ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾರ್ಕಳ: ಪಿರ್ಯಾದಿದಾರರಾದ ಪ್ರವೀಣ್ ರಘುನಾಥ ಶೆಟ್ಟಿ, (40) ತಂದೆ: ರಘುನಾಥ ಶೆಟ್ಟಿ, ವಾಸ: ಬೆದ್ರಬೆಟ್ಟು, ಬೈಲೂರು ಅಂಚೆ, ಕೌಡೂರು ಗ್ರಾಮ, ಕಾರ್ಕಳ ತಾಲೂಕು ಇವರ ಮನೆಯ ಬಳಿ ಸುಧಾಕರ ಆಚಾರ್ಯ (45) ಎಂಬವರು ವಾಸವಾಗಿದ್ದು ನಿಟ್ಟೆ ಪಾಲಟ್ಟೆಯಲ್ಲಿ ಮರದ ಕೆಲಸ ಮಾಡಿಕೊಂಡಿರುತ್ತಾರೆ. ಪ್ರವೀಣ್ ರಘುನಾಥ ಶೆಟ್ಟಿ ರವರು ದಿನಾಂಕ 01/10/2022 ರಂದು  ರಾತ್ರಿ 23:00 ಗಂಟೆಗೆ ನಕ್ರೆಯಿಂದ ಬೈಲೂರು ಕಡೆಗೆ ಹೋಗುವ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಮನೆಗೆ ಬಂದಿದ್ದು ದಿನಾಂಕ  02/10/2022 ರಂದು  ಬೆಳಿಗ್ಗೆ  7 ಗಂಟೆಗೆ ಅದೇ  ದಾರಿಯಲ್ಲಿ ಕೆಲಸಕ್ಕೆ ಹೊರಟು ನಕ್ರೆಯಿಂದ ಬೈಲೂರು ಕಡೆಗೆ  ಹೋಗುವ ಕಾಕ್ರೀಟ್ ರಸ್ತೆಯಲ್ಲಿ ಕೌಡೂರು ಗ್ರಾಮದ ಬೆದ್ರಬೆಟ್ಟು  ಎಂಬಲ್ಲಿ  ಬೆಳಿಗ್ಗೆ  07:10 ಗಂಟೆಗೆ ತಲುಪುವಾಗ  ಸುಧಾಕರ  ಆಚಾರ್ಯರವರು ರಸ್ತೆಯ ಬದಿಯಲ್ಲಿ ಮೋಟಾರು ಸೈಕಲ್ KA-20 L-4078 ನೇ ನಂಬ್ರದ ಬಜಾಜ್ ಮೋಟಾರ್  ಸೈಕಲ್  ಸಮೇತ ಮಗುಚಿ ಬಿದ್ದಿದ್ದು ಮಾತನಾಡದೇ ಗಾಯಗೊಂಡು  ಮೃತಪಟ್ಟಿರುತ್ತಾರೆ. ಸುಧಾಕರ ಆಚಾರ್ಯರವರು ದಿನಾಂಕ  01/10/2022 ರಂದು ರಾತ್ರಿ 23:00 ಗಂಟೆಯಿಂದ ದಿನಾಂಕ  02/10/2022 ರಂದು ಬೆಳಿಗ್ಗೆ  07:10 ಗಂಟೆಯ ಮದ್ಯಾವಧಿಯಲ್ಲಿ ನಂತರ ನಕ್ರೆ ಕಡೆಯಿಂದ ಬೈಲೂರು ಕಡೆಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಮೋಟಾರ್ ಸೈಕಲ್ ಸವಾರಿ ಮಾಡಿಕೊಂಡು ಬರುತ್ತಿದ್ದಾಗ ವಿಪರೀತ ಮಳೆ ಇದ್ದ ಕಾರಣ ಆಯ ತಪ್ಪಿ ಜಾರಿಕೊಂಡು ಡಾಮಾರು ರಸ್ತೆಯ ಎಡಭಾಗಕ್ಕೆ ಜಾರಿಕೊಂಡು ಹೋಗಿ ಹೊಂಡದಲ್ಲಿ ಗದ್ದೆಗೆ ಬಿದ್ದು, ಪರಿಣಾಮ ಎಡಕೆನ್ನೆಗೆ ಎದೆಯ ಬಳಿ ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 127/2022 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ರುದ್ರೇಶ್ (42) ತಂದೆ: ದಿ.