ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ:  ದಿನಾಂಕ 01/11/2021 ರಂದು ಬೆಳಿಗ್ಗೆ  08:25 ಗಂಟೆಗೆ KA-19-J-7230 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಪ್ರದೀಪ ಸರಳಬೆಟ್ಟು ಬಳಿ ಮುಖ್ಯ ರಸ್ತೆಯಲ್ಲಿ ಮಣಿಪಾಲದಿಂದ ಸರಳಬೆಟ್ಟು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಪಿರ್ಯಾದಿದಾರರಾದ ನಿಹಾರ್ ಬಿ ಜೈನ್ (20), ತಂದೆ: ಬೋಜ ಹಾಲಿ, ವಿಳಾಸ:ಸರಳಬೆಟ್ಟು, ಹೆರ್ಗಾ ಗ್ರಾಮ, ಮಣಿಪಾಲ, ಉಡುಪಿ ತಾಲೂಕು ಮತ್ತು ಜಿಲ್ಲೆ, ಖಾಯಂ ವಿಳಾಸ: 1-162,ಸಿದ್ದಕಟ್ಟೆ, ಸಂಗಬೆಟ್ಟು, ದಕ್ಷಿಣ ಕನ್ನಡ ಜಿಲ್ಲೆ ಇವರು ಮಣಿಪಾಲ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA-14-EW-1620 ನೇ ಮೋಟಾರ್‌ ಸೈಕಲ್‌‌ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಎರಡೂ ಮೋಟಾರ್‌ ಸೈಕಲ್ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು  ಪಿರ್ಯಾದಿದಾರರ ಬಲಭುಜದ ಮೂಳೆ ಮುರಿತ, ಎಡಕೈಗೆ ತೀವ್ರ ಸ್ವರೂಪದ ಜಜ್ಜಿದ ರಕ್ತಗಾಯ ಮತ್ತು  ಕೈ ಕಾಲಿಗೆ ತರಚಿದ ಗಾಯ ಉಂಟಾಗಿರುತ್ತದೆ, ಆರೋಪಿತನಿಗೂ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ, ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 144/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಕೆ. ರಾಜೇಶ ಕಾಮತ್ (42), ತಂದೆ: ದಿವಂಗತ ಪದ್ಮನಾಭ ಕಾಮತ್, ವಾಸ: ಮಹಾಲಸ ಕಾಂಪೌಂಡ್, ಸಾಲ್ಮರ, ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 31/10/2021 ರಂದು  ದ್ವಿಚಕ್ರ ವಾಹನ KA-20-EK-8413 ರಲ್ಲಿ   ಮಗ ರಕ್ಷಿತ್ ಕಾಮತ್‌ (4)ರವರನ್ನು  ಕುಳ್ಳಿರಿಸಿಕೊಂಡು ತಾಲೂಕು ಕಛೇರಿ  ರಸ್ತೆಯಲ್ಲಿ ನಕ್ರೆ ಜಂಕ್ಷನ್  ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ 23:00 ಗಂಟೆಗೆ ತಾಲೂಕು ಕಛೇರಿ ಬಳಿ ಫಾರೆಸ್ಟ್ ಸಿಬ್ಬಂದಿಯವರ ವಸತಿ ಗೃಹದ ಹತ್ತಿರ ತಲುಪುವಾಗ ನಕ್ರೆ ಜಂಕ್ಷನ್ ಕಡೆಯಿಂದ ತಾಲೂಕು ಕಛೇರಿ ಕಡೆಗೆ ಕೆಂಪು ಬಣ್ಣದ ಕಾರೊಂದನ್ನು ಅದರ ಚಾಲಕನು  ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ತೆಲೆಗೆ , ಎಡಕಾಲಿಗೆ ಬಲಕೈಗೆ ರಕ್ತಗಾಯವಾಗಿದ್ದು, ಡಿಕ್ಕಿ ಹೊಡೆದ ಕಾರನ್ನು ಅದರ ಚಾಲಕನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 143/2021 ಕಲಂ: 279, 337 ಐಪಿಸಿ ಮತ್ತು 134 ಎ & ಬಿ  ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ಸತೀಶ್ ಶೆಟ್ಟಿ (52), ತಂದೆ: ಭೋಜ ಶೆಟ್ಟಿ, ವಾಸ: 5 ಸೆಂಟ್ಸ್ ಮುದೇಲ್ಕಡಿ ಮುನಿಯಾಲು ಪೋಸ್ಟ್ ವರಂಗ  ಗ್ರಾಮ ಹೆಬ್ರಿ ತಾಲೂಕು ಇವರ ತಮ್ಮ ಗಣೇಶ್ ಶೆಟ್ಟಿ(48) ರವರು ಕಾಡುಹೊಳೆಯ ಉಲ್ಲಾಸ್ ಬಾರ್ & ರೆಸ್ಟೋರೆಂಟ್ ನಲ್ಲಿ  2 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ದಿನಾಂಕ 01/11/2021 ರಂದು ಎಂದಿನಂತೆ ಬೆಳಿಗ್ಗೆ 9:00 ಗಂಟೆಗೆ ಉಲ್ಲಾಸ್ ಬಾರ್ ಗೆ ಕೆಲಸಕ್ಕೆ ಹೋಗಿದ್ದು, ಪಿರ್ಯಾದಿದಾರರು ಗಣೇಶ್ ಶೆಟ್ಟಿಯರ ಜೊತೆ ಮಾತನಾಡಲು ಬಾರ್ ನ ಬಳಿ ಹೋಗಿ ಹೊರಗಡೆ ಮಾತನಾಡುತ್ತಿರುವಾಗ ಗಣೇಶ್ ಶೆಟ್ಟಿಯವರು ಪಿರ್ಯಾದಿದಾರರಲ್ಲಿ ಎದೆನೋವು ಎಂಬುದಾಗಿ ತಿಳಿಸಿದ್ದು ಪಿರ್ಯಾದಿದಾರರು ಎಳನೀರನ್ನು ತಂದುಕೊಟ್ಟಿದ್ದು, ಎಳನೀರನ್ನು ಕುಡಿದ ಬಳಿಕ ಗಣೇಶ್ ಶೆಟ್ಟಿಯವರು ಎದೆಯನ್ನು ಹಿಡಿದುಕೊಂಡು ನೆಲಕ್ಕೆ ಮಕಾಡೆ ಬಿದ್ದಿದ್ದು, ಕೂಡಲೇ ಅವರನ್ನು ರಿಕ್ಷಾದಲ್ಲಿ ಮುನಿಯಾಲಿನ ಖಾಸಗಿ ವೈಧ್ಯರಲ್ಲಿ ಕರೆದುಕೊಂಡು ಹೋಗಿದ್ದು, ಅಲ್ಲನ ವೈಧ್ಯರು ಪರೀಕ್ಷಿಸಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈಧ್ಯರು ಪರೀಕ್ಷಿಸಿ ಆಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 20/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಜ್ಯೋತಿ ಜಿ ನಾಯಕ್‌ (53), ಗಂಡ: ಗೋಪಾಲ ಟಿ.ಎನ್‌, ವಾಸ: ಮನೆ ನಂಬ್ರ: 5-1-64A11E, ಸಂಭ್ರಮ, ಬಿಬಿನಗರ, ಕಿನ್ನಿಮೂಲ್ಕಿ, 76-ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರ ತಮ್ಮ ಗುರುಪ್ರಸಾದ್‌ ರಾವ್‌(43) ರವರು ಅವಿವಾಹಿತರಾಗಿದ್ದು,  ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ದಿನಾಂಕ 01/11/2021 ರಂದು 01:00  ಗಂಟೆಯ ಸುಮಾರಿಗೆ ಗಂಟಲು  ಉರಿ ಬರುತ್ತಿರುವುದಾಗಿ ತಾಯಿಯಲ್ಲಿ ಹೇಳಿದ್ದವರು ಮುಂಜಾನೆ 3:00  ಗಂಟೆಯ ಸುಮಾರಿಗೆ ತಾನು ವಾಸವಿದ್ದ ಫ್ಲ್ಯಾಟಿನಲ್ಲಿ ಹಠಾತ್‌ ಕುಸಿದು ಬಿದ್ದವರನ್ನು,  ಚಿಕಿತ್ಸೆಯ  ಬಗ್ಗೆ  ಅಜ್ಜರಕಾಡು ಜಿಲ್ಲಾಸ್ಪತ್ರೆಗೆ 04:31 ಗಂಟೆಗೆ ಕರೆ ತಂದಲ್ಲಿ ಪರೀಕ್ಷಿಸಿದ ವೈದ್ಯರು ಗುರುಪ್ರಸಾದ್‌ರಾವ್‌ ರವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಮೃತರು ಹೃದಯಾಘಾತದಿಂದಲೋ ಅಥವಾ ಇನ್ನಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 45/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಗಂಡಸು ಕಾಣೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸುಮ (45), ಗಂಡ: ದಿನೇಶ್, ವಾಸ: ಮನೆ ನಂಬ್ರ- 321, ದಾನಶಾಲೆ, ಗೊಮ್ಮಟ ಬೆಟ್ಟದ ಬಳಿ, ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರ ಗಂಡ ದಿನೇಶ (56) ಎಂಬುವವರು ದಾನ ಶಾಲೆಯ ವರ್ಧಮಾನ ಲಾಡ್ಜ್  ನಲ್ಲಿ  1 ವರ್ಷದಿಂದ ಸುಪರ್‌ ವೈಸರ್ ಆಗಿ ಕೆಲಸ  ಮಾಡಿಕೊಂಡಿದ್ದು ದಿನಾಂಕ 29/10/2021  ರಂದು ಮಧ್ಯಾಹ್ನ ಕೆಲಸಕ್ಕೆ ಹೋಗಿ ಮನೆಗೆ ಬಂದು ಮಧ್ಯಾಹ್ನ 1:30 ಗಂಟೆಗೆ ಟಿವಿ ನೋಡುತ್ತಿದ್ದ ವೇಳೆ ಪುನಿತ್ ರಾಜ್ ಕುಮಾರ್ ಮೃತಪಟ್ಟ ಸುದ್ದಿ ತಿಳಿದು ಮನೆಯಲ್ಲಿ ಹೇಳದೇ ಹೊರಗೆ ಹೋಗಿದ್ದು ಲಾಡ್ಜ್ ಗೆ ಕೆಲಸಕ್ಕೆ  ಹೋಗಿರಬಹುದೆಂದು ತಿಳಿದಿದ್ದು ಈವರೆಗೆ ವಾಪಾಸು ಬಂದಿರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 142/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಮಂಜುನಾಥ ಹೆಬ್ಬಾರ್ ( 55), ತಂದೆ: ದಿ. ನಾರಾಯಣ ಹೆಬ್ಬಾರ್, ವಾಸ: ಬಡಾಬೆಟ್ಟು, ಕುಂಭಾಶಿ ಗ್ರಾಮ, ಕುಂದಾಪುರ ತಾಲೂಕು ಇವರು ಕುಟುಂಬದೊಂದಿಗೆ ಕುಂದಾಪುರ ಕುಂಭಾಶಿ ಗ್ರಾಮದ ಬಡಾ ಬೆಟ್ಟು ಎಂಬಲ್ಲಿ ವಾಸವಾಗಿದ್ದು,  ದಿನಾಂಕ  01/11/2021 ರಂದು 10:30  ಗಂಟೆಗೆ ಆಪಾದಿತರಾದ ನಾಗರತ್ನ ಇವರು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ 5-6 ಜನ ಜನ ಕೆಲಸಗಾರರೊಂದಿಗೆ ಅಕ್ರಮವಾಗಿ ಕಂಪೌಂಡ್ ಕಟ್ಟುತ್ತಿದ್ದು ಇದನ್ನು ಪ್ರಶ್ನಿಸಿದ ಪಿರ್ಯಾದಿದಾರರು ಮತ್ತು ಅವರ ಪತ್ನಿಗೆ ಆಪಾದಿತರು ಹೊಡೆದಿರುತ್ತಾರೆ. ಪಿರ್ಯಾದಿದಾರರ ಪತ್ನಿ ಲಲಿತಾರವರ ಕೈಗೆ ಕಲ್ಲಿನಿಂದ ಜಜ್ಜಿ ಗಾಯ ಮಾಡಿರುತ್ತಾರೆ. ಆಪಾದಿತರು ಮಾಡಿದ ಹಲ್ಲೆಯಿಂದಾಗಿ ಪಿರ್ಯಾದಿದಾರರ ಪತ್ನಿಗೆ ರಕ್ತಗಾಯ ಉಂಟಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 119 /2021  ಕಲಂ:  447 , 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ನಾಗರತ್ನ, ಗಂಡ: ರಾಮಚಂದ್ರ ಆಚಾರ್ಯ, ವಾಸ:ಬಡಾಮನೆ ಬೆಟ್ಟು ಕುಂಭಾಶಿ ಗ್ರಾಮ, ಕುಂದಾಪುರ ತಾಲೂಕು ಇವರು ಕುಟುಂಬದೊಂದಿಗೆ ಕುಂದಾಪುರ ಕುಂಭಾಶಿ ಗ್ರಾಮದ ಬಡಾಮನೆ ಬೆಟ್ಟು ಎಂಬಲ್ಲಿ ವಾಸವಾಗಿದ್ದು,  ದಿನಾಂಕ 01/11/2021 ರಂದು 09:10 ಗಂಟೆಗೆ ಪಿರ್ಯಾದಿದಾರರು