಯಾದಿದಾರರಾದ ಅರುಣ ನಾಯ್ಕ (27), ತಂದೆ: ಲಕ್ಷ್ಮಣ ನಾಯ್ಕ, ವಾಸ: ಜಾತಬೆಟ್ಟು, ಪೆಜಮಂಗೂರು ಗ್ರಾಮ, ಕೊಕ್ಕರ್ಣೆ ಅಂಚೆ, ಬ್ರಹ್ಮಾವರ ತಾಲೂಕು ಇವರು ಅವರ ತಂದೆ ಲಕ್ಷ್ಮಣ ನಾಯ್ಕ ಹಾಗೂ ತಂದೆಯ ತಮ್ಮ ಸುಬ್ರಹ್ಮಣ್ಯ ರವರೊಂದಿಗೆ ಚೇರ್ಕಾಡಿ ಗ್ರಾಮದ ಪೇತ್ರಿ ಎಸ್‌.ಸಿ.ಡಿ.ಸಿ.ಸಿ ಬ್ಯಾಂಕ್‌ ಹತ್ತಿರ ಬ್ರಹ್ಮಾವರ – ಹೆಬ್ರಿ ರಸ್ತೆಯ ಬದಿಯಲ್ಲಿ ನಿಂತು ಆಚೆ ಇಚೆ ಬರುವ ವಾಹನಗಳನ್ನು ನೋಡುತ್ತಾ  ರಸ್ತೆ ದಾಟಲು ಅಣಿ  ಆಗುತ್ತಿರುವಾಗ ಹೆಬ್ರಿ ಕಡೆಯಿಂದ ಆರೋಪಿ ಮಣಿಕಂಠ  KA-20-ET-5205 ನೇ Activa ಸ್ಕೂಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರಾ ಎಡ ಬದಿಗೆ ಬಂದು ಪಿರ್ಯಾದಿದಾರರ ಎದುರುಗಡೆಯಿದ್ದ ಅವರ  ತಂದೆ ಲಕ್ಷ್ಮಣ ನಾಯ್ಕ, ರವರಿಗೆ ಡಿಕ್ಕಿ ಹೊಡೆದು  ಸ್ಕೂಟರ್‌ ಸಮೇತ ರಸ್ತೆ ಬಿದ್ದಿದ್ದು, ಈ ಅಪಘಾತದ ಪರಿಣಾಮ ಲಕ್ಷ್ಮಣ ನಾಯ್ಕ ರವರು ರಸ್ತೆಯ ಮೇಲೆ ಬಿದ್ದು, ಅವರ  ಎಡ ಕಾಲಿನಾ ಮಣಿ ಗಂಟು ಹಾಗೂ ಕೋಲು ಕಾಲಿನ ಬಳಿ ಮೂಳೆ ಮುರಿತ ಆಗಿರುತ್ತದೆ. ಆರೋಪಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 206/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸಿಬಿಚೇನ ಜೋಸೆಫ್ (45), ತಂದೆ: ಜೋಸೆಫ್, ವಾಸ: ಮ ನಂ 3-91 ಎ ಹೊಯ್ಯಾಳಿ ಬಿದ್ಕಲ್ ಕಟ್ಟೆಹಾರ್ದಳ್ಳಿ ಮಂಡಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 29/11/2022 ರಂದು ರಾತ್ರಿ 9:15 ಗಂಟೆಗೆ ಮನೆಯಲ್ಲಿರುವಾಗ ನೆರೆಕೆರೆಯ ವಾಸಿಗಳಾದ ಲಲಿತಾ ಆಚಾರ್ತಿ ಹಾಗೂ ಆಕೆಯ ಮಗಳ ಗಂಡ ಶ್ರೀನಾಥ ಆಚಾರಿ ಪಿರ್ಯಾದಿದಾರರ ಕೃಷಿ ತೋಟಕ್ಕೆ ನುಗ್ಗಿ  ತೋಟದಲ್ಲಿ ನೀರು ಸರಬರಾಜಿಗೆಂದು ಅಳವಡಿಸಿದ ಸುಮಾರು 7 ಸ್ಪಿಂಕ್ಲರ್  ಹಾಗೂ ಪೈಪ್ ಲೈನ್ ಗಳನ್ನು ತುಂಡು ಮಾಡಿ 25,000/- ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ. ಅದಕ್ಕೆ ಆಕ್ಷೇಪಿಸಿದಕ್ಕೆ ಹೊಡೆಯಲು ಬಂದಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಅಕ 211/2022 ಕಲಂ: 447, 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬೈಂದೂರು: ದಿನಾಂಕ 30/11/2022 ರಂದು ಸಂಜೆ 7:15 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಕಮಲ  (43), ಗಂಡ: ದುರ್ಗ,  ವಾಸ: ನಂದನವನ  ಗ್ರಾಮ , ಬೈಂದೂರು ತಾಲೂಕು ಉಡುಪಿ ಜಿಲ್ಲೆ ಇವರ ಮಗ ನಿತ್ಯಾನಂದನು ಮನೆಯ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿರುವಾಗ, ಆರೋಪಿತ ಸಚಿನ್ ನು ಆತನ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಬಂದು ನಿತ್ಯಾನಂದ ರವರಿಗೆ ತಾಗಿಸಿದ್ದು, ಈ ಬಗ್ಗೆ ಪಿರ್ಯಾದಿದಾರರ ಮಗನಿಗೆ ಹಾಗೂ ಸಚಿನ್ ರವರಿಗೆ ಮಾತುಕತೆಯಾಗಿದ್ದು, ನಂತರ  ವಿಚಾರವನ್ನು ಪಿರ್ಯಾದಿದಾರರ ಮಗ ನಿತ್ಯಾನಂದನು ತಂದೆಯಾದ ದುರ್ಗ ರವರಿಗೆ ತಿಳಿಸಿದಾಗ, ದುರ್ಗ ರವರು ಸಚಿನ್ ರವರಿಗೆ ಮೊಬೈಲ್ ಕರೆ ಮಾಡಿ ತನ್ನ ಮಗನಿಗೆ ಬೈದ ಬಗ್ಗೆ ವಿಚಾರಿಸಿದಾಗ , ಸಚಿನ್ ನು ಪಿರ್ಯಾದಿದಾರರ ಗಂಡನಿಗೆ ತನ್ನ ಮನೆಗೆ ಬಾ ಮಾತನಾಡುವ ಎಂದು ಹೇಳಿರುತ್ತಾರೆ. ಪಿರ್ಯಾದಿದಾರರ ಗಂಡ ದುರ್ಗಾ ಹಾಗೂ ಮಗ ನಿತ್ಯಾನಂದ ರವರು ತಮ್ಮ ಮೋಟಾರು ಸೈಕಲ್ ನಲ್ಲಿ ರಾತ್ರಿ 8:00 ಗಂಟೆಗೆ ಹೋಗಿದ್ದು, ಸುಮಾರು 20 ನಿಮಿಷಗಳು ಕಳೆದ ಬಳಿಕ ಪಿರ್ಯಾದಿದಾರರ ಗಂಡ ಹಾಗೂ ಮಗ ಮನೆಗೆ ಓಡಿ ಬಂದಿದ್ದು, ಪಿರ್ಯಾದಿದಾರರು ತನ್ನ ಗಂಡನ ತಲೆಯಲ್ಲಿ ರಕ್ತದ ಗಾಯವನ್ನು ಕಂಡು ವಿಚಾರಿಸಿದಾಗ, ಪಿರ್ಯಾದಿದಾರರ ಮಗ ತಾನು ಹಾಗೂ ತಂದೆ ಸಚಿನ್ ರವರ ಮನೆಯ ಬಳಿ ಮಾತನಾಡಲು ಹೋದಾಗ, ಆರೋಪಿತ ಸಚಿನ್ ಹಾಗೂ ಸಂದೀಪ ರವರು ರಾಡ್ ಹಿಡಿದುಕೊಂಡು ಪಿರ್ಯಾದಿದಾರರ ಮಗ ನಿತ್ಯಾನಂದನಿಗೆ ಎಡಕೈ, ತಲೆಗೆ ಹಾಗೂ ಎಡಭಾಗದ ಕುತ್ತಿಗೆಗೆ ಬಲವಾಗಿ ಹೊಡೆದಿದ್ದು, ಸಚಿನ್  ನು ಪಿರ್ಯಾದಿದಾರರ ಗಂಡ ದುರ್ಗ ರವರಿಗೆ ತಲೆಗೆ  ರಾಡ್ ನಿಂದ ಹೊಡೆದ ಪರಿಣಾಮ ನಿತ್ಯಾನಂದ ರವರಿಗೆ ಕುತ್ತಿಗೆಗೆ ರಕ್ತಗಾಯವಾಗಿದ್ದು, ದುರ್ಗ ರವರಿಗೆ ತಲೆಗೆ ರಕ್ತಗಾಯ ಆಗಿರುತ್ತದೆ, ನಂತರ ಸಚಿನ್ ನು ಪಿರ್ಯಾದಿದಾರರ ಮಗನಿಗೆ ಕೈಯಿಂದ ಹೊಡೆದು  ಅವಾಚ್ಯ ಪದ ಬಳಸಿ ಬೈದಿದ್ದು, ಪಿರ್ಯಾದಿದಾರರ ಗಂಡ ಹಾಗೂ ಮಗನು ಹೆದರಿಕೆಯಿಂದ ತಮ್ಮ ಬೈಕನ್ನು ಆರೋಪಿತರ ಮನೆಯ ಬಳಿ ಬಿಟ್ಟು, ತಮ್ಮ ಮನೆಗೆ ಬಂದಿದ್ದು, ಅವರನ್ನು 108 ಅಂಬುಲೆನ್ಸ್ ನಲ್ಲಿ ಪಿರ್ಯಾದಿದಾರರು ತನ್ನ ಗಂಡ ಹಾಗೂ ಮಗನನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 232/2022 ಕಲಂ: 323, 324, 504 ಜೊತೆ 34 ಐಪಿಸಿ ಮತ್ತು ಕಲಂ: 3 (1)(r), (s), 3 (2) (v-a), (SC/ST ಕಾಯ್ದೆ ರಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 02-12-2022 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080