ಕರಿಬಸಪ್ಪ  ವಾಸ: ಅರಸನಘಟ್ಟ ರಸ್ತೆ, ಆನೆವೇರಿ, ಭದ್ರಾವತಿ ತಾಲೂಕು, ಶಿವಮೊಗ್ಗ ಇವರು 30/09/2022 ರಂದು ಸಂಜೆ 6:00 ಗಂಟೆಗೆ  ಅವರ KA-26 EC-2443 ನೇ ಮೋಟಾರು ಸೈಕಲ್ ನಲ್ಲಿ  ಸಂತೋಷ  ಕೊಠಾರಿಯವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಬೈಂದೂರಿನಿಂದ ನಾಗೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮೋಟಾರು ಸೈಕಲ್ ನ್ನು ಸವಾರಿ ಮಾಡಿಕೊಂಡು ಉಪ್ಪುಂದ ಗ್ರಾಮದ ಶಾಲೆಬಾಗಿಲು ಯು ಟರ್ನ ನಿಂದ ಸ್ವಲ್ಪ ಮುಂದೆ ಹೋಗುತ್ತಿರುವಾಗ ರುದೇಶ್‌ ರವರ ಹಿಂದಿನಿಂದ KA-35 P-1261 ನೇ ಕಾರುಚಾಲಕಾ ಆತನ  ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡ ಭಾಗಕ್ಕೆ ಬಂದು ರುದ್ರೇಶ್ ರವರ ಮೋಟಾರು ಸೈಕಲ್ ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ರುದ್ರೇಶ್ ರವರು ಹಾಗೂ ಸಹ ಸವಾರ ಮೋಟಾರು ಸೈಕಲ್ ನೊಂದಿಗೆ ರಸ್ತೆಗೆ ಬಿದ್ದಿದ್ದು ಅಪಘಾತದ ಪರಿಣಾಮ ರುದ್ರೇಶ್ ರವರಿಗೆ ಬಲ ಬದಿಯ ಭುಜ ಹಾಗೂ ಹೊಟ್ಟೆಯ ಭಾಗಕ್ಕೆ ಗುದ್ದಿದ ಒಳನೋವು  ಹಾಗೂ ಸಹರ ಸವಾರ ಸಂತೋಷ ಕೊಠಾರಿಯವರಿಗೆ  ಬಲ ಕಾಲಿನ ಮೂಳೆ ಮುರಿತ ಮತ್ತುತಲೆಯ  ಹಿಂಭಾಗದಲ್ಲಿ ಒಳ ಜಖಂ ಆಗಿದ್ದು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ  ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ರುದ್ರೇಶ್ ರವರನ್ನು ಪರೀಕ್ಷೀಸಿ ಹೊರ ರೋಗಿಯಾಗಿ ಚಿಕಿತ್ಸೆ  ನೀಡಿದ್ದು ಸಹ ಸವಾರ ಸಂತೋಷ ಕೊಠಾರಿಯವರನ್ನು ಪರೀಕ್ಷಿಸಿ  ಹೆಚ್ಚಿನ ಚಿಕಿತ್ಸೆ ಬಗ್ಗೆ ಸೂಚಿಸಿದ ಮೇರೆಗೆ  ಕೆ ಎಂ ಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 196/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ದಿನಾಂಕ 02/10/2022  ರಂದು 11:40   ಘಂಟೆಗೆ  ಫಿರ್ಯಾದಿದಾರರಾಧ ವಿಜಯ ಕುಮರ್  ತೆಮೀನಾಳ (32) ತಂದೆ, ಹನುಮಪ್ಪ ವಾಸ, ಬಲಕುಂದಿ ಗ್ರಾಮ ಹನಗುಂದ  ತಾಲುಕು  ಬಾಗಲಕೋಟೆ  ಜಿಲ್ಲೆ  ಹಾಲಿ  . ಕೆ.ಎಸ್.ಆರ್,ಟಿ.ಸಿ ಡಿಪೋ   ಕುಂದಾಪುರ   ಇವ ರು ಕುಂದಾಪುರ   ತಾಲೂಕಿನ  ಶಂಕರನಾರಾಯಣ ಗ್ರಾಮದ  ಚಾರ್ಮಕ್ಕಿ ಎಂಬಲ್ಲಿ  ಕೆಎ-09 ಎಪ್-5014ನೇ  ನಂಬ್ರದ  ಕೆ.ಎಸ್.ಆರ್,ಟಿ.ಸಿ ಬಸ್ಸನ್ನು  ಶಂಕರನಾರಾಯಣ ಕಡೆಯಿಂದ   ಸಿದ್ದಾಪುರ  ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿರುವಾಗ  ಆರೋಪಿಯು ಕೆಎ-20 ಇಎಸ್-0505  ನೇ ನಂಬ್ರದ ಮೋಟಾರ್  ಸೈಕಲ್ನ್ನು  ಸಿದ್ದಾಪುರ  ಕಡೆಯಿಂದ  ಅತೀ ವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಬಸ್ಸಿಗೆ  ಡಿಕ್ಕಿ  ಹೊಡೆದಿರುತ್ತಾನೆ, ಇದರ ಪರಿಣಾಮ  ಮೋಟಾರ್  ಸೈಕಲ್  ಸವಾರ  ಗಾಯಗೊಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 102/2022 ಕಲಂ: 279,337   ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾಧ ಗಣೇಶ ಆಚಾರ್ಯ, (42) ತಂದೆ: ಶ್ರೀಧರ ಆಚಾರ್ಯ, ವಾಸ: ಶ್ರೀ ಲಕ್ಷ್ಮೀ ನಿವಾಸ, ಕುಲ್ಲಾರು ಮನೆ ಹತ್ತಿರ, ಜಾರ್ಕಳ, ಬೈಲೂರು ಅಂಚೆ ಮತ್ತು ಗ್ರಾಮ, ಕಾರ್ಕಳ ಇವರು ಕಾರ್ಕಳ ತಾಲೂಕು ಎರ್ಲಪ್ಪಾಡಿ ಗ್ರಾಮದ ಜಾರ್ಕಳ ಜಂಕ್ಷನ್ ಬಳಿ ಶ್ರೀಕಾಳಿಕಾಂಬ ಜ್ಯುವೆಲರಿ ವರ್ಕ್ಸ್ ಎಂಬ ಮಾಡಿಕೊಂಡಿದ್ದು, ಅಂಗಡಿಯಲ್ಲಿ ಊರಿನವರು ನೀಡಿದ ಚಿನ್ನದ ಕೆಲಸವನ್ನು ಮಾಡಿಕೊಂಡಿರುವುದಾಗಿದೆ. ದಿನಾಂಕ 01/10/2022 ರಂದು ರಾತ್ರಿ 9:10 ಗಂಟೆಗೆ ಅಂಗಡಿಯನ್ನು ಬೀಗ ಹಾಕಿ ಮನೆಗೆ ಹೋಗಿದ್ದು, ಎಂದಿನಂತೆ ದಿನಾಂಕ 02/10/2022 ರಂದು ಬೆಳಗ್ಗೆ 07:30 ಗಂಟೆಗೆ ಅಂಗಡಿ ಬಳಿ ಬಂದು ನೋಡಿದಾಗ ಅಂಗಡಿ ಬಾಗಿಲಿಗೆ ಅಳವಡಿಸಿದ ಮೂರು ಬೀಗದಲ್ಲಿ ಎರಡು ಬೀಗಗಳು ಇರದೇ ಇದ್ದು, ಬಾಗಿಲು ತೆರೆದಿದ್ದು ಅಂಗಡಿ ಒಳಗಡೆ ಹೋಗಿ ನೋಡಿದಾಗ ಮೇಜಿನ ಡ್ವಾವರ್ ಒಳಗಡೆ ಪ್ಲಾಸ್ಟಿಕ್ ಡಬ್ಬಿಯಲ್ಲಿ ಊರಿನ ಗಿರಾಕಿಗಳು ರಿಪೇರಿಗೆ ನೀಡಿದ್ದ ಸಣ್ಣ ಬೆಂಡೋಲೆ-3, ಬೊಟ್ಟು-3 ಹಾಗೂ ಚಿನ್ನದ ಸರವನ್ನು ಮಾಡಲಿರಿಸಿದ 20 ಚಿನ್ನದ ಗುಂಡುಗಳು ಕಾಣೆಯಾಗಿರುತ್ತದೆ. ಈ ಒಟ್ಟು ಚಿನ್ನದ ಮೌಲ್ಯ ಸುಮಾರು 25,000/- ಆಗಬಹುದು. ಯಾರೋ ಕಳ್ಳರು ದಿನಾಂಕ 01/10/2022 ರಂದು ರಾತ್ರಿ 9:10 ಗಂಟೆಯಿಂದ ದಿನಾಂಕ 02/10/2022 ರಂದು ಬೆಳಗ್ಗೆ 07:30 ಗಂಟೆಯ ಮದ್ಯಾವಧಿಯಲ್ಲಿ ಅಂಗಡಿಗೆ ಹಾಕಿದ ಬೀಗವನ್ನು ಮುರಿದು ಒಳಪ್ರವೇಶಿಸಿ ಚಿನ್ನವನ್ನು ಕಳವು ಮಾಡಿಕೊಂಡು ಕೃತ್ಯಕ್ಕೆ ಬಳಸಿದ ಕಬ್ಬಿಣದ ಕಟ್ಟರ್ ನ್ನುಬಿಟ್ಟು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 128/2022 ಕಲಂ: 380, 454, 457ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ಪಾಂಡುರಂಗ ಖಾರ್ವಿ (45) ತಂದೆ: ಲಕ್ಷ್ಮಣ ಖಾರ್ವಿ, ವಾಸ: ಮಹಂಕಾಳಿ ಮಠದ ಹತ್ತಿರ, ಖಾರ್ವಿಕೇರಿ, ಗಂಗೊಳ್ಳಿ ಗ್ರಾಮ ಕುಂದಾಪುರ ಇವರು ದಿನಾಂಕ 02/10/2022 ರಂದು ಬೆಳಿಗಿನ ಜಾವ ಮೀನುಗಾರಿಕೆ ಕೆಲಸಕ್ಕೆ ಹೋಗುವ ಸಲುವಾಗಿ ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಅಂಚೆ ಕಛೇರಿಯ ಹತ್ತೀರದ ದಾಮೋದರ ಶೇರುಗಾರ ಎಂಬವರ ಹೋಟೇಲ್‌ನಲ್ಲಿ ಚಾ ಕುಡಿದು ಪಕ್ಕದ ಚಪ್ಪಲಿ ಅಂಗಡಿಯ ಮೆಟ್ಟಿಲು ಮೇಲೆ ಕುಳಿತುಕೊಂಡಿರುವುವಾಗ ಸಮಯ ಸುಮಾರು 05:45 ಗಂಟೆಗೆ ಅಪಾದಿತ ಅಬ್ಬುಸಾಲಿ ಎಂಬಾತನು ಅಲ್ಲಿಗೆ ಬಂದು ಇಲ್ಲಿ ಯಾಕೆ ಕುಳಿತುಕೊಂಡಿದ್ದಿ ಎಂದು ಹೇಳಿ ಅಲ್ಲಿಯೇ ಇದ್ದ ಒಂದು ಕಲ್ಲನ್ನು ಹಿಡಿದುಕೊಂಡು ಪಾಂಡುರಂಗ ಖಾರ್ವಿ ರವರ ತಲೆಯ ಹಿಂಬಾಗಕ್ಕೆ ಹೊಡೆದಿದ್ದು, ಪರಿಣಾಮ ಇವರ ತಲೆಯ ಹಿಂಬಾಗಕ್ಕೆ ರಕ್ತಗಾಯವಾಗಿರುತ್ತದೆ. ಆ ಸಮಯ ಪಾಂಡುರಂಗ ಖಾರ್ವಿ ರವರು ಬೊಬ್ಬೆ ಹಾಕಿದಾಗ  ಅಕ್ಕಪಕ್ಕದಲ್ಲಿರುವ ಜನರು ಅವರ ಹತ್ತಿರ ಬರುವುದನ್ನು ನೋಡಿ ಆಪಾದಿತ ಅಬ್ಬುಸಾಲಿಯು ಓಡಿಹೋಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 94/2022 ಕಲಂ: 504, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಅಶೋಕ ವ ನವಲೂರ, (44) ತಂದೆ: ಫಕೀರಪ್ಪ ನವಲೂರ, ವಾಸ: ಯಡ್ರಾವಿ  ಓಣಿ, ಬ್ಯಾಹಟ್ಟಿ ಗ್ರಾಮ, ಹುಬ್ಬಳ್ಳಿ ತಾಲೂಕು, ಧಾರವಾಡ ಇವರ ತಮ್ಮನಾದ ಸುರೇಶ ನವಲೀಕ (42)ಎನ್ನುವವರು ಸುಮಾರು 2 ತಿಂಗಳಿನಿಂದ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ  ದುರ್ಗಾಂಬಾ ಮೋಟಾರ್ಸ್ ಗ್ಯಾರೇಜಿನಲ್ಲಿ ಬಸ್ಸು ಅಟೆಂಡರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 01/10/2022 ರಂದು ಸಂಜೆ 07:00 ಗಂಟೆ ಸಮಯಕ್ಕೆ ದುರ್ಗಾಂಬಾ ಗ್ಯಾರೇಜಿನಲ್ಲಿ ಬಸ್ಸು ಕ್ಲೀನ್ ಮಾಡಿ ದೇವರ ಫೋಟೋಗೆ ಹೂ ಇಡುತ್ತಿರುವ ಸಂದರ್ಭ ಒಮ್ಮೇಲೆ ಕುಸಿದು ಬಿದ್ದು ಅಸ್ವಸ್ಥಗೊಂಡರನ್ನು