Feedback / Suggestions

ಅಪಘಾತ ಪ್ರಕರಣ

  • ಕೋಟ: ಫಿರ್ಯಾದಿ ಅವಿನಾಶ್ ಶೆಟ್ಟಿ ಇವರು ದಿನಾಂಕ 01/11/2022 ರಂದು ತನ್ನ ಬಾಬ್ತು KA 20 ET 1060  ಮೋಟಾರ್ ಸೈಕಲಿನಲ್ಲಿ ಹೊರಟಿದ್ದು ಮೋಟಾರ್ ಸೈಕಲನ್ನು ಮಾವ ಪ್ರದೀಪ ಚಲಾಯಿಸಿಕೊಂಡಿದ್ದು ಪಿರ್ಯಾದಿದಾರರು ಹಿಂಬದಿ ಸವಾರರಾಗೀ ಕುಳಿತು ಬೇಳೂರು ಕಡೆಯಿಂದ ಅಚಲಾಡಿ  ಕಡೆಗೆ ಹೋಗುವ ರಸ್ತೆಯಲ್ಲಿ ಹೊರಟು  ವಡ್ಡರ್ಸೆ ಯಾಳಹಕ್ಲು  ಹಾರ್ಡ ವೇರ್ ಚಂದ್ರರವರ ಮನೆಯ ಬಳಿ ತಲುಪುವಾಗ  ಸುಮಾರು 20.45 ಗಂಟೆಯ ಸಮಯಕ್ಕೆ ವಡ್ಡರ್ಸೆಯ  ಮಧುವನ ಕಡೆಯಿಂದ KA20D2155 ಗೂಡ್ಸ ಟೆಂಪೋ ಚಾಲಕ ಮುಕೇಶ್ ಎಂಬಾತನು ತನ್ನ ಬಾಬ್ತು ವಾಹನವನ್ನ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದನು. ಕೂಡಲೇ ಸವಾರ ಪ್ರದೀಪನು ಮೊಟಾರ್ ಸೈಕಲನ್ನು ಎಡಕ್ಕೆ ತಿರುಗಿಸಿದ ಪರಿಣಾಮ ಟೆಂಪೋ ಪಿರ್ಯಾದಿದಾರರ  ಬಲ ಕಾಲಿಗೆ ಢಿಕ್ಕಿ ಹೊಡೆದು  ಇಬ್ಬರೂ  ರಸ್ತೆಯ ಬದಿಯ ತೋಡಿಗೆ ಬಿದ್ದರು. ಪರಿಣಾಮ ಪಿರ್ಯಾದಿದಾರರ ಬಲಕಾಲು ಮೂಳೆ ಮುರಿತದ ತೀವೃ ತರಹದ ಗಾಯವಾಗಿದ್ದು ಬಲ ಭುಜ ಎಡ ಮೊಣ ಗಂಟು ತರಚಿದ  ರಕ್ತಗಾಯವಾಗಿರುತ್ತದೆ.  ಪ್ರದೀಪನ ಬಲ ಕೈ ಬಲ ಕಾಲಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 190/2022 ಕಲಂ: 279, 337.338 ಐ.ಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ಧನುಷ್  ಇವರ ಗೆಳೆಯ ಧನುಷ್ (24) ವರ್ಷರವರು ನಿನ್ನೆ ದಿನಾಂಕ 01/11/2022 ರಂದು ಅಗತ್ಯದ ಕೆಲಸದ ನಿಮಿತ್ತ ಮಂಗಳೂರಿಗೆ ತನ್ನ ಕೆಲಸದವರೊಂದಿಗೆ ಹೋಗಿದ್ದು, ರಾತ್ರಿ ಉದ್ಯಾವರದಿಂದ ಆತನ ಬಾಬ್ತು  KA20EU2282 ನೇ ಸ್ಕೂಟರ್ನಲ್ಲಿ ಮನೆಯಾದ ಕಲ್ಮಾಡಿಗೆ ರಾಹೆ-66 ರಲ್ಲಿ ಹೋಗುವಾಗ ಸಮಯ ಸುಮಾರು ರಾತ್ರಿ 10:30 ಗಂಟೆಗೆ ಕಿನ್ನಿಮುಲ್ಕಿ ಪ್ಲೈ-ಓವರ್‌ ಗಿಂತ ಸ್ವಲ್ಪ ಹಿಂದೆ ತಲುಪುವಾಗ ಕಿರಣ್‌ ರವರು ತಾನು ಸವಾರಿ ಮಾಡುತ್ತಿದ್ದ ಸ್ಕೂಟರನ್ನು ದುಡುಕುತ ಮತ್ತು ನಿರ್ಲಕ್ಷ್ಯತನ ದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಪಕ್ಕದಲ್ಲಿದ್ದ ನಾಯಿಗೆ ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯ ಮತ್ತು ಕೈ ಮತ್ತು ಮುಖಕ್ಕೆ ತರಚಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 88/2022 ಕಲಂ: 279, 338 ಐ.ಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

Last Updated: 02-11-2022 06:07 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080