ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾಧ ಸುಜನ್ ಖಾರ್ವಿ (22) ತಂದೆ: ಚಂದ್ರ ಖಾರ್ವಿ  ವಾಸ: ಮಾರೊಡಿಮನೆ, ಮರವಂತೆ ಗ್ರಾಮ, ಬೈಂದೂರು ಇವರು ದಿನಾಂಕ 30/11/2022 ರಂದು KA-03 HY-1972 ನೇ ಮೋಟಾರು ಸೈಕಲ್ ನಲ್ಲಿ ಸ್ನೇಹಿತನಾದ ನಿತಿನ್ ನನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಬೈಂದೂರಿಗೆ ಹೋಗಲು ಸಂಜೆ ಸಮಯ ಸುಮಾರು 5:30 ಗಂಟೆಗೆ  ರಾ ಹೆ  66 ರಲ್ಲಿ ನಾಗೂರಿನ ಒಡೆಯರ ಮಠದ ಎದುರು ಹೋಗುತ್ತಿರುವಾಗ ಸುಜನ್ ಖಾರ್ವಿ ರವರ ಮುಂದಿನಿಂದ KA-20 AA-9790 ನೇ ಅಶೋಕ್ ಲೈಲ್ಯಾಂಡ ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಬೀದಿದನವೊಂದು ಅಡ್ಡಬಂದ ಕಾರಣ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಸುಜನ್ ಖಾರ್ವಿ ರವರು ಚಲಾಯಿಸುತ್ತಿದ್ದ  ಮೋಟಾರು ಸೈಕಲ್ ಸದ್ರಿ ವಾಹನದ ಹಿಂಬದಿಗೆ ಡಿಕ್ಕಿಹೊಡೆಯಿತು ಪರಿಣಾಮ ಸುಜನ್ ಖಾರ್ವಿ ರವರು ಹಾಗೂ ನಿತಿನ್ ರಸ್ತೆಗೆ ಬಿದ್ದಿದ್ದು ನಿತಿನನಿಗೆ ಏಡಗೈ ಮೂಳೆ ಮುರಿತವಾಗಿರುತ್ತದೆ, ಸುಜನ್ ಖಾರ್ವಿ ರವರಿಗೆ ಬಲಗಾಲಿಗೆ ತರಚಿದ ಗಾಯವಾಗಿರುತ್ತದೆ ಗಾಯಗೊಂಡವರನ್ನು ಸುಜನ್ ಖಾರ್ವಿ ರವರ ಪರಿಚಯದ ಸುದೀನ್, ನಯನ್ ಹಾಗೂ ವಾಹನದ ಚಾಲಕ  ಎತ್ತಿ ಉಪಚರಿಸಿ ಚಿಕಿತ್ಸೆಯ ಬಗ್ಗೆ ಒಂದು ಖಾಸಗಿ ವಾಹನದಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 233/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸುಮತಿ (33) ಗಂಡ: ಸುರೇಂದ್ರ ವಾಸ:ಚಿಕ್ಕು ನಿವಾಸ, ಮಿಲ್ಲುಗುಡ್ಡೆ ರಸ್ತೆ, ಹುಣ್ಸೆಮಕ್ಕಿ ಹೊಂಬಾಡಿ ಮಂಡಾಡಿ ಗ್ರಾಮ, ಕುಂದಾಪುರ ಇವರ ಅಣ್ಣ ಮೃತ ಸುರೇಶ (38) ರವರು