ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  •  ಬೈಂದೂರು: ಪಿರ್ಯಾದಿದಾರರಾದ ನಾಗರತ್ನ(38), ಗಂಡ:ರಾಮಚಂದ್ರ ಪೂಜಾರಿ, ವಾಸ: ಪಕ್ಕಿಮನೆ ನಂದನವನ ಗ್ರಾಮ ಬೈಂದೂರು ತಾಲೂಕು ಇವರ ತಾಯಿ ಚೆಣ್ಣಮ್ಮ (74) ರವರು ಪಿರ್ಯಾದಿದಾರರೊಂದಿಗೆ ನಂದನವನ ಗ್ರಾಮದ ಪಕ್ಕಿಮನೆ ಎಂಬಲ್ಲಿ ವಾಸವಾಗಿದ್ದವರು ದಿನಾಂಕ 02/12/2021 ರಂದು ಬೆಳಿಗ್ಗೆ 9:00 ಗಂಟೆಯಿಂದ 10:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಸಮೀಪವಿರುವ ಹೊಳೆಯ ದಡದ ಮೇಲೆ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 50/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸಂದೇಶ್ ರೋಡ್ರಿಗಸ್  (41), ತಂದೆ: ದಿ. ಟಿ ಎಫ್ ರೋಡ್ರಿಗಸ್, ವಿಳಾಸ: ಸಿನೀಯರ ಮ್ಯಾನೇಜರ್‌,  ಕೆನರಾ ಬ್ಯಾಂಕ್‌ಕರೆನ್ಸಿ ಚೆಸ್ಟ್, ಕೋರ್ಟ ಹಿಂಭಾಗದ ರಸ್ತೆ, ಉಡುಪಿ ಇವರು ಕೆನರಾ ಬ್ಯಾಂಕ್ ಕರೆನ್ಸಿ ಚೆಸ್ಟ್ ಉಡುಪಿಯಲ್ಲಿ ಸಿನೀಯರ ಮ್ಯಾನೇಜರ್‌ಆಗಿ ಕೆಲಸ ಮಾಡುತ್ತಿದ್ದು. ಕೆನರಾ ಬ್ಯಾಂಕ್‌ಕರೆನ್ಸಿ ಚೆಸ್ಟ್ ನಲ್ಲಿ ದಿನಾಂಕ: 14/07/2021 ರಿಂದ ದಿನಾಂಕ: 15/07/2021 ರ ವರೆಗೆ ಆರ್ ಬಿ ಐ ಡಿಪಾರ್ಟಮೆಂಟ್ ಬೆಂಗಳೂರು ರವರು ಪರಿವೀಕ್ಷಣೆಯನ್ನು ಮಾಡಿದ್ದು, ಪರಿವೀಕ್ಷಣೆ ಸಂದರ್ಭದಲ್ಲಿ ದಿನಾಂಕ: 17/11/2018 ರಿಂದ 31/08/2021 ರವರೆಗೆ ವಿವಿಧ ಬ್ರಾಂಚ್‌ಗಳಿಂದ ಕೆನರಾ ಬ್ಯಾಂಕ್‌ಕರೆನ್ಸಿ ಚೆಸ್ಟ್ ಗೆ ಬಂದಿರುವ ಖೋಟಾ ನೋಟುಗಳನ್ನು ಪರಿಶೀಲಿಸುವ ವೇಳೆ  44 ಖೋಟಾ ಗಳು ಬಂದಿರುವುದು ತಿಳಿದು ಬಂದಿರುತ್ತದೆ. ಯಾರೋ ದುಷ್ಕರ್ಮಿಗಳು  ನಕಲಿ ನೋಟುಗಳನ್ನು ತಯಾರಿ ಮಾಡಿ, ನೈಜ ನೋಟುಗಳಂತೆ ಚಲಾವಣೆ ಮಾಡಿರುತ್ತಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ: 489 (A), 489 (B)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 02-12-2021 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080