ಮತ್ತು ಅವರ ಪತಿ ಅವರ ಜಾಗದಲ್ಲಿ ಕಳೆ ಕೀಳುತ್ತಿರುವಾಗ  ನೆರೆಮನೆಯವರಾದ ಆಪಾದಿತರಾದ 1) ಮಂಜುನಾಥ ಹೆಬ್ಬಾರ , 2) ಪರಿಮಳ , 3) ಗಾಯತ್ರಿ ಇವರು ಅತಿಕ್ರಮ ಪ್ರವೇಶ ಮಾಡಿ  ಪಿರ್ಯಾದಿದಾರರನ್ನು ಉದ್ದೇಶಿಸಿ  ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರಿಗೆ ಕೈಯಿಂದ  ಹೊಡೆದು ಎಳೆದಾಡಿ  ಹಾಗೂ ಮರದ ಕೋಲಿನಿಂದ ಬೆನ್ನಿಗೆ ಕೈ ಕಾಲಿಗೆ ಹೊಡೆದಿದ್ದು ಬಿಡಿಸಲು ಬಂದ ಪಿರ್ಯಾದಿದಾರರ  ಗಂಡನಿಗೆ ಸಹ ಹೊಡೆಯಲು ಹೋಗಿದ್ದು ಮುಂದಕ್ಕೆ  ಇಲ್ಲಿ ಕೆಲಸ ಮಾಡಿದರೆ ಕೊಲ್ಲುವುದಾಗಿ ಜೀವ  ಬೆದರಿಕೆ ಹಾಕಿ ಪಿರ್ಯಾದಿದಾರರ ಜಾಗದಲ್ಲಿದ್ದ ಕಂಪೌಂಡ್ ಒಡೆದು ಹಾಕಿ 25000/- ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ. ಆಪಾದಿತರು ಮಾಡಿದ ಹಲ್ಲೆಯಿಂದಾಗಿ ಪಿರ್ಯಾದಿದಾರರಿಗೆ ಒಳನೋವು ಉಂಟಾಗಿರುವುದಾಗಿ ನೀಡಿದ ದೂರಿನಂತೆ  ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 118 /2021  ಕಲಂ: 447 , 323, 324, 354, 504, 506, 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ: ದಿನಾಂಕ 01/11/2021 ರಂದು ಪಿರ್ಯಾದಿದಾರರಾದ ವಸಂತಿ ಶೆಟ್ಟಿ (43), ಗಂಡ: ಸೀತಾರಾಮ ಶೆಟ್ಟಿ , ವಾಸ: 588/6, ಕಾವೇರಡ್ಕ, ಶ್ರೀ ರಾಘವೇಂದ್ರ ನಿಲಯ, ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರು ಮನೆಯಲ್ಲಿರುವಾಗ ಬೆಳಿಗ್ಗೆ 10:00 ಗಂಟೆಗೆ  ಪಿರ್ಯಾದಿದಾರರ ಅಕ್ಕನ ಮಗ ಸುಮಂತ ಶೆಟ್ಟಿ ಎಂಬಾತನು ಪಿರ್ಯಾದಿದಾರರ ಮನೆಗೆ ಮೋಟಾರ್ ಸೈಕಲ್ KA-20-J-3861 ರಲ್ಲಿ ಬಂದು ಮನೆಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಹಾಕಿ, ಪಿರ್ಯಾದಿದಾರರಿಗೆ , ಮಗಳು  ಅಕ್ಷತಾಳಿಗೆ ಮತ್ತು ಪಿರ್ಯಾದಿದಾರರ ಗಂಡ  ಸೀತಾರಾಮ ಶೆಟ್ಟಿರವರಿಗೆ  ಕೈಯಿಂದ ಕೆನ್ನಗೆ ಹೊಡೆದಿರುವುದಾಗಿ, ಒಂದು ವಾರದ ಹಿಂದೆ  ಪಿರ್ಯಾದಿದಾರರ  ಇನ್ನೊಬ್ಬ ಅಕ್ಕನ ಮಗ ರಾಜೇಶ ಶೆಟ್ಟಿ ಪಿರ್ಯಾದಿದಾರರ ಮನೆಯಲ್ಲಿ ಬಾಡಿಗೆಗೆ ರೂಮ್ ಕೇಳಿದ್ದು ಬಾಡಿಗೆಗೆ ಕೊಟ್ಟಿರುವುದಿಲ್ಲ ಎಂಬ ಕಾರಣಕ್ಕೆ ಅಪಾದಿತನು ಈ ದಿನ ಗಲಾಟೆ ಮಾಡಿದ್ದಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 141/2021 ಕಲಂ: 448, 354, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 02-11-2021 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080