ಹುಣ್ಸೆಮಕ್ಕಿ ಯಲ್ಲಿ ಸುಮತಿ ಇವರ ಜೊತೆ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಸುರೇಶ ರವರು ಮದುವೆಯಾಗಿದ್ದು ಹೆಂಡತಿ ಆಲೂರು ಗುಡ್ಡೆಯಂಗಡಿಯಲ್ಲಿ ವಾಸವಾಗಿದ್ದು ಅಲ್ಲಿಗೆ ವಾರಕ್ಕೊಮ್ಮೆ ಹೋಗಿಬರುತ್ತಿದ್ದನು ಸುರೇಶನು ಉಬ್ಬಸ ಖಾಯಿಲೆಯಿಂದ ಬಳಲುತ್ತಿದ್ದು ಹಾಗೂ ಕುಡಿತದ ಚಟವನ್ನು ಹೊಂದಿದ್ದು ಅದೇ ವಿಷಯಕ್ಕೆ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 02/12/2022 ರ ಬೆಳಗಿನ ಜಾವ 5:00 ಗಂಟೆಯಿಂದ 05:10 ರ ನಡುವೆ ಮನೆಯ ಅಡುಗೆ ಕೋಣೆಯ ಹತ್ತಿರದ ರೂಮ್ ನಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದು ಕೂಡಲೇ ಒಂದು ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 51/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾಧ ಪ್ರಮೋದ ತೋಪು (35) ತಂದೆ: ನಾಗ ತೋಪು, ವಾಸ: ಪಂಡರಿಕಾನಿ ಗ್ರಾಮ, ರಾಹುಲ್‌ದೇಗಾ ಅಂಚೆ, ಬಾಲಿ ಶಂಕರ ತಾಲೂಕು, ಇವರ ಹೆಂಡತಿಯ ತಮ್ಮನಾದ ಪ್ರಮೋದ ಮಿನ್ಜ್‌ (32) ರವರು ದಿನಾಂಕ 30/11//2022 ರಂದು ಸಮಯ ಸುಮಾರು 21:30 ಗಂಟೆಗೆ  ಗಂಗೊಳ್ಳಿ ಗ್ರಾಮದ ಗಂಗೊಳ್ಳಿ ಬಂದರ ಬಳಿ “ಶ್ರೀ ಯಕ್ಷೇಶ್ವರಿ” ಎಂಬ ಭೋಟಿನಲ್ಲಿ ಮೀನು ಖಾಲಿ ಮಾಡುತ್ತೀರುವುವಾಗ ಆಕಸ್ಮಿಕವಾಗಿ ಆಯಾತಪ್ಪಿ ಬೋಟ್‌ನಿಂದ ಪಂಚಗಂಗಾವಳಿ ನದಿಯ ನೀರಿಗೆ  ಬಿದ್ದು ಕಾಣೆಯಾಗಿದ್ದವರು, ದಿನಾಂಕ 02/12/2022 ರಂದು ಬೆಳಿಗ್ಗೆ 07:45  ಗಂಟೆಗೆ  ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್‌ರಸ್ತೆಯ ಸಮೀಪ ಪಂಚಗಂಗಾವಳಿ ನದಿಯಲ್ಲಿ ಮೃತದೇಹವು ಪತ್ತೆಯಾಗಿರುತ್ತದೆ. ಪ್ರಮೋದ ಮಿನ್ಜ್‌ರವರು ಭೋಟ್‌ನಲ್ಲಿ ಮೀನು ಖಾಲಿ ಮಾಡುತ್ತೀರುವವಾಗ ಆಕಸ್ಮಿಕವಾಗಿ ಆಯಾತಪ್ಪಿ ನದಿಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 28/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾಧ ಸಂಧ್ಯಾ (32), ಗಂಡ: ಗುರುಪ್ರಸಾದ್‌, ವಾಸ: ಅನುಗೃಹ  ಕೂರಾಡಿ ಪೋಸ್ಟ್‌ ಹನೇಹಳ್ಳಿ ಗ್ರಾಮ, ಕೊಕ್ಕರ್ಣೆ ಅಂಚೆ, ಬ್ರಹ್ಮಾವರ ಇವರು ನರ್ಸ್‌ ಕೆಲಸ ಮಾಡಿಕೊಂಡಿದ್ದು ಅವರು ದಿನಾಂಕ 01/12/2022 ರಂದು ರಾತ್ರಿ ಪಾಳಿಯ ಕೆಲಸಕ್ಕೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಹೋಗಿದ್ದು, ಸಂಧ್ಯಾ ರವರ ಗಂಡ ಗುರು ಪ್ರಸಾದ ರವರಿಗೆ ಸ್ವಲ್ಪ ಅಸೌಖ್ಯ ಇರುವುದರಿಂದ ರಾತ್ರಿ 8:30 ಗಂಟೆಗೆ ಮನೆಗೆ ಬೀಗ ಹಾಕಿ ಮಕ್ಕಳೊಂದಿಗೆ  ಸ್ವಲ್ಪ ದೂರದಲ್ಲಿರುವ ಸಂಧ್ಯಾ ರವರ ತಾಯಿಯ ಮನೆಗೆ  ಹೋಗಿದ್ದು,  ದಿನಾಂಕ 02/12/2022 ರಂದು  ಬೆಳಿಗ್ಗೆ ಸುಮಾರು 6:30 ಗಂಟೆಗೆ  ಮನೆಗೆ ಬಂದು ನೋಡಿದಾಗ ಮನೆಯ ಎದುರಿನ ಬಾಗಿಲಿನ ಚಿಲಕದ ಕೊಂಡಿಯನ್ನು ಯಾರೋ ಕಳ್ಳರು ಮುರಿದು ಮನೆಯ ಒಳಗೆ ಹೋಗಿ ಬೆಡ್‌ರೂಂನ ಗೊಡ್ರೇಜ್‌ ಬೀರುವಿನ ಬಾಗಿಲು  ತೆರೆದಿದ್ದು ಅದರಲ್ಲಿದ್ದ  ಬಟ್ಟೆಯನ್ನೆಲ್ಲಾ  ಚೆಲ್ಲಾಪಿಲ್ಲಿ ಮಾಡಿದ್ದು ಲಾಕರ್‌ನಲ್ಲಿರಿಸಿದ್ದ ರೂಪಾಯಿ 20.000/- ನಗದು, 16 ಗ್ರಾಂ ತೂಕದ ಹವಳದ ಸರ ಅಂದಾಜು ಮೌಲ್ಯ  ರೂಪಾಯಿ 60,000/-  ಹಾಗೂ ತಲಾ ಒಂದು ಪವನಿನ 2 ಚಿನ್ನದ  ಬಳೆಗಳ ಒಟ್ಟು16 ಗ್ರಾಂ ಅಂದಾಜು ಮೌಲ್ಯ  ರೂ 60,000/- ಇವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು  ಹೋಗಿರುತ್ತಾರೆ, ಕಳವಾದ ನಗದು ಹಾಗೂ ಒಟ್ಟು ಸೊತ್ತಿನ ಬೆಲೆ ರೂ. 