ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ  30/11/2021  ರಂದು  ಸಂಜೆ 19:00 ಗಂಟೆಗೆ ಕುಂದಾಪುರ  ತಾಲೂಕಿನ, ಕೊಟೇಶ್ವರ ಗ್ರಾಮದ ಸಹನ ಹಾಲ್‌ ಎದುರು ಹಾದು ಹೋದ ಕುಂದಾಪುರ – ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ಏಕಮೂಖ ಸಂಚಾರ ವ್ಯವಸ್ಥೆಯಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ  ಆಪಾದಿತ ಬಸ್ಸು ಚಾಲಕ ಭಾಸ್ಕರ KA-20-AA-0828 ನೇ ಬಸ್ಸನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ  ಮಾಡಿಕೊಂಡು ಬಂದು ಅದೇ ದಿಕ್ಕಿನಲ್ಲಿ ಮುಂದಿನ ಬೇರೆ ಯಾವುದೋ ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ರಸ್ತೆಯ ಬಲಕ್ಕೆ ತಿರುಗಿಸಿ ರಾಷ್ಟ್ರೀಯ ಹೆದ್ದಾರಿ 66 ರ ಚತುಸ್ಪದ ರಸ್ತೆಯ ಮದ್ಯದಲ್ಲಿ ಅಳವಡಿಸಿದ ನವಯುಗ ಕಂಪೆನಿಯ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆಸಿ ವಿದ್ಯುತ್‌ ಕಂಬ ಮುರಿದು ಬಿದ್ದು  2 ಲಕ್ಷ ನಷ್ಟವುಂಟು ಮಾಡಿರುವುದಾಗಿ ಯೊಗೀಶ್‌ (37), ತಂದೆ :  ದಿ. ಪ್ರಭಾಕರ, ವಾಸ:   ಬೈಲು ಮನೆ, ಕಾರ್ಕಡ ಅಂಚೆ  ಸಾಲಿಗ್ರಾಮ, ಉಡುಪಿ   ತಾಲೂಕು ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2021 ಕಲಂ : 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ನಾಗರಾಜ (19), ತಂದೆ: ಶೇಖರ, ವಾಸ: ವೆಂಕಟರಮಣ ನಿಲಯ ನೈಲಾಡಿ ಕಬ್ಬಿನ ಹಿತ್ಲು ಬಿಲ್ಲಾಡಿ ಗ್ರಾಮ  ಬ್ರಹ್ಮಾವರ ತಾಲೂಕು ಇವರು ದಿನಾಂಕ 30/11/2021 ರಂದು ಕಾಲೇಜಿಗೆ ಹೋಗಿ ವಾಪಾಸ್ಸು ಬಂದು ಗಾವಳಿ ಜಂಕ್ಷನ್ ನಲ್ಲಿ ನಿಂತುಕೊಂಡಿರುವಾಗ ಅವರ ದೊಡ್ಡಮ್ಮನ ಮಗ KA-20-ET-8602 ನೇಯ ಸ್ಕೂಟಿ ಸವಾರ ದಿನೇಶ ಪಿರ್ಯಾದಿದಾರರನ್ನು ಸಹ ಸವಾರನ್ನಾಗಿ ಕುಳ್ಳಿರಿಸಿಕೊಂಡು ಪೇಟೆಗೆ ಹೋಗುವರೆ  ಬಿದ್ಕಲ್ ಕಟ್ಟೆ ಸೈಬ್ರಕಟ್ಟೆ ಡಾಮರು ರಸ್ತೆಯಲ್ಲಿ  ಹೊರಟು ಸಂಜೆ 5:30 ಗಂಟೆಗೆ ಮದಗ ಜಂಕ್ಷನ್ ಬಳಿಯಲ್ಲಿ ತಲುಪುವಷ್ಟರಲ್ಲಿ ದಿನೇಶ ಸ್ಕೂಟಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹಾಕಿದ ಕಾರಣ ಪಿರ್ಯಾದಿದಾರರು ಸ್ಕೂಟಿಯಿಂದ ಹಾರಿ ರಸ್ತೆಗೆ ಬಿದ್ದಿದ್ದು  ಸ್ಕೂಟಿ ನೆಲಕ್ಕೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲ ಕಾಲಿಗೆ ಗುದ್ದಿದ ಒಳ ಗಾಯವಾಗಿದ್ದು ಎಡ ಕೈಯ ಮಣಿ ಗಂಟಿನಲ್ಲಿ ಮೂಳೆ ಮುರಿತದ ಒಳ ಗಾಯವಾಗಿದ್ದು ಬಲ ಕೈ ತೋಳಿನ ಮೇಲೆ ಹಾಗೂ ಸೊಂಟದ ಬಲ ಬದಿ ತರಚಿದ ರಕ್ತ ಗಾಯವಾಗಿರುತ್ತದೆ  . ದಿನೇಶನಿಗೆ ಮೇಲ್ನೋಟಕ್ಕೆ ಯಾವುದೇ ಗಾಯಗು ಆಗಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 206/2021 ಕಲಂ: 279,338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  ಶಂಕರನಾರಾಯಣ: ದಿನಾಂಕ  01/12/2021 ರಂದು 08;30  ಗಂಟೆಗೆ ಗುರುಪ್ರಸಾದ  ಇವರು KA-20-EH- 6398 ನೇ ನಂಬ್ರದ  ಮೋಟಾರ್  ಸೈಕಲ್‌‌ನಲ್ಲಿ   ಕುಂದಾಪುರ  ತಾಲೂಕಿನ ಶಂಕರನಾರಾಯಣ ಗ್ರಾಮದ ಶಂಕರನಾರಾಯಣ ಮದರ್ ತೆರೇಶಾ ಶಾಲೆಯ ಬಳಿ  ಹಾಲಾಡಿ  ಕಡೆಗೆ   ಹೋಗುತ್ತಿರುವಾಗ  ಅದೇ ದಿಕ್ಕಿನಲ್ಲಿ  ಎದುರುಗಡೆ ಹೋಗುತ್ತಿದ್ದ KA-24-E-5183ನೇ ನಂಬ್ರದ  ಮೋಟಾರ್  ಸೈಕಲ್‌ನ್ನು  ಆರೋಪಿ ಸುಧಾಕರ  ಶೆಟ್ಟಿ  ಅತೀವೇಗ  ಹಾಗೂ   ನಿರ್ಲಕ್ಷತನದಿಂದ  ಚಲಾಯಿಸಿ  ಯಾವುದೇ   ಮುನ್ಸೂಚನೇ   ನೀಡದೇ  ಒಮ್ಮೆಲೇ  ಆತನ  ಬಲ ಬದಿಗೆ   ಚಲಾಯಿಸಿ   ಪಿರ್ಯಾದಿದಾರರು ಚಲಾಯಿಸಿಕೊಂಡು  ಹೋಗುತ್ತಿದ್ದ  ಮೋಟಾರ್  ಸೈಕಲ್‌‌ಗೆ   ಡಿಕ್ಕಿ  ಹೊಡೆದಿದ್ದು, ಇದರ    ಪರಿಣಾಮ  ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ಅವರ ಬಲಕೈ ಮಣಿಗಂಟಿನ ಬಳಿ ಹಾಗೂ ಎಡಕೈ  ಮಣಿಗಂಟಿನ ಬಳಿ   ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2021  ಕಲಂ: 279,337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

 • ಉಡುಪಿ: ದಿನಾಂಕ 01/12/2021ರಂದು ವಾಸಪ್ಪ ನಾಯ್ಕ, ಪೊಲೀಸ್ ಉಪನಿರೀಕ್ಷಕರು(ತನಿಖೆ), ಉಡುಪಿ ನಗರ ಪೊಲೀಸ್‌ ಠಾಣೆ ಇಬತು  ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಗುಂಡಿಬೈಲು ರಸಿಕಾ ಬಾರ್‌ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ರವಿಚಂದ್ರ ಶೆಟ್ಟಿ (43), ತಂದೆ: ದಿ.ಗೋಪಾಲ ಶೆಟ್ಟಿ, ವಾಸ: ಕೇರ್‌ ಉದಯ ಭಂಡಾರಿ, ಪುತ್ತೂರು ಬಸ್‌ ನಿಲ್ದಾಣದ ಬಳಿ, ಪುತ್ತೂರು ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ತಾನು ಸಂಗ್ರಹಿಸುತ್ತಿದ್ದ ಹಣವನ್ನು 3ನೇ ಆಪಾದಿತ ಲಿಯೋ ಪರವಾಗಿ ಆತನ  ಹೆಂಡತಿ  2ನೇ  ಆರೋಪಿತೆ ಶ್ರೀಮತಿ ಗ್ರೆಟ್ಟಾ ಬಾಯಿರವರಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಆಪಾದಿತನ  ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂಪಾಯಿ 4,000/-  ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1, ಬಾಲ್‌ಪೆನ್‌ ಮತ್ತು ಆಪಾದಿತನ ವಶದಲ್ಲಿದ್ದ KA-20-EJ-3753 ನೇ ಸುಜುಕಿ ಆ್ಯಕ್ಸಸ್‌ ಸ್ಕೂಟರ್‌, ರೆಡ್‌ಮೀ ಮೊಬೈಲ್‌ ಫೋನ್‌, ಒಪ್ಪೊ ಮೊಬೈಲ್‌ ಫೋನ್‌ ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 179/2021 ಕಲಂ: 78 (i) (iii) Karnataka Police Amendment ACT-2021 ರಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಸುಧೀರ (36), ತಂದೆ: ನಾರಾಯಣ,  ಕಳುವಿನ ಬಾಗಿಲು ಗುಲ್ವಾಡಿ ಪೋಸ್ಟ್ ಗುಲ್ವಾಡಿ ಗ್ರಾಮ ಕುಂದಾಪುರ ತಾಲೂಕು ಇವರ ತಮ್ಮ ಶಶಿಧರ(30) ಎಂಬುವವರು ಪಿರ್ಯಾದಿದಾರರೊಂದಿಗೆ ಮನೆಯಲ್ಲಿ ವಾಸವಾಗಿದ್ದು ದಿನಾಂಕ 28/11/2021 ರಂದು ಮಧ್ಯಾಹ್ನ 12:30 ಗಂಟೆಗೆ ಮನೆಯಿಂದ  ಕುಂದಾಪುರಕ್ಕೆ ಆಧಾರ್ ಕಾರ್ಡ್  ಮಾಡಲು ಹೋಗುತ್ತೇನೆ ಎಂದು ತಾಯಿ ಗೌರಿಯವರಲ್ಲಿ ಹೇಳಿ ಮನೆಯಿಂದ ಹೋದವರು ಸಂಜೆಯಾದರು ಮನೆಗೆ ಬಾರದೇ ಇರುವುದನ್ನು ನೋಡಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2021 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ಜೋಗ ಭಂಡಾರಿ (55) ಇವರು ದಿನಾಂಕ 01/12/2021 ರಂದು ಬೆಳಿಗ್ಗೆ 09:00 ಗಂಟೆಗೆ ಗಾಳ ಹಾಕಿ ಮೀನು ಹಿಡಿಯಲು ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದ ಕೋಡಿ ಗಡಿಯಾರ ಹಿತ್ಲು ಮೀನುಕೆರೆ ತೋಡಿಗೆ ಹೋದವರು ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 04:00 ಗಂಟೆಯ ಮಧ್ಯಾವಧಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ತೋಡಿನ ನೀರಿಗೆ ಬಿದ್ದು ಉಸಿರುಕಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 50/2021 ಕಲಂ: 174 ಸಿ,.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಅಮಾಸೆಬೈಲು: ದಿನಾಂಕ 01/12/2021 ರಂದು ಸಂಜೆ  04:30 ಗಂಟೆಗೆ ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ  ಮಚ್ಚಟ್ಟು ಸಣ್ಣ ಸೇತುವೆ ಬಳಿ ರಸ್ತೆಯ ಬದಿಯಲ್ಲಿ ಕಾಡು ಪೊದೆಯಲ್ಲಿ  ಮಗು ಅಳುವ ದ್ವನಿ ಕೇಳಿ ಹಾಲು ಡೈರಿಗೆ ಹೋಗುತ್ತಿದ್ದ ಶ್ರೀಮತಿ ಗೀತಾ (37), ಗಂಡ: ರಾಮ ಬೋವಿ, ವಾಸ:ಮಡಿವಾಳಕಟ್ಟು , ಮಚ್ಚಟ್ಟು ಗ್ರಾಮ ಕುಂದಾಪುರ ತಾಲೂಕು ಇವರು ಹೋಗಿ ನೋಡಿ ಮಗುವನ್ನು ಎತ್ತಿ ತಂದಿದ್ದು  ಸುಮಾರು 7 ದಿನಗಳ  ನವಜಾತ ಹೆಣ್ಣು ಶಿಶು  ಆಗಿರುತ್ತದೆ.  