ಇತರ ಕೆಲಸಗಾರರು ಚಿಕಿತ್ಸೆ ಬಗ್ಗೆ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಸಂಜೆ 07:25 ಗಂಟೆಗೆ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ ಮೃತರು ಹೃದಾಯಘಾತದಿಂದ ಅಥವಾ ಇನ್ಯಾವುದೋ ಆರೋಗ್ಯದ ಸಮಸ್ಯೆಯಿಂದ ಮೃತಪಟ್ಟಿದ್ದು ಮೃತರ  ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 33/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
 • ಕಾರ್ಕಳ: ಪಿರ್ಯಾದಿದಾರರಾಧ ಪ್ರಮೀಳಾ, (51) ಗಂಡ: ವಿನಯಕುಮಾರ್, ವಾಸ: ಕುಂಜಿಬೆಟ್ಟು, ಕರ್ಣ ನಿಲಯ, ಬೈಲೂರು ಅಂಚೆ, ಕೌಡೂರು ಗ್ರಾಮ, ಕಾರ್ಕಳ ಇವರ ಗಂಡ ವಿನಯಕುಮಾರ್ (53) ರವರು ಡ್ರೈವರ್ ಕೆಲಸ ಮಾಡಿಕೊಂಡಿದ್ದು, 10 ವರ್ಷಗಳಿಂದ ಮನೆಯಲ್ಲಿಯೇ ಇರುವುದಾಗಿದ್ದು, ದಿನಾಂಕ 28/06/2022 ರಂದು  ಪ್ರಮೀಳಾ ರವರ ಗಂಡನ ವಿರುದ್ದ ಕಾರ್ಕಳ ನಗರ ಠಾಣೆಯಲ್ಲಿ ಮಗಳಿಗೆ ಕಿರುಕುಳ ನೀಡಿದ ಬಗ್ಗೆ ಕೇಸು ದಾಖಲಾಗಿರುತ್ತದೆ. ನಂತರ ವಿನಯಕುಮಾರ್ ರವರು ಎರಡು ಬಾರಿ ಮನೆಗೆ ಬಂದಿದ್ದು ದಿನಾಂಕ 25/09/2022 ರಂದು ರಾತ್ರಿ ಬೈಲೂರಿನಲ್ಲಿ ಯಾವುದೋ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದವರನ್ನು ಸ್ಥಳೀಯರಾದ ಅಭಿಷೇಕ್ ಎಂಬುವರು ಕಾರ್ಕಳ ಸರ್ಕಾರಿ ಆಸ್ಪತ್ರಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿರುತ್ತಾರೆ. ವಿಷಸೇವನೆಯಿಂದ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ದಿನಾಂಕ 02/10/2022 ರಂದು ಬೆಳಗಿನ ಜಾವ 03:00 ಗಂಟೆಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.  ಪ್ರಮೀಳಾ ರವರ ಗಂಡನ ವಿರುದ್ದ ಕೇಸು ದಾಖಲಾದ ವಿಷಯದಿಂದ ಮನಸ್ಸಿನಲ್ಲಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತರ ಮರಣದಲ್ಲಿಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 43/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 02-10-2022 06:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080