1,40,000/- ಆಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 207/2022 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾಧ ಚಂದ್ರಶೇಖರ (42)ಬಜಾಬ್‌ ಆಲಿಯನ್ಸ್‌ ಜನರಲ್‌ ಇನ್ಸೂರೆನ್ಸ್‌, ನಂ: 25 & 26, 2ನೇ ಮಹಡಿ, ಎಸ್ಸೆಲ್‌ವಿಲಕಾನ್‌ಕಾಂಪ್ಲೆಕ್ಸ್‌, ಬೆಂದೂರ್‌ವೆಲ್ ಸರ್ಕಲ್‌, ಕಂಕನಾಡಿ, ಮಂಗಳೂರು ಇವರು ಬಜಾಜ್ ಅಲಿಯನ್ಸ್ ಜನರಲ್  ಇನ್ಸೂರೆನ್ಸ್ ಕಂಪನಿಯ ಆಪರೇಷನ್ ಮೆನೇಜರ್ ಆಗಿದ್ದು. 1 ನೇ ಆರೋಪಿ  1) ಕಂದಲ್  ಕೋಡಿ ನೌಷಾದ್ (59) ತಂದೆ: ಕೆ.ಕೆ. ಅಬ್ದುಲ್ ಖಾದರ್, ವಾಸ: ಮ.ನಂ: 15-23-1422/41, ಪ್ಲ್ಯಾಂಟ್ ನಂ:1102, ಪ್ರೆಸಿಡೆನ್ಸಿಯಲ್  ಎನ್ಕ್ಲೇವ್,  ಡೈಮಂಡ್ ಬ್ಲಾಕ್, ಕೊಲಾಸೋ  ಆಸ್ಪತ್ರೆ ಬಳಿ, ಕಂಕನಾಡಿ ಅಂಚೆ, ಮಂಗಳೂರು ಇವರು HP 14 D 7080   ನೇ ಜಾಗ್ವಾರ್  ಕಾರಿನ ಮಾಲಿಕರಾಗಿದ್ದು , 2 ನೇ ಆರೋಪಿಯು ನಬೀಲ್‌ಕೆ ಶಾದ್‌ತಂದೆ: ಕಂದಲ್  ಕೋಡಿ ನೌಷಾದ್ ಇವರು HP 14 D 7080   ನೇ ಜಾಗ್ವಾರ್  ಕಾರಿನ ಚಾಲಕನಾಗಿರುತ್ತಾನೆ, HP 14 D7080 ನೇ ಜಾಗ್ವಾರ್  ಕಾರು ಬಜಾಜ್ ಅಲಿಯನ್ಸ್ ಜನರಲ್  ಇನ್ಸೂರೆನ್ಸ್ ಕಂಪನಿಯ ವಿಮಾ ಪಾಲಿಸಿಯನ್ನು ಹೊಂದಿರುತ್ತದೆ. ದಿನಾಂಕ: 13/08/2022 ರಂದು ಸಂಜೆ 5:30 ಗಂಟೆಗೆ HP 14 D 7080 ನೇ ಜಾಗ್ವಾರ್ ಕಾರು ಉಚ್ಚಿಲ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ತೆಂಕ ಎರ್ಮಾಳು ಗ್ರಾಮದ ಜೆ.ಎಂ.ಜೆ. ಸರ್ವಿಸ್ ಸ್ಟೇಶನ್ ಹತ್ತಿರ ವಿದ್ಯುತ್  ಕಂಬಕ್ಕೆ  ಕಾರು ಡಿಕ್ಕಿ ಹೊಡೆದು ಮಗುಚಿ ಬಿದ್ದ ಕಾರಣ  ಕಾರು ಸಂಪೂರ್ಣ ಜಖಂಗೊಂಡು, ಈ ಕಾರಣಕ್ಕೆ  ಕಾರು ಮಾಲಿಕ ಕಂಡಾಲ ನೌಶದ್ ವಾಹನ ವಿಮೆ ಪಡೆಯಲು ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಗೆ ಅರ್ಜಿ ಸಲ್ಲಿಸಿರುತ್ತಾರೆ. ವಿಮೆ ಅರ್ಜಿ ವಿಚಾರಣೆಯ ಸಮಯ ಕಂಪನಿಯ ಆಂತರಿಕ ತನಿಖಾ ತಂಡ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಿದಾಗ ಅಪಘಾತ ಸಮಯ ಕಾರನ್ನು ನಬೀಲ್‌ಎಂಬವರು ಚಲಾಯಿಸುತ್ತಿದ್ದರು. ಮತ್ತು ಕಾರಿನ ಒಳಗಡೆ ಅಪರಿಚಿತ ಮಹಿಳೆಯೊಬ್ಬಳು ಇದ್ದರು ಎಂಬ ಮಾಹಿತಿ ಇರುತ್ತದೆ. 1ನೇ ಆರೋಪಿಯು ವಿಮಾ ಅರ್ಜಿಯ ಜೊತೆ ಸಲ್ಲಿಸಿದ ದಾಖಲಾತಿಗಳನ್ನು ಪರಿಶೀಲಿಸಿದಾಗ ಅಪಘಾತದ ಸಮಯದಲ್ಲಿ  HP 14 D 7080  ಕಾರನ್ನು ಚಲಾಯಿಸುತ್ತಿದ್ದ ಚಾಲಕನಿಗೆ ಎಲ್ ಎಲ್ ಆರ್ ಇದ್ದು, ಪಕ್ಕದಲ್ಲಿ 1 ನೇ ಆರೋಪಿಯು ಕುಳಿತಿದ್ದರು ಎಂದೂ  ಅವರಿಗೆ  ಡಿ.ಎಲ್. ಇರುವುದಾಗಿ ದಾಖಲಾತಿಯನ್ನು ನೀಡಿರುತ್ತಾರೆ.  ಅಪಘಾತದ ಸಮಯದಲ್ಲಿ ಕಾರು ಮಾಲಕನ ಉಪಸ್ಥಿತಿಯನ್ನು ಅನುಮಾನಿಸಿದಾಗ ಅವರ  ಮೊಬೈಲ್ ಇರುವ ಸ್ಥಳವು ಅಪಘಾತ ಸ್ಥಳವಲ್ಲದ ಬೇರೆ ಸ್ಥಳದಲ್ಲಿ ಇರುವುದಾಗಿ ತಿಳಿದು ಬಂದಿದೆ. ಈ ಕುರಿತು ತೀವೃ ಅನುಮಾನಗಳಿದ್ದು, ಕಾರು  ಚಾಲಕನು ತನ್ನ ಹೆಸರಿನಲ್ಲಿ ಕಾರು ಚಾಲನಾ ಪರವಾನಿಗೆಯನ್ನು ಪೊಲೀಸ್ ಠಾಣೆಗೆ ನೀಡಿರುತ್ತಾನೆ.ಈ ಕುರಿತು ಫಿರ್ಯಾದುದಾರರ ತನಿಖಾ ತಂಡ ವಿಚಾರಣೆ ಮಾಡಿದಾಗ  2 ನೇ ಆರೋಪಿಯ ಡಿ.ಎಲ್.  ದಾಖಲಾತಿಯನ್ನು ತಿರುಚಿ ಸೃಷ್ಟಿಸಿದ ಅನುಮಾನಗಳಿರುತ್ತದೆ. ಹಾಗೂ 1 ನೇ ಆರೋಪಿಯು ಅಪಘಾತ ಸಮಯದಲ್ಲಿ ಚಾಲಕನ ಪಕ್ಕದಲ್ಲಿ ಕುಳಿತಿರುವುದಾಗಿ ಕಟ್ಟು ಕಥೆಯನ್ನು ಮಾಡಿ ಸುಳ್ಳು ಮಾಹಿತಿ ನೀಡಿರುತ್ತಾನೆ. 1 ನೇ ಆರೋಪಿಗೆ ದುರ್ಲಾಭದಿಂದ ವಾಹನ  ವಿಮಾ ಸೌಲಭ್ಯ ಪಡೆಯಲು 2 ನೇ ಆರೋಪಿಯು 1ನೇ ಆರೋಪಿಗೆ ಸಹಕರಿಸಲು ಉದ್ದೇಶ ಪೂರ್ವಕವಾಗಿ ಮೋಸ ಮಾಡುವ ಉದ್ದೇಶದಿಂದ  ಡಿ.