ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾಧ ಮೊಹಮ್ಮದ್ ಶೋಹೆಬ್, (53) ತಂದೆ: ದಿ. ಮದರ್ ಸಾಹೇಬ್, ವಾಸ: 7ನೇ ಅಡ್ಡರಸ್ತೆ, ಕೊಡಂಕೂರು ನ್ಯೂ ಕಾಲೋನಿ, ನಿಟ್ಟೂರು ಅಂಚೆ, ಪುತ್ತಿಗೆ ಗ್ರಾಮ, ಉಡುಪಿ ಇವರು ಸೇಲ್ಸ್‌ ಮ್ಯಾನ್‌ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 31/10/2022 ರಂದು ಬೆಳಿಗ್ಗೆ 09:00 ಗಂಟೆಗೆ ಕೆಲಸದ ನಿಮಿತ್ತ ಮನೆಯಿಂದ ತನ್ನ ಮೋಟಾರ್‌ ಸೈಕಲ್‌ ನಂಬ್ರ KA-20 EX-6726 ನೇದನ್ನು ಸವಾರಿ ಮಾಡಿಕೊಂಡು ಅಜೆಕಾರಿಗೆ ಹೊರಟು ಅಜೆಕಾರಿನಲ್ಲಿ ಕೆಲಸ ಮುಗಿಸಿ ಅಜೆಕಾರು ಕಡೆಯಿಂದ ಹಿರ್ಗಾನ ಕಡೆಗೆ ಮೋಟಾರ್‌ ಸೈಕಲ್‌ನ್ನು ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಸಂಜೆ 4:00 ಗಂಟೆಗೆ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಬಳಿ ತಲುಪುವಾಗ KA-19 MJ-7058 ನೇ ನಂಬ್ರದ ಕಾರಿನ ಚಾಲಕನು ಹಿರ್ಗಾನ ಕಡೆಯಿಂದ ಅಜೆಕಾರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಹೊಡೆದಿದ್ದು ಪರಿಣಾಮ ಮೊಹಮ್ಮದ್ ಶೋಹೆಬ್ ರವರ ಬಲಕಾಲಿನ ಪಾದದ ಹಿಮ್ಮಡಿ ಮತ್ತು ಮೊಣಕಾಲಿಗೆ ಒಳಜಖಂ ನೋವುಂಟಾಗಿದ್ದು ಅಪಘಾತಪಡಿಸಿದ ಕಾರು ಚಾಲಕನು ಪಿರ್ಯಾದಿದಾರನ್ನು ಉಡುಪಿಯ ಹೈಟೆಕ್‌ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ನೀಡಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಗ್ಗೆ ಕೆಎಮ್‌ಸಿ ಆಸ್ಪತ್ರೆ ಮಣಿಪಾಲದಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 137/2022 ಕಲಂ: 279.337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಭಾಸ್ಕರ ಶೆಟ್ಟಿ (43) ತಂದೆ, ದಿ, ಆನಂದ ಶೆಟ್ಟಿ ವಾಸ, ಬಾಳೆಬೇರು ಸಿದ್ದಾಪುರ ಗ್ರಾ ಮ ಕುಂದಾಪುರ ತಾಲೂಕು ಇವರು ಆರೋಪಿಯಾದ ಗಣೇಶ ಸಿದ್ದಾಪುರ ಜನತಾ ಕಾಲೋನಿ ಇತನ ಬಗ್ಗೆ ಈ ಹಿಂದೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ಅರ್ಜಿ ನೀಡಿದ್ದು, ಈ ವಿಷಯದಲ್ಲಿ ಆರೋಪಿಯು ದಿನಾಂಕ 01/11/2022 ರಂದು ಬೆಳಿಗ್ಗೆ 10:30 ಘಂಟೆಗೆ ಇವರ ಮೊಬೈಲ್ ನಂಬ್ರಕ್ಕೆ ಕಾಲ್ ಮಾಡಿ ನಾನು ಕೊರಗಜ್ಜನ ಸನ್ನಿಧಿಯಲ್ಲಿ ಈ ಹಿಂದೆ ನೀಡಿದ ದೂರಿಗೆ ಕ್ಷಮೆ ಕೋರುತ್ತೇನೆ , ಹೋಗಿ ಬರುವ ಬಾ ಎಂದು ಹೇಳಿರುತ್ತಾನೆ, ಅದರಂತೆ ಅದರಂತೆ ಭಾಸ್ಕರ ಶೆಟ್ಟಿ ರವರು ಸಿದ್ದಾಪುರ ಪೇಟೆಗೆ ಹೋಗಿ ಅಲ್ಲಿ ಆರೋಪಿಯ ಕೆಎ-20 ಬಿ-9971 ನೇ ನಂಬ್ರದ ಆಟೋರಿಕ್ಷಾ ದಲ್ಲಿಅಲ್ಲಿದ ಹೊರಟು ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಚಕ್ತೇಬೇರು ಎಂಬಲ್ಲಿಗೆ ಹೋಗಿದ್ದು, ಅಲ್ಲಿ ಆರೋಪಿಯ ದೇವಸ್ಥಾನದ ಒಳಗಡೆ ಹೋಗಿ ಕ್ಷಮೆ ಕೇಳಿದಂತೆ ಮಾಡಿ ಸುಮಾರು 11:30 ಘಂಟೆಗೆ ದೇವಸ್ಥಾನದ ಹೊರಗಡೆ ಬಂದು ಇವತ್ತು ನಿನ್ನ ಕಡಿಯುವುದೇ ಎಂದು ಹೇಳಿ ಆತನ ಆಟೋರಿಕ್ಷಾದ ಒಳಗಡೆ ಇದ್ದ ತಲವಾರು ತೆಗೆದು ಭಾಸ್ಕರ ಶೆಟ್ಟಿ ಇವರ ನ್ನು ಕೊಲೆ ಮಾಡುವ ಉದ್ದೇಶದಿಂದ ತಲವಾರು ತೆಗೆದು ಕುತ್ತಿಗೆಗೆ ಬೀಸಿದ್ದು,ಈ ಸಮಯ ತಪ್ಪಿಸಿಕೊಂಡಾಗ ತಲವಾರು ಅವರ ಬಲಭುಜಕ್ಕೆ ತಾಗಿ ತೀವ್ರ ಸ್ವರೂಪದ ರಕ್ತಗಾಯ ವಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 115/2022 ಕಲಂ: 307, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-11-2022 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080