ಮಗುವನ್ನು  ಹಡೆದಿರುವ ಮಗುವಿನ ತಂದೆ  ತಾಯಿ  ಮಗುವಿನ ಪಾಲನೆ ಪೋಷಣೆ ಮಾಡದೇ  ಮಗುವನ್ನು ಅಪಾಯಕ್ಕೊಡ್ಡುವ ಉದ್ದೇಶದಿಂದ  ರಸ್ತೆ ಬದಿ ಕಾಡು ಪೊದೆಯಲ್ಲಿ ಅಪಾಯಕರ ಸ್ಥಿತಿಯಲ್ಲಿ ಎಸೆದುಹೋಗಿರುತ್ತಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2021 ಕಲಂ 317, 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಕಂಬದಕೋಣೆ  ಗ್ರಾಮದ  ಸ. ನಂಬ್ರ 159/4, ಸ. ನಂಬ್ರ.159/13 ಮತ್ತು ಸ. ನಂ. 159/15 ರ ಭೂಮಿಯು ಪಿರ್ಯಾದಿದಾರರಾದ ಶ್ರೀಮತಿ ಬೀಬಿ ಖತೀಜಾ (46), ಗಂಡ ಅಬ್ದುಲ್ ಕರೀಂ, ತಂದೆ: ಅಬುಬಕ್ಕರ್ ಸಾಹೇಬ್, ವಾಸ: ಹಳಗೇರಿ, ಕಂಬದಕೋಣೆ ಗ್ರಾಮ, ಬೈಂದೂರು ತಾಲೂಕು ಇವರ ತಂದೆ ಮೃತರಾದ ನಂತರ ಪಿರ್ಯಾದಿದಾರರಿಗೆ ಮತ್ತು ಅವರ ಸಹೋದರ ಮತ್ತು ಸಹೋದರಿಯರ ಹಕ್ಕಿಗೆ ಬಂದಿದ್ದು,  ಭೂಮಿಯಲ್ಲಿ ಜುಲೈ ತಿಂಗಳಿನಲ್ಲಿ ಭತ್ತದ ನೇಜಿ ಮಾಡಿಸಿದ್ದು, ದಿನಾಂಕ 05/11/2021 ರಂದು 13:30 ಗಂಟೆಗೆ ಪಿರ್ಯಾದಿದಾರರು ಕಟಾವು ಯಂತ್ರವನ್ನು ಬಾಡಿಗೆಗೆ ಪಡೆದು ಭತ್ತದ ನೇಜಿಯನ್ನು ಕಟಾವು ಮಾಡುತ್ತಿರುವ ಸಮಯದಲ್ಲಿ ಆರೋಪಿಗಳಾದ 1. ತಾಹೀರ ಬಾನು (50), ಗಂಡ: ಮಹಮ್ಮದ್ ಹುಸೇನ್, 2. ಮಹಮದ್ದ್ ಆಲಿ (48), ಗಂಡ: ಉಮ್ಮರ್ ಸಾಹೇಬ್, 3. ಸಫರಾಬಿ (32), ಗಂಡ: ಮೊಹಮ್ಮದ್ ಆ ಲಿ, 4. ನೆಮ್ರಾನ್ (19), ತಂದೆ: ಮಹಮದ್ದ್ ಹುಸೇನ್ , 5.ಮಹಮದ್ ಸಿಫಾನ್ (22), ತಂದೆ: ಮಹಮ್ಮದ್ದ ಹುಸೇನ್ ವಾಸ ಎಲ್ಲರೂ ಸಂಕದ ಬಾಗಿಲು ವಂಡಾರು ಗ್ರಾಮ, ಉಡುಪಿ ತಾಲೂಕು ಇವರು ಅಕ್ರಮ ಕೂಟ ಸೇರಿಕೊಂಡು ಕೈಯಲ್ಲಿ ಮಾರಾಕಾಯುಧಗಳನ್ನು ಹಿಡಿದುಕೊಂಡು ಭೂಮಿಗೆ ಅಕ್ರಮ ಪ್ರವೇಶ ಮಾಡಿ ಕಟಾವು ಯಂತ್ರವನ್ನು ತಡೆದು ಕಟಾವು ಮಾಡದಂತೆ ತಡೆಒಡ್ಡಿದ್ದು, ಆ ಸಮಯದಲ್ಲಿ  ಪಿರ್ಯಾದಿದಾರರು ಆರೋಪಿತರನ್ನು ಪ್ರಶ್ನಿಸಿದಾಗ  ಆರೋಪಿತರು ಅಡ್ಡಗಟ್ಟಿ ಫಿರ್ಯಾದಿದಾರರ ಮುಖಕ್ಕೆ ಹಾಗೂ ಮೈ ಕೈಗೆ ಹೊಡೆದು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿದೆ. ಪಿರ್ಯಾದಿದಾರರು ತನಗಾದ ಗಾಯದ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆ  ಮತ್ತು  ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 193/2021 ಕಲಂ: 447, 441, 323, 506. 