ಎಲ್. ತಿದ್ದಿ ಸುಳ್ಳು ದಾಖಲಾತಿ ಸೃಷ್ಟನೆ ಮಾಡಿ, ಸುಳ್ಳು ದಾಖಲಾತಿ ಎಂದು ತಿಳಿದಿದ್ದರೂ  ಕೂಡ  ಪೊಲೀಸ್ ಇಲಾಖೆಗೆ  ಮತ್ತು ಮಾನ್ಯ  ನ್ಯಾಯಾಲಯಕ್ಕೆ  ನೀಡಿ ವಂಚಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 152/2022 ಕಲಂ: 177, 192, 196, 463, 464, 468, 471 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಿಂದ ಅ ಕ್ರ 26/2022 ಕಲಂ 379 ಐ ಪಿ ಸಿ ಪ್ರಕರಣದ  ಕಡತವನ್ನು  ತಕ್ಷೀರು ಸ್ಥಳದ ಆಧಾರದ ಮೇಲೆ ಮಾನ್ಯ ನ್ಯಾಯಾಲಯದಿಂದ ಬೈಂದೂರು ಪೊಲೀಸ್ ಠಾಣೆಗೆ ವರ್ಗಾಯಿಸಲು  ಅನುಮತಿಯನ್ನು ಪಡೆದು ಮಾನ್ಯ ಹೆಚ್ಚುವರಿ ಪೊಲೀಸ್‌ಅಧೀಕ್ಷಕರು ಉಡುಪಿ ಜಿಲ್ಲೆ ರವರ ಮುಖಾಂತರ ಬೈಂದೂರು ಪೊಲೀಸ್‌ ಠಾಣೆಗೆ ಕಳುಹಿಸಿದ ಪ್ರಕರಣದ ಕಡತವನ್ನು ಸ್ವೀಕರಿಸಿಕೊಂಡಿದ್ದು ದೂರಿನ ಸಾರಾಂಶವೇನೆಂದರೆ ಫಿರ್ಯಾದಿದಾರರಾದ ಶ್ರೀಮತಿ ಅಮುಲ್ ಕುಟ್ಟಿ  (45) ಗಂಡ: ಮಹೇಶ್  ಕುಮಾರ್ ಆರ್ ವಾಸ: ಪಿವಿ  ಕೊಯಿಲ್ ಸ್ಟ್ರೀಟ್ , ಚೆನೈ ತಮಿಳುನಾಡು ರಾಜ್ಯ ಇವರು ದಿನಾಂಕ 19/09/2022 ರಂದು ಮುಂಬೈನಿಂದ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ರೈಲು ಗಾಡಿ ಸಂಖೈ 16345 ಎ-2 ಬೋಗಿ ಸೀಟ್ ನಂಬ್ರ 25,26, 27 ರಲ್ಲಿ ಪ್ರಯಾಣ ಮಾಡಿದ್ದು , ಪ್ರಯಾಣದ ವೇಳೆ ಶ್ರೀಮತಿ ಅಮುಲ್ ಕುಟ್ಟಿ  ಇವರು ರೈಲ್ವೆ ಗಾಡಿಯ ಸೀಟ್ ನಂಬ್ರ 25 ರಲ್ಲಿ  ತಮ್ಮ ವ್ಯಾನಿಟಿ ಬ್ಯಾಗ್  ಇಟ್ಟುಕೊಂಡು ಮಲಗಿದ್ದು  ರೈಲು ಗಾಡಿಯಲ್ಲಿ  ರಾತ್ರಿ ಸುಮಾರು 1:20 ಗಂಟೆಗೆ ಮತ್ತು  3:20 ಗಂಟೆಗೆ ಎದ್ದು ನೋಡಿದ್ದು ,  ವ್ಯಾನಿಟಿ ಬ್ಯಾಗ್ ಇದ್ದು   ನೋಡಿ ಮಲಗಿರುತ್ತಾರೆ.ಬೆಳಿಗ್ಗೆ  5:40 ರ ಸಮಯದಲ್ಲಿ ಎದ್ದು ನೋಡಲಾಗಿ ಅವರ ಬಳಿ ಇದ್ದ  ವ್ಯಾನಿಟಿ ಬ್ಯಾಗ್ ಕಾಣೆಯಾಗಿದ್ದು ಈ ಬಗ್ಗೆ ಟಿಟಿಯವರಿಗೆ  ಮಾಹಿತಿ ತಿಳಿಸಿದ್ದು , ಪ್ರಯಾಣ ಮುಂದುವರೆಸಿದ್ದು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಇಳಿಯುವಾಗ ಸಹ ಪ್ರಯಾಣಿಕರಿಗೆ ಫೋನ್ ನಂಬ್ರ ನೀಡಿದ್ದು  ವ್ಯಾನಿಟಿ ಬ್ಯಾಗ್ ಬಗ್ಗೆ ಮಾಹಿತಿ ತಿಳಿಸುವಂತೆ ಕೋರಿರುತ್ತಾರೆ. ಅದರಂತೆ ಸದರಿ ಪ್ರಯಾಣಿಕ  ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ರೈಲು ಗಾಡಿ ಇರುವಾಗ್ಗೆ  ಶ್ರೀಮತಿ ಅಮುಲ್ ಕುಟ್ಟಿ  ರವರಿಗೆ ಕರೆ ಮಾಡಿ ವ್ಯಾನಿಟಿ ಬ್ಯಾಗ್ ರೈಲ್ವೆ ಗಾಡಿ ಶೌಚಾಲಯದ ಬಳಿ ಇರುವ ಡಸ್ಟ್  ಬಿನ್ ನಲ್ಲಿಸಿಕ್ಕಿರುತ್ತದೆ.  ಆದರೆ ವ್ಯಾನಿಟಿ ಬ್ಯಾಗ್ ನಲ್ಲಿ ಎರಡು ಪೋನ್ ಮತ್ತು ಆಧಾರ್ ಕಾರ್ಡ ಇದ್ದು  ಉಳಿದ ಚಿನ್ನಾಭರಣ ಮತ್ತು ನಗದು ಕಳವು ಮಾಡಿರುತ್ತಾರೆ ಎಂದು ಮಂಗಳೂರು ರೈಲ್ವೇ  ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ನೀಡಿದ್ದು ಕಳುವಾದ ಚಿನ್ನಾಭರಣಗಳು 1} ಮಾಂಗಲ್ಯ ಸರ 32 ಗ್ರಾಂ  ಬೆಲೆ ಸುಮಾರು1,50,000/- 2} ಬ್ಯಾಂಗಲ್ 24 ಗ್ರಾಂ  ಬೆಲೆಸುಮಾರು 1,15,000/- 3} 6ಚಿನ್ನದಉಂಗುರ 50 ಗ್ರಾಂ ಬೆಲೆ ಸುಮಾರು2,25,000/- 4} ಕಿವಿ ಓಲೆ 8 ಗ್ರಾಂ  ಬೆಲೆ ಸುಮಾರು 40,000/- ಹಾಗೂ ನಗದು ಹಣ ರೂಪಾಯಿ 50,000/-  ಕಳುವಾದ ವಸ್ತುಗಳ ಒಟ್ಟು  ಮೌಲ್ಯ  ಸುಮಾರು ರೂ 5,80,000/- ಆಗಿರುತ್ತದೆ. ದಿನಾಂಕ  20-09-2022 ರಂದು ಬೆಳಿಗ್ಗಿನ  ಜಾವ 5:00  ಗಂಟೆಯಿಂದ 05:40   ಗಂಟೆಯ ನಡುವೆ ಚಲಿಸುವ ರೈಲು ಗಾಡಿಯಲ್ಲಿ  ಬೈಂದೂರು ರೈಲ್ವೆ  ಸ್ಟೇಷನ್ ಹತ್ತಿರ ಯಾರೋ ಕಳ್ಳರು  ಕಳವು ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 234/2022 ಕಲಂ: 380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-12-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080