143 ಮತ್ತು 147 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ದಿನಾಂಕ 23/11/2021 ರಂದು ಅನಿಲ್ ಬಿ.ಎಮ್ (ತನಿಖೆ), ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರು ಶಿರೂರು ಮಾರ್ಕೇಟ್ ಬಳಿ ರೌಂಡ್ಸ ಕರ್ತವ್ಯದಲ್ಲಿರುವಾಗ ಕೋಣ್ಮಕ್ಕಿ ಕ್ರಾಸ್ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು  ವ್ಯಕ್ತಿಗಳು ಅಮಲು ಪದಾರ್ಥ ಸೇವನೆ ಮಾಡಿಕೊಂಡು ತೂರಾಡುತ್ತಿರುವುದಾಗಿ ಮಾಹಿತಿ ಬಂದಂತೆ ಸ್ಥಳಕ್ಕೆ ಹೋದಾಗ  ಸ್ಥಳದಲ್ಲಿದ್ದ ವ್ಯಕ್ತಿಗಳು ಓಡಿಹೋಗುವಾಗ ನೇರಳೆ ಬಣ್ಣದ ಅಡ್ಡಗೆರೆಗಳಿರುವ ಶರ್ಟ ದರಿಸಿರುವ ಓರ್ವ ವ್ಯಕ್ತಿಯುKA-47-L-8383 ನೇ ಮೋಟಾರು ಸೈಕಲನಲ್ಲಿ  ಹೋಗಿದ್ದು ಆತನನ್ನು ಹುಡುಕಾಡಿದ್ದು  ಪತ್ತೆಯಾಗಿರುವುದಿಲ್ಲ, ನಂತರ ದಿನಾಂಕ 24/11/2021 ರಂದು ಬೆಳಿಗ್ಗಿನ ಜಾವ 05:00 ಗಂಟೆಗೆ ಕೋಣ್ಮಕ್ಕಿ ಕಡೆಯಿಂದ ಬುಕಾರಿ ಕಾಲೋನಿ ಕಡೆಗೆ ಬರುತ್ತಿದ್ದ KA-47-L-8383ನೇ ಹೊಂಡಾ ಆಕ್ಟಿವಾ ಮೋಟಾರು ಸೈಕಲನ್ನು ನಿಲ್ಲಿಸಿದ್ದು ಆತನ ಹೆಸರನ್ನು ಕೇಳಿದ್ದು, ಕೆ. ಅಲ್ಪಾಜ್ (18), ತಂದೆ: ಶರ್ಫುದ್ದಿನ್, ವಾಸ: ಫಾರುಕ್ ಮಂಜಿಲ್, ಬುಕಾರಿ ಕಾಲೋನಿ  ಶಿರೂರು ಗ್ರಾಮ  ಬೈಂದೂರು ತಾಲೂಕು ಎಂಬುದಾಗಿ ತಿಳಿಸಿರುತ್ತಾನೆ. ನಂತರ ಆತನಲ್ಲಿ ನಿನ್ನೆ ಕೋಣ್ಮಕ್ಕಿ ಕ್ರಾಸ್ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಕೆಲವು  ವ್ಯಕ್ತಿಗಳು ಸೇರಿಕೊಂಡು ಅಮಲು ಪದಾರ್ಥ ಸೇವನೆಮಾಡಿಕೊಂಡು ತೂರಾಡುತ್ತಿರುವುವಾಗ  ಓಡಿ ಹೋದ ಬಗ್ಗೆ ವಿಚಾರಿಸಿದಾಗ ಆತನು ಒಪ್ಪಿಕೊಂಡಿದ್ದು ತಾನು ಹಾಗೂ ತನ್ನ ಇತರ ಸ್ನೇಹಿತರು ಸ್ಥಳದಲ್ಲಿ ಅಮಲು ಪದಾರ್ಥವನ್ನು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಆತನು ಗಾಂಜಾದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ  ಅನುಮಾನ ಇದ್ದು ಆತನನ್ನು ಪ್ರೊಫೆಸರ್ ಅಂಡ್ ಹೆಡ್  ಕೆಎಂಸಿ ಪೊರೆನ್ಸಿಕ್ ವಿಭಾಗರವರಿಂದ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು ಗಾಂಜಾ ಸೇವಿಸಿರುವ ಬಗ್ಗೆ ವೈಧ್ಯರು ದೃಢಪತ್ರ ನೀಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 192/2021 ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-12